ರಿಲಯನ್ಸ್ ರಿಟೇಲ್‌ನ ನಿರ್ದೇಶಕಿಯಾಗಿ ಇಶಾ ಅಂಬಾನಿ ಪಿರಮಾಲ್ ಅವರ ನಾಯಕತ್ವದಲ್ಲಿ ಕಂಪನಿ ದಾಖಲೆಯ ಲಾಭ ಗಳಿಸಿದೆ. ಇಟಾಲಿಯನ್ ಸೌಂದರ್ಯ ಬ್ರ್ಯಾಂಡ್ ಕಿಕೊ ಮಿಲಾನೊವನ್ನು ಭಾರತಕ್ಕೆ ತರುವ ಮೂಲಕ ಹೊಸ ಅಧ್ಯಾಯವನ್ನು ಇಶಾ ಬರೆದಿದ್ದಾರೆ.
ಮುಂಬೈ (ಆ.18): ಭಾರತೀಯ ಬಿಲಿಯನೇರ್, ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಪಿರಮಾಲ್ ತನ್ನ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಅಂಬಾನಿ ಮಗಳು, ಇಶಾ ಅಂಬಾನಿ ಪಿರಮಾಲ್, ತನ್ನ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ.
ರಿಲಯನ್ಸ್ ಗ್ರೂಪ್ ನಲ್ಲಿ ಇಶಾ ಅಂಬಾನಿ ರಿಲಯನ್ಸ್ ರಿಟೇಲ್‌ನ ನಿರ್ದೇಶಕರಾಗಿದ್ದಾರೆ, ಇದು ರಿಲಯನ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಯಶಸ್ಸಿನ ಜೊತೆಗೆ ಹೆಚ್ಚಯ ಲಾಭಕ್ಕೆ ಕೂಡ ಕೊಡುಗೆ ನೀಡುತ್ತಿದೆ. ರಿಲಯನ್ಸ್ ರಿಟೇಲ್ ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಚಿಲ್ಲರೆ ಸರಪಳಿಯಾಗಿದ್ದು, 50 ಕ್ಕೂ ಹೆಚ್ಚು ಮಾರ್ಕ್ಯೂ ಅಂತರಾಷ್ಟ್ರೀಯ ಬ್ರ್ಯಾಂಡ್ಗಳ ಪೋರ್ಟ್‌ಫೋಲಿಯೊವನ್ನು ಹೊಂದಿದೆ.
undefined
ಬೆಂಗಳೂರು ಎಷ್ಟು ಸೇಫ್, ಊರು ಬಿಟ್ಟು ಅಮೆರಿಕ ಸೇರಿದ್ದಕ್ಕೆ 4 ಕಾರಣ ಕೊಟ್ಟ ಮಹಿಳೆ!
ರಿಲಯನ್ಸ್ ರಿಟೇಲ್‌ನ ಅಧಿಕೃತ ವರದಿ ಪ್ರಕಾರ, ಇಶಾ ಅಂಬಾನಿ ಪಿರಾಮಲ್ ನಾಯಕತ್ವದಲ್ಲಿ 2023-24ನೇ ಹಣಕಾಸು ವರ್ಷದಲ್ಲಿ 3,06,786 ಕೋಟಿ ರೂ. ಲಾಭ ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. BARC ಏಷ್ಯಾ ಪ್ರಶಸ್ತಿಗಳು ಸೇರಿದಂತೆ ಹಲವಾರು ಬ್ರ್ಯಾಂಡ್ ಪ್ರಶಸ್ತಿಯನ್ನು ಗೆದ್ದಿದೆ.
