Hair Style: ದೈನಂದಿನ ಹೇರ್ ಸ್ಟೈಲ್‌ಗೇ ಬಾಲಿವುಡ್‌ನ ಈ ಸ್ಟೈಲ್ ಟ್ರೈ ಮಾಡಿ!

By Suvarna NewsFirst Published Sep 10, 2022, 5:19 PM IST
Highlights

ಒಂದು ಫಂಕ್ಷನ್‌ಗೆ ಹೋಗಬೇಕೆಂದರೆ ಯಾವ ಸೀರಿ, ಹೇಗೆ ಮೇಕಪ್ ಮಾಡಿಕೊಳ್ಳಬೇಕು ಎಂದೆಲ್ಲಾ ಯೋಚಿಸುವಂತೆ ಯಾವ ಹೇರ್ ಸ್ಟೆöÊಲ್ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂದು ಯೋಚಿಸುವುದು ಇದೆ. ದೈನಂದಿನ ಹೇರ್ ಸ್ಟೆöÊಲ್‌ನಲ್ಲಿ ಪೋನಿಟೇಲ್ ಸ್ಟೆöÊಲ್ ಎಲ್ಲರಿಗೂ ಒಪ್ಪುವಂತಹದ್ದು. ನಮ್ಮ ಬಾಲಿವುಡ್ ಸ್ಟಾರ್ ನಟಿಯರು ತಮ್ಮ ಸಾಮಾನ್ಯದಿನಗಳಲ್ಲಿ ಅನುಸರಿಸುವ ಪೋನಿಟೇಲ್ ಹೇರ್‌ಸ್ಟೆöÊಲ್‌ಗಳು ಇಲ್ಲಿವೆ.
 

ನಾವು ಚೆನ್ನಾಗಿ ಕಾಣಬೇಕು ಎಂಬ ಆಸೆ ನಮ್ಮಲ್ಲಿ ಮೂಡಿದರೆ ಮಾತ್ರ ನಾವು ಮೇಕಪ್ ಹಾಗೂ ಸ್ಟೈಲಿಗೆ ಹೆಚ್ಚು ಆಸಕ್ತಿ ಹೊಂದಲು ಸಾಧ್ಯ. ಅದಕ್ಕಾಗಿ ಹೊಸತನ್ನು ಕಂಡಕೊಳ್ಳಲು ಮುಂದಾಗುತ್ತೇವೆ. ಅಥವಾ ಯಾರಾದರೂ ಸ್ಟಾರ್ಸ್ನ್ನು ಫಾಲೋ ಮಾಡ್ತೀವಿ. ಇದಕ್ಕೆ ಮೊದಲು ಬೇಕಾಗಿರುವುದು ವೈಯಕ್ತಿವಾಗಿ ಇಂಟ್ರೆಸ್ಟ್. 

