ಒಬ್ಬರ ಕಣ್ಣು ನೋಡಿದರೆ ಸಾಕು ನೋಡುತ್ತಲೇ ಇರಬೇಕು ಎನಿಸುತ್ತದೆ. ಅದಕ್ಕೆ ಕಾರಣ ಕಣ್ಣಿಗೆ ಹಚ್ಚಿದ ಕಾಡಿಗೆ ಅವರ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಪ್ರತೀ ದಿನ ಕಾಡಿಗೆ ಹಚ್ಚುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುತ್ತದೆ. ಅದು ಹೇಗೆ ಇಲ್ಲಿದೆ ಮಾಹಿತಿ.
ಮೇಕಪ್ ಒಂದು ಕಲೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅಂದ ಹೆಚ್ಚುವುದಲ್ಲದೆ ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ ಎಂದರೆ ತಪ್ಪಾಗಲಾರದು. ಮೇಕಪ್ ವಿಚಾರದಲ್ಲಿ ಅದರಲ್ಲೂ ಕಣ್ಣಿಗೆ ಹಚ್ಚುವ ಕಾಡಿಗೆಯ ಬಗ್ಗೆ ಎಷ್ಟು ತಿಳಿದಿದೆ? ಕಾರ್ಯಕ್ರಮಕ್ಕೆಂಧು ತಯಾರಾದಾಗ ಒಂದು ಕಂಪ್ಲೀಟ್ ಲುಕ್ ನೀಡುವ ಈ ಕಪ್ಪು ಕಾಡಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಬಗ್ಗೆ ಇಲ್ಲಿದೆ ಡೀಟೇಲ್ಸ್. ನೈಸರ್ಗಿಕವಾಗಿ ತಯಾರಿಸುವ ಕಾಡಿಗೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಾಡಿಗೆ ಹಚ್ಚಿದರೆ ಹೆಚ್ಚಿನವರಿಗೆ ಕಣ್ಣು ಉರಿಯುವುದು, ಕಣ್ಣಲ್ಲಿ ನೀರು ಬರುವುದು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಅದರಲ್ಲಿನ ರಾಸಾಯನಿಕ ಪದಾರ್ಥಗಳ ಬಳಸಲಾಗಿರುತ್ತದೆ. ಆದರೆ ನೈಸರ್ಗಿಕ ಕಾಡಿಗೆಯು ಕಣ್ಣಿಗೆ ಒಳ್ಳೆಯದಲ್ಲದೆ, ಅಳಸಿ ಹೋಗದೆ ಬಹು ಕಾಲ ಇರುತ್ತದೆ.
ಈ ಕಾಡಿಗೆ ಇತ್ತೀಚಿನದ್ದಲ್ಲ. ಸುಮಾರು ೫೦೦೦ ವರ್ಷಗಳ ಪುರಾತನ ಹೊಂದಿದ್ದು, ಸೌಮದರ್ಯಕ್ಕಾಗಿ ಹಾಗೂ ಔಷಧವಾಗಿಯೂ ಇದನ್ನು ಬಳಸುತ್ತಿದ್ದರು. ತುಪ್ಪ, ತರಕಾರಿ ಎಣ್ಣೆ, ಕರ್ಪೂರವನ್ನು ಬಳಸಿ ಕಾಡಿಗೆಯನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಅಲ್ಲದೆ ಆಯುರ್ವೇದದಲ್ಲೂ ಇದಕ್ಕೆ ಮಹತ್ವದ ಸ್ಥಾನವಿದೆ. ಕಾಲ ಕಳೆದಂತೆ ಕಾಡಿಗೆ ತಯಾರಿಕೆಯು ಒಂದು ವ್ಯಾಪಾರವಾಗಿ ಬದಲಾಗಿರುವ ಕಾರಣ ರಾಸಾಯನಿಕ ಅಂಶಗಳನ್ನು ಬಳಸಲಾಘುತ್ತಿದೆ. ಕಣ್ಣಿಗೆ ನೈಸರ್ಗಿಕ ಕಾಡಿಗೆ ಹಚ್ಚುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿಗೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
Astro Tips : ಕಂಕಣ ಭಾಗ್ಯ ಕೂಡಿ ಬರಲು ಕಾಡಿಗೆಯ ಈ ಉಪಾಯ ಅನುಸರಿಸಿ
1. ವಿಟಮಿನ್ ಇ ಹೇರಳವಾಗಿದೆ
ನೈಸರ್ಗಿಕವಾಗಿ (Naturally) ತಯಾರಿಸುವ ಕಾಡಿಗೆಯಲ್ಲಿ ಹರಳೆಣ್ಣೆಯನ್ನು ಉಪಯಗಿಸಲಾಗುತ್ತದೆ ಹಾಗಾಗಿ ಅದು ಕಣ್ಣನ್ನು ತಂಪಾಗಿರಿಸುತ್ತದೆ. ಶುದ್ಧ ಹರಳಣ್ಣೆಯಲ್ಲಿ (Castor Oil) ವಿಟಮಿನ್ ಇ (Vitamin E) ಸಮೃದ್ಧವಾಗಿದೆ. ಅಲ್ಲದೆ ಕಣ್ಣಿನ ರೆಪ್ಪೆ ದಪ್ಪ ಹಾಗೂ ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ. ಕಾಡಿಗೆ ಹಚ್ಚುವುದರಿಂದ ಕಣ್ಣಿಗೆ ಆಗುವ ಒತ್ತಡ ನಿವಾರಿಸುವುದಲ್ಲದೆ ಸುಸ್ತಾಗುವುದನ್ನು ತಡೆಗಟ್ಟಿ ಆರೋಗ್ಯವಾಗಿರಿಸುತ್ತದೆ.
