ಹಬ್ಬಕ್ಕೆ ಧರಿಸಿ ಬೆಂಟೆಕ್ಸ್ ಬ್ಯಾಂಗಲ್ಸ್, ಚಿನ್ನಕ್ಕಿಂತಲೂ ಇದೇ ಚೆನ್ನ ಅಂತೀರ

Published : Aug 13, 2025, 06:18 PM IST
bentex bangle

ಸಾರಾಂಶ

ಇದು ಚಿನ್ನವಲ್ಲವಾದರೂ ಥೇಟ್ ಚಿನ್ನದಂತೆ ಕಾಣುತ್ತದೆ. ಹಾಗೆಯೇ ವೆರೈಟಿ ಡಿಸೈನ್‌ಗಳಲ್ಲಿ ಲಭ್ಯ.

ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಎಲ್ಲರೂ ಕೈಯಲ್ಲಿ 2-4 ತೊಲವಿರುವ ಬಳೆ ಅಥವಾ ಕಡ ಧರಿಸಲು ಸಾಧ್ಯವಿಲ್ಲ ಅಲ್ಲವೇ. ಸಾಮಾನ್ಯವಾಗಿ ಮಹಿಳೆಯರ ಬಳಿ ಚಿನ್ನ ಕೊಳ್ಳಲು ಲಕ್ಷ ರೂಪಾಯಿ ಬಜೆಟ್ ಇದ್ದರೂ ಅಥವಾ ಇಲ್ಲದಿದ್ದರೂ ತಮ್ಮ ಕೈಯಲ್ಲಿ ಸುಂದರವಾದ ಬಳೆ ಇರಬೇಕೆಂದು ಕನಸು ಕಾಣುತ್ತಾರೆ.

ಅಂದಹಾಗೆ ನೀವೂ ಚಿನ್ನದ ಬಳೆಗಳನ್ನು ಖರೀದಿಸಲು ಕನಸು ಕಾಣುತ್ತಿದ್ದು, ಒಂದು ವೇಳೆ ನಿಮ್ಮ ಬಳಿ ಅಷ್ಟು ಬಜೆಟ್ ಇರದಿದ್ದರೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಮುಂಬರುವ ಯಾವುದೇ ಹಬ್ಬವಿರಬಹುದು ನಿಮ್ಮ ಕೈಗಳನ್ನು ಸುಂದರವಾದ ಬಳೆಗಳಿಂದ ಅಲಂಕರಿಸಬಹುದು. ಹೇಗೆ ಅಂತೀರಾ. ಬೆಂಟೆಕ್ಸ್ ಬ್ಯಾಂಗಲ್ಸ್ ಮೂಲಕ. ಹೌದು, ನಾವಿಲ್ಲಿ ಕೆಲವು ಅತ್ಯುತ್ತಮ ಬ್ಯಾಂಗಲ್ಸ್ ಡಿಸೈನ್ಸ್ ತೋರಿಸುತ್ತೇವೆ. ಇದು ಚಿನ್ನವಲ್ಲವಾದರೂ ಥೇಟ್ ಚಿನ್ನದಂತೆ ಕಾಣುತ್ತದೆ. ಹಾಗೆಯೇ ವೆರೈಟಿ ಡಿಸೈನ್‌ಗಳಲ್ಲಿ ಲಭ್ಯ.

ಕಡ ಸ್ಟೈಲ್ 


ಈ ಶೈಲಿಯ ಬಳೆಗಳಿಗೆ ಯಾವಾಗಲೂ ಬೇಡಿಕೆ ಇದೆ. ಈ ಡಿಸೈನ್ ಗೋಲ್ಡ್‌ನಲ್ಲಿಯೂ ದೊರೆಯುತ್ತದೆ. ಆನೆಯ ಬಾಯಿಯಿಂದ ಹೂವುಗಳವರೆಗೆ ಮತ್ತು ಇತರ ಹಲವು ಮಾದರಿಗಳಲ್ಲಿ ಈ ವಿನ್ಯಾಸವನ್ನು ನೀವು ಕಾಣಬಹುದು. ವಿಶೇಷವಾಗಿ ಧರಿಸಿದ ನಂತರ ಕೈಗಳಲ್ಲಿ ಇದು ಕ್ಲಾಸಿಯಾಗಿ ಕಾಣುತ್ತದೆ.

