Maternity Fashion: ಸ್ಪೆಷಲ್‌ ಮೆಸೇಜ್‌ನೊಂದಿಗೆ ಪಿಂಕ್ ಡ್ರೆಸ್‌ನಲ್ಲಿ ಬೇಬಿ ಬಂಪ್ ತೋರಿಸಿದ ಆಲಿಯಾ

Published : Sep 03, 2022, 03:50 PM ISTUpdated : Sep 03, 2022, 03:51 PM IST
Maternity Fashion: ಸ್ಪೆಷಲ್‌ ಮೆಸೇಜ್‌ನೊಂದಿಗೆ ಪಿಂಕ್ ಡ್ರೆಸ್‌ನಲ್ಲಿ ಬೇಬಿ ಬಂಪ್ ತೋರಿಸಿದ ಆಲಿಯಾ

ಸಾರಾಂಶ

ಹೈದರಾಬಾದ್‌ನಲ್ಲಿ ಬ್ರಹ್ಮಾಸ್ತ್ರದ ಪ್ರಚಾರಕ್ಕಾಗಿ ಆಗಮಿಸಿದ ಆಲಿಯಾ ಭಟ್ ಸುಂದರವಾದ ಗುಲಾಬಿ ಘರಾರಾವನ್ನು ಧರಿಸಿ ಬೇಬಿ ಬಂಪ್‌ ಪ್ರದರ್ಶಿಸಿದ್ದಾರೆ. ಮಾತ್ರವಲ್ಲ ತಮ್ಮ ಸ್ಪೆಷಲ್ ಡ್ರೆಸ್‌ನಲ್ಲಢ ಬೇಬಿ ಆನ್‌ ಬೋರ್ಡ್ ಎಂಬ ಸಂದೇಶ ನೀಡಿದ್ದು, ಫೋಟೋ ವೈರಲ್ ಆಗಿದೆ. 

ಬಾಲಿವುಡ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲಿಯಾ ಭಟ್ ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಂದಹಾಗೆ ಅಲಿಯಾ ಭಟ್ ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗರ್ಭಿಣಿ ಆಗಿದ್ದರೂ ಅಲಿಯಾ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿ ತನ್ನ ಭಾಗದ ಚಿತ್ರೀಕರಣ ಸಂಪೂರ್ಣ ಮಾಡಿದ್ದಾರೆ. ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಾಸ್ ಆಗಿರುವ ನಟಿ ಅಲಿಯಾ ಭಟ್ ಇಲ್ಲಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಗರ್ಭಿಣಿ ಅಲಿಯಾ ತನ್ನ ಮುಂದಿನ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

'ಬೇಬಿ ಆನ್‌ಬೋರ್ಡ್' ಬರಹದ ಡ್ರೆಸ್ ಧರಿಸಿದ ಆಲಿಯಾ ಭಟ್
ಹೈದರಾಬಾದ್‌ನಲ್ಲಿ ಬ್ರಹ್ಮಾಸ್ತ್ರದ ಪ್ರಚಾರಕ್ಕಾಗಿ ಆಲಿಯಾ ಭಟ್ ಸುಂದರವಾದ ಗುಲಾಬಿ ಘರಾರಾವನ್ನು ಧರಿಸಿದ್ದರು. ನಟ-ಪತಿ ರಣಬೀರ್ ಕಪೂರ್ ಅವರೊಂದಿಗೆ ಆಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಲಿಯಾ ಗೋಲ್ಡನ್ ವರ್ಕ್ ಇರುವ ಗುಲಾಬಿ ಬಣ್ಣದ ಘರಾರಾ ಸೆಟ್ ಧರಿಸಿ ಬ್ರಹ್ಮಾಸ್ತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಕೆಯ ಸೂಟ್ ಸೆಟ್‌ನ ಹಿಂಭಾಗದಲ್ಲಿ 'ಬೇಬಿ ಆನ್‌ಬೋರ್ಡ್' ಚಿಹ್ನೆಯನ್ನು ಹೊಂದಿದ್ದು ಎಲ್ಲೆಡೆ ವೈರಲ್ ಆಗಿದೆ. ಮೊದಲ ಬಾರಿಗೆ ಆಲಿಯಾ ಭಟ್ ತನ್ನ ಬೇಬಿ ಬಂಪ್ ಪ್ರದರ್ಶಿಸಿದ್ದು, ಮೆಟರ್ನಿಟಿ ಫ್ಯಾಷನ್‌ನಲ್ಲಿ ಮಿಂಚಿದ್ದಾರೆ. ಗರ್ಭಿಣಿಯಾದ ನಂತರ ಆಲಿಯಾ ಭಟ್ ಧರಿಸುತ್ತಿರುವ ಎಲ್ಲಾ ದಿರಿಸುಗಳು ( ಸಹ ಆಕರ್ಷಕವಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪಾರದರ್ಶಕ ಟಾಪಲ್ಲಿ ಆಲಿಯಾ ಭಟ್‌; ನಟಿಯ ಬೇಬಿ ಬಂಪ್‌ ಫೋಟೋ ವೈರಲ್‌!

