Miss Universe 2022: ಅಮೇರಿಕಾದ ಆರ್ ಬೋನಿ ಗೇಬ್ರಿಯಲ್‌ಗೆ ಕಿರೀಟ, ಕರ್ನಾಟಕದ ದಿವಿತಾ ರೈಗೆ ನಿರಾಸೆ

By Vinutha PerlaFirst Published Jan 15, 2023, 11:07 AM IST
Highlights

71ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಯುಎಸ್‌ಎಯ ಆರ್'ಬೋನಿ ಗೇಬ್ರಿಯಲ್ 2022 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಅವರು ದಿವಾ ಕಿರೀಟವನ್ನು ತೊಡಿಸಿದರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

71ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ USAಯ R'Bonney Gabriel 2022ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತದ ದಿವಿತಾ ರೈ 71 ನೇ ಆವೃತ್ತಿಯ ಮಿಸ್ ಯೂನಿವರ್ಸ್‌ನಲ್ಲಿ ಅಗ್ರ 16 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದರು. ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್‌ ಮೋರಿಯಲ್ ಕನ್ವನ್ಶನ್ ಸೆಂಟರ್‌ನಲ್ಲಿ ಸಮಾರಂಭ ನಡೆಯಿತು. ಮಿಸ್ ಯೂನಿವರ್ಸ್ 2021 ರ 71 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಅವರು ದಿವಾ ಕಿರೀಟವನ್ನು ಪಡೆದರು. ಜನವರಿ 15ರಂದು ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಿಸ್ ಯೂನಿವರ್ಸ್ 2022ರ ಅಂತಿಮ ಸಮಾರಂಭದಲ್ಲಿ R'Bonney Gabriel ಅವರು ಹೊಳೆಯುವ ಗೌನ್‌ನಲ್ಲಿ ಬೆರಗುಗೊಳಿಸಿದರು. ಅವಳು ಸ್ಫಟಿಕ-ಅಲಂಕರಿಸಿದ ಗೌನ್ ಅನ್ನು ಧರಿಸಿದ್ದರು ಮತ್ತು ಅದನ್ನು ಸ್ಟೇಟ್‌ಮೆಂಟ್ ಆಭರಣಗಳಿಂದ (Jewellery) ವಿನ್ಯಾಸಗೊಳಿಸಿದ್ದರು. 28 ವರ್ಷದ  R'Bonney Gabriel ಒಬ್ಬ ಪರಿಸರವಾದಿಯಾಗಿದ್ದಾರೆ. ಮಾತ್ರವಲ್ಲ ಮಾಡೆಲ್, ಫ್ಯಾಷನ್ ಡಿಸೈನರ್ ಕೂಡಾ ಆಗಿದ್ದಾರೆ. ಅವರು ಮಿಸ್ USA ಕಿರೀಟವನ್ನು ಪಡೆದ ಮೊದಲ ಫಿಲಿಪಿನೋ-ಅಮೇರಿಕನ್ ಮಹಿಳೆಯಾಗಿದ್ದಾರೆ.

ಮಿಸ್​ ಯೂನಿವರ್ಸ್​ ಕಿರೀಟಕ್ಕೆ ಕ್ಷಣಗಣನೆ: ಅಮೆರಿಕದಲ್ಲಿ ಕನ್ನಡತಿ ದಿವಿತಾ

ವೆನೆಜುವೆಲಾದ ಅಮಂಡಾ ಡುಡಮೆಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಡೊಮಿನಿಕನ್ ರಿಪಬ್ಲಿಕ್‌ನ ಆಂಡ್ರೀನಾ ಮಾರ್ಟಿನೆಜ್ 71ನೇ ಆವೃತ್ತಿಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು. ಈ ವರ್ಷ ಭಾರತವನ್ನು ಕರ್ನಾಟಕದ ದಿವಿತಾ ರೈ ಪ್ರತಿನಿಧಿಸಿದ್ದರು. ಮಿಸ್ ಯೂನಿವರ್ಸ್ 2022 ಪ್ರಶಸ್ತಿಗಾಗಿ (Award) 80 ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧಿಸಿದ್ದರು. ದಿವಿತಾ ಅಗ್ರ 16ರೊಳಗೆ ಸ್ಥಾನ ಪಡೆದರು.

