ಮೊಡವೆಯಿಲ್ಲದ ಮುಖ,ಹೊಳೆಯುವ ಚರ್ಮ,ವಯಸ್ಸು ಅಡಗಿಸುವ ಸೌಂದರ್ಯ ಯಾರಿಗೆ ಬೇಡ. ವಾರದಲ್ಲಿ ನಾಲ್ಕು ಬಾರಿ ಬ್ಯೂಟಿಪಾರ್ಲರ್ ಗೆ ಹೋಗಿ ಹಣ ಸುರಿದ್ರೂ ಪ್ರಯೋಜನ ಶೂನ್ಯ. ಸುಂದರವಾಗಿ ಕಾಣ್ಬೇಕು ಎನ್ನುವವರು ಮನೆಯ ಹಿತ್ತಲಿನಲ್ಲಿರುವ ಈ ಬಳ್ಳಿಗೆ ಶರಣಾಗಿ.
ಅಮೃತಬಳ್ಳಿ (Giloy). ಕೊರೊನಾ (Corona) ಸಂದರ್ಭದಲ್ಲಿ ಅತಿ ಹೆಚ್ಚು ಸುದ್ದಿಗೆ ಬಂದ ಬಳ್ಳಿ ಇದು. ಅಮೃತ ಬಳ್ಳಿಯಲ್ಲಿ ಅಮೃತ ಅಡಗಿದೆ. ಇದನ್ನು ಆರೋಗ್ಯ (Health)ಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ರೋಗನಿರೋಧಕ ಶಕ್ತಿ (Immunity)ಯನ್ನು ಹೆಚ್ಚಿಸಲು ಅಮೃತ ಬಳ್ಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಮೃತ ಬಳ್ಳಿ ಬರೀ ರೋಗ ನಿರೋಧಕ ಶಕ್ತಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ಜ್ವರ,ಕೆಮ್ಮು,ನೆಗಡಿ ಸೇರಿದಂತೆ ಅನೇಕ ಅನಾರೋಗ್ಯಕ್ಕೆ ಅಮೃತಬಳ್ಳಿ ಮದ್ದು.
ಇದು ಅನಾದಿಕಾಲದಿಂದಲೂ ಬಳಕೆಯಲ್ಲಿದೆ. ಈ ಅಮೃತ ಬಳ್ಳಿಯನ್ನು ಗಿಲೋಯ್ ಎಂದು ಕರೆಯಲಾಗುತ್ತದೆ. ಇದನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬೆಳೆಸಲಾಗ್ತಿದೆ. ಅಮೃತ ಬಳ್ಳಿಯನ್ನ ಬೆಳೆಸುವುದು ಸುಲಭ. ಅದರ ಕಾಂಡ,ಬೇರು,ಎಲೆ,ಚಿಗುರು ಎಲ್ಲವೂ ಔಷಧಿ ಗುಣವನ್ನು ಹೊಂದಿದೆ. ಅಮೃತ ಬಳ್ಳಿಯಲ್ಲಿ ಪ್ರೋಟೀನ್,ಕ್ಯಾಲ್ಸಿಯಂ ಇದ್ದು,ಇದು ವಾತ,ಪಿತ್ತ,ಕಫ ಹಾಗೂ ಕಿಡ್ನಿಯಲ್ಲಿ ಕಲ್ಲಿನಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬಹುತೇಕರಿಗೆ ಅಮೃತ ಬಳ್ಳಿಯ ಆರೋಗ್ಯ ಪ್ರಯೋಜಗಳು ಗೊತ್ತು. ಆದ್ರೆ ಅಮೃತ ಬಳ್ಳಿ ಚರ್ಮ (Skin)ದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ.
ಅಮೃತ ಬಳ್ಳಿಯನ್ನು ಸೌಂದರ್ಯ (Beauty) ವರ್ಧಕವಾಗಿ ಬಳಸಬಹುದು. ಇದನ್ನು ಫೇಸ್ ಮಾಸ್ಕ್ (Face Mask )ರೀತಿಯಲ್ಲಿ ಬಳಸಬಹುದು. ಅಮೃತ ಬಳ್ಳಿಯನ್ನು ಮೊಡವೆಗಳು, ಕಲೆಗಳು ಮತ್ತು ಚರ್ಮ ಸುಕ್ಕುಗಟ್ಟು (Wrinkle )ವ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು. ಹೊಳೆಯುವ ಚರ್ಮ ಪಡೆಯಲು ಬಯಸುವವರು ಅಮೃತ ಬಳ್ಳಿಯನ್ನು ಬಳಸಬಹುದು. ಇಂದು ಸೌಂದರ್ಯದ ಮದ್ದಾಗಿ ಅಮೃತ ಬಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳ್ತೆವೆ.