ಅಲಿಯಾ ಭಟ್ ಧರಿಸಿರುವ ಅತ್ಯಾಕರ್ಷಕ ಘರಾರಾ ಸೆಟ್ ಏಸ್ ಕೌಟೂರಿಯರ್ ಅಬು ಜಾನಿ ಸಂದೀಪ್ ಖೋಸ್ಲಾ ಡಿಸೈನ್ ಮಾಡಿದ್ದಾರೆ. ಇದು ನಿಸ್ಸಂದೇಹವಾಗಿ ಅತ್ಯಂತ ಆಕರ್ಷಕವಾದ ಮೆಟರ್ನಿಟಿ ಫ್ಯಾಷನ್ ಆಗಿದೆ.

ನಟ-ಹಬ್ಬಿ ರಣಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಶುಕ್ರವಾರ ಹೈದರಾಬಾದ್‌ನಲ್ಲಿದ್ದರು. ದಂಪತಿಗಳು (Couple) ತಮ್ಮ ಮುಂಬರುವ ಚಿತ್ರದ ಪ್ರಚಾರಕ್ಕಾಗಿ ಅಲ್ಲಿದ್ದರು ಮತ್ತು ಚಲನಚಿತ್ರ ನಿರ್ಮಾಪಕರಾದ ಎಸ್‌ಎಸ್ ರಾಜಮೌಳಿ ಮತ್ತು ಕರಣ್ ಜೋಹರ್ ಮತ್ತು ನಟರಾದ ನಾಗಾರ್ಜುನ ಅಕ್ಕಿನೇನಿ ಮತ್ತು ಮೌನಿ ರಾಯ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಅಲಿಯಾ ಭಟ್ ಬಳಿ ಅಭಿಮಾನಿಗಳು ಅವರ ಮುಂಬರುವ ಚಲನಚಿತ್ರದ ಜನಪ್ರಿಯ ಹಾಡು (Song) 'ಕೇಸರಿಯಾ' ದಿಂದ ಕೆಲವು ಸಾಲುಗಳನ್ನು ಹಾಡಲು ಕೇಳಿಕೊಂಡರು. ಆಲಿಯಾ ಅದರ ತೆಲುಗು ಆವೃತ್ತಿಯನ್ನು ಹಾಡಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು. ನಂತರ ಹಿಂದಿ ಆವೃತ್ತಿಯ ಸಾಲನ್ನು ಸೇರಿಸಿದರು.

ಇಷ್ಟವಿಲ್ಲ ಎಂದರೆ ನನ್ನನ್ನ ನೋಡ್ಬೇಡಿ; ಬಾಯ್ಕಟ್‌ಗೆ ಉತ್ತರಿಸಿದ ಆಲಿಯಾ ಭಟ್ ಸಖತ್ ಟ್ರೋಲ್

ಅದೇ ರೀತಿ, ರಣಬೀರ್ ಕಪೂರ್ ಕೂಡ ತಮ್ಮ ತೆಲುಗು ಮಾತನಾಡುವ ಕೌಶಲ್ಯವನ್ನು ಪ್ರದರ್ಶಿಸಿದಾಗ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ತೆಲುಗಿನಲ್ಲಿ ಮಾತನಾಡಿದ ಅವರು, ತೆಲುಗು ಪ್ರೇಕ್ಷಕರು (Viewers) ಯಾವಾಗಲೂ ಒಳ್ಳೆಯ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾರೆ. ಬ್ರಹ್ಮಾಸ್ತ್ರ ನನಗೆ ಮತ್ತು ನನ್ನ ತಂಡಕ್ಕೆ ಒಳ್ಳೆಯ ಸಿನಿಮಾಗಳಲ್ಲಿ ಒಂದಾಗಿದೆ. ಅಲ್ಲದೆ, ಬ್ರಹ್ಮಾಸ್ತ್ರ ನಮ್ಮ ಎಲ್ಲಾ ವೃತ್ತಿಜೀವನದ ದೊಡ್ಡ ಚಿತ್ರವಾಗಿದೆ. ಇಲ್ಲಿಯವರೆಗೂ ಬೆಂಬಲ ನೀಡಿದ ತೆಲುಗು ಪ್ರೇಕ್ಷಕರಿಗೆ ನಾನು ಆಭಾರಿಯಾಗಿದ್ದೇನೆ. ಬ್ರಹ್ಮಾಸ್ತ್ರ ಭಾಗ 2 ರ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಾನು ಮತ್ತೆ ಇಲ್ಲಿಗೆ ಬಂದಾಗ ನಾನು ಉತ್ತಮ ತೆಲುಗಿನಲ್ಲಿ ಮಾತನಾಡುತ್ತೇನೆ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು (Thanks) ಎಂದು ತಿಳಿಸಿದ್ದಾರೆ.

ಅಯನ್ ಮುಖರ್ಜಿ ಅವರ ನೇತೃತ್ವದಲ್ಲಿ ಬ್ರಹ್ಮಾಸ್ತ್ರ ಮುಂದಿನ ವಾರ ಸೆಪ್ಟೆಂಬರ್ 9 ರಂದು ಥಿಯೇಟರ್ ಬಿಡುಗಡೆಗೆ ಸಿದ್ಧವಾಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೊರತುಪಡಿಸಿ, ಈ ಚಿತ್ರದಲ್ಲಿ ನಟರಾದ ಅಮಿತಾಬ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಪ್ಪಾದ ಹಳೆ ಬೆಳ್ಳಿ ಆಭರಣಗಳನ್ನು ಹೊಸದರಂತೆ ಮಾಡುವ ಟಿಪ್ಸ್
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