ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ನಮಗೆ ಹೊಂದುವಂಥ ಬಟ್ಟೆಯನ್ನು ಆರಿಸಿಕೊಳ್ಳುವುದು ಹೇಗೆ? ನಮ್ಮ ಬಟ್ಟೆ ನಮ್ಮ ಅಂದವನ್ನು ಹೆಚ್ಚಿಸುವುದು. ಅಂಥ ಬಟ್ಟೆಯನ್ನು ಹುಡುಕುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ..
ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ, ನಿಮಗೆ ಆರಾಮ (Comfortable) ಒದಗಿಸುವ ಬಟ್ಟೆಯನ್ನು ಧರಿಸಿದಾಗ ನೀವು ಹೆಚ್ಚು ಆಕರ್ಷಕರಾಗಿ ಕಾಣುತ್ತೀರಿ. ಇದರಿಂದಾಗಿ ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಫ್ಯಾಶನ್ ದಿನದಿನಕ್ಕೂ ಬದಲಾಗುತ್ತಿರುತ್ತದೆ. ಆದರೆ, ಹೊಸ ರೀತಿಯ ಎಲ್ಲ ಬಟ್ಟೆಗಳು ನಿಮಗೆ ಹೊಂದಿಕೊಳ್ಳಬೇಕು ಎಂದೇನಿಲ್ಲ. ನಿಮ್ಮ ದೇಹದ ಆಕಾರಕ್ಕೆ ಹೊಂದಿಕೊಳ್ಳುವ ಬಟ್ಟೆಯನ್ನು ಧರಿಸಿದಾಗ ಸುಂದರವಾಗಿ ಕಾಣುವುದರಲ್ಲಿ ಅನುಮಾನವಿಲ್ಲ. ಆದರೆ, ಇದನ್ನು ಆರಿಸಿಕೊಳ್ಳುವುದು ಹೇಗೆ?
ಅದಕ್ಕುತ್ತರ ಇಲ್ಲಿದೆ.. ನೀವು ಹೆಚ್ಚು ಬೋಲ್ಡಾಗಿ (Bold) ಹಾಗೂ ಕ್ಲಾಸಿಯಾಗಿ ಕಾಣಲು ಈ ಟಿಪ್ಸ್ ಗಳನ್ನು ಅನುಸರಿಸಿ, ನಿಮಗೆ ಹೊಂದಿಕೊಳ್ಳುವ ಬಟ್ಟೆಗಳನ್ನು ಆರಿಸಿಕೊಳ್ಳಿ. ನಿಮ್ಮ ದೇಹ ಯಾವ ಶೇಪಿನಲ್ಲಿದೆ ಅದಕ್ಕೆ ಸರಿಯಾಗಿ ಬಟ್ಟೆಗಳನ್ನು ಧರಿಸಬೇಕು.
ದೇಹದ ಆಕಾರ (Shape)
ನಿಮ್ಮ ದೇಹದ ಆಕಾರ ಯಾವುದು ಎಂದು ತಿಳಿಯಲು ಒಂದು ದೊಡ್ಡ ಕನ್ನಡಿ (Mirror) ಮುಂದೆ ನಿಂತುಕೊಳ್ಳಿ. ಕರ್ವ್ ಇರುವ ಸೊಂಟದ ಆಕಾರ ಹೊಂದಿದ್ದರೆ ಅದಕ್ಕೆ ಆಪಲ್ ಶೇಪ್ ಎನ್ನುತ್ತಾರೆ. ನೇರವಾದ ಸೊಂಟದ ಆಕಾರ ಇದ್ದರೆ ರೆಕ್ಟಾಂಗಲ್ ಶೇಪ್, ನಿಮ್ಮ ಸೊಂಟ ಭುಜಗಳಿಗಿಂತ ಅಗಲವಾಗಿದ್ದರೆ ಪಿಯರ್ ಶೇಪ್ ಅಥವಾ ಪ್ರತಿ ಭಾಗವು ಸಮತೋಲನದಲ್ಲಿ ಇದ್ದರೆ ಅವರ್ ಗ್ಲಾಸ್ ಆಕಾರ ಎಂದು ಕರೆಯುತ್ತಾರೆ. ನೀವು ಯಾವ ಆಕಾರ ಹೊಂದಿದ್ದೀರಿ ಎಂಬುದನ್ನು ಅರಿತುಕೊಳ್ಳಿ.
ಲೇಸ್ ಚಿಪ್ಸ್ ಕವರ್‌ನಿಂದ ಸಾರಿ ತಯಾರಿಸಿದ ನಾರಿ
ಮೆಟೀರಿಯಲ್ (Material)
ನೀವು ನಿಮ್ಮ ದೇಹಕ್ಕೆ ಯಾವ ರೀತಿಯ ಫ್ಯಾಬ್ರಿಕ್ (Fabric) ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಬಟ್ಟೆ ನಿಮ್ಮ ದೇಹದ ಭಾಗಗಳನ್ನು ಹೆಚ್ಚು ಆಕರ್ಷಕವಾಗಿ ತೋರಿಸುತ್ತದೆ. ಉಣ್ಣೆ ಅಥವಾ ದಪ್ಪದಾಗಿ ಹೆಣೆದ ಬಟ್ಟೆಗಳ ಬದಲಾಗಿ ಹತ್ತಿ ಬಟ್ಟೆಗಳನ್ನು ಆರಿಸಿಕೊಳ್ಳಿ. ಪಿಯರ್ ಶೇಪಿನ ದೇಹವನ್ನು ಇಂತಹ ಬಟ್ಟೆಗಳು ನಿಮ್ಮ ದೇಹದ ಮೇಲಿನ ಭಾಗವನ್ನು ಬೃಹತ್ ಕಾಣಿಸುವಂತೆ ಮಾಡುತ್ತದೆ. ಸ್ಪಂಡೆಕ್ಸ್ (Spandex)nಮತ್ತು ಲೆದರ್ ಬಟ್ಟೆಗಳು ಅವರ್ ಗ್ಲಾಸ್ ಆಕಾರ ಹೊಂದಿದವರಿಗೆ ಒಳ್ಳೆಯದು. ಸಾಟಿನ್ ಮತ್ತು ಸಿಲ್ಕ್, ಆಯತಾಕಾದ ದೇಹಕ್ಕೆ ಹೊಂದಿಕೊಂಡರೆ ಆಪಲ್ ಶೇಪ್(Apple shape) ನವರಿಗೆ ಶೈನಿ ಹಾಗೂ ಅಂಟಿಕೊಳ್ಳುವಂಥ ಬಟ್ಟೆ ಸುಂದರವಾಗಿ ಕಾಣಿಸುತ್ತದೆ.
