ಕಾಂಜೀವರಂ ಸೀರೆಯಲ್ಲ... ಕಾಂಜೀವರಂ ಶೂಸ್! ಪಾಪ್​ ಗಾಯಕಿ ಉಷಾ ಉತ್ತಪ 30 ವರ್ಷಗಳ ಸಂಶೋಧನೆ ಇದು!

By Suchethana D  |  First Published Jan 4, 2025, 8:57 PM IST

ಕಾಂಜೀವರಂ ಸೀರೆ ಬಾರ್ಡರ್​ ತೆಗೆದು ಶೂಸ್​! ಪಾಪ್​ ಗಾಯಕಿ ಉಷಾ ಉತ್ತಪ 30 ವರ್ಷಗಳ ಸಂಶೋಧನೆ ಕಥೆ ಕೇಳಿ!
 


ಕಾಂಜೀವರಂ ರೇಷ್ಮೆ ಸೀರೆ, ಹಣೆಯ ಮೇಲೆ ದೊಡ್ಡ ಬಿಂದಿ, ಅದಕ್ಕೊಂದಿಷ್ಟು ಶೃಂಗಾರ, ಕೈಯಲ್ಲಿ ಮೈಕ್‌ ಹಿಡಿದು ನಿಂತರೆ ಸಾಕು, ಎಂಥವರೇ ಆದರೂ ಹೆಜ್ಜೆ ಹಾಕದೇ ಇರಲಾರರು, ಅಂಥ ಗಾಯನದ ಮೋಡಿ ಮಾಡುತ್ತಿರುವವರೇ ಉಷಾ ಉತ್ತಪ್ಪ.  ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಪಾಪ್‌ ತಾರೆ ಉಷಾ ಉತ್ತಪ್​ ಅವರ ಈ ವಿಭಿನ್ನ ನೋಟ ನೋಡಿದವರಿಗೆ  ಬಹುಶಃ ಅವರ ಶೂಸ್‌ ಬಗ್ಗೆ ಅಷ್ಟೊಂದು ಗಮನ ಹೋಗಿರಲಿಕ್ಕಿಲ್ಲ. ಆದರೆ ಕಾಂಜೀವರಂ ಸೀರೆಗೆ ಕಾಂಜೀವರಂ ಶೂಸ್‌ ಧರಿಸುತ್ತಿದ್ದಾರೆ ಉಷಾ. ಕಳೆದ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ, ಸೀರೆಗೆ ಮ್ಯಾಚಿಂಗ್‌ ಆಗಿರುವಂಥ ಕಾಂಜೀವರಂ ಸ್ನೀಕರ್‌ ಧರಿಸುವ ಅವರ ಕಥೆಯೇ ಕುತೂಹಲವಾಗಿದೆ.

ಸುಮಾರು ಐವತ್ತು ವರ್ಷಗಳಿಂದ ಗಾಯಕಿಯಾಗಿರುವ ಉಷಾ ಅವರು ಈ ಮೊದಲು ಎಲ್ಲರಂತೆ ಸೀರೆಗೆ ಹೈಹೀಲ್ಸ್‌ ಧರಿಸುತ್ತಿದ್ದರಂತೆ. ಆದರೆ ಅದು ಅವರಿಗೆ ನೋವು ಕೊಡಲು ಆರಂಭಿಸಿದಾಗ ಮಗಳು ಸ್ನೀಕರ್‌ ಯಾಕೆ ಧರಿಸಬಾರದು ಎಂದು ಹೇಳಿದರಂತೆ.  "ಅಮ್ಮಾ, ನೀವು ಬೆಳಿಗ್ಗೆ ಸ್ನೀಕರ್ಸ್ ಧರಿಸಬಹುದಾದರೆ, ಸಂಜೆಯೂ ಏಕೆ ಧರಿಸಬಾರದು? ಎಂದು ಕೇಳಿದಳು. ಅದು ನನಗೂ ಸರಿ ಎನ್ನಿಸಿತು. ಆದರೆ ಸೀರೆಗೆ ಸ್ನೀಕರ್ಸ್ ಅಷ್ಟು ಮ್ಯಾಚ್‌ ಆಗಲ್ಲ ಎಂದುಕೊಂಡೆ. ಆದ್ದರಿಂದ ಅದಕ್ಕೊಂದು ರೂಪು ಕೊಡಲು ಬಯಸಿದೆ" ಎಂದಿರುವ ಉಷಾ ಅವರು, ತಮ್ಮ ಕಾಂಜೀವರಂ ಸೀರೆಗೆ ಮ್ಯಾಚ್‌ ಆಗುವ ರೀತಿಯ ಬಟ್ಟೆಯನ್ನು ತಂದು ಅದನ್ನು ಶೂಸ್‌ಗೆ ಅಳವಡಿಸುತ್ತಿದ್ದಾರೆ!