2. ಆಂಟಿ ಬ್ಯಾಕ್ಟೀರಿಯಲ್
ಕಾಡಿಗೆ ತಯಾರಿಸಲು ತಾಮ್ರವನ್ನು ಬಳಸಲಾಗುತ್ತದೆ. ಇದರಲ್ಲಿ ಶುದ್ಧೀಕರಿಸುವ ಗುಣವಿದೆ. ತಾಮ್ರವು ಕಣ್ಣನ್ನು ಬಾಹ್ಯ ಮತ್ತು ಮೇಕಪ್ ಸೋಂಕುಗಳಿAದ ದೂರವಿಡುತ್ತದೆ. ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ಮತ್ತು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.
3. ಕಿರಿಕಿರಿ ನಿವಾರಣೆ
ಸಾಮಾನ್ಯವಾಗಿ ಕಂಚು ಮತ್ತು ಬೆಳ್ಳಿಯಲ್ಲಿ ಕಾಡಿಗೆ ತಯಾರಿಸಲಾಗುತ್ತದೆ. ಪುನರುತ್ಪಾದಕ ಗುಣಗಳಿರುವುದರಿಂದ ಕಣ್ಣಿನ ಅಲರ್ಜಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕಣ್ಣನ್ನು ಅತಿಯಾಘಿ ಉಜ್ಜುವುದರಿಂದ ಕಿರಿಕಿರಿ ಮತ್ತು ಊದಿಕೊಂಡ ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತದೆ.
ಮನೆಯಲ್ಲಿಯೇ ನೈಸರ್ಗಿಕ ಕಾಜಲ್ ತಯಾರಿಸಿ ಕಣ್ಣಿಗೆ ಅಂದ ನೀಡಿ
undefined
4. ಕಣ್ಣು ತಂಪಾಗಿಸುತ್ತದೆ
ನೈಸರ್ಗಿಕ ಕಾಡಿಗೆಯಲ್ಲಿ ಕರ್ಪೂರ ಮುಖ್ಯ ಅಂಶವಾಗಿದೆ. ಇದು ಕಣ್ಣುಗಳಿಗೆ ತಂಪು ನೀಡುತ್ತದೆ ಮತ್ತು ಕಣ್ಣುಗಳಿಗೆ ಒತ್ತಡದಿಂದ ಮುಕ್ತಿ ನೀಡುತ್ತದೆ. ಇದು ಕಣ್ಣುಗಳಲ್ಲಿ ಆಗುವ ಸಣ್ಣ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಕಣ್ಣುಗಳ ಆರೋಗ್ಯವು ಉತ್ತೇಜಿಸುತ್ತದೆ.
5. ಡಾರ್ಕ್ ಸರ್ಕಲ್ ದೂರ ಮಾಡುತ್ತದೆ
ಪ್ರತೀ ದಿನ ಕಣ್ಣಿಗೆ ಕಾಡಿಗೆ ಹಚ್ಚುವುದು ಆರೋಗ್ಯಕ್ಕೆ ಒಳ್ಳೆಯದು. ಕಾಡಿಗೆ ತಯಾರಿಸಲು ತುಪ್ಪವನ್ನು ಬಳಸಲಾಗುತ್ತದೆ. ತುಪ್ಪವು ಡಾರ್ಕ್ ಸರ್ಕಲ್ ಅನ್ನು ದೂರ ಮಾಡುತ್ತದೆ. ಕಣ್ಣು ರೆಪ್ಪೆಗಳ ಕೆಳಗೆ ಉಳಿದಂತಹ ಮೇಕಪ್ ಅನ್ನು ತೆಗೆದುಹಾಕುತ್ತದೆ. ನೈಸರ್ಗಿಕ ಕಾಡಿಗೆ ಬಳಸುವುದರಿಂದ ಕಣ್ಣುಗಳಲ್ಲಿ ಆಗುವ ಸೋಂಕುಗಳಿAದ ಮುಕ್ತವಾಗಿರುತ್ತದೆ ಮತ್ತು ಸ್ವಚ್ಛವಾಗಿಡುತ್ತದೆ.
6. ದೃಷ್ಟಿ ಕಾಯ್ದುಕೊಳ್ಳುತ್ತದೆ
ಪ್ರತೀ ದಿನ ಕಣ್ಣಿಗೆ ಕಾಡಿಗೆ ಸಣ್ಣ ಸಣ್ಣ ಧೂಳುಗಳು ಹೋಗಿರುತ್ತವೆ. ಕಾಡಿಗೆ ಹಚ್ಚುವುದರಿಂದ ಕಣ್ಣು ಸ್ವಚ್ಛವಾಗುವುದಲ್ಲದೆ ಕಣ್ಣಿನ ದೃಷ್ಟಿಯೂ ಕಾಯ್ದುಕೊಳ್ಳುತ್ತದೆ. ಅಲ್ಲದೆ ಕಣ್ಣಿನ ರೆಪ್ಪೆಯು ಉದ್ದ ಬೆಳೆಯುವಂತೆ ಮಾಡುತ್ತದೆ.