ಪ್ಯಾಟರ್ನ್ (Pattern)
ಮೇಲಿನ ಭಾಗದಲ್ಲಿ ಬೋಲ್ಡ್ ಪ್ರಿಂಟ್ಸ್ ಇರುವಂತಹ ಬಟ್ಟೆಗಳು ಪಿಯರ್ (Pear) ಶೇಪಿನವರಿಗೆ, ಬಟ್ಟನ್ ಇಲ್ಲದೆ ಇರುವಂತಹ ಬಟ್ಟೆಗಳು ಹವರ್ ಗ್ಲಾಸ್ ಆಕಾರದವರಿಗೆ, ಗಾಢ ಬಣ್ಣಗಳ ಪ್ರಿಂಟ್ಸ್ ಇರುವಂತಹ ಬಟ್ಟೆ ಆಯತಾಕಾರದ ಶೇಪ್ ನವರಿಗೆ ಹೇಳಿಮಾಡಿಸಿದಂತೆ ಕಾಣಿಸುತ್ತದೆ.
Lifestyle Tips : ನಿಮ್ಮ ಅಂದ ಹೆಚ್ಚಿಸುವ ಡ್ರೆಸ್ಸಿಂಗ್ ರೂಮಿಗೂ ಬೇಕು ಮೇಕಪ್!
ಬಣ್ಣಗಳು (Colors)
ಬಣ್ಣಗಳು ಬಟ್ಟೆಯ ಮೆರುಗನ್ನು ಹೆಚ್ಚಿಸುತ್ತದೆ. ಆಪಲ್ ಶೇಪಿನ ಜನರಿಗೆ ಕೆಳಗಿನ ಭಾಗದಲ್ಲಿ ಗಾಢವಾದ ಬಣ್ಣ ಇರುವ ಬಟ್ಟೆ ಧರಿಸಬೇಕು. ಇದಕ್ಕೆ ಸರಿ ಹೊಂದುವ ರೀತಿಯ ಮೇಲಿನ ಬಟ್ಟೆಯನ್ನು ಧರಿಸಿ. ನೀವು ಪಿಯರ್ ಆಕಾರದ ದೇಹವನ್ನು ಹೊಂದಿದ್ದರೆ, ಹಿಂಭಾಗ, ಸೊಂಟ ಮತ್ತು ತೊಡೆಯ ಪ್ರದೇಶಗಳಿಗೆ ಗಾಢವಾದ ವರ್ಣಗಳನ್ನು ಆಯ್ಕೆಮಾಡಿ. ಹವರ್ ಗ್ಲಾಸ್ ಆಕಾರದವರು ತಿಳಿ ಬಣ್ಣಗಳನ್ನು ಆರಿಸಿಕೊಳ್ಳಿ.
ಪರಿಕರಗಳು (Accessories)
ನೀವು ಧರಿಸುವ ಬಟ್ಟೆಯ ಮೇಲೆ ಯಾವ ರೀತಿಯ ಆಕ್ಸೆಸರೀಸ್ ಧರಿಸುತ್ತೀರೋ ಅದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಪಿಯರ್ ಶೇಪಿನ ಮಹಿಳೆಯರು ಹೆಚ್ಚು ಹೀಲ್ಸ್ (Heels) ಇರುವ ಚಪ್ಪಲಿಗಳನ್ನು ಧರಿಸಿದರೆ ನಿಮ್ಮ ಹಿಮ್ಮಡಿಯಿಂದ ಕಾಲುಗಳು ಆಕರ್ಷಕವಾಗಿ ಕಾಣುತ್ತವೆ. ಅವರ್ ಗ್ಲಾಸ್ ಆಕಾರದವರು ನೆಕ್ ಇನ್ ಟಾಪ್ ಗಳಲ್ಲಿ ಸುಂದರವಾಗಿ ಕಾಣುತ್ತಿರ. ಲೋ ಸ್ಲಂಗ್ ಬೆಲ್ಟ್ ಅನ್ನು ಆಯತಾಕರಾದ ದೇಹಪ್ರಕೃತಿ ಇರುವವರಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.
ಹೀಗೆ ನೀವು ನಿಮ್ಮ ದೇಹದ ಆಕಾರಕ್ಕೆ ಅನುಗುಣವಾಗಿ ಬಟ್ಟೆಯನ್ನು ಧರಿಸಿ ಹಾಗೂ ಹೆಚ್ಚು ಆಕರ್ಷಕರಾಗಿ ಕಾಣಿಸಿಕೊಳ್ಳಿ..