
ರಷ್ಯನ್ ಮಹಿಳೆಯರ ಸೌಂದರ್ಯಕ್ಕೆ ಸಾಟಿಯಿಲ್ಲ. ರಷ್ಯನ್ ಮಹಿಳೆಯರ ಸೌಂದರ್ಯಕ್ಕೆ ಎಲ್ಲರೂ ಬೆರಗಾಗುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಸೌಂದರ್ಯವನ್ನು ಒಂದು ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ. ವಿಶ್ವದ ಅತ್ಯಂತ ಸುಂದರ ಮಹಿಳೆಯರೆಂದರೆ ರಷ್ಯನ್ ಮಹಿಳೆಯರೇ ಆಗಿದ್ದಾರೆ. ಸಿನಿಮಾ ನಟಿಯರು ಮಾತ್ರವಲ್ಲ, ಅಲ್ಲಿನ ಬಹುತೇಕ ಎಲ್ಲ ಮಹಿಳೆಯರೂ ಅಪರೂಪದ ಅನುಪಮ ಸೌಂದರ್ಯ ಹೊಂದಿರುತ್ತಾರೆ. ಚಿಕ್ಕಂದಿನಲ್ಲಿ ರಷ್ಯನ್ ಸರ್ಕಸ್ ನೋಡಿದ್ದರೆ ಅಲ್ಲಿನ ಹೆಣ್ಣುಮಕ್ಕಳು ಅದೆಷ್ಟು ಸೌಂದರ್ಯವತಿಯರಾಗಿದ್ದರು ಎನ್ನುವುದು ಇನ್ನೂ ಚಿತ್ತಪಟಲದಲ್ಲಿ ಅಚ್ಚೊತ್ತಿರುತ್ತದೆ. ಅವರ ಚರ್ಮ ಸಾಕಷ್ಟು ಕ್ಲಿಯರ್ ಆಗಿರುತ್ತದೆ. ನೋಟ ಚುರುಕಾಗಿರುತ್ತದೆ, ಎತ್ತರದಲ್ಲೂ ಚೆನ್ನಾಗಿರುತ್ತಾರೆ ಹಾಗೂ ಕೂದಲು ಸಹ ಹೊಳಪಿನಿಂದ ಕೂಡಿರುತ್ತದೆ. ಈ ಎಲ್ಲ ಕಾರಣಗಳಿಂದ ಅವರನ್ನು ಸೌಂದರ್ಯದ ಪ್ರತೀಕವನ್ನಾಗಿ ನೋಡಲಾಗುತ್ತದೆ. ಅದಕ್ಕಾಗಿ, ಅವರೇನೋ ಮ್ಯಾಜಿಕ್ ಮಾಡುವುದಿಲ್ಲ. ಬದಲಿಗೆ, ತಮ್ಮ ಚರ್ಮ ಮತ್ತು ಕೂದಲ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಸ್ನಾನ, ಬ್ರಷ್ ಮಾಡುವುದರಿಂದ ಹಿಡಿದು ದೈನಂದಿನ ಕೆಲಸಕಾರ್ಯಗಳಲ್ಲಿ ಶ್ರದ್ಧೆ ತೋರುತ್ತಾರೆ. ಸೌಂದರ್ಯವನ್ನು ಮೆಂಟೇನ್ ಮಾಡುವುದು ಸುಲಭದ ಕಾರ್ಯವಲ್ಲ, ಅದಕ್ಕೊಂದು ಬದ್ಧತೆ ಬೇಕಾಗುತ್ತದೆ. ಅದನ್ನವರು ಅತೀವ ಶಿಸ್ತಿನಿಂದ ಪಾಲನೆ ಮಾಡುತ್ತಾರೆ.
