ಈ ವಿಷಯ ತಿಳಿದ್ರೆ ದುಪ್ಪಟ್ಟಾ ಮೇಲಿನ ಹೆಣ್ಮಕ್ಕಳ ಪ್ರೀತಿ ದುಪ್ಪಟ್ಟಾಗೋದು ಪಕ್ಕಾ!

By Suvarna News  |  First Published Jun 17, 2020, 5:09 PM IST

ಹೆಣ್ಮಕ್ಕಳ ಮನಸ್ಸು ಕದ್ದು,ಅವರ ವಾರ್ಡ್‍ರೋಪ್‍ನಲ್ಲೊಂದು ಜಾಗ ಅತಿಕ್ರಮಿಸಿಕೊಳ್ಳುವ ದುಪ್ಪಟ್ಟಾಗಳಲ್ಲೂ ವೈವಿಧ್ಯತೆಯಿದೆ. ತಾವು ಜನ್ಮ ತಾಳಿರುವ ಪ್ರದೇಶ, ರಾಜ್ಯಗಳೊಂದಿಗೆ ತಳುಕು ಹಾಕಿಕೊಂಡಿರುವ ಪಕ್ಕಾ ಸ್ವದೇಶಿ ದುಪ್ಪಟ್ಟಾಗಳ ಬಗ್ಗೆ ನಿಮ್ಗೆಷ್ಟು ಗೊತ್ತು?


ದುಪ್ಪಟ್ಟಾದ ಅಂದ ನೋಡೀನೆ ಸಲ್ವಾರ್ ಕಮೀಜ್ ಖರೀದಿಸುವ ಹೆಣ್ಮಕ್ಕಳು ಹಲವರಿದ್ದಾರೆ. ಮಾನ ಮುಚ್ಚುವ ದುಪ್ಪಟ್ಟಾದ ಮೇಲೆ ತಾಯಿಯಿಂದ ಹಿಡಿದು ಮಗಳ ತನಕ, ಸಾಂಪ್ರದಾಯಿಕ ಹುಡುಗಿಯಿಂದ ಹಿಡಿದು ಮಾರ್ಡನ್ ಗರ್ಲ್ ತನಕ ಶ್ರೀಮಂತ ಬಡವ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಲವು ತುಸು ಜಾಸ್ತೀನೆ. ಸಾಂಪ್ರದಾಯಿಕ ಹುಡುಗಿಯ ಎದೆ ಮುಚ್ಚುವ ದುಪ್ಪಟ್ಟಾ ಮಾರ್ಡನ್ ಹುಡುಗಿಯ ಕುತ್ತಿಗೆಗೆ ಜೋತು ಬಿದ್ದಿರಬಹುದು. ಹೀಗೆ ದುಪ್ಪಟ್ಟಾ ಬಳಕೆ ಫ್ಯಾಷನ್ ಕಾಲಕ್ಕೆ ತಕ್ಕಂತೆ, ಅವರವರ ಮನೋಭಾವಕ್ಕೆ ಒಗ್ಗುವಂತೆ ಬದಲಾದ್ರೂ ಬೇಡಿಕೆ ಮಾತ್ರ ಕುಂದಿಲ್ಲ. ಭಾರತದಲ್ಲಂತೂ ಆಯಾ ಪ್ರದೇಶ, ಸಂಸ್ಕøತಿಗೆ ತಕ್ಕಂತೆ ದುಪ್ಪಟ್ಟಾದಲ್ಲೂ ವಿಭಿನ್ನತೆಯನ್ನು ಕಾಣಬಹುದು. ಅದ್ರಲ್ಲೂ ಕರಕುಶಲಕರ್ಮಿಗಳ ಕೈಯಲ್ಲಿ ಸಿದ್ಧಗೊಳ್ಳುವ ದುಪ್ಪಟ್ಟಾಗಳಂತೂ ಹೆಣ್ಮಕ್ಕಳ ಮನಸ್ಸು ಕದ್ದು, ಅವರ ವಾರ್ಡ್‍ರೋಪ್‍ನಲ್ಲೊಂದು ಜಾಗ ಅತಿಕ್ರಮಿಸಿಕೊಳ್ಳದೆ ಬಿಡವು. ವಿಶೇಷ ಹೆಸರುಗಳಿಂದ ಕರೆಯಲ್ಪಡುವ ಹಾಗೂ ಸಿದ್ಧಗೊಳ್ಳುವ ರಾಜ್ಯಗಳೊಂದಿಗೆ ತಳುಕು ಹಾಕಿಕೊಂಡಿರುವ ಇಂಥ ಆಕರ್ಷಕ ದುಪ್ಪಟ್ಟಾಗಳ ಬಗ್ಗೆ ನಿಮ್ಗೆಷ್ಟು ಗೊತ್ತು? ಇವು ನಿಮ್ಮ ಕಲೆಕ್ಷನ್‍ನಲ್ಲೂ ಇವೆಯಾ ಎಂದು ಚೆಕ್ ಮಾಡ್ಕೊಳ್ಳಿ.

ಮನೆಯಲ್ಲಿ ಈ ವಸ್ತುಗಳಿದ್ರೆ ಸಾಕು, ಪೆಡಿಕ್ಯೂರ್‌ಗೆ ಪಾರ್ಲರ್‌ಗೆ ಹೋಗಬೇಕಾಗಿಲ್ಲ!

