ಸಿಲಿಕಾನ್‌ ಸಿಟಿಯಲ್ಲಿ ಇಂಡಿಯನ್ ಫ್ಯಾಷನ್‌ ಫೋರಮ್‌

By Suvarna NewsFirst Published Dec 18, 2019, 12:32 PM IST
Highlights

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಫ್ಯಾಷನ್‌ ಲೋಕ ವೇಗದ ಬೆಳವಣಿಯನ್ನು ಕಾಣುತ್ತಿದೆ. ವಿವಿಧ ಟ್ರೆಂಡ್‌, ನವೀನ ವಿನ್ಯಾಸ, ಎಕ್ಸ್‌ಕ್ಲೂಸಿವ್‌ ಉಡುಪುಗಳ ಮೂಲಕ ಬೆಂಗಳೂರಿನ ಫ್ಯಾಷನ್ ದಿರಿಸುಗಳು ಎಲ್ಲರಿಗೂ ಅಚ್ಚುಮೆಚ್ಚು. ಭಾರತೀಯ ಪ್ಯಾಷನ್‌ ಲೋಕದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಅಭಿವೃದ್ಧಿಯ ಬಗ್ಗೆ ಚರ್ಚಿಸುವಂತಹ ಇಂಡಿಯಾ ಫ್ಯಾಷನ್ ಫೋರಮ್‌ 2019 ಬೆಂಗಳೂರಿನಲ್ಲಿ ನಡೆಯುತ್ತಿದೆ. ಸಿಲಿಕಾನ್‌ ಸಿಟಿಯಲ್ಲಿ ನಡೆಯುತ್ತಿರುವ ಫ್ಯಾಷನ್ ಫೋರಮ್‌ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು(ಡಿ.18): ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಫ್ಯಾಷನ್ ಉದ್ಯಮ ಸಾಕಷ್ಟು ಬದಲಾವಣೆಗಳನ್ನು ಮೈಗೂಡಿಸಿಕೊಂಡು ಬಂದಿದೆ. ತಂತ್ರಜ್ಞಾನ, ಸಾಮಾಜಿಕ ಜಾಲತಾಣ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಕಾಮರ್ಸ್‌ನ್ನು ಉಪಯೋಗಿಸಿಕೊಂಡು ಭಾರತದ ಫ್ಯಾಷನ್ ಲೋಕ ಹೆಚ್ಚಿನ ಗ್ರಾಹಕರನ್ನು ತಲುಪಿದೆ. ಮುಂದಿನ ದಿನಗಳಲ್ಲಿ ಫ್ಯಾಷನ್‌ ಲೋಕದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುವುದಕ್ಕಾಗಿ ಇಂಡಿಯನ್ ಫ್ಯಾಷನ್ ಫೋರಮ್ ತನ್ನ ಚೊಚ್ಚಲ ಸಮ್ಮೇಳನವನ್ನು ನಡೆಸಿದೆ. 

ಡಿಸೆಂಬರ್ 17 ಹಾಗೂ 18ರಂದು ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಫ್ಯಾಷನ್‌ ಲೋಕ ಬೆಳೆದು ಬಂದ ರೀತಿ, ಹಲವು ಯಶಸ್ವೀ ಘಟನೆಗಳು, ಮುಂದೆ ಫ್ಯಾಷನ್ ಲೋಕ ಸಾಗುವ ರೀತಿಯ ಬಗ್ಗೆ ಚರ್ಚೆಯಾಗಲಿದೆ.

ಪ್ಲ್ಯಾನಿಂಗ್ ಇಲ್ಲ ಅಂದ್ರೆ ಶಾಕ್ ನೀಡುತ್ತೆ ಶಾಪಿಂಗ್

ಮಂಗಳವಾರ ನಡೆದ 20ನೇ ಇಂಡಿಯಾ ಫ್ಯಾಷನ್ ಫೋರಮ್‌ನಲ್ಲಿ ಫ್ಯಾಷನ್‌ ಲೋಕದ ಪರಿಣಿತರು, ಫ್ರೊಫೆಷನಲ್‌ಗಳೂ, ವಿಮರ್ಶಕರು ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಭಾರತದ ಫ್ಯಾಷನ್‌ ಉದ್ಯಮದಲ್ಲಿ ಹೊಸದಾಗಿ ಬರುವಂತಹ ಫ್ಯಾಷನ್‌ ಪರಿಣಿತರೂ, ಕ್ರೀಯಾತ್ಮಕ ಉತ್ಪನ್ನಗಳೂ, ಟ್ರೆಂಡ್‌ಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ.

2019ರ ಫ್ಯಾಷನ್‌ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ಚರ್ಚೆಗಳೂ ನಡೆಯಲಿವೆ. ಲೇಟೆಸ್ಟ್‌ ಟ್ರೆಂಡ್, ಉಡುಪುಗಳ ಕುರಿತಾದ ಹೊಸ ಅನ್ವೇಷಣೆಗಳು, ಸುಸ್ಥಿರ ಉತ್ಪಾದನೆ, ಈ ಕುರಿತ ಆ್ಯಪ್‌ಗಳು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಮಹಿಳೆಯರ ಉಡುಪುಗಳು, ಎಥ್ನಿಕ್ ವೇರ್‌ಗಳ ಬಗ್ಗೆಯೂ ಚರ್ಚೆಯಾಗಲಿದೆ.