ಹೊರಗಿನ ಪ್ರಪಂಚಕ್ಕೆ ನಾವು ಹೇಗೆ ಕಾಣ್ತೀವಿ ಅನ್ನುವುದಕ್ಕಿಂತ ನಮಗೆ ಹೇಗೆ ಇಷ್ಟವಾಗುತ್ತದೊ ಹಾಗೆ ಇರುವುದು ಬಹಳ ಮುಖ್ಯ. ಸ್ಟೈಲ್ಸ್ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಫಂಕ್ಷನ್‌ಗೆ ಹೋಗಬೇಕೆಂದರೂ ನಮ್ಮ ಮೇಕಪ್‌ಗೆ ತಕ್ಕಂತೆ ಡ್ರೆಸ್ ಹಾಗೂ ಹೇರ್ ಸ್ಟೈಲ್ ಮಾಡುವುದು ಕಾಮನ್. ಈ ಕಾಮನ್ ಸಂಗತಿಗಳಲ್ಲಿ ಹೇರ್ ಸ್ಟೈಲ್ಸ್ ಪ್ರಾಮುಖ್ಯತೆ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಅವರು ಹೇಗೆ ಕಾಣ್ತಿದ್ದಾರೆ, ಯಾವ ರೀತಿಯ ಡ್ರೆಸ್ ಹಾಕಿದ್ದಾರೆ ಎಂದು ನೋಡುವಂತಯೇ ಡ್ರೆಸ್ ಹಾಗೂ ಮೇಕಪ್‌ಗೆ ಅನುಗುಣವಾಗಿ ಹೇಗೆ ಹೇರ್ ಸ್ಟೈಲ್ ಮಾಡಿದ್ದಾರೆ ಎಂದು ನೋಡುವವರು ಇದ್ದಾರೆ. ಬಹುತೇಕ ಯಂಗ್‌ಸ್ಟರ್ಸ್ ಅದರಲ್ಲೂ ಹುಡುಗಿಯರು ಸ್ಟಾರ್ ನಟಿಯರನ್ನು ಫಾಲೋ ಮಾಡೋದು ಹೆಚ್ಚು. ಎಲ್ಲಾ ಕಾಲಕ್ಕೂ ಕಾಮನ್ ಆದ ಪೋನಿಟೈಲ್ ಹೇರ್ ಸ್ಟೈಲ್ ಮಾಡಿದಾಗ  ಸಿಂಪಲ್ & ಕ್ಲೀನ್ ಫಿನಿಶ್ ನೀಡುತ್ತದೆ. ಬಾಲಿವುಡ್‌ನ ಸ್ಟಾರ್ಸ್ ಆಲಿಯಾ ಭಟ್‌ನಿಂದ ಕರೀನಾ ಕಪೂರ್ ವರೆಗೂ ಆನ್ & ಆಫ್ ಸ್ಕ್ರೀನ್‌ನಲ್ಲಿಯೂ ತಮ್ಮ ಕೇಶವನ್ನು ಪೋನಿಟೈಲ್ ಸ್ಟೈಲ್ ಮಾಡುತ್ತಾರೆ. ಈ ಬಗ್ಗೆ ಡೀಟೈಲ್ಸ್ ಇಲ್ಲಿದೆ.

ಉದ್ದ ಕೂದಲಿದ್ದರೂ ಎಷ್ಟು ಸಿಂಪಲ್ ನೋಡಿ ನಿವೇದಿತಾ ಗೌಡ ಹೇರ್‌ಸ್ಟೈಲ್!

ಪೋನಿಟೈಲ್ ಹೇರ್ ಸ್ಟೈಲ್ ಮಾಡಲು ಗ್ರ್ಯಾಂಡ್ ಆಗಿ ರೆಡಿಯಾಗಬೇಕು ಎಂದೇನಿಲ್ಲ. ಅದಕ್ಕೆ ಸಿಂಪಲ್ ಆಗಿದ್ದಷ್ಟು ಅದರ ಅಂದ ಹೆಚ್ಚಿಸುತ್ತದೆ. ಹೇರ್‌ ಸ್ಟೈಲ್‌ನಲ್ಲಿ ಸ್ಪರ್ಧೆ ಏನಾದರೂ ಇದ್ದರೆ ಅದರಲ್ಲಿ ಪೋನಿಟೈಲ್ ಹೇರ್ ಸ್ಟೈಲ್ ಮೊದಲ ಸ್ಥಾನ ಪಡೆಯುತ್ತದೆ. ಏಕೆಂದರೆ ಇದು ಕ್ಲಾಸಿಕ್ ವಿನ್ಯಾಸವಾಗಿದ್ದು, ಯಾವುದೇ ಅಡೆ ತಡೆ ಇಲ್ಲದೆ ಅನುಕೂಲಕರವಾಗಿದೆ. ಪ್ರತೀ ದಿನ ಒಂದೊಂದು ಪೋನಿಟೇಲ್ ಹೇರ್ ಸ್ಟೈಲ್ ಮಾಡಲು ವೆರೈಟಿ ನೋಡ್ತಿದ್ದೀರಾ? ಕೆಲವು ಚಿಕ್ ಪೋನಿಟೇಲ್ ಹೇರ್ ಸ್ಟೈಲ್ಮಾಡಲು ಬಾಲಿವುಡ್ ಸ್ಟರ‍್ಸ್ ಪ್ರಯೋಗಿಸುವ ಹೇರ್‌ಸ್ಟೈಲ್ಇಲ್ಲಿವೆ ನೋಡಿ.