• ಕೂದಲನ್ನು (Hair) ಗಾಳಿಗೆ (Air) ಒಣಗಿಸುವುದು (Dry)
ಪ್ರಾಕೃತಿಕ (Natural) ರೂಪದಲ್ಲಿ ಕೂದಲನ್ನು ಗಾಳಿಗೆ ಒಣಗಿಸಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಬೇರ್ಯಾವುದೇ ಸಾಧನ ಬಳಕೆ ಮಾಡುವುದಿಲ್ಲ. ಉದ್ದದ (Long) ಕೂದಲಿಗಾಗಿ ಚಿಕ್ಕಂದಿನಿಂದಲೇ ಹಲವಾರು ಗಿಡಮೂಲಿಕೆಗಳ (Medicine) ಬಳಕೆ ಮಾಡುತ್ತಾರೆ.
ತಲೆ ಕೂದಲ ಬಿಟ್ಹಾಕಿ, ಗಡ್ಡ, ಮೀಸೆಯೂ ಉದುರುತ್ತಾ? ಏನ್ಮಾಡಬಹುದು?
• ಕೂದಲ ಸೌಂದರ್ಯಕ್ಕೆ ಮನೆಯಲ್ಲೇ ಮಾಸ್ಕ್ (Mask)
ರಷ್ಯನ್ ಮಹಿಳೆಯರ (Russian Woman) ಕೂದಲು ರೇಷಿಮೆಯಂತೆ (Silk) ನುಣುಪಾಗಿರುತ್ತದೆ. ಹಾಗೂ ಚಿನ್ನದ (Gold) ಬಣ್ಣದಲ್ಲಿರುತ್ತದೆ. ಅದನ್ನು ಕಾಪಾಡಿಕೊಳ್ಳಲು ಅವರು ಮನೆಯಲ್ಲೇ ಮಾಸ್ಕ್ ಸಿದ್ಧಪಡಿಸಿಕೊಳ್ಳುತ್ತಾರೆ. ಬಾಲ್ಯದಿಂದಲೂ (Childhood) ಮನೆಯಲ್ಲೇ ತಯಾರಿಸಿದ ಲೋಷನ್ ಬಳಕೆ ಮಾಡುವುದರಿಂದ ಅವರ ಕೂದಲು ರಾಸಾಯನಿಕಮುಕ್ತವಾಗಿರುತ್ತದೆ.
• ಐಸ್ ಕ್ಯೂಬ್ (Ice Cube) ಮತ್ತು ಜೇಡ್ ರೋಲರ್ (Jade Roller) ಬಳಕೆ
ರಷ್ಯಾದ ಮಹಾರಾಣಿ (Queen) ಕ್ಯಾಥರಿನ್ ದ ಗ್ರೇಟ್ ಕೂಡ ಮುಖದ ಚರ್ಮದ (Skin) ಆರೋಗ್ಯಕ್ಕಾಗಿ ದಿನವೂ ಬೆಳಗ್ಗೆ ಐಸ್ ಕ್ಯೂಬ್ ಗಳನ್ನು ಇರಿಸಿಕೊಳ್ಳುತ್ತಿದ್ದಳು ಎಂದು ಹೇಳಲಾಗುತ್ತದೆ. ಹಾಗೆಯೇ, ಬಹುತೇಕ ರಷ್ಯನ್ ಮಹಿಳೆಯರು ಮುಖಕ್ಕೆ ಐಸ್ ಕ್ಯೂಬ್ ಇಟ್ಟುಕೊಳ್ಳುತ್ತಾರೆ. ಹಾಗೂ ಜೇಡ್ ರೋಲರ್ ಬಳಕೆ ಮಾಡುತ್ತಾರೆ. ಬಟ್ಟೆಯಲ್ಲಿ ಐಸ್ ಸುತ್ತಿಕೊಂಡು ಅದನ್ನು ಮುಖದ (Face) ಮೇಲೆ ನಿಧಾನವಾಗಿ ರಬ್ ಮಾಡುತ್ತಾರೆ.
