ಫ್ಯಾಷನ್ ಬದಲಾಗ್ತಿರುತ್ತೆ. ಫ್ಯಾಷನ್ ಗೆ ತಕ್ಕಂತೆ ಬಟ್ಟೆ ಖರೀದಿ ಸಾಧ್ಯವಾಗುವುದಿಲ್ಲ. ಅಂತವರು ಬುದ್ದಿ ಉಪಯೋಗಿಸಿ ಕಪಾಟಿನಲ್ಲಿರುವ ಡ್ರೆಸ್ ಗೆ ಹೊಸ ಲುಕ್ ನೀಡಬಹುದು. ಅದಕ್ಕೆ ನಿಮ್ಮ ಬಳಿ ಕೆಲವೊಂದು ವಸ್ತುಗಳು ಸದಾ ಇರಲೇಬೇಕು.
ಮಹಿಳೆ (Woman )ಅಂದ್ರೆ ಸೌಂದರ್ಯ (Beauty),ಸೌಂದರ್ಯ ಅಂದ್ರೆ ಮಹಿಳೆ. ಇದ್ರಲ್ಲಿ ಎರಡು ಮಾತಿಲ್ಲ. ಬಟ್ಟೆ (Clothes) ಹಾಗೂ ಮೇಕಪ್ (Makeup )ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಮಹಿಳೆಯರು ಬಯಸುವುದಿಲ್ಲ. ಎಲ್ಲ ರೀತಿಯ ಮೇಕಪ್ ಸೆಟ್ ತನ್ನ ಬಳಿ ಇರಬೇಕೆಂದು ಬಹುತೇಕ ಹುಡುಗಿಯರು ಬಯಸುತ್ತಾರೆ. ಹಾಗೆಯೇ ಎಲ್ಲ ಸ್ಟೈಲ್ (Style) ನ ಡ್ರೆಸ್ ವಾರ್ಡ್ರೋಬ್ (Wardrobe )ನಲ್ಲಿ ಇರಬೇಕೆಂಬುದು ಹುಡುಗಿಯರ ಬಯಕೆ.
ಶಾಪಿಂಗ್ ಅಂದ್ರೆ ಹುಡುಗಿಯರಿಗೆ ಬಲು ಇಷ್ಟ. ಶಾಪಿಂಗ್ ಹೆಸರು ಕೇಳ್ತಿದ್ದಂತೆ ಗಾಢ ನಿದ್ರೆಯಲ್ಲಿರುವವರೂ ಎದ್ದು ಕುಳಿತುಕೊಳ್ತಾರೆ. ಕಪಾಟಿನಲ್ಲಿರುವ ಡ್ರೆಸ್ ಎಲ್ಲವನ್ನೂ ಧರಿಸುತ್ತಾರೆ ಎನ್ನಲು ಸಾಧ್ಯವಿಲ್ಲ. ಆದರೆ ಮಾರುಕಟ್ಟೆಯಲ್ಲಿ ಇಷ್ಟವಾದ ಎಲ್ಲ ಬಟ್ಟೆ ಮನೆಯಲ್ಲಿರಬೇಕು. ಕೆಲ ಹುಡುಗಿಯರು ಶಾಪಿಂಗ್ ಗೆ ಗಟ್ಟೆಗಟ್ಟಲೆ ಸಮಯ ತೆಗೆದುಕೊಳ್ತಾರೆ. ಈಗ ಎಲ್ಲವೂ ಆನ್ಲೈನ್ ಆಗಿರುವ ಕಾರಣ ಆನ್ಲೈನ್ ಸೈಟ್ ಗಳಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
undefined
ಋತು ಬದಲಾದಾಗೊಮ್ಮೆ,ಹಬ್ಬಕ್ಕೊಂದು,ಹುಟ್ಟು ಹಬ್ಬಕ್ಕೊಂದು,ಫ್ರೆಂಡ್ ಬರ್ತ್ ಡೇ ಪಾರ್ಟಿಗೊಂದು ಹೀಗೆ ಬಟ್ಟೆ ಖರೀದಿಸಲು ನೆಪ ಹುಡುಕುವ ಹುಡುಗಿಯರು ಮನೆಯ ವಾರ್ಡ್ರೋಬ್ ನಲ್ಲಿ ಕೆಲ ಬಟ್ಟೆಯನ್ನು ಅವಶ್ಯಕವಾಗಿ ಇಟ್ಟುಕೊಂಡಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಆ ಬಟ್ಟೆಗಳು ನಿಮ್ಮ ನೆರವಿಗೆ ಬರುತ್ತವೆ. ಇಂದು ಹುಡುಗಿಯರ ಕಪಾಟಿನಲ್ಲಿ ಇರಲೇಬೇಕಾದ ಬಟ್ಟೆ,ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ಹೇಳುತ್ತೇವೆ.
