
79ನೇ ಸ್ವಾತಂತ್ರ್ಯ ದಿನಾಚರಣೆಯಂದು (Independence Day 2025), ಪ್ರಧಾನಿ ನರೇಂದ್ರ ಮೋದಿ (PM Modi) ಕೇಸರಿ ಪೇಟ ಧರಿಸಿದ್ದಾರೆ. ಪ್ರತಿ ಬಾರಿ ಸ್ವಾತಂತ್ರ್ಯ ದಿನದಂದು ಮೋದಿ ತಮ್ಮ ಉಡುಪಿನಿಂದ ಸುದ್ದಿಯಲ್ಲಿರುತ್ತಾರೆ. ವಿಶೇಷವಾಗಿ ಅವರ ಪೇಟದ ಬಣ್ಣ ಮತ್ತು ಅದನ್ನು ಕಟ್ಟುವ ಶೈಲಿ ಅತ್ಯಂತ ಆಕರ್ಷಕವಾಗಿರುತ್ತದೆ. 2014 ರಿಂದ 2025 ರವರೆಗೆ ಮೋದಿ ಅವರ ಲುಕ್ ಬದಲಾಗುತ್ತಿದೆ. ಪ್ರತಿ ವರ್ಷ ಅವರು ಇತರ ಪೇಟಗಳಿಗಿಂತ ಹೆಚ್ಚು ಸುಂದರವಾದ ಪೇಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ಮೋದಿಯವರ ಲುಕ್ ತುಂಬಾ ವಿಶಿಷ್ಟವಾಗಿದೆ. ವಿಶೇಷವಾಗಿ ಪೇಟ ಕಟ್ಟುವ ಶೈಲಿ ಅದ್ಭುತವಾಗಿದ್ದು, ಪೇಟ ಕೇಸರಿ ಬಣ್ಣದ್ದಾಗಿದೆ. ಇದರ ಜೊತೆಗೆ ಅವರು ಕಿತ್ತಳೆ ಬಣ್ಣದ ನೆಹರೂ ಜಾಕೆಟ್ ಮತ್ತು ಬಿಳಿ ಕುರ್ತಾ ಹಾಗೂ ಅದರೊಂದಿಗೆ ಶಲ್ಯ ಕೂಡ ಧರಿಸಿದ್ದಾರೆ.
ಅಂದಹಾಗೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪ್ರತಿ ವರ್ಷವೂ ಅವರ ಪೇಟದ ಬಣ್ಣ ಮತ್ತು ಶೈಲಿ ಹೇಗೆ ಬದಲಾಗುತ್ತಲಿದೆ ಎಂಬುದನ್ನು ನೋಡೋಣ.
2014: ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ಆ ವರ್ಷದ ಸ್ವಾತಂತ್ರ್ಯ ದಿನದಂದು ಅವರು ಬಿಳಿ ಬಣ್ಣದ ಹಾಫ್ ಸ್ಲೀವ್ ಖಾದಿ ಕುರ್ತಾ ಮತ್ತು ಪೈಜಾಮ ಧರಿಸಿದ್ದರು. ಇದರ ಜೊತೆಗೆ ಅವರು ಕೇಸರಿ ಬಣ್ಣದ ಜೋಧಪುರಿ ಬಂದೇಜ್ ಪೇಟ ಧರಿಸಿದ್ದರು.
2015: ಈ ಸಮಯದಲ್ಲಿ ಮೋದಿ ಕ್ರೀಮ್ ಬಣ್ಣದ ಕುರ್ತಾ, ಬಿಳಿ ಪೈಜಾಮಾ ಮತ್ತು ಖಾದಿ ಜಾಕೆಟ್ ಧರಿಸಿದ್ದರು. ಜೊತೆಗೆ ಕೆಂಪು ಮತ್ತು ಹಸಿರು ಪಟ್ಟೆ ಹೊಂದಿರುವ ಕಿತ್ತಳೆ ಬಣ್ಣದ ಬಂಧಾನಿ ಪೇಟವನ್ನು ಧರಿಸಿದ್ದರು.
2016: ಕೆಂಪು, ಗುಲಾಬಿ ಮತ್ತು ಹಳದಿ ಬಣ್ಣದ ರಾಜಸ್ಥಾನಿ ಪೇಟದೊಂದಿಗೆ ಸಿಂಪಲ್ ಕುರ್ತಾ ಮತ್ತು ಪೈಜಾಮ ಧರಿಸಿದ್ದರು.