1. ನಯವಾದ ಪೋನಿಟೇಲ್
ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಸಾಮಾನ್ಯವಾಗಿ ನಯವಾದ ಪೋನಿಟೇಲ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಳ ಮತ್ತು ಸಾಧಿಸಲು ಸುಲಭವಾಗುವ ಈ ಹೇರ್ ಸ್ಟೈಲ್ಎಲ್ಲಾ ಕೂದಲ ಒಟ್ಟುಗೂಡಿಸಿ ಹಿಂದಕ್ಕೆ ಎಳೆದು ಕಟ್ಟಿಕೊಳ್ಳಲಾಗುತ್ತದೆ. ಕಟ್ಟಿಕೊಂಡ ನಂತರ ಕೆಳಗಿನ ಕೂದಲನ್ನು ಅಥವಾ ಕಟ್ಟಿದ ಕೂದಲಿನ ತುದಿಯನ್ನು ಸ್ವಲ್ಪ ಕರ್ಲಿಂಗ್ ಮಾಡಿ.

2. ಮೆಸ್ಸಿ ಪೋನಿಟೇಲ್
ಈ ಹೇರ್ ಸ್ಟೈಲ್ ಗೊಂದಲಮಯವಾಗಿರುತ್ತದೆ. ಉದ್ದೇಶಪೂರ್ವಕವಾಗಿ ರಚಿಸುವುದರಿಂದ ಇದು ದೀರ್ಘಕಾಲದವರೆಗೆ ಹಾಗೆಯೇ ಇರುತ್ತದೆ. ಕಿಯಾರ ಅಡ್ವಾಣಿ ಮೆಸ್ಸಿ ಪೋನಿಟೇಲ್ ಹೇರ್ ಸ್ಟೈಲ್ ಹೆಚ್ಚು  ಜನಪ್ರಿಯವಾಗಿದೆ. ಕೂದಲನ್ನು ಮೊದಲು ಬೈತಲೆ ತೆಗೆದುಕೊಳ್ಳಬೇಕು. ನಂತರ ಕೂದಲನ್ನು ಬಾಚದೆ ಎಲ್ಲಾ ಕೂದಲನ್ನು ಹಿಂದಕ್ಕೆ  ತೆಗೆದುಕೊಂಡು ಕಟ್ಟುವುದು. ಉದಾಹರಣೆಗೆ ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಕಟ್ಟುವ ರೀತಿ ಎನ್ನಬಹುದು. ಕೂದಲಿನ ದಟ್ಟಣೆ ಒದಗಿಸಲು ಹೇರ್ ಎಕ್ಸಟೆನ್ಷನ್ ಅನ್ನು ಮಾಡಿಕೊಳ್ಳಬಹುದು.

