ಮೇಕಪ್ ಮಾಡುವ, ಬಟ್ಟೆ ಬದಲಿಸುವ ರೂಮ್ ಗೆ ಯಾಕೆ ಇಂಪಾರ್ಟೆಂಟ್ ನೀಡ್ಬೇಕು ಅಂತಾ ಅನೇಕರು ಭಾವಿಸ್ತಾರೆ. ಆದ್ರೆ ನಿಮ್ಮ ಸೌಂದರ್ಯ ದುಪ್ಪಟ್ಟು ಮಾಡುವ ರೂಮ್ ಸೌಂದರ್ಯದ ಬಗ್ಗೂ ಗಮನ ನೀಡ್ಬೇಕಲ್ವಾ? ಡ್ರೆಸ್ಸಿಂಗ್ ರೂಮ್ ಅಚ್ಚುಕಟ್ಟಾಗಿದ್ರೆ ನೀವು ಡ್ರೆಸ್ಅಪ್ ಆಗೋದು ಸುಲಭ.
ಚಿಕ್ಕದಾಗಿದ್ದರೂ ಮನೆ (Home) ಚೊಕ್ಕದಾಗಿರಬೇಕೆಂಬ ಮಾತಿದೆ. ಮನೆಯ ಪ್ರತಿಯೊಂದು ಭಾಗವೂ ಮಹತ್ವ ಪಡೆಯುತ್ತದೆ.ಮನೆಯಲ್ಲಿ ವಸ್ತುಗಳು ಅಚ್ಚುಕಟ್ಟಾಗಿದ್ದರೆ ಮಾತ್ರ ಮನೆಯ ಅಂದ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿರಲು ಖುಷಿ (Enjoy)ಯಾಗುತ್ತದೆ. ಅಡುಗೆ ಮನೆ (Kitchen )ಯಲ್ಲಿ ಪಾತ್ರೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದರೆ ಅಡುಗೆ ಮಾಡಲು ಮನಸ್ಸು ಬರುವುದಿಲ್ಲ. ಶೌಚಾಲಯ ಕ್ಲೀನ್ ಇಲ್ಲದೆ ಹೋದ್ರೆ ಅಲ್ಲಿಗೆ ಹೋಗಲು ಕಷ್ಟವಾಗುತ್ತದೆ. ಹಾಗೆ ಡ್ರೆಸ್ಸಿಂಗ್ ರೂಮ್ (Dressing Room )ಕೂಡ. ಡ್ರೆಸ್ಸಿಂಗ್ ರೂಮ್ ಮಹಿಳೆ (Woman)ಯರಿಗೆ ಬಹಳ ವಿಶೇಷವಾದ ಸ್ಥಳವಾಗಿದೆ. ಅಲ್ಲಿ ಅವರು ದಿನದ ಕೆಲ ಸಮಯವನ್ನು ಕಳೆಯುತ್ತಾರೆ. ಹಾಗಾಗಿ ಡ್ರೆಸ್ಸಿಂಗ್ ರೂಮ್ ಕೂಡ ಸ್ವಚ್ಛ (Clean)ವಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಬಹಳ ಮುಖ್ಯವಾಗಿದೆ. ಸಣ್ಣ ಜಾಗದಲ್ಲಿಯೂ ನೀಟಾಗಿ ಡ್ರೆಸ್ಸಿಂಗ್ ರೂಮ್ ನಿರ್ಮಾಣ ಮಾಡಬಹುದು. ಬಟ್ಟೆ (Clothes)ಗಳನ್ನು ಸುಂದರವಾಗಿ ಜೋಡಿಸಿಡಬಹುದು. ಅನೇಕರು ಆತುರಾತುರದಲ್ಲಿ ಬಟ್ಟೆ,ಬ್ಯಾಗ್ (Bag),ಚಪ್ಪಲಿ (Slippers) ಗಳನ್ನು ಒಂದೇ ಜಾಗದಲ್ಲಿ ತುಂಬಿಡುತ್ತಾರೆ. ಒಂದು ತೆಗೆದ್ರೆ ಇನ್ನೊಂದು ಬೀಳುತ್ತದೆ. ಅದನ್ನು ಸರಿಪಡಿಸಲು ಮತ್ತಷ್ಟು ಸಮಯ ಹಾಳಾಗುತ್ತದೆ. ಡ್ರೆಸ್ಸಿಂಗ್ ರೂಮ್ ಹೇಗಿರಬೇಕು ಎನ್ನುವ ಬಗ್ಗೆ ನಾವಿಂದು ಹೇಳ್ತೇವೆ.