ಸ್ಟೈಲಿಶ್ ಬೆಲ್ಟ್ : ಅರೇ..! ಇದ್ಯಾಕೆ ಎಂದು ಪ್ರಶ್ನೆ ಮಾಡ್ಬೇಡಿ. ಬೆಲ್ಟ್ ಈಗ ಪ್ರಸಿದ್ಧಿ ಪಡೆದಿದೆ. ಬೆಲ್ಟ್ ಮೂಲಕ ಉಡುಗೆಯನ್ನು ವಿನ್ಯಾಸಗೊಳಿಸುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಸ್ಟೈಲಿಶ್ ಬೆಲ್ಟ್ ನಿಮ್ಮ ಬಳಿ ಇರಲಿ. ಉದ್ದದ ಟೀ ಶರ್ಟ್ ನಿಂದ ಹಿಡಿದು ಅನಾರ್ಕಲಿ ಕುರ್ತಾವರೆಗೆ ಎಲ್ಲ ಉಡುಗೆಗೆ ಬೆಲ್ಟ್ ಮ್ಯಾಚಿಂಗ್ ಮಾಡ್ಬಹುದು. ಬೆಲ್ಟ್ ಬಟ್ಟೆಗೆ ಹೊಸ ಲುಕ್ ನೀಡುತ್ತೆ.
ಬ್ಲಾಕ್ ಡ್ರೆಸ್ : ನಿಮ್ಮ ವಾರ್ಡ್ರೋಬ್‌ನಲ್ಲಿ ಸಾದಾ ಕಪ್ಪು ಬಣ್ಣದ ಡ್ರೆಸ್ ಇರಲಿ. ನೈಟ್ ಪಾರ್ಟಿಯಿಂದ ಹಿಡಿದು ಆಫೀಸ್ ಪಾರ್ಟಿಯವರೆಗೆ ಎಲ್ಲ ಪಾರ್ಟಿಗಳಿಗೆ ಇದನ್ನು ಧರಿಸಬಹುದು. ಜಾಕೆಟ್, ಬೆಲ್ಟ್ ಅಥವಾ ಹೆವಿ ನೆಕ್ಲೆಸ್ ಸೇರಿದಂತೆ ಸುಂದರ ಕಿವಿಯೋಲೆ ಧರಿಸುವ ಮೂಲಕ ಪ್ರತಿ ಬಾರಿ ಈ ಡ್ರೆಸ್ ಗೆ ಹೊಸ ಲುಕ್ ನೀಡಬಹುದು.
Fashion Tips : ಇರುವುದರಲ್ಲೇ ಹೊಸ ರೀತಿ ಕಾಣಿಸುವುದು ಹೇಗೆ?
