ಹಲವು ಸಂಪ್ರದಾಯಗಳ ನಡುವೆ ಮದುವೆಯ ಕೆಲವು ಮೋಜಿನ ಕ್ಷಣಗಳು ವಧು ವರರ ಮನದಲ್ಲಿ ಚಿರಕಾಲ ಉಳಿಯುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ಜೋಡಿಯ ಮದುವೆ ದಿನದ ಸುಂದರ ಕ್ಷಣದ ವಿಡಿಯೋ ವೈರಲ್ ಆಗಿದೆ.
ಮದುವೆ ಸಮಯದ ಸಾಕಷ್ಟು ಸುಂದರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮ್ಮ ಜೀವನದ ಬಹು ವಿಶೇಷವಾದ ಕ್ಷಣವನ್ನು ಕೊನೆಯವರೆಗೂ ಸುಂದರ ನೆನಪಾಗಿ ಕಾಯ್ದುಕೊಳ್ಳಲು ಅನೇಕರು ತಮ್ಮ ಮದುವೆಯ ದಿನಕ್ಕೆ ವಿಶೇಷವಾಗಿ ಪ್ಲಾನ್ ಮಾಡ್ತಾರೆ. ಹಲವು ಸಂಪ್ರದಾಯಗಳ ನಡುವೆ ಮದುವೆಯ ಕೆಲವು ಮೋಜಿನ ಕ್ಷಣಗಳು ವಧು ವರರ ಮನದಲ್ಲಿ ಚಿರಕಾಲ ಉಳಿಯುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ಜೋಡಿಯ ಮದುವೆ ದಿನದ ಸುಂದರ ಕ್ಷಣದ ವಿಡಿಯೋ ವೈರಲ್ ಆಗಿದೆ.
ಗಂಡು ಹಾಗೂ ಹೆಣ್ಣು ಪರಸ್ಪರ ಹಾರ ಬದಲಾಯಿಸುವುದು ಭಾರತದ ಪ್ರತಿಯೊಂದು ಮದುವೆಯಲ್ಲೂ ಇರುವ ಪ್ರಮುಖ ಆಚರಣೆ. ಒಂದೊಂದು ಕಡೆ ಒಂದೊಂದು ರೀತಿ ಮದುವೆ ಆಗುತ್ತದೆ. ಆದರೆ ಪರಸ್ಪರ ಹಾರ ಬದಲಾಯಿಸುವುದು ಬಹುತೇಕ ಎಲ್ಲಾ ಸಮುದಾಯದಲ್ಲಿ ಇದೆ. ಕೆಲವೆಡೆ ಹಣೆಯಿಂದ ತಲೆಯ ಮಧ್ಯದವರೆಗೆ ಕುಂಕುಮ ಹಾಕಿದರೆ ಮದುವೆ ಆಗಿ ಹೋಗುತ್ತದೆ. ಕೆಲವೆಡೆ ಅರಶಿಣ ದಾರ ಕಟ್ಟಿದರು ಮದುವೆ ಆಗಿ ಬಿಡುತ್ತದೆ. ಮತ್ತೆ ಕೆಲವು ಕಡೆ ಚಿನ್ನದ ತಾಳಿ ಸರವೇ ಬೇಕು ಕೆಲವೆಡೆ ತುಳಸಿ ಮಾಲೆಯೂ ಸಾಕು, ಇನ್ನೂ ಕೆಲವು ವಿಶೇಷ ಮದುವೆಗಳಲ್ಲಿ ಕೇವಲ ಪೆನ್ ಪೇಪರ್ ಇದ್ದರೂ ಸಾಕು. ಹೀಗೆ ಮದುವೆ ಹೇಗೆ ಬೇಕಾದರು ನಡೆಯಬಹುದು.