2017: ಪ್ರಧಾನಿ ಮೋದಿ ತಮ್ಮ ಟ್ರೇಡ್‌ಮಾರ್ಕ್ ಹಾಫ್ ಸ್ಲೀವ್ ಕುರ್ತಾ ಧರಿಸಿದ್ದರು. ಜೊತೆಗೆ ಪ್ರಕಾಶಮಾನವಾದ ಕೆಂಪು ಮತ್ತು ಹಳದಿ ಬಣ್ಣದ ಪೇಟವನ್ನು ಧರಿಸಿದ್ದರು ಮತ್ತು ಪೇಟ ಹಿಂಭಾಗದಲ್ಲಿ ಉದ್ದಗೆ ಬಟ್ಟೆ ಬಿಟ್ಟಿದ್ದರು.
2018: ಫುಲ್ ಸ್ಲೀವ್ಸ್ ಕುರ್ತಾ-ಪೈಜಾಮ ಮತ್ತು ಉಪರ್ಣ ಧರಿಸಿದ್ದರು. ಈ ವರ್ಷ ಅವರು ಕೇಸರಿ ಮತ್ತು ಕೆಂಪು ಪೇಟವನ್ನು ಧರಿಸಿದ್ದರು.
2019: ಹಾಫ್ ಸ್ಲೀವ್ ಕುರ್ತಾ, ಪೈಜಾಮಾ ಮತ್ತು ಮೇಲ್ಭಾಗದಲ್ಲಿ ಕೇಸರಿ ಬಣ್ಣದ ಅಂಚು ಹೊಂದಿರುವ ಹಳದಿ, ಕೆಂಪು ಮತ್ತು ಹಸಿರು ಬಣ್ಣದ ಲಹರಿಯಾ ಮಾದರಿಯ ಪೇಟವನ್ನು ಧರಿಸಿದ್ದರು.
2020: ಕೇಸರಿ ಮತ್ತು ಕ್ರೀಮ್ ಬಣ್ಣದ ಪೇಟವನ್ನು ಧರಿಸಿದ್ದರು, ಅದು ಹಾಫ್ ಸ್ಲೀವ್ ಕುರ್ತಾಗೆ ಮ್ಯಾಚ್ ಆಗಿತ್ತು. ಮೋದಿ ಕೇಸರಿ ಬಾರ್ಡರ್ ಹೊಂದಿರುವ ಬಿಳಿ ದುಪಟ್ಟಾವನ್ನು ಸಹ ಧರಿಸಿದ್ದರು.
2021: 75 ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಸಾಂಪ್ರದಾಯಿಕ ಕುರ್ತಾ, ನೀಲಿ ಜಾಕೆಟ್ ಧರಿಸಿ ಕೇಸರಿ ಪೇಟದೊಂದಿಗೆ ಸ್ಟೋಲ್ ಮಾಡಿದರು.
2022: 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 'ಹರ್ ಘರ್ ತಿರಂಗಾ' ಅಭಿಯಾನದ ಉತ್ಸಾಹವನ್ನು ಪ್ರತಿಬಿಂಬಿಸುವ ತ್ರಿವರ್ಣ ಧ್ವಜದ ಆಕಾರದ ಬಿಳಿ ಪೇಟವನ್ನು ಧರಿಸಿದ್ದರು. ಪೇಟವನ್ನು ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್‌ನೊಂದಿಗೆ ಮ್ಯಾಚ್ ಮಾಡಲಾಗಿತ್ತು.
2023: 77 ನೇ ವಾರ್ಷಿಕೋತ್ಸವದಂದು ಹಳದಿ ಮತ್ತು ಕೆಂಪು ಬಣ್ಣದ ಪೇಟವನ್ನು ಧರಿಸಿದ್ದರು, ಅದರಲ್ಲಿ ಹಲವು ಬಣ್ಣಗಳ ಪಟ್ಟೆಗಳಿದ್ದವು. ಇದರೊಂದಿಗೆ ಅವರು ಬಿಳಿ ಕುರ್ತಾ ಮತ್ತು ಕಪ್ಪು ಜಾಕೆಟ್ ಧರಿಸಿದ್ದರು.
2024: 78 ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ಅವರು ಬಿಳಿ ಕುರ್ತಾ-ಪೈಜಾಮ ಮತ್ತು ಕೇಸರಿ, ಹಸಿರು ಮತ್ತು ಹಳದಿ ಪೇಟದೊಂದಿಗೆ ನೀಲಿ ಸದ್ರಿ ಧರಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.