65 ವರ್ಷದ ವ್ಯಕ್ತಿಯನ್ನು ಸಲೂನ್‌ಗೆ ಕರೆತಂದ ಹೇರ್ ಸ್ಟೈಲಿಸ್ಟ್ ಚಮತ್ಕಾರ ಮಾಡಿದ್ದಾರೆ. ಡಿಸೈನರ್ ಮೇಕ್ ಓವರ್ ಬಳಿಕ ವ್ಯಕ್ತಿ 35ರ ಯುವಕಕನಂತೆ ಕಂಗೊಳಿಸಿದ್ದರೆ. ಸಲೂನ್ ಸ್ಟೈಲಿಸ್ಟ್ ಈ ವಿಡಿಯೋ ಹಂಚಿಕೊಂಡಿದ್ದು, ಅಚ್ಚರಿಕೆ ಕಾರಣವಾಗಿದೆ.
ಮೇಕ್ಅಪ್ ಪ್ರತಿಯೊಬ್ಬರನ್ನು ಮತ್ತಷ್ಟು ಆಕರ್ಷಕರಂತೆ ಮಾಡುತ್ತದೆ. ಮೇಕ್ಅಪ್‌ನಿಂದ ಮುಖದ ಬಣ್ಣ, ಕೂದಲು, ಲುಕ್ ಸೇರಿದಂತೆ ಎಲ್ಲವನ್ನೂ ಬದಲಾಗುತ್ತದೆ. ಇದೀಗ 65 ವರ್ಷದ ವ್ಯಕ್ತಿಯನ್ನು ಸಲೂನ್‌ಗೆ ಕರೆತಂದು ಭಾರಿ ಮೇಕ್ ಓವರ್ ಮಾಡಲಾಗಿದೆ. ಈ ವ್ಯಕ್ತಿಯ ಕೂದಲು ಉದಿರಿತ್ತು. ಗಡ್ಡ ಬೆಳಗಾಗಿತ್ತು.ಮೊದಲ ನೋಟದಲ್ಲೇ ವಯಸ್ಸು ಸ್ಪಷ್ಟವಾಗುತ್ತಿತ್ತು. ಆದರೆ ಈ ವ್ಯಕ್ತಿಯನ್ನು ಹೇರ್ ಸ್ಟೈಲಿಸ್ಟ್ ಸಂಪೂರ್ಣವಾಗಿ ಬದಲಿಸಿದ್ದಾರೆ. ಚಮಾತ್ಕಾರದ ವಿಡಿಯೋ ಇದೀಗ ಹಲವರ ಅಚ್ಚರಿಗೆ ಕಾರಣವಾಗಿದೆ.
65 ವರ್ಷದ ಸಾಮಾನ್ಯ ವ್ಯಕ್ತಿ ಆತ. ಆದರೆ ಒಂದು ದಿನ ಹೇರ್‌ಸ್ಟೈಲಿಸ್ಟ್‌ನಿಂದ ಸಂಪೂರ್ಣ ಲುಕ್ ಬದಲಾಗಿದೆ. ವ್ಯಕ್ತಿಯ ಮನೆಗೆ ತೆರಳಿದ ಸಲೂನ್ ಡಿಸೈನರ್ ಕೆಲ ಹೊತ್ತು ಮಾತುಕತೆ ನಡೆಸಿ ಹೊಸ ಹೇರ್, ಹೊಸ ಲುಕ್ ನೀಡುವುದಾಗಿ ಮನ ಒಲಿಸಿದ್ದಾರೆ. ಹೇರ್ ಸ್ಟೈಲಿಸ್ಟ್ ಮನವಿಗೆ ವ್ಯಕ್ತಿ ಒಪ್ಪಿಕೊಂಡಿದ್ದಾರೆ. ಬಳಿಕ ವ್ಯಕ್ತಿಯನ್ನು ಸಲೂನ್‌ಗೆ ಕರೆದುಕೊಂಡು ಬರಲಾಗಿದೆ.