2021 ರಲ್ಲಿ ಸುಮಾರು ಎರಡು ದಶಕಗಳ ನಂತರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಭಾರತಕ್ಕೆ ಮರಳಿ ತಂದ ಹರ್ನಾಜ್ ಸಂಧು, ಈವೆಂಟ್‌ನಲ್ಲಿ ತನ್ನ ಉತ್ತರಾಧಿಕಾರಿಯಾಗಿ ಕಿರೀಟ (Crown)ವನ್ನು ಹಸ್ತಾಂತರಗೊಳಿಸಿದರು. ಹರ್ನಾಜ್‌ ಕಪ್ಪು ಗೌನ್‌ನಲ್ಲಿ ಮಿಂಚಿದರು. ಗ್ರ್ಯಾಂಡ್ ಫಿನಾಲೆಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅವರು ಸಾಂಪ್ರದಾಯಿಕ ಲೆಹೆಂಗಾವನ್ನು ಧರಿಸಿದ್ದರು.

The new Miss Universe is USA!!! pic.twitter.com/7vryvLV92Y

— Miss Universe (@MissUniverse)

ಮಿಸ್ ಯೂನಿವರ್ಸ್ 2022ರಲ್ಲಿ ಕೇಳಿದ ಪ್ರಶ್ನೆ
ಇದು ಮಿಸ್ USA 2022ರಲ್ಲಿ ಕೇಳಿದ ಪ್ರಶ್ನೆಯಾಗಿತ್ತು, 'ನೀವು ವಿಶ್ವ ಸುಂದರಿ ಗೆದ್ದರೆ, ಇದು ಸಬಲೀಕರಣ ಮತ್ತು ಪ್ರಗತಿಪರ ಸಂಸ್ಥೆಯಾಗಿದೆ ಎಂಬುದನ್ನು ಪ್ರದರ್ಶಿಸಲು ನೀವು ಹೇಗೆ ಕೆಲಸ ಮಾಡುತ್ತೀರಿ?' ಎಂದು ಕೇಳಲಾಯಿತು. ಇದಕ್ಕೆ R'Bonney Gabriel'ನಾನು ವಿನ್ಯಾಸಕಿಯಾಗಿ 13 ವರ್ಷಗಳಿಂದ ಹೊಲಿಯುತ್ತಿದ್ದೇನೆ, ನಾನು ಫ್ಯಾಷನ್ ಅನ್ನು ಒಳ್ಳೆಯದಕ್ಕಾಗಿ ಶಕ್ತಿಯಾಗಿ ಬಳಸುತ್ತೇನೆ. ನನ್ನ ಉದ್ಯಮದಲ್ಲಿ, ನಾನು ನನ್ನ ಬಟ್ಟೆಗಳನ್ನು ತಯಾರಿಸುವಾಗ ಮರುಬಳಕೆಯ ವಸ್ತುಗಳ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುತ್ತಿದ್ದೇನೆ. ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ಹಿಂಸೆಯಿಂದ ಬದುಕುಳಿದ ಮಹಿಳೆಯರಿಗೆ ನಾನು ಹೊಲಿಗೆ ತರಗತಿಗಳನ್ನು ಕಲಿಸುತ್ತೇನೆ. ನಮ್ಮ ಸಮುದಾಯದಲ್ಲಿ ಹೂಡಿಕೆ ಮಾಡುವುದರಿಂದ ನಾವು ಬದಲಾವಣೆಯನ್ನು ತರಬಹುದು ಎಂದು ನಾನು ಅಂದುಕೊಂಡಿದ್ದೇನೆ' ಎಂದು ಉತ್ತರಿಸಿದರು.

ಮಿಸ್‌ ವರ್ಲ್ಡ್‌, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕುಡ್ಲದ ಹುಡುಗಿಯರದ್ದೇ ಮಿಂಚು

ಟಾಪ್ 16ರ ಸ್ಥಾನದಲ್ಲಿದ್ದ ದಿವಿತಾ ರೈ ಅವರು ಕೊನೆಹಂತದಲ್ಲಿ ಸ್ಪರ್ಧೆಯಿಂದ ಪರಾಭವಗೊಂಡರು. ದಿವಿತಾ ರೈ ಮಿಸ್‌ ದಿವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದಿದ್ದರು.

click me!