ಮಾರುಕಟ್ಟೆಗೆ ಬರುವ ಜಾಗತಿಕ ಬ್ರಾಂಡ್‌ಗಳನ್ನು ಹೊರತು ಪಡಿಸಿ, ಭಾರತೀಯ ಫ್ಯಾಷನ್‌ ಉದ್ಯಮಗಳ ಕುರಿತಾಗಿಯೂ ಚರ್ಚೆ ನಡೆದಿದೆ. ಈ ಸಮ್ಮೇಳನ ಫ್ಯಾಷನ್‌ ಉದ್ಯಮ ಲೋಕದ ಎಲ್ಲರಿಗೂ ಒಟ್ಟಿಗೆ ಸೇರಲಿರುವ ಅವಕಾಶ. ಈಗಿರುವ ಫ್ಯಾಷನ್ ವಿದ್ಯಾಮಾನಗಳ ಕುರಿತು ತಿಳಿದು ಮುಂದಿನ ದಿನದ ಫ್ಯಾಷನ್‌ಗಳಿಗಾಗಿ ಕಲಿಯುವ ವೇದಿಕೆ ಎಂದು ಚರ್ಚೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಟ್ಟಿದ್ದಾರೆ.

ಯೆಲ್ಲೋ ಯೆಲ್ಲೋ ಸ್ಮಾರ್ಟ್‌ ಫೆಲೋ;ಹಳದಿಗೆ ಹಲೋ ಅನ್ನೋ ಹುಡುಗೀರು!

ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬದಲಾಗುತ್ತಿರುವ ಗ್ರಾಹಕ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಫ್ಯಾಷನ್ ಉದ್ಯಮ ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗಿದೆ.

ನಮ್ಮ ಶ್ರೀಮಂತ ಸಂಸ್ಕೃತಿ, ಉಡುಪಗಳ ವ್ಯಾಪಾರದಲ್ಲಿ ನಮ್ಮ ದೇಶಕ್ಕಿರುವ ಇತಿಹಾಸ ಭಾರತದ ರಿಟೆಲ್ ಉದ್ಯಮದಲ್ಲಿ ಪ್ರಮುಖ ಶಕ್ತಿ  ಎಂದು ಫ್ಯಾಷನ್ ಲೋಕದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಹಂತದ ಚರ್ಚೆಯಲ್ಲಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಉತ್ಪಾದನಾ ರೀತಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್‌ಗಳಾದ ಲಿವೈಸ್ ಸ್ಟ್ರಾಸ್ & ಕಂಪನಿ, ವೂಲ್‌ಮಾರ್ಕ್ ಕಂಪನಿ, ಲೆನ್ಝಿಂಗ್ & ಕ್ರೆಯಾ ವಲ್ರ್ಡ್ ವೈಡ್ ಕಂಪನಿಗಳು ಉಡುಪುಗಳ ಉತ್ಪಾದನೆಗೆ ಅನುಸರಿಸುತ್ತಿರುವ ತಂತ್ರಜ್ಞಾನವನ್ನೂ ಬಳಸಿಕೊಂಡು ಕಡಿಮೆ ರಾಸಾಯನಿಕ ತ್ಯಾಜ್ಯ ಉತ್ಪಾದನೆಯಾಗುವಂತೆ ಹಾಗೂ ಮಣ್ಣಿನಲ್ಲಿ ವಿಲೀನವಾಗಲು ಸಾಧ್ಯವಾಗುವ ರೀತಿಯಲ್ಲಿ ಉಡುಪುಗಳನ್ನು ಉತ್ಪಾದಿಸುವ ಬಗ್ಗೆ ಚರ್ಚಿಸಲಾಗಿದೆ.

ಮದುಮಗಳ ಅಂದ ಹೆಚ್ಚಿಸುವ ಚಂದದ ಉಡುಗೆಗಳಿವು!

ಫ್ಯಾಷನ್‌ ಉದ್ಯಮದಲ್ಲಿ ಹೆಚ್ಚಿನ ಲಾಭ, ರಿಟೆಲ್ ವ್ಯಾಪಾರವನ್ನು ಮರುರೂಪಿಸುವುದು ಸೇರಿದಂತೆ ಹಲವು ವಿಚಾರ ಕುರಿತು ಚರ್ಚೆ ನಡೆಯಿತು. ಫ್ಯಾಷನ್‌ ರಿಟೆಲ್‌ ಉದ್ಯಮದಲ್ಲಿ ತಂತ್ರಜ್ಞಾನದ ಬಳಕೆ ಬಗ್ಗೆ ಪ್ಯಾಷನ್‌ ಟೆಕ್‌ ವೇ ಸಿರೀಸ್ ಬಿಡುಗಡೆಗೊಳಿಸಲಾಯಿತು.

click me!