ರೇಷ್ಮೆ ಸೀರೆ : ನಿಮ್ಮ ವಾರ್ಡ್‌ರೋಬ್‌ನಲ್ಲಿ ಎಥ್ನಿಕ್ ವೇರ್ ಕಡಿಮೆ ಇದ್ದರೆ, ಖಂಡಿತವಾಗಿಯೂ ರೇಷ್ಮೆ ಸೀರೆಯನ್ನು ಇಟ್ಟುಕೊಳ್ಳಿ. ಯಾವುದೇ ಹಬ್ಬ ಅಥವಾ ಸಾಂಪ್ರದಾಯಿಕ ಪಾರ್ಟಿಯಲ್ಲಿ ಈ ಸೀರೆ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸೀರೆಗಳನ್ನು ಸ್ಟೈಲಿಶ್ ಆಗಿ ಧರಿಸುತ್ತಿದ್ದಾರೆ. ಹಳೆಯ ರೇಷ್ಮೆ ಸೀರೆಗೂ ನೀವು ವೆರೈಟಿ ಬ್ಲೌಸ್ ಮ್ಯಾಚ್ ಮಾಡಬಹುದು.
ಬಿಳಿ ಶರ್ಟ್, ಡೆನಿಮ್ ಜಾಕೆಟ್ : ಬಿಳಿ ಶರ್ಟ್ ಬಹಳ ಸ್ಟೈಲಿಶ್ ಲುಕ್ ನೀಡುತ್ತದೆ. ಬಿಟೌನ್ ನಟಿಯರು ಕೂಡ ಅನೇಕ ಸಂದರ್ಭಗಳಲ್ಲಿ ಬಿಳಿ ಶರ್ಟ್ ಧರಿಸಿದ್ದನ್ನು ನೀವು ನೋಡಬಹುದು. ಬಿಳಿ ಶರ್ಟ್ ಕೆಳಗೆ ನೀವು ಪ್ಯಾಂಟ್, ಸ್ಕರ್ಟ್ ಸೇರಿದಂತೆ ನಿಮಗಿಷ್ಟವಾಗುವ ಡ್ರೆಸ್ ಧರಿಸಬಹುದು. ಇದ್ರ ಜೊತೆ ಡೆನಿಮ್ ಜಾಕೆಟ್ ಗೆ ನಿಮ್ಮ ವಾರ್ಡ್ರೋಬ್ ನಲ್ಲಿ ಜಾಗ ನೀಡಿ. ಇದು ಯಾವುದೇ ಉಡುಗೆಯೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.
Make UP tips : ನಿಮ್ಮ ಬಣ್ಣಕ್ಕೆ ತಕ್ಕಂತೆ ಫೌಂಡೇಶನ್ ಆಯ್ಕೆ ಮಾಡೋದು ಹೇಗೆ?
ಮಲ್ಟಿಕಲರ್ ಬ್ಲೌಸ್ : ಸೀರೆಯುಡುವ ಮನಸ್ಸಾಗಿರುತ್ತದೆ. ಆದ್ರೆ ಅದಕ್ಕೆ ಹೊಂದುವ ಬ್ಲೌಸ್ ನಿಮ್ಮ ಬಳಿ ಇರುವುದಿಲ್ಲ. ಇರುವ ಬ್ಲೌಸ್ ನ ಸೈಜ್ ನಿಮಗೆ ಸಮಸ್ಯೆಯಾಗುತ್ತದೆ. ಇಂಥ ಸಂದರ್ಭದಲ್ಲಿ ನಿಮಗೆ ಮಲ್ಟಿಕಲರ್ ಬ್ಲೌಸ್ ನೆರವಿಗೆ ಬರುತ್ತದೆ. ಕಪಾಟಿನಲ್ಲಿ ಈ ಬ್ಲೌಸ್ ಇದ್ದರೆ ನೀವು ಯಾವುದೇ ಸೀರೆ ಮೇಲೆ ಇದನ್ನು ಧರಿಸಬಹುದು. ಲೆಹೆಂಗಾಕ್ಕೆ ಕೂಡ ಇದನ್ನು ಮ್ಯಾಚ್ ಮಾಡಬಹುದು.