ಕೆಲಸದ ಇಂಟರ್ವ್ಯೂ ಬಂದಿದೆ ಅಂದಾಗ ಟೆನ್ಷನ್ ಆಗೋದು ಸಾಮಾನ್ಯ. ಎಲ್ಲ ತಯಾರಿ ಮಾಡಿಕೊಳ್ಳುವ ನಾವು ಬಟ್ಟೆ ಬಗ್ಗೆ ನಿರ್ಲಕ್ಷ್ಯ ಮಾಡ್ತೇವೆ. ಯಾವ್ದೋ ಹಾಕಿಕೊಂಡು ಹೋದ್ರೆ ಆಯ್ತು ಅಂದುಕೊಳ್ತೇವೆ. ಆದ್ರೆ ಬಟ್ಟೆ ಕೂಡ ಇಂಪಾರ್ಟೆಂಟ್ ಸ್ವಾಮಿ.
ನಾವು ಬಳಸುವ ಪ್ರತಿಯೊಂದು ವಸ್ತು ಹಾಗೂ ಬಟ್ಟೆ (Clothes) ಗೆ ಅದರದೆ ಆದ ಮಹತ್ವವಿದೆ. ಯಾವ ಸಂದರ್ಭದಲ್ಲಿ ಯಾವ ರೀತಿ ಇರ್ಬೇಕೆಂಬುದು ನಮಗೆ ಗೊತ್ತಿರಬೇಕು. ಸಾವಿನ ಮನೆಗೆ ಶೃಂಗಾರ ಮಾಡಿಕೊಂಡು ಹೋದ್ರೆ ಹೇಗಾಗುತ್ತೆ ಹೇಳಿ?. ಬರೀ ಅಲ್ಲಿ ಮಾತ್ರವಲ್ಲ ಮದುವೆ (Marriage) ಮನೆಯಿಂದ ಹಿಡಿದು ಕೆಲಸಕ್ಕಾಗಿ ಕಚೇರಿಗೆ ಹೋಗುವವರೆಗೂ ನಾವು ಧರಿಸುವ ಬಟ್ಟೆ ಹಾಗೂ ಉಳಿದ ವಿಷ್ಯಗಳ ಬಗ್ಗೆ ಗಮನವಿರಬೇಕು. ಅದ್ರಲ್ಲೂ ಮುಖ್ಯವಾಗಿ ಸಂದರ್ಶನ (Interview) ಕ್ಕೆ ಹೋಗುವ ವೇಳೆ ನಾವು ಹೆಚ್ಚಿನ ಎಚ್ಚರಿಕೆ ವಹಿಸ್ಬೇಕು. ನೆಚ್ಚಿನ ಕೆಲಸ ನಮಗೆ ಸಿಗಲಿ ಎಂದು ನೂರಾರು ಬಾರಿ ದೇವರನ್ನು ಪ್ರಾರ್ಥಿಸಿರುತ್ತೇವೆ. ಹಾಗೆಯೇ ಕೆಲಸಕ್ಕೆ ಸಂಬಂಧಿಸಿದಂತ ಎಲ್ಲ ಮಾಹಿತಿ ಸಂಗ್ರಹಿಸಿರುತ್ತೇವೆ. ಸಾಕಷ್ಟು ಅಧ್ಯಯನ ನಡೆಸಿರುತ್ತೇವೆ. ಸಂದರ್ಶನಕ್ಕೆ ಅಗತ್ಯವಿರುವ ವಸ್ತುಗಳನ್ನು ಜೋಡಿಸ್ತೇವೆ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ಯಾವ್ದೋ ಡ್ರೆಸ್ ಧರಿಸಿ ಇಂಟರ್ವ್ಯೂಗೆ ಹೋಗ್ತೇವೆ. ಉದ್ಯೋಗದಾತರನ್ನು ಮಾತು, ಪ್ರಶ್ನೋತ್ತರದ ಮೂಲಕ ಸೆಳೆಯೋಣ, ಬಟ್ಟೆ ಯಾರು ನೋಡ್ತಾರೆ ಎಂದು ನೀವು ಭಾವಿಸ್ತೀರಿ. ಆದ್ರೆ ಉದ್ಯೋಗ (Occupation) ನೀಡುವಾತ ಬರೀ ನಿಮ್ಮ ಸನ್ನೆಗಳು, ನೀವು ಉತ್ತರಿಸುವ ವಿಧಾನ ಮಾತ್ರವಲ್ಲದೆ ನಿಮ್ಮ ಸಂಪೂರ್ಣ ವ್ಯಕ್ತಿತ್ವ (Personality) ವನ್ನು ಸ್ಕ್ಯಾನ್ (Scan) ಮಾಡ್ತಾರೆ. ಆದ್ದರಿಂದ ನೀವು ಏನು ಧರಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನೀವು ಧರಿಸಿದ ಬಟ್ಟೆಯ ಕಾರಣಕ್ಕೆ ನಿಮ್ಮ ಉದ್ಯೋಗ ಕೈತಪ್ಪಿ ಹೋಗ್ಬಹುದು. ಸಂದರ್ಶನಕ್ಕೆ ಹೋಗುವ ಮೊದಲು ಬಟ್ಟೆ ಬಗ್ಗೆ ಸ್ವಲ್ಪ ಜ್ಞಾನವಿರಬೇಕು. ಇಂದು ಸಂದರ್ಶನದ ಸಮಯದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕೆಂದು ನಾವು ಹೇಳ್ತೇವೆ.
ಸಂದರ್ಶನಕ್ಕೆ ಹೋಗುವ ಮೊದಲು ಬಟ್ಟೆ ಬಗ್ಗೆ ಗಮನವಿರಲಿ :
undefined
ಹೆಚ್ಚು ಕ್ಯಾಶುಯಲ್ (Casual) ಬಟ್ಟೆ ಬೇಡ : ಎಲ್ಲ ಬಾರಿ ಕಚೇರಿಯಲ್ಲಿ, ಮುಚ್ಚಿದ ಕೋಣೆಯಲ್ಲಿಯೇ ಸಂದರ್ಶನ ಮಾಡೋದಿಲ್ಲ. ಹೋಟೆಲ್ (Hotel), ರೆಸ್ಟೋರೆಂಟ್ ಸೇರಿದಂತೆ ಕೆಲ ಪ್ರದೇಶಗಳಲ್ಲೂ ಸಂದರ್ಶನ ನಡೆಯಬಹುದು. ಆಗ ನಾವು ಸಾಮಾನ್ಯವಾಗಿ ಕ್ಯಾಶುಯಲ್ ಬಟ್ಟೆ ಧರಿಸಿ ಹೋಗ್ತೇವೆ. ಅದು ತಪ್ಪು. ಸಂದರ್ಶನ ಎಲ್ಲಿಯೇ ನಡೆಯಲಿ, ಧರಿಸುವ ಬಟ್ಟೆ ಬಗ್ಗೆ ಗಮನವಿರಬೇಕು. ನೀವು ರಿಪ್ಡ್ ಜೀನ್ಸ್ (Ripped jeans), ಟ್ಯಾಂಕ್ ಟಾಪ್ಸ್ (Tank tops), ಫ್ಲಿಪ್ ಫ್ಲಾಪ್ಸ್ (Flip flops), ಡ್ರೆಸ್ ಇತ್ಯಾದಿಗಳನ್ನು ಧರಿಸಿ ಸಂದರ್ಶನಕ್ಕೆ ಹೋಗಬಾರದು. ನೆನಪಿರಲಿ ಯಾವುದೇ ಕಾರಣಕ್ಕೂ ಅತಿಯಾದ ಡ್ರೆಸ್ಸಿಂಗ್ ಮಾಡಿಕೊಂಡು ಹೋಗ್ಬೇಡಿ.