ಕುಳಿತುಕೊಳ್ಳಲು ಜಾಗ : ನಿಮ್ಮ ಡ್ರೆಸ್ಸಿಂಗ್ ರೂಮ್ ಸ್ವಲ್ಪ ದೊಡ್ಡದಾಗಿದ್ದರೆ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವಂತ ವ್ಯವಸ್ಥೆ ಮಾಡಿ. ಕನ್ನಡಿ ಮುಂದೆ ನಿಂತ್ರೆ ಮಹಿಳೆಯರಿಗೆ ಸಮಯ ಕಳೆದಿದ್ದು ತಿಳಿಯುವುದಿಲ್ಲ. ನಿಂತು ಮೇಕಪ್ ಮಾಡಿಕೊಳ್ಳುವ ಬದಲು ಕುಳಿತುಕೊಂಡು ಆರಾಮವಾಗಿ ಮೇಕಪ್ ಮಾಡಿಕೊಳ್ಳಬಹುದು. ಅಡಿಯಿಂದ ಮುಡಿಯವರೆಗೆ ಕನ್ನಡಿಯಲ್ಲಿ ಕಾಣಬೇಕು ಎನ್ನುವವರಿಗೆ ಜಾಗದ ಅವಶ್ಯಕತೆ ಹೆಚ್ಚಿರುತ್ತದೆ. ಕನ್ನಡಿಯಿಂದ ಸ್ವಲ್ಪ ದೂರ ನಿಂತಾಗ ಮಾತ್ರ ದೇಹ ಪೂರ್ತಿಯಾಗಿ ಕಾಣಲು ಸಾಧ್ಯ. ಹಾಗಾಗಿ ಕನ್ನಡಿಯನ್ನು ಸೂಕ್ತ ಸ್ಥಳದಲ್ಲಿ ಹಾಕಲು ವ್ಯವಸ್ಥೆ ಮಾಡಿ.
ಡ್ರೆಸ್ಸಿಂಗ್ ರೂಮ್ ನಲ್ಲಿರಲಿ ಸ್ಟೋರೇಜ್ ಗೆ ಜಾಗ : ಬಟ್ಟೆಗಳು ಕಪಾಟಿನಲ್ಲಿದ್ದರೆ ಚೆಂದ. ಅವು ಅಲ್ಲಲ್ಲಿ ನೇತಾಡುತ್ತಿದ್ದರೆ ನೋಡಲು ಕೊಳಕೆನಿಸುತ್ತದೆ. ಹಾಗಾಗಿ ಇರುವ ಕಪಾಟಿನಲ್ಲಿ ಬಟ್ಟೆಯನ್ನು ಸರಿಯಾಗಿ ಜೋಡಿಸಿ. ಒಂದು ವೇಳೆ ಹೊಸ ಸ್ಟೋರೇಜ್ ಖರೀದಿ ಪ್ಲಾನ್ ಮಾಡ್ತಿದ್ದರೆ ಬಟ್ಟೆಗಳನ್ನು ಹೇಗೆ?ಎಲ್ಲಿ ಇಡಬೇಕೆಂದು ಆಲೋಚನೆ ಮಾಡಿ,ಅವಶ್ಯಕತೆಯಿರುವಷ್ಟು ರ್ಯಾಕ್ ಮಾಡಿಸಿಕೊಳ್ಳಿ. ಆಗ ದಿನನಿತ್ಯ ಬಳಸುವ ಬಟ್ಟೆ,ಹೊಸ ಬಟ್ಟೆ ಹೀಗೆ ಬೇರೆ ಬೇರೆ ಬಟ್ಟೆಗಳಿಗೆ ಬೇರೆ ಬೇರೆ ರ್ಯಾಕ್ ವ್ಯವಸ್ಥೆ ಮಾಡಬಹುದು.
