1.60 ಲಕ್ಷದ ಐಷಾರಾಮಿ ಬ್ರಾಂಡ್‌ನ ಮಿಡಿ ಧರಿಸಿ ದುಬೈನಲ್ಲಿ ಪಾರ್ಟಿ ಮಾಡಿದ ಧೋನಿ ಪತ್ನಿ

Published : Dec 31, 2023, 03:49 PM ISTUpdated : Dec 31, 2023, 05:09 PM IST
1.60 ಲಕ್ಷದ  ಐಷಾರಾಮಿ ಬ್ರಾಂಡ್‌ನ ಮಿಡಿ ಧರಿಸಿ ದುಬೈನಲ್ಲಿ ಪಾರ್ಟಿ ಮಾಡಿದ ಧೋನಿ ಪತ್ನಿ

ಸಾರಾಂಶ

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ತಮ್ಮ  ಪತಿಯೊಂದಿಗೆ ದುಬೈನಲ್ಲಿ ಪಾರ್ಟಿ ಮಾಡಿದ್ದು, ಈ ವೇಳೆ ಧೋನಿ ಪತ್ನಿ ಸಾಕ್ಷಿ ಧೋನಿ ಧರಿಸಿರುವ ದುಬಾರಿ ಧಿರಿಸು ಈಗ ಎಲ್ಲರ ಗಮನ ಸೆಳೆದಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ತಮ್ಮ  ಪತಿಯೊಂದಿಗೆ ದುಬೈನಲ್ಲಿ ಪಾರ್ಟಿ ಮಾಡಿದ್ದು, ಈ ವೇಳೆ ಧೋನಿ ಪತ್ನಿ ಸಾಕ್ಷಿ ಧೋನಿ ಧರಿಸಿರುವ ದುಬಾರಿ ಧಿರಿಸು ಈಗ ಎಲ್ಲರ ಗಮನ ಸೆಳೆದಿದೆ. ಈ ಪಾರ್ಟಿಯಲ್ಲಿ ಕೃತಿ ಸನನ್  ನೂಪುರ್‌ ಸನನ್ ಸ್ಟೆಬಿನ್ ಬೆನ್, ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ನಟರು ಭಾಗಿಯಾಗಿದ್ದರು. 

ಭಾರತದ ಮಾಜಿ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರು ಭಾರತ ಕಂಡ ಓರ್ವ ಶ್ರೇಷ್ಠ ಕ್ರಿಕೆಟಿಗ ಕ್ಯಾಪ್ಟನ್ ಕೂಲ್ ಎಂದು ಹೆಸರಾಗಿರುವ ಧೋನಿ ತಾವು ನಾಯಕರಾಗಿದ್ದ ಅವರಿಯಲ್ಲ ಭಾರತಕ್ಕೆ ಹಲವು ಗೆಲುವುಗಳನ್ನು ತಂದು ಕೊಟ್ಟಿದ್ದು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  42 ವರ್ಷದ ಈ ಕ್ರಿಕೆಟಿಗ ಸಾಕ್ಷಿ ಸಿಂಗ್ ಅವರನ್ನು ಮದುವೆಯಾಗಿ 13 ವರ್ಷಗಳೇ ಕಳೆದಿದ್ದು, ಮಗಳು ಜೀವಾಗೆ ಪೋಷಕರಾಗಿದ್ದಾರೆ.

ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!

ಪ್ರಸ್ತುತ ಈ ಕ್ರಿಕೆಟರ್ ದುಬೈನಲ್ಲಿ ಪತ್ನಿ ಜೊತೆ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದು, ಈ ಸೆಲೆಬ್ರಿಟಿ ಪಾರ್ಟಿಯಲ್ಲಿ ಬಾಲಿವುಡ್ ನಟಿ ಕೃತಿ ಸನನ್, ಸೋದರಿ ನೂಪುರ್ ಸನನ್,  ನೂಪುರ್ ಬಾಯ್‌ಫ್ರೆಂಡ್ ಎನ್ನಲಾದ ಸ್ಟೆಬಿನ್ ಬೆನ್, ನಟ ವರುಣ್ ಧವನ್, ಬಿಗ್ಬಾಸ್ ಒಟಿಟಿ ಖ್ಯಾತಿಯ ಅಬ್ದು ರೋಜಿಕ್ ಕೂಡ ಈ ಪಾರ್ಟಿಯಲ್ಲಿ ಜೊತೆಯಾಗಿದ್ದರು. ದುಬೈನ ಕ್ಲಬೊಂದರಲ್ಲಿ ಈ ಜೋಡಿ ಪಾರ್ಟಿ ಮಾಡಿದ್ದು,  ಅಲ್ಲಿನ ಫೋಟೋಗಳು ಈಗ ವೈರಲ್ ಆಗಿವೆ. 

ಸ್ವತಃ ಸಾಕ್ಷಿ ಸಿಂಗ್ ಧೋನಿಯವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಫೋಟೋಗಳನ್ನು ಫೋಸ್ಟ್ ಮಾಡಿದ್ದಾರೆ. ಆದರೆ ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು, ಸಾಕ್ಷಿ ಧರಿಸಿದ  1.6 ಲಕ್ಷ ಮೌಲ್ಯದ  ಬಿಳಿ ಬಣ್ಣದ ಮಿಡಿ. ಈ ಸುಂದರ ಧಿರಿಸು ಧರಿಸಿ ಪತಿಯ ಮಡಿಲಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ ಸಾಕ್ಷಿ.  ಈ ಹೂಗಳ ಡಿಸೈನ್ ಇರುವ ಸುಂದರವಾದ ಈ ಮಿಡಿಯೂ  ಉಬ್ಬಿದ ಕೈಗಳನ್ನು ಹೊಂದಿದ್ದು, ಕಾಲರ್‌ನ್ನು ಹೊಂದಿದೆ. 

ಕ್ರಿಕೆಟ್ ನಿವೃತ್ತಿ ಬಳಿಕ ಸೇನೆಯೊಂದಿಗೆ ಸಮಯ ಕಳೆಯುವೆ: ಎಂ ಎಸ್‌ ಧೋನಿ

ಇದರ ಜೊತೆಗೆ ಸುಂದರ ವಾಚ್ ಹಾಗೂ ಸಿಂಪಲ್ ಮೇಕಪ್ ಮಾಡಿರುವ  ಪತ್ನಿ ಸಾಕ್ಷಿಗೆ ಮ್ಯಾಚ್ ಆಗುವಂತೆ ತಮ್ಮ ಎಂದಿನ ಕಪ್ಪು ಬಣ್ಣದ ಪ್ಯಾಂಟ್ ಟೀ ಶರ್ಟ್‌ನಲ್ಲಿ ಭಾಗವಹಿಸಿದ್ದಾರೆ. ಇನ್ನು ಸಾಕ್ಷಿ ಧರಿಸಿದ ಈ ಬಟ್ಟೆಯ ಬೆಲೆ  1,65,249 ರೂಪಾಯಿಗಳು. ಈ ಅಲೆಸಾಂಡ್ರ ರಿಚ್ ಎಂಬ ಐಷಾರಾಮಿ ಡಿಸೈನರ್ ಬ್ರಾಂಡ್ ಇದಾಗಿದ್ದು, ಮೂಲ ಬೆಲೆ 1985 ಅಮೆರಿಕನ್ ಡಾಲರ್‌,  ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ 1,65,249 ರೂಪಾಯಿಗಳು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?