• ಹಾಲಿನ ಕ್ಲೆನ್ಸರ್ (Milk Clenser)
ಹಾಲಿನಿಂದ ತಯಾರಿಸಿದ ಕ್ಲೆನ್ಸರ್ ಅನ್ನು ಮುಖಕ್ಕೆ ಬಳಕೆ ಮಾಡುವುದು ಅಲ್ಲಿನ ಸಾಮಾನ್ಯ ಸಂಪ್ರದಾಯ. ಚಳಿಗಾಲದಲ್ಲಿ ರಷ್ಯಾದಲ್ಲಿ ವಿಪರೀತ ಚಳಿ (Cold) ಇರುತ್ತದೆ. ಈ ಸಮಯದಲ್ಲಿ ಚರ್ಮ ಬಿರುಸಾಗುತ್ತದೆ. ಅದನ್ನು ತಡೆಯಲು ಹಾಲಿನಿಂದ ಮಾಡಿದ ಕ್ಲೆನ್ಸರ್ ಅನ್ನು ಮುಖಕ್ಕೆ ಬಳಕೆ ಮಾಡುತ್ತಾರೆ. ಬೇರೆ ಯಾವುದೇ ಕ್ಲೆನ್ಸರ್ ಅನ್ನು ಅವರು ಬಳಸುವುದಿಲ್ಲ. ರಾಸಾಯನಿಕಯುಕ್ತ ಕ್ಲೆನ್ಸರ್ ಗಳಿಂದ ಮುಖದ ಚರ್ಮ ಹಾಳಾಗುತ್ತದೆ.
• ನಿಯಮಿತವಾಗಿ ಹಬೆ (Steam) ತೆಗೆದುಕೊಳ್ಳುವುದು
ಭಾರತದಲ್ಲಿ ದಿನವೂ ಸ್ನಾನ (Bath) ಮಾಡುವುದು ಪದ್ಧತಿ. ಆದರೆ, ರಷ್ಯಾದಲ್ಲಿ ಬಹಳಷ್ಟು ಮಹಿಳೆಯರು ದಿನವೂ ಸ್ನಾನ ಮಾಡುವ ಬದಲು ಹಬೆ ತೆಗೆದುಕೊಳ್ಳುತ್ತಾರೆ. ಇಡೀ ದೇಹಕ್ಕೆ ಹಬೆಯ ಸ್ನಾನ ಮಾಡಿಸುತ್ತಾರೆ. ಇದರಿಂದ ದೇಹದಿಂದ ವಿಷಯುಕ್ತ (Toxic) ಪದಾರ್ಥ ಹೊರಗೆ ಹೋಗುತ್ತದೆ. ಚರ್ಮ ಮೃದುವಾಗುತ್ತದೆ. ಹೊಳಪು ಬರುತ್ತದೆ.
ಶ್ರೀಕೃಷ್ಣನ ಮೇಲಿನ ಪ್ರೀತಿ ರಷ್ಯನ್ ಹುಡುಗಿ ಭಾರತದ ಸೊಸೆಯಾದಳು!
• ನೈಸರ್ಗಿಕ ಫೇಸ್ ಮಾಸ್ಕ್ (Facemask)
ನಮ್ಮಲ್ಲಿ ಬ್ಯೂಟಿಪಾರ್ಲರ್ ಗಳಲ್ಲಿ ರಾಸಾಯನಿಕ (Chemical) ಫೇಸ್ ಮಾಸ್ಕ್ ಬಳಕೆ ಮಾಡುವುದು ಹೆಚ್ಚು. ಹಾಗೂ ಅದರ ಬಗ್ಗೆ ಗ್ರಾಹಕ ಮಹಿಳೆಯರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕಡಿಮೆ ವೆಚ್ಚದಲ್ಲಿ ತತ್ಕಾಲಕ್ಕೆ ಮುಖದ ಅಂದ ಹೆಚ್ಚಿಸಿಕೊಳ್ಳುವುದಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಆದರೆ, ರಷ್ಯಾ ಮಹಿಳೆಯರು ಅಡುಗೆ ಮನೆಯ ಪದಾರ್ಥಗಳನ್ನೇ ಇಂದಿಗೂ ಬಳಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.