ಓಪನ್ ಬ್ಯಾಂಗಲ್


ಈಗಂತೂ ಓಪನ್ ಬ್ಯಾಂಗಲ್ ಸಿಕ್ಕಾಪಟ್ಟೆ ಟ್ರೆಂಡಿಯಾಗಿದ್ದು, ಈ ಬಳೆ ಕೂಡ ಅದೇ ವೈಶಿಷ್ಟ್ಯವನ್ನು ಹೊಂದಿದೆ. ಆದರೆ ಇದನ್ನು ದಪ್ಪ ಮತ್ತು ತೆಳ್ಳಗಿನ ಕೈಗಳನ್ನು ಹೊಂದಿರುವ ಇಬ್ಬರೂ ಸುಲಭವಾಗಿ ಧರಿಸಬಹುದು. ಹೌದು, ಇದು ಧರಿಸಲು ಸುಲಭ ಮತ್ತು ಓಲ್ಡ್‌ ಲುಕ್ ಕೊಡುತ್ತೆ. ಬನಾರಸಿ, ರೇಷ್ಮೆ ಅಥವಾ ಹೆವಿ ಸೀರೆಯೊಂದಿಗೆ ಅದ್ಭುತವಾಗಿ ಕಾಣುತ್ತದೆ.

ಕುಂದನ್ ಸ್ಟೈಲ್ 


ಕುಂದನ್ ಡಿಸೈನ್‌ನ ಬೆಂಟೆಕ್ಸ್ ಬಳೆಯ ಈ ವಿನ್ಯಾಸವು ತುಂಬಾ ಸುಂದರವಾಗಿದ್ದು, ಹೆವಿ ಲುಕ್ ಕೊಡುತ್ತದೆ. ಇದರಲ್ಲಿ ಕುಂದನ್ ಕೆಲಸವನ್ನು ಬಹಳ ಅದ್ಭುತವಾದ ರೀತಿಯಲ್ಲಿ ಮಾಡಲಾಗಿದೆ. ಅದೇ ಇದಕ್ಕೆ ರಾಯಲ್ ಲುಕ್ ನೀಡಿರುವುದು. ನೀವು ಬಳೆಗಳಿಲ್ಲದೆಯೂ ಸಹ ಇದನ್ನು ಧರಿಸಬಹುದು.

ಬಳೆ ಶೇಖರಿಸಿಡುವ ವಿಧಾನ
* ನಿಮ್ಮ ಬೆಂಟೆಕ್ಸ್ ಬಳೆಗಳು ದೀರ್ಘಕಾಲದವರೆಗೆ ಹೊಳೆಯುವಂತೆ ಮತ್ತು ಹೊಸದಾಗಿರಲು ಅವುಗಳನ್ನು ಧರಿಸಿದ ನಂತರ ನೀರಿಗೆ ಒಡ್ಡಬೇಡಿ.
* ಬೆಂಟೆಕ್ಸ್ ಬಳೆಗಳನ್ನು ಎಂದಿಗೂ ತೆರೆದ ಸ್ಥಳದಲ್ಲಿ ಇಡಬೇಡಿ. ಧರಿಸಿದ ನಂತರ ಅವುಗಳನ್ನು ಸಂಗ್ರಹಿಸುವಾಗ ಹತ್ತಿಯಲ್ಲಿ ಸುತ್ತಿ ಪೆಟ್ಟಿಗೆಯಲ್ಲಿ ಸಂಗ್ರಹಿಸಿ. ಇದರಿಂದ ಅವುಗಳನ್ನು ದೀರ್ಘಕಾಲದವರೆಗೆ ಧರಿಸಬಹುದು.
* ಪರ್ಮನೆಂಟ್ ಪಾಲಿಶ್ ಗ್ಯಾರಂಟಿ ಇರುವ ಬೆಂಟೆಕ್ಸ್ ಬಳೆಗಳನ್ನು ಮಾತ್ರ ಖರೀದಿಸಿ. ಇದರಿಂದ ಪಾಲಿಶ್ ಒಮ್ಮೆ ಕಳೆದುಹೋದರೆ, ಅವುಗಳನ್ನು ಮತ್ತೆ ಪಾಲಿಶ್ ಮಾಡಿ ಧರಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?