ಅಮೃತ ಬಳ್ಳಿ ಮತ್ತು ಅಲೋವೆರಾ ಜೆಲ್ (Aloe Vera Gel): ಅಲೋವೆರಾ ಜೆಲ್ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಜೊತೆ ಅಮೃತ ಬಳ್ಳಿಯನ್ನು ಬಳಸಿದ್ರೆ ಚರ್ಮ ಮೃದುವಾಗುತ್ತದೆ. ಅಮೃತಬಳ್ಳಿ ಮತ್ತು ಅಲೋವೆರಾ ಜೆಲ್ ನ ಫೇಸ್ ಮಾಸ್ಕ್ ಮಾಡಲು, ಒಂದು ಟೀ ಚಮಚ ಅಮೃತ ಬಳ್ಳಿ ಪುಡಿ ಮತ್ತು ಕಾಂಡದ ಭಾಗವನ್ನು ರುಬ್ಬಿ ಪೇಸ್ಟ್ ಮಾಡಬೇಕು. ಇದಕ್ಕೆ ಅಲೋವೆರಾ ಜೆಲ್ ಸೇರಿಸಿ,ಸರಿಯಾಗಿ ಮಿಕ್ಸ್ ಮಾಡಬೇಕು. ನಂತ್ರ ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷ ಬಿಡಬೇಕು. ನಂತರ ಮುಖವನ್ನು ಸ್ವಚ್ಛ ನೀರಿನಲ್ಲಿ ತೊಳೆಯಬೇಕು. ಈ ಫೇಸ್ ಪ್ಯಾಕ್ನ್ನು ಮುಖಕ್ಕೆ ಅನ್ವಯಿಸುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ.
Skin Care: ಮೊಡವೆ ಕಲೆಯನ್ನು ಹೋಗಲಾಡಿಸಲು ಸುಲಭ ವಿಧಾನವಿದು
ಜೇನು ತುಪ್ಪ ಮತ್ತು ಅಮೃತ ಬಳ್ಳಿ : ಹೊಳೆಯುವ ಚರ್ಮಕ್ಕೆ ಅಮೃತ ಬಳ್ಳಿ ತುಂಬಾ ಪ್ರಯೋಜನಕಾರಿ. ಜೇನುತುಪ್ಪವು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ಅಮೃತ ಬಳ್ಳಿ ಬಳಸಿ ಸದಾ ಚರ್ಮ ಹೊಳೆಯುವಂತೆ ಮಾಡಬಹುದು. ಅಮೃತ ಬಳ್ಳಿ ಹಣ್ಣನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಹಾಕಿ,ಸರಿಯಾಗಿ ಮಿಕ್ಸ್ ಮಾಡಬೇಕು.ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 15 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಬೇಕು. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಶೀಘ್ರ ಪರಿಣಾಮ ಕಾಣಿಸುತ್ತದೆ.
Beard Washing Mistakes: ಹುಡ್ಗೀರ್ನ ಮೆಚ್ಸೋಕೆ ಗಡ್ಡ ಬಿಟ್ರೆ ಸಾಲಲ್ಲ, ಅದನ್ನು ಕ್ಲೀನಾಗೂ ಇಟ್ಕೋಬೇಕು!
ಮೊಡವೆ ದೂರ ಮಾಡುತ್ತೆ ಅಮೃತ ಬಳ್ಳಿ: ಮೊಡವೆ ಮುಜುಗರವನ್ನುಂಟು ಮಾಡುತ್ತದೆ. ಮುಖದ ಮೇಲಿರುವ ಮೊಡವೆ ನಿಮ್ಮ ಸೌಂದರ್ಯಕ್ಕೆ ಅಡ್ಡಿಯಾಗಿದ್ದರೆ ನೀವು ಅಮೃತಬಳ್ಳಿ ಫೇಸ್ ಪ್ಯಾಕ್ ಬಳಸುವ ಮೂಲಕ,ಮೊಡವೆಗೆ ಗುಡ್ ಬೈ ಹೇಳಬಹುದು. ಅಮೃತ ಬಳ್ಳಿಯ ಕಾಂಡವನ್ನು ರುಬ್ಬಿ ಪೇಸ್ಟ್ ಮಾಡಬೇಕು. ತಯಾರಿಸಿದ ಪೇಸ್ಟ್ ಅನ್ನು ರಾತ್ರಿ ಮುಖಕ್ಕೆ ಹಚ್ಚಿ ಮಲಗಬೇಕು. ಮರುದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆದರೆ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತವೆ.