ಫಿನಿಕ್ಸ್ ಟ್ಯಾಟೂ ಹಾಕಿಸಿಕೊಂಡು ಹೊಸವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ ಮಲೈಕಾ ಬಾಯ್‌ಫ್ರೆಂಡ್‌

Published : Jan 02, 2024, 05:51 PM IST
ಫಿನಿಕ್ಸ್ ಟ್ಯಾಟೂ ಹಾಕಿಸಿಕೊಂಡು ಹೊಸವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ ಮಲೈಕಾ ಬಾಯ್‌ಫ್ರೆಂಡ್‌

ಸಾರಾಂಶ

ಬಹುತೇಕ ಬಾಲಿವುಡ್‌ನ ತಾರೆಯರೆಲ್ಲರೂ ಹೊಸವರ್ಷ ಆಚರಿಸಲು ವಿದೇಶಕ್ಕೆ ಹಾರಿರುವುದು ಗೊತ್ತೆ ಇದೆ. ಎಲ್ಲರೂ ವಿದೇಶಗಳಲ್ಲಿ ತಮ್ಮ ತಮ್ಮ ಪ್ರೀತಿ ಪಾತ್ರರ ಜೊತೆ ಹೊಸವರ್ಷವನ್ನು ಬರಮಾಡಿಕೊಂಡರೆ ನಟ ಅರ್ಜುನ್ ಕಪೂರ್ ಮಾತ್ರ ಎಲ್ಲೂ ಹೋಗದೇ  ಹೊಸ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಹೊಸವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. 

ಬಹುತೇಕ ಬಾಲಿವುಡ್‌ನ ತಾರೆಯರೆಲ್ಲರೂ ಹೊಸವರ್ಷ ಆಚರಿಸಲು ವಿದೇಶಕ್ಕೆ ಹಾರಿರುವುದು ಗೊತ್ತೆ ಇದೆ. ಎಲ್ಲರೂ ವಿದೇಶಗಳಲ್ಲಿ ತಮ್ಮ ತಮ್ಮ ಪ್ರೀತಿ ಪಾತ್ರರ ಜೊತೆ ಹೊಸವರ್ಷವನ್ನು ಬರಮಾಡಿಕೊಂಡರೆ ನಟ ಅರ್ಜುನ್ ಕಪೂರ್ ಮಾತ್ರ ಎಲ್ಲೂ ಹೋಗದೇ  ಹೊಸ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಹೊಸವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. 

ನಟ ತನ್ನ ಮೊಣಕಾಲಿನಿಂದ ಕೆಳಗೆ ಹಿಂಭಾಗದಲ್ಲಿ ಹಾಕಿಸಿಕೊಂಡಿರುವ ಈ ಫಿನಿಕ್ಸ್ ಹಕ್ಕಿಯ ಟ್ಯಾಟೂಗೆ ನಟ ಅಭಿಷೇಕ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಫಿನಿಕ್ಸ್ ಹಕ್ಕಿಯ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವೀಡಿಯೋವನ್ನು ಕೂಡ ಅರ್ಜುನ್ ಕಪೂರ್ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹೊಸಬಳೊಂದಿಗೆ ಅರ್ಜನ್ ಕಪೂರ್ ಕುಚ್‌ ಕುಚ್‌; ವಿರಹ ವೇದನೆಯಲ್ಲಿ ಬೇಯುತ್ತಿರುವ ಮಲೈಕಾಗೆ ಯಾರು ಗತಿ!

ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಇಂದು ಈ ಫಿನಿಕ್ಸ್ ಹಕ್ಕಿಯ ಟ್ಯಾಟೂ ಹಾಕುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿರುವ ಅರ್ಜುನ್ ಕಪೂರ್,  ನಾವು ಯಾರಾಗಿದ್ದೇವೆ ಎಂಬ ಬೂದಿಯಿಂದ ಮಾತ್ರ, ನಾವು ಯಾರಾಗಬೇಕು ಎಂಬ ಸ್ಥಾನಕ್ಕೆ ಏರಬಹುದು ಎಂದು ಬರೆದುಕೊಂಡಿದ್ದಾರೆ. (ಫಿನಿಕ್ಸ್‌ ಹಕ್ಕಿಯನ್ನು ಸಾವಿನ ಅಥವಾ ಸೋಲಿನ ಕೊನೆ ಕ್ಷಣದಿಂದ ಎದ್ದು ಬಂದು ಶೌರ್ಯದಿಂದ ಮೆರೆಯುವ ಸಾಮರ್ಥ್ಯದ ಹಂತಕ್ಕೆ ಬೆಳೆಯುವುದಕ್ಕೆ ಹೋಲಿಸಲಾಗುತ್ತದೆ. ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದ ಎಂದು ಹೇಳುವುದನ್ನು ನೀವು ಕೇಳಿರಬಹುದು.) ಜೊತೆಗೆ ರೈಸಿಂಗ್ ಫ್ರಮ್ ದಿ ಅಶ್ ಎಂಬ ಹ್ಯಾಶ್‌ ಟ್ಯಾಗ್‌ #2024 ಎಂದು ಬರೆದುಕೊಂಡಿದ್ದಾರೆ. 

ಈ ವೀಡಿಯೋವನ್ನು ಅರ್ಜುನ್ ಕಪೂರ್ ಅವರು ಪೋಸ್ಟ್ ಮಾಡ್ತಿದ್ದಂತೆ ಅಭಿಮಾನಿಗಳು ಹೃದಯದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೂಡ ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದು, ಎತ್ತಿದ ಕೈಗಳ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಅರ್ಜುನ್ ಕಪೂರ್ ಸಿನಿಮಾಗಿಂತ ಹೆಚ್ಚು ಗೆಳತಿ, ಅರ್ಬಾಜ್ ಖಾನ್ ಮಾಜಿ ಪತ್ನಿ ಸಲ್ಮಾನ್ ಖಾನ್ ಅತ್ತಿಗೆ ಮಲೈಕಾ ಅರೋರಾ ಜೊತೆ ಸಂಬಂಧದಲ್ಲಿದ್ದ ಕಾರಣಕ್ಕೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಭಾಗವಹಿಸಿದ್ದ ಅರ್ಜುನ್ ಕಪೂರ್‌ಗೆ ಕಾರ್ಯಕ್ರಮ ನಿರೂಪಕ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಈ ಬಗ್ಗೆಯೇ ಪ್ರಶ್ನೆಯೊಂದನ್ನು ಕೇಳಿದ್ದರು. 

ಬಾಲಿವುಡ್‌ನ ಅತಿದೊಡ್ಡ ಫ್ಲಾಪ್ ನಟ; ಬ್ಯಾಕ್‌ ಟು ಬ್ಯಾಕ್‌ 9 ಮೂವಿ ಸೋತ್ರೂ ಕೈಯಲ್ಲಿದೆ 200 ಕೋಟಿಯ ಸಿನಿಮಾ!

ಮಲೈಕಾ ಜೊತೆಗಿನ ಸಂಬಂಧದಲ್ಲಿ ಮುಂದುವರಿಯುವಿರ ಅಥವಾ ಸರಳವಾಗಿ ಜೀವನದಲ್ಲಿ ಯಾವುದೇ ಪ್ಲಾನ್‌ಗಳಿಲ್ಲದೇ ಬಂದಂತೆ ಸ್ವೀಕರಿಸುವಿರಾ (going with the flow of life) ಈ ಬಗ್ಗೆ ನಿಮ್ಮೆ ಆಲೋಚನೆಗಳೇನೋ ಎಂದು ಕೇಳಿದ್ದರು.  ಇದಕ್ಕೆ ಪ್ರತಿಕ್ರಿಯಿಸಿದ ಅರ್ಜುನ್ ಕಪೂರ್, ನಾನು ಯೋಚಿಸಿದಂತೆ ತುಂಬಾ ಗೌರವಯುತವಾದ ವಿಚಾರವೆಂದರೆ, ಒಮ್ಮೆ ನಾವು ಆ ಹಂತಕ್ಕೆ ಹೋದ ನಂತರ ಜೊತೆಯಾಗಿ ಬಂದು ಆ ಬಗ್ಗೆ ಮಾತನಾಡುವುದು. ನಾನು ಈಗ ಯಾವ ಸ್ಥಾನದಲ್ಲಿರುವೆನೋ ಆ ಬಗ್ಗೆ ನಾನು ಖುಷಿಯಾಗಿದ್ದೇನೆ. ಪ್ರಸ್ತುತ ನಾನು ಈ ಬಗ್ಗೆ ಏನನ್ನೂ ಮಾತನಾಡಲು ಬಯಸುವುದಿಲ್ಲ ಏಕೆಂದರೆ ಅದರ ಬಗ್ಗೆ ಏಕಾಂಗಿಯಾಗಿ ಮಾತನಾಡಿದರೆ ಸಂಬಂಧಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ ಎಂದು ಹೇಳಿದ್ದರು.

ಅರ್ಜುನ್ ಕಪೂರ್ ಅವರ ಸಿನಿಮಾ ಬಗ್ಗೆ ಹೇಳುವುದಾದರ ಅರು ಕೊನೆಯದಾಗಿ ಕಳೆದ ವರ್ಷ ರಿಲೀಸ್ ಆದ ಲೇಡಿ ಕಿಲ್ಲರ್ ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ಭೂಮಿ ಪಡ್ನೇಕರ್ ಅವರು  ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಪ್ರಸ್ತುತ ಅರ್ಜುನ್ ಕಪೂರ್ ಅವರು ಸಿಂಗಮ್ ಅಗೈನ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ಸಿನಿಮಾ ಅಜಯ್ ದೇವಗನ್ ಹಾಗೂ ರೋಹಿತ್ ಶೆಟ್ಟಿ ಅವರ ಪ್ರಾಜೆಕ್ಟ್ ಆಗಿದೆ.  ಇತ್ತೀಚೆಗೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಸಂಬಂಧ ಮುರಿದು ಬಿದ್ದಿದೆ ಎಂಬ ಗಾಳಿಸುದ್ದಿಗಳು ಸಾಕಷ್ಟು ಹಬ್ಬಿದ್ದವು. ಆದರೆ ಇಬ್ಬರೂ ಈ ಬಗ್ಗೆ ಮೌನವಾಗಿಯೇ ಇದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?