ವಿಭಿನ್ನ ಹೇರ್ ಸ್ಟೈಲ್ ಜೊತೆ ಟ್ರೆಡಿಶನಲ್ ಲುಕ್‌ಗಾಗಿ ಈ ರೀತಿಯ ತುರುಬು ಬಳಸಿ

3. ಅಸ್ತವ್ಯಸ್ತವಾದ ಮೆಸ್ಸಿ ಪೋನಿಟೇಲ್
ಈ ಹೇರ್‌ಸ್ಟೆಲ್‌ಗೆ ಬಾಚಣಿಗೆ ಬಳಸಲೇ ಬೇಕೆಂದೇನಿಲ್ಲ. ಕೃತಿ ಸನೋನ್ ಅಸ್ತವ್ಯಸ್ತವಾದ ಮೆಸ್ಸಿ ಪೋನಿಟೇಲ್ ಹೇರ್ ಸ್ಟೈಲ್ಆಕರ್ಷಣೀಯವಾಗಿದೆ. ಕೂದಲನ್ನು  ಮೊದಲು ಪೋನಿಟೇಲ್ ಮಾಡಿಕೊಳ್ಳಬೇಕು. ಅಂದರೆ ಎಲ್ಲಾ ಕೂದಲನ್ನು ಎಳೆದು ಹಿಂದಕ್ಕೆ ತೆಗೆದುಕೊಂಡು ಎತ್ತರದಲ್ಲಿ ಕಟ್ಟಿಕೊಳ್ಳುವುದು. ಕೆಲವು ಕೂದಲ ಎಳೆಯನ್ನು ತೆಗೆದುಕೊಂಡು ಅದನ್ನು ಬ್ಯಾಂಡ್ ಅಥವಾ ಸ್ಕಾರ್ಫ್ (Scarf) ಸುತ್ತಲೂ ಕಟ್ಟಿಕೊಳ್ಳಿ. ಅಂದರೆ ಕಟ್ಟಿಕೊಂಡ ಬ್ಯಾಂಡ್ ಸುತ್ತಲೂ ಕೂದಲನ್ನು ಸುತ್ತುವುದಾಗಿದೆ.  

4. ಹೈ ಪೋನಿಟೇಲ್
ಎತ್ತರದಲ್ಲಿ ಕೂದಲು ಕಟ್ಟಿಕೊಳ್ಳುವುದು ದೈನಂದಿನ ಲುಕ್‌ಗೆ ಈ ಹೇರ್ ಸ್ಟೈಲ್ಉತ್ತಮವಾಗಿದೆ. ಜಾಕ್ವಲಿನ್ ಫರ್ನಾಂಡಿಸ್ ಈ ಹೇರ್ ಸ್ಟೈಲ್ಸೂಪರ್ ಆಗಿ ಕಾಣಿಸಿಕೊಳ್ಳುತ್ತದೆ. ಕ್ಲಾಸಿಕ್ ಆಗಿ ಕಾಣುವ ಈ ಹೇರ್ ಸ್ಟೈಲ್ಎಲ್ಲಾ ಕೂದಲನ್ನು ಒಟ್ಟುಗೂಡಿಸಿ ಎತ್ತರಕ್ಕೆ ಕೂದಲನ್ನು ಕಟ್ಟಿಕೊಳ್ಳುವುದಾಗಿದೆ. 

5. ಬ್ರೇಡ್ ಪೋನಿಟೇಲ್
ಕರೀನಾ ಕಪೂರ್‌ನ ಈ ಹೇರ್ ಸ್ಟೈಲ್ ಹೆಚ್ಚು ಚಾಲ್ತಿಯಲ್ಲಿರುವುದು ಕಾಣಬಹುದು. ನೋಡಲು ಈ ಹೇರ್ ಸ್ಟೈಲ್ಕಷ್ಟ ಎನಿಸಿದರೂ ಇದು ಸೂಪರ್ ಸಿಂಪಲ್ ಸ್ಟೈಲ್ (Simple Style). ಇದನ್ನು ದೈನಂದಿನ ಹೇರ್‌ಸ್ಟೈಲ್ ಆಗಿಯೂ ಬಳಸಬಹುದು. ನೋಡಲು ಹಗ್ಗದಂತೆ ಕಾಣಿಸಿಕೊಳ್ಳುವ ಈ ಹೇರ್ ಸ್ಟೈಲ್  (Hair Style) ಸುರುಳಿಯಿಂತೆ ಸುತ್ತಿರುತ್ತದೆ. ಕೂದಲನ್ನು ಮೊದಲು ಎತ್ತರಕ್ಕೆ ಕಟ್ಟಿಕೊಂಡು ನಂತರದ ಕಟ್ಟಿಕೊಂಡ ಕೂದಲನ್ನು ಎರಡು ಭಾಗವಾಗಿಸಿಕೊಳ್ಳಬೇಕು. ಒಂದಾದ ಮೇಲೊಂದರಂತೆ ಮೇಲೆ ಕೆಳಗೆ ಸುತ್ತಿ ತುದಿಯಲ್ಲಿ ಬ್ಯಾಂಡ್ ಹಾಕಿ ಕಟ್ಟಿದರಾಯಿತು.

click me!