Beauty Tips: ಪಾತ್ರೆ ತೊಳೆದು ತೊಳೆದು ಕೈ ಹಾಳಾಗಿದ್ಯಾ? ಯೋಚಿಸ್ಬೇಡಿ
ಸೂಕ್ತವಾದ ಬೆಳಕು : ಡ್ರೆಸ್ಸಿಂಗ್ ರೂಮಿನಲ್ಲಿ ನೈಸರ್ಗಿಕ ಬೆಳಕು ಇದ್ದರೆ ಅದು ಬಹಳ ಉತ್ತಮ. ಆದ್ರೆ ರಾತ್ರಿಯಲ್ಲಿ ಸೂರ್ಯನ ಬೆಳಕು ಸಾಧ್ಯವಿಲ್ಲ. ಆದ್ದರಿಂದ ಡ್ರೆಸ್ಸಿಂಗ್ ಕೋಣೆಯಲ್ಲಿ ಬಿಳಿ ಲೈಟ್ ಗೆ ಆದ್ಯತೆ ನೀಡಿ. ಕೊಠಡಿಯು ವರ್ಣರಂಜಿತ ದೀಪಗಳೊಂದಿಗೆ ಉತ್ತಮವಾಗಿ ಕಾಣುತ್ತದೆ. ಆದರೆ ಈ ದೀಪಗಳಲ್ಲಿ ಬಟ್ಟೆಗಳ ನಿಜವಾದ ಬಣ್ಣವು ತಿಳಿದಿಲ್ಲ. ಹಾಗೆ ನಿಮ್ಮ ಮೇಕಪ್ ಬಗ್ಗೆ ಸ್ಪಷ್ಟತೆ ನಿಮಗೆ ಸಿಗುವುದಿಲ್ಲ.
ವ್ಯಾನಿಟಿ ಟೇಬಲ್ : ಬಹುತೇಕ ಎಲ್ಲರ ಮನೆಯಲ್ಲೂ ಕನ್ನಡಿಯಿರುತ್ತದೆ. ಆದ್ರೆ ವ್ಯಾನಿಟಿ ಟೇಬಲ್ ಇರುವುದಿಲ್ಲ. ವ್ಯಾನಿಟಿ ಟೇಬಲ್ ಇದ್ದರೆ ಅನೇಕ ಪ್ರಯೋಜನವಿದೆ. ಬಾಚಣಿಗೆ,ಲೋಷನ್, ಪೌಡರ್, ಬಳೆ, ಲಿಪ್‌ಸ್ಟಿಕ್ ಎಲ್ಲ ಮೇಕಪ್ ಸೆಟ್ ಗಳನ್ನು ಇಟ್ಟುಕೊಳ್ಳಬಹುದು.ವ್ಯಾನಿಟಿ ಟೇಬಲ್ ಇಲ್ಲವೆಂದ್ರೆ ಈ ಎಲ್ಲ ವಸ್ತುಗಳು ಅಲ್ಲಲ್ಲಿ ಚದುರಿರುತ್ತವೆ. ಅಗತ್ಯವೆನಿಸಿದಾಗ ಅವು ಕೈಗೆ ಸಿಗುವುದಿಲ್ಲ.
FASHION WEEK : 40 ಸೂಪರ್ ಮಾಡೆಲ್‌ಗಳು ಒಂದೇ ವೇದಿಕೆಯಲ್ಲಿ... ಜೆಕೆ, ಶ್ವೇತಾ ರಂಗು!
ಡ್ರೆಸ್ಸಿಂಗ್ ರೂಮ್,ಸ್ಟೋರ್ ರೂಮ್ ಅಲ್ಲ ಎಂಬುದು ನೆನಪಿರಲಿ : ಅನೇಕರು ಡ್ರೆಸ್ಸಿಂಗ್ ರೂಮನ್ನು ಸ್ಟೋರ್ ರೂಮ್ ಮಾಡಿಕೊಂಡಿರುತ್ತಾರೆ. ಹಾಗಾಗಿ ಡ್ರೆಸ್ಸಿಂಗ್ ರೂಮಿನಲ್ಲಿ ಜಾಗವಿರುವುದಿಲ್ಲ. ಈ ರೂಮಿನಲ್ಲಿ ಆದಷ್ಟು ಕಡಿಮೆ ವಸ್ತುಗಳನ್ನು ಇಡಿ. ಕನ್ನಡಿಯಿರುವ ವ್ಯಾನಿಟಿ ಟೇಬಲ್,ಕುರ್ಚಿ,ಕಪಾಟು ಹೊರತುಪಡಿಸಿ ಮತ್ತ್ಯಾವ ಪೀಠೋಪಕರಣಗಳನ್ನೂ ಇಡಬೇಡಿ.