ಕೋವಿಡ್ ಬಳಿಕ ಮಹಿಳೆಯರಿಗೆ ಬೇಡವಾಯ್ತು ಹೈ ಹೀಲ್ಸ್ ಫ್ಯಾಶನ್, ಕಾರಣ ಬಿಚ್ಚಿಟ್ಟ ಅಧ್ಯಯನ!

By Chethan KumarFirst Published Aug 5, 2024, 6:38 PM IST
Highlights

ಮಹಿಳೆಯರ ಫ್ಯಾಶನ್ ಜಗತ್ತಿನಲ್ಲಿ ಹೈ ಹೀಲ್ಸ್ ಚಪ್ಪಲಿ ಪ್ರಮುಖ ಸಾಧನ. ಆದರೆ ಇತ್ತೀಚೆಗೆ ಮಹಿಳೆಯರು ಹೈ ಹೀಲ್ಸ್ ಫ್ಯಾಶನ್‌‌‌ನಿಂದ ಬೇಸತ್ತಿದ್ದಾರೆ. ಫ್ಲಾಟ್ ಚಪ್ಪಲಿ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದೇ ವೇಳೆ ಕಾರಣವನ್ನೂ ಬಿಚ್ಚಿಟ್ಟಿದೆ.
 

ಲಂಡನ್(ಆ.05) ಹೀಲ್ಸ್ ಚಪ್ಪಲಿ ಮಹಿಳೆಯರ ಅಚ್ಚು ಮೆಚ್ಚು. ತಮ್ಮ ಡ್ರೆಸ್, ಅದಕ್ಕೆ ತಕ್ಕಂತೆ ಡ್ರೆಸ್ ಧರಿಸುವುದು ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಹೈ ಹೀಲ್ಸ್ ಚಪ್ಪಲಿ ಫ್ಯಾಶನ್‌ನತ್ತ ಆಕರ್ಷಿತರಾಗುತ್ತಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ. ಇದರ ಬದಲಾಗಿದೆ. ಫ್ಲಾಟ್ ಚಪ್ಪಲಿ ಬಗ್ಗೆ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನುತ್ತಿದೆ. ಮಹಿಳೆಯರು ಅಚ್ಚು ಮೆಚ್ಚಿನ ಹೈ ಹೀಲ್ಸ್ ಚಪ್ಪಲಿಯಿಂದ ಏಕಾಏಕಿ ಹಿಂದೆ ಸರಿಯುತ್ತಿರುವುದೇಕೆ ಅನ್ನೋದನ್ನು ಯುನೈಟೆಡ್ ಕಿಂಗ್‌ಡಮ್‌ನ ಕರ್ತ್ ಗೈಗರ್ ಸಂಸ್ಥೆ ಅಧ್ಯಯನದ ಮೂಲಕ ಬಹಿರಂಗಪಡಿಸಿದೆ.

ಕೋವಿಡ್ ವಕ್ಕರಿಸಿದ ಬಳಿಕ ಮಹಿಳೆಯ ಫ್ಯಾಶನ್ ಟೇಸ್ಟ್ ಬದಲಾಗಿದೆ ಎಂದು ಯುಕೆಯ ಅತೀ ದೊಡ್ಡ ಫೂಟ್‌ವೇರ್ ಕಂಪನಿ ಕರ್ತ್ ಗೈಗರ್ ಅಧ್ಯಯನದ ಮೂಲಕ ಬಹಿರಂಗಪಡಿಸಿದೆ. ಪ್ರಮುಖವಾಗಿ ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಕಾರಣ ಎಲ್ಲರೂ ಮನೆಯಲ್ಲಿ ಉಳಿದುಕೊಂಡಿದ್ದರು. ಹಲವರು ಕೆಲಸ ಕಳೆದುಕೊಂಡಿದ್ದರು, ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಮಹಿಳೆಯರ ಚಪ್ಪಲಿ ಫ್ಯಾಶನ್‌ನಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂದಿದೆ.