Monsson Fashion: ಮಳೆಗಾಲದಲ್ಲಿ ಈ ಡ್ರೆಸ್ ಧರಿಸೋದು ಬೇಡ!
ಅನ್ ಕಂಫರ್ಟೆಬಲ್ ಡ್ರೆಸ್ ಅಥವಾ ಬೂಟುಗಳನ್ನು ಧರಿಸ್ಬೇಡಿ : ಕೆಲವೊಂದು ಡ್ರೆಸ್ ನಮಗೆ ಅನಾನುಕೂಲವನ್ನುಂಟು ಮಾಡುತ್ತದೆ. ಪದೇ ಪದೇ ಡ್ರೆಸ್ ಸರಿಪಡಿಸಿಕೊಳ್ಳಲು ಮುಂದಾಗ್ತೇವೆ. ವಿಶೇಷವಾಗಿ ಹುಡುಗಿಯರಲ್ಲಿ ಈ ಸಮಸ್ಯೆ ಹೆಚ್ಚು. ಹಾಗಿರುವಾಗ ಅನ್ ಕಂಫರ್ಟೆಬಲ್ ಡ್ರೆಸ್ ಸಂದರ್ಶನಕ್ಕೆ ಬೇಡ. ಹಾಗೆಯೇ ಚಪ್ಪಲಿ ಬಗ್ಗೆಯೂ ಜ್ಞಾನವಿರಲಿ. ಡ್ರೆಸ್ ಗೆ ತಕ್ಕ ಚಪ್ಪಲಿಯೇನೋ ಹಾಕಿರ್ತೇವೆ. ಅದು ಬಿಗಿಯಾಗಿ ಕಾಲಗೆ ಗಾಯವಾಗಿರುತ್ತದೆ. ಅದ್ರ ನೋವು ಸಹಿಸೋದು ಕಷ್ಟವಾಗುತ್ತದೆ. ನಮ್ಮ ನೋವು ಮುಖದಲ್ಲಿ ಕಾಣಿಸಲು ಶುರುವಾಗುತ್ತದೆ. ಸಂದರ್ಶನದಲ್ಲಿ ಬಂದ ಪ್ರಶ್ನೆಗೂ ಈ ನೋವಿನ ಕಾರಣಕ್ಕೆ ಉತ್ತರ ನೀಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಡ್ರೆಸ್ ಮತ್ತು ಶೂ, ಚಪ್ಪಲಿಯನ್ನು ಸರಿಯಾಗಿ ಆಯ್ಕೆ ಮಾಡಿ.
ಫೇಸ್ ಬುಕ್ ನಲ್ಲಿ ಕೆಲಸ ಮಾಡಲು ಗೂಗಲ್, ಅಮೇಜಾನ್ ಆಫರ್ಸ್ ಬಿಟ್ಟ ಯುವಕ, 1 ಕೋಟಿ ವೇತನ
ಅತಿಯಾದ ಸೆಂಟ್ ಬಳಕೆ ಬೇಡ : ದೇಹದಿಂದ ಬರುವ ಬೆವರಿನ ವಾಸನೆ ಮುಜುಗರಕ್ಕೆ ಕಾರಣವಾಗುತ್ತದೆ ನಿಜ. ಹಾಗಾಗಿ ಮೈಲ್ಡ್ ಸೆಂಟ್ ಹಾಕಿಕೊಳ್ಳುವುದು ಉತ್ತಮ. ಆದ್ರೆ ಬೆವರಿನ ವಾಸನೆ ಬರ್ಬಾರದು ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ಸೆಂಟ್ ಹುಯ್ದುಕೊಳ್ಳೋದು ಒಳ್ಳೆಯದಲ್ಲ. ತುಂಬಾ ತೀವ್ರವಾದ ಪರಿಮಳವಿರುವ ಸುಗಂಧ ದ್ರವ್ಯವನ್ನು ಸಂದರ್ಶನಕ್ಕೆ ಹೋಗುವ ವೇಳೆ ಬಳಕೆ ಮಾಡ್ಬೇಡಿ.