ನಿವೇದಿತಾ ಗೌಡ ನಿನ್ನ ವೈಯಾರ, ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ.. ಎಂದ ನೆಟ್ಟಿಗರು!
ಈ ವ್ಯಕ್ತಿಯ ಮುಂಭಾಗ ಕೂದಲು ಸಂಪೂರ್ಣ ಉದುರಿತ್ತು. ಹಿಂಭಾಗದಲ್ಲಿ ಸ್ವಲ್ಪ ಕೂದಲು ಮಾತ್ರ ಬಾಕಿ ಉಳಿದಿತ್ತು. ಇನ್ನು ಗಡ್ಡ ಬಿಳಿಯಾಗಿತ್ತು. ಆದರೆ ಸಲೂನ್‌ನಲ್ಲಿ ಮೊದಲು ಕೂದಲಿಗೆ ಕತ್ತರಿ ಹಾಕಲಾಯಿತು. ಗಡ್ಡಕ್ಕೆ ಶೇಪ್ ನೀಡಲಾಗಿದೆ. ಬಳಿಕ ಫೇಶಿಯಲ್ ಮಾಡಲಾಗಿದೆ. ಇದಾದ ಬಳಿಕ ಹೇರ್ ಫಿಕ್ಸ್ ಮಾಡಲಾಗಿದೆ. ಮುಖಕ್ಕೆ ಮೇಕ್ ಅಪ್ ಮಾಡಿ ಹೊಳೆಯುವಂತೆ ಮಾಡಲಾಗಿದೆ. ಇಷ್ಟೇ ಅಲ್ಲ ಬಿಳಿ ಗಡ್ಡವನ್ನು ಕಪ್ಪು ಬಣ್ಣಕ್ಕೆ ತಿರುಗಿಸಲಾಗಿದೆ.
ಮೇಕ್ ಓವರ್‌ನ ಸಂಪೂರ್ಣ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ನೋಡ ನೋಡುತ್ತಿದ್ದಂತೆ 65 ವರ್ಷದ ವ್ಯಕ್ತಿ 35ರ ಯುವಕನಂತೆ ಕಂಗೊಳಿಸಿದ್ದಾರೆ. ಸಂಪೂರ್ಣ ಬದಲು. ಇದು ನಿಜವೇ ಅನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಹೇರ್ ಸ್ಟೈಲಿಸ್ಟ್ ವಿಳಾಸ ಕೊಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಸ್ವಂತ ಮನೆಗೆ ಹೋದರು ಯಾರು ಗುರುತು ಹಿಡಿಯಲ್ಲ ಎಂದಿದ್ದಾರೆ.
ಇದೇ ವೇಳೆ ಮೊದಲು ತೋರಿಸಿದ ವ್ಯಕ್ತಿ ಹಾಗೂ ಮೇಕ್ ಅಪ್ ಬಳಿಕ ತೋರಿಸಿದ ವ್ಯಕ್ತಿ ಇಬ್ಬರು ಬೇರೆ ಬೆರೆ ಎಂದಿದ್ದಾರೆ. 65 ವರ್ಷದ ವ್ಯಕ್ತಿಯ ಕುತ್ತಿಗೆ ಹಾಗೂ ಕಣ್ಣಿನ ಬದಿಯಲ್ಲಿ ಚರ್ಮ ಸುಕ್ಕುಗಟ್ಟಿರುವ ನೆರಿಗೆ ಇದೆ. ಆದರೆ ಮೇಕ್ ಅಪ್ ಬಳಿಕ ಇದ್ಯಾವುದು ಕಾಣಿಸುತ್ತಿಲ್ಲ. ಇದು ನಕಲಿ ಎಂದು ಕಮೆಂಟ್ ಮಾಡಿದ್ದಾರೆ.
ಅಮಿತಾಭ್ರ 55 ವರ್ಷಗಳ ದಾಖಲೆ ಮುರಿತು ಕಲ್ಕಿ 2898 AD: 81ನೇ ವಯಸ್ಸಿನಲ್ಲಿ ಏನಿದು ಅಚ್ಚರಿ?