Tap to resize

Latest Videos

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

 ಹಳೆಯ ಕಾಂಜೀವರಂ ಸೀರೆಗಳ ಬಾರ್ಡರ್‌ಗಳನ್ನು ಶೂಸ್‌ಗಳಿಗೆ ಅಂಟಿಸುತ್ತಾರೆ. ಇದಕ್ಕಾಗಿ ಇಬ್ಬರು  ಬಿಹಾರಿ ಚಮ್ಮಾರರಾದ ಸುಶೀಲ್ ಮತ್ತು ಮಿಸ್ರಿ ದಾಸ್ ತಮ್ಮ ಜೊತೆ ಇದ್ದಾರೆ. ಅವರಿಗೆ ಸೀರೆಗಳ ಬಾರ್ಡರ್‌ ಕೊಟ್ಟು ಶೂ‌ಸ್‌ ಕೊಟ್ಟರೆ, ಅದನ್ನು ತುಂಬಾ ಸುಂದರವಾಗಿ ತಯಾರು ಮಾಡಿ ಕೊಡುತ್ತಾರೆ.  ಬ್ರೋಕೇಡ್ ಬಾರ್ಡರ್‌ಗಳಿಂದ ಅಲಂಕರಿಸಲ್ಪಟ್ಟ ಮ್ಯಾಚಿಂಗ್ ಸ್ನೀಕರ್‌ಗಳೊಂದಿಗೆ ಸೀರೆಗಳನ್ನು ಜೋಡಿಸುವ ಹೊಸ ಟ್ರೆಂಡ್ ಇದರಿಂದಲೇ ಶುರುವಾಗಿದೆ ಎಂದಿದ್ದಾರೆ ಉಷಾ.
 
ರಾಷ್ಟ್ರಪತಿಗಳ ಬಳಿಯೂ ಈ ಹೊಸ ಟ್ರೆಂಡಿಂಗ್‌ ಸ್ನೀಕರ್ಸ್ ಕೊಂಡೊಯ್ದಿರುವುದಾಗಿ ತಿಳಿಸಿರುವ ಉಷಾ ಅವರು ನೀವು ಎಲ್ಲಿಯೇ ಆದರೂ ಅದರಲ್ಲಿಯೂ ಹೆಚ್ಚಾಗಿ ವಿಮಾನ ನಿಲ್ದಾಣಗಳಲ್ಲಿ ಯಾರಾದರೂ ಕಾಂಜೀವರಂ ಸ್ನೀಕರ್ಸ್ ಧರಿಸಿದ್ದರೆ, ಅದು ಶುರುವಾಗಿದ್ದು ತಮ್ಮಿಂದಲೇ ಎಂದು ಹೇಳಿದ್ದಾರೆ.

ಪುಟ್ಟಕ್ಕನ ಮಕ್ಕಳು ಸಹನಾ, ಡಾನ್ಸ್​ ಕರ್ನಾಟಕ ಡಾನ್ಸ್​ ಷೋದಿಂದ ಹೊರ ಬಂದ ಕಾರಣವೇ ಬೇರೆ! ಸತ್ಯ ತಿಳಿಸಿದ ನಟಿ

 
 
 
 
 
 
 
 
 
 
 
 
 
 
 

A post shared by Red FM (@redfmindia)

click me!