ಹಾಗೆಯೇ ವೈರಲ್ ಆದ ವಿಡಿಯೋ ಉತ್ತರ ಭಾರತ ಶೈಲಿಯ ಮದುವೆಯದ್ದಾಗಿದೆ. ಉತ್ತರ ಭಾರತದಲ್ಲಿ ಪರಸ್ಪರ ಹಾರ ಬದಲಾಯಿಸುವ ವೇಳೆ ವಧು ವರರು ಪರಸ್ಪರ ಕೈಗೆ ಸಿಗದಂತೆ ಹಲವು ಆಟಗಳನ್ನು ಆಡುತ್ತಾರೆ. ಕೆಲ ದಿನಗಳ ಹಿಂದೆ ವಧುವೊಬ್ಬಳು ತನ್ನ ವರ ಹಾರ ಹಾಕಲು ಬಂದಾಗ ಬಹುತೇಕ ಹಿಂಭಾಗಕ್ಕೆ ಮಗುಚಿ ಬೀಳುವಷ್ಟು ನಿಂತಲೇ ಹಿಂಭಾಗಕ್ಕೆ ಬಾಗಿದ್ದಳು. ಮ್ಯಾಟ್ರಿಕ್ಸ್ ರೀತಿ ಆಕೆ ಬಾಗಿದ ರೀತಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಇಲ್ಲಿ ವಧುವಿನ ಬದಲು ವರ ವಧುವಿಗೆ ಆಟವಾಡಿಸಿದ್ದಾನೆ. ಆದರೆ ವಧುವೇನೂ ಕಡಿಮೆ ಇಲ್ಲ ಬಿಡಿ. ವಧು ಮಾಡಿದ ಉಪಾಯಕ್ಕೆ ಹಾರ ಹಾಕಿಸಿಕೊಳ್ಳಲು ಹಿಂಜರಿದ ಯುವಕ ಅವನಾಗಿಯೇ ಬಂದು ಕೊರಳೊಡಿದ್ದಾನೆ. ಹಾಗಾದ್ರೆ ವಧು ಏನ್ ಮಾಡಿದ್ಲು, ವಿಡಿಯೋ ನೋಡಿ.
ವಧು ಹಾರ ಹಾಕಲು ಬರುತ್ತಿದ್ದಂತೆ ವರ ಹಿಂದೆ ಹಿಂದೆ ಸರಿದಿದ್ದಾನೆ. ಇದಕ್ಕೆ ಕ್ಯಾರೆ ಮಾಡದ ವಧು ವಾಪಸ್ ಹಿಂದಿರುಗಿದ್ದು, ಸ್ವಲ್ಪ ದೂರ ಬಂದು ನಿಂತು ಹಾರ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾಳೆ. ಅಲ್ಲದೇ ನೀನು ಕೊರಳೊಡ್ಡದಿದ್ದರೆ ಇನ್ಯಾರಿಗಾದರೂ ಹಾರ ಹಾಕುವೆ ಎಂಬಂತಿದೆ ವಧುವಿನ ರಿಯಾಕ್ಷನ್ ಇದನ್ನು ನೋಡಿದ ವರನಿಗೂ ಆತಂಕವಾಗಿದೆ. ಈಗ ನಾನು ಕೊರಳೊಡ್ಡದಿದ್ದರೆ ಇನ್ಯಾರಿಗೋ ನನ್ನ ಮನದರಸಿ ಹಾರ ಹಾಕಿ ಬಿಡುತ್ತಾಳೆ ಎಂಬ ಆತಂಕದಲ್ಲೇ ಬಂದು ಆತ ಹಾರ ಹಾಕಿಸಿಕೊಳ್ಳುತ್ತಾನೆ. ನಂತರ ವಧುವಿಗೂ ಹಾರ ಹಾಕುತ್ತಾನೆ.
ಇದು ಮಾತ್ರೆಯಲ್ಲ, ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ !
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಧುವಿನ ಬುದ್ಧಿವಂತಿಕೆಗೆ ಎಲ್ಲರೂ ತಲೆದೂಗಿದ್ದಾರೆ. ವಧು ಹಾಗೂ ವರ ಇಬ್ಬರು ಲೈಟ್ ಗುಲಾಬಿ ಬಣ್ಣದ ಮದುವೆ ಉಡುಗೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ವರ ತಲೆಗೆ ಪೇಟ ತೊಟ್ಟು ಶೇರ್ವಾನಿ ಧರಿಸಿದ್ದರೆ, ವಧು ಗುಲಾಬಿ ಬಣ್ಣದ ಲೆಹಂಗಾ ಜೊತೆ ಅದಕ್ಕೆ ತಕ್ಕನಾದ ಆಭರಣದಲ್ಲಿ ಮಿಂಚುತ್ತಿದ್ದಾಳೆ. ಯಾವುದೇ ಸಿನಿಮಾ ನಟಿಗೂ ಕಡಿಮೆ ಇಲ್ಲದಂತೆ ಇಲ್ಲಿ ವಧುವಿನ ಸೌಂದರ್ಯ ಎಲ್ಲರನ್ನು ಸೆಳೆಯುತ್ತಿದೆ. ಈ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ಒಬ್ಬರು ತಮ್ಮ ಇನ್ಸ್ಟಾ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಹುಡುಗಿಯರ ಸಹವಾಸಾನೇ ಬೇಡ, ಗೊಂಬೆಯನ್ನೇ ಮದ್ವೆಯಾಗ್ತಾನಂತೆ!