ಇಶಾ ರಿಲಯನ್ಸ್ ರಿಟೇಲ್‌ನ ನಿರ್ದೇಶಕಿಯಾಗಿ ಉತ್ತಮವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಲಾಭದಲ್ಲಿ ಕಂಪೆನಿ ಉನ್ನತಮಟ್ಟದಲ್ಲಿದೆ. ಇಟಾಲಿಯನ್ ಐಷಾರಾಮಿ ಕಾಸ್ಮೆಟಿಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಕಿಕೊ ಮಿಲಾನೊ ಜೊತೆಗೆ ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದ್ದು, ಹಲವು ತಿಂಗಳುಗಳ ಮಾತುಕತೆಯ ನಂತರ ಅಂತಿಮವಾಗಿ ₹100 ಕೋಟಿ ಮೌಲ್ಯದ ಒಪ್ಪಂದದ ನಂತರ ಇಟಾಲಿಯನ್ ಕಾಸ್ಮೆಟಿಕ್ ಬ್ರ್ಯಾಂಡ್ ಕಿಕೊ ಮಿಲಾನೊವನ್ನು ಭಾರತಕ್ಕೆ ತಂದಿದ್ದಾರೆ. ಇದು ರಿಲಾಯನ್ಸ್ ರಿಟೇಲ್ ನ ಹೊಸ ಅಧ್ಯಾಯ ಎನ್ನಲಾಗುತ್ತಿದೆ.
ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ, ಇಂದಿನಿಂದ ನಾಗಸಂದ್ರ-ಮಾದವಾರ ಟ್ರಯಲ್ ರನ್
ಈ ಮೂಲಕ ಭಾರತದ ಇತರ ಸೌಂದರ್ಯ ವರ್ಧಕ ಬ್ರ್ಯಾಂಡ್ ಗಳಾದ ಟಾಟಾ ಒಡೆತನದ ಲ್ಯಾಕ್ಮೆ ಮತ್ತು ನೈಕಾ ಸೇರಿದಂತೆ ಹಲವು ಬ್ಯ್ರಾಂಡ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ದೆಹಲಿ, ಮುಂಬೈ, ಪುಣೆ ಮತ್ತು ಲಕ್ನೋ ಸೇರಿದಂತೆ ಆರು ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ತೆರೆಯುವ ಯೋಜನೆಯೊಂದಿಗೆ ಈ ಬ್ರ್ಯಾಂಡ್ ಅನ್ನು ಭಾರತದ ಸೌಂದರ್ಯ ಮಾರುಕಟ್ಟೆಗೆ ತರಲಾಗಿದೆ. ಕಿಕೊ ಮಿಲಾನೊ 1997ರಲ್ಲಿ ಹುಟ್ಟಿಕೊಂಡಿತ್ತು. ಇದು ಇಟಲಿಯ ನಂಬರ್ 1 ಸೌಂದರ್ಯವರ್ಧಕ ಕಂಪೆನಿಯಾಗಿದ್ದು, 1200 ಕ್ಕೂ ಹೆಚ್ಚು ಸೌಂದರ್ಯವರ್ಧಕಗಳನ್ನು ಉತ್ಪಾದಿಸುತ್ತದೆ.
ಕಿಕೊ ಮಿಲಾನೊಗಿಂತ ಮೊದಲು, ಇಶಾ ಅಂಬಾನಿ ಅವರು ಬಾಸ್, ಬಾಲೆನ್ಸಿಯಾಗ, ಅರ್ಮಾನಿ ಮತ್ತು ವರ್ಸೇಸ್ ಎಂಬು ವಿದೇಶಿ ಉತ್ಪನ್ನಗಳನ್ನು ಭಾರತಕ್ಕೆ ತಂದಿದ್ದಾರೆ. ವರದಿಯ ಪ್ರಕಾರ, ರಿಲಯನ್ಸ್ ರಿಟೇಲ್ ಭಾರತದಾದ್ಯಂತ ವಿವಿಧ ನಗರಗಳಲ್ಲಿ 20 ಹೊಚ್ಚ ಹೊಸ ಸೌಂದರ್ಯ ಮಳಿಗೆಗಳನ್ನು ಪ್ರಾರಂಭಿಸಲು ಯೋಜಿಸಿದೆ.