Latest Videos

ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಬಾಲಿವುಡ್‌ನಲ್ಲೀಗ ಟ್ರೆಂಡಿಂಗ್‌

ಮಹಿಳೆಯರು ಮನೆಯಲ್ಲೇ ಬಂಧಿಯಾದ ಕಾರಣ ಫ್ಲಾಟ್ ಚಪ್ಪಲಿ, ಸ್ಲಿಪ್ಪರ್, ಸ್ಯಾಂಡಲ್ ಸೇರಿದಂತೆ ಎತ್ತರವಿಲ್ಲದ ಹೀಲ್ಸ್ ಚಪ್ಪಲಿಯಲ್ಲಿ ಕನಿಷ್ಠ 3 ವರ್ಷ ಕಳೆದಿದ್ದಾರೆ. ಹೀಗಾಗಿ ಮಹಿಳೆಯರು ಫ್ಲಾಟ್ ಚಪ್ಪಲಿಗೆ ಹೊಂದಿಕೊಂಡಿದ್ದಾರೆ. ಇದೀಗ ಬಹುತೇಕ ಮಹಿಳೆಯರು ಮರಳಿ ಹೀಲ್ಸ್ ಧರಿಸಲು ಇಷ್ಟಪಡುತ್ತಿಲ್ಲ. ಕೊರೋನಾ ಬಳಿಕ ಎಲ್ಲವೂ ಮೊದಲಿನಂತಾಗಿದ್ದರೂ ಮಹಿಳೆಯರ ಫ್ಯಾಶನ್ ಮಾತ್ರ ಬದಲಾಗಿದೆ ಎಂದು ಕರ್ತ್ ಗೈಗರ್ ಹೇಳಿದೆ.

ಫ್ಲಾಟ್ ಚಪ್ಪಲಿಯಲ್ಲಿ ನಡೆದಾಡುವುದು, ಧರಿಸುವುದು ಎಲ್ಲವು ಸುಲಭ. ಹೀಗಾಗಿ ಮನೆಯಲ್ಲೇ ಇದ್ದ ಕಾರಣ ಈ ಚಪ್ಪಲಿಗೆ ಹೊಂದಿಕೊಂಡಿದ್ದಾರೆ ಎಂದು ಕರ್ತ್ ಗೈಗರ್ ಹೇಳಿದೆ. ಕೋವಿಡ್‌ನಿಂದ ಹೈಹೀಲ್ಸ್ ಬೇಡಿಕೆ ಕಳೆದುಕೊಂಡಿದೆ ಎಂದು ಅಧ್ಯಯನ ಹೇಳುತ್ತಿದೆ. ಕರ್ತ್ ಗೈಗರ್ ಇದಕ್ಕಾಗಿ ಹಲವು ಮಹಿಳೆಯರನ್ನು ಸಂದರ್ಶಿಸಿದೆ. ಈ ವೇಳೆ ಮಹಿಳೆಯರು ತಾವು ಹೀಲ್ಸ್ ಬದಲು ಫ್ಲಾಟ್ ಚಪ್ಪಲಿ ಧರಿಸುತ್ತಿರುವ ಕಾರಣ ಬಿಚ್ಚಿಟ್ಟಿದ್ದಾರೆ. ಇಷ್ಟೇ ಅಲ್ಲ ಹೀಲ್ಸ್ ಧರಿಸಿ ಎಚ್ಚರಿಕೆಯಿಂದ ನಡೆಯುವ ಅಭ್ಯಾಸ ಮರೆತುಹೋಗಿದೆ ಎಂದಿದ್ದಾರೆ.

ಆದರೆ ಭಾರತದಲ್ಲಿ ಹೀಲ್ಸ್ ಚಪ್ಪಲಿ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿರುವ ಕುರಿತು ಯಾವುದೇ ನಿಖರ ಮಾಹಿತಿ  ಇಲ್ಲ. ಹೀಗಾಗಿ  ಭಾರತದಲ್ಲಿ ಕೋವಿಡ್ ಫ್ಯಾಶನ್ ಜಗತ್ತಿನಲ್ಲಿ ಯಾವ ರೀತಿ ಪರಿಣಾಮ ಬೀರಿದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ದೀಪಿಕಾ ಸುಳ್ಳು ಗರ್ಭಿಣಿ ಎಂದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ರಿಚಾ ಚಡ್ಡಾ!

click me!