Latest Videos

undefined

ಭಲ್ಲೆ ಭಲ್ಲೆ ಫುಲ್ಕರಿ
ಕಲಾತ್ಮಕತೆ ಇಷ್ಟಪಡೋರ ದುಪ್ಪಟ್ಟಾ ಕಲೆಕ್ಷನ್‍ನಲ್ಲಿ ಫುಲ್ಕರಿ ಇದ್ದೇ ಇರುತ್ತೆ. ಪಂಜಾಬ್ ಮೂಲದ ಈ ದುಪ್ಪಟ್ಟಾದ ಪ್ರಮುಖ ಆಕರ್ಷಣೆಯೇ ಅದರ ಮೇಲಿರುವ ಕಸೂತಿ. ಶುಭ್ರ, ಗಾಢ ವರ್ಣಗಳ ಸಮ್ಮಿಶ್ರಣದ ಬಟ್ಟೆಯ ಮೇಲೆ ಕೈಯಲ್ಲೇ ಬಿಡಿಸಿರುವ ರೇಖಾಚಿತ್ರಗಳ ಜೊತೆ ಅಲ್ಲಲ್ಲಿ ಮಿನುಗುವ ಮಿರರ್ ವರ್ಕ್‍ಗಳು ದುಪ್ಪಟ್ಟಾದ ಮೆರುಗು ಹೆಚ್ಚಿಸುತ್ತವೆ. ಗಾಢ ವರ್ಣ ಹಾಗೂ ಮಿರರ್ ವರ್ಕ್ ಎರಡೂ ಇರುವ ಕಾರಣ ಈ ದುಪ್ಪಟ್ಟಾ ಹೆವಿ ಲುಕ್ ನೀಡೋದ್ರಿಂದ ಬಿಳಿ, ಕಪ್ಪು ಸೇರಿದಂತೆ ನ್ಯೂಟ್ರಲ್ ಕಲರ್‍ನ ಪ್ಲೇನ್ ಸಲ್ವಾರ್ ಕಮೀಜ್‍ಗೆ ಹೆಚ್ಚು ಸೂಟ್ ಆಗುತ್ತೆ. ಪಂಜಾಬಿ ಮಹಿಳೆ ಅಂದ ತಕ್ಷಣ ಮೊದಲಿಗೆ ಕಣ್ಮುಂದೆ ಬರೋದೆ ಸಲ್ವಾರ್ ಕಮೀಜ್ ಹಾಗೂ ಆಕರ್ಷಕ ದುಪ್ಪಟ್ಟಾ. ನೀವು ಕೂಡ ಕಸೂತಿ ಇಷ್ಟಪಡೋರಾದ್ರೆ,ರಂಗುರಂಗಿನ ದುಪ್ಪಟ್ಟಾ ಆಯ್ಕೆ ಮಾಡೋರಾದ್ರೆ ಫುಲ್ಕರಿ ನಿಮಗೆ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ.

ಚೆಂದದ ಚಂದೇರಿ  
ನೀವು ಧರಿಸಿರುವ ಕಾಟನ್ ಸಲ್ವಾರ್ ಕಮೀಜ್‍ನತ್ತ ಎಲ್ಲರ ದೃಷ್ಟಿ ಬೀಳಬೇಕು ಅಂದ್ರೆ ಅದಕ್ಕೆ ಮ್ಯಾಚ್ ಆಗುವ ಚಂದೇರಿ ದುಪ್ಪಟ್ಟಾ ಧರಿಸಬೇಕು. ಮಧ್ಯಪ್ರದೇಶ ಮೂಲದ ಚಂದೇರಿ ದುಪ್ಪಟ್ಟಾ ಎಂಬ್ರಾಯಿಡರಿ ಹಾಗೂ ಝರಿ ವರ್ಕ್ ಕಾರಣಕ್ಕೆ ಫ್ಯಾಷನ್ ಪ್ರಿಯರ ಮನಗೆದ್ದಿದೆ. ಕಾಟನ್ ಸಿಲ್ಕ್, ಫ್ಯೂರ್ ಸಿಲ್ಕ್ ಹಾಗೂ ಚಂದೇರಿ ಕಾಟನ್ ಬಟ್ಟೆಗಳ ಮೇಲೆ ಮಾತ್ರ ಈ ವರ್ಕ್‍ಗಳನ್ನು ಮಾಡಲು ಸಾಧ್ಯವಿದೆ. ಹೀಗಾಗಿ ಈ ಮೂರು ವಿಧದ ಫ್ಯಾಬ್ರಿಕ್‍ಗಳಲ್ಲಿ ಮತ್ರ ಚಂದೇರಿ ದುಪ್ಪಟ್ಟಾಗಳು ಲಭಿಸುತ್ತವೆ. ಪ್ಲೇನ್ ಅಥವಾ ಜಾಸ್ತಿ ವರ್ಕ್ ಇಲ್ಲದ ಚೂಡಿದಾರ ಹಾಗೂ ಕುರ್ತಾಗಳಿಗೆ ಇವು ಮ್ಯಾಚ್ ಆಗುತ್ತವೆ.

ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ?

ಗ್ರ್ಯಾಂಡ್ ಲುಕ್‍ನ ಬನಾರಸಿ ಸಿಲ್ಕ್ 
ಬನಾರಸಿ ಸಿಲ್ಕ್ ಸೀರೆಯಷ್ಟೇ ಈ ದುಪ್ಪಟ್ಟಾನೂ ಫೇಮಸ್. ಅಮ್ಮ ಹಾಗೂ ಮಗಳು ಇಬ್ಬರೂ ಇಷ್ಟಪಡೋ ಬನಾರಸಿ ಸಿಲ್ಕ್ ದುಪ್ಪಟ್ಟಾ ಝರಿ ವರ್ಕ್ ಹಾಗೂ ಎಂಬ್ರಾಯಿಡರಿ ಹೊಂದಿರುತ್ತೆ. ಬನಾರಸಿ ಸಿಲ್ಕ್ ದುಪ್ಪಟ್ಟಾ ತಿಳಿ ಹಾಗೂ ನ್ಯುಟ್ರಲ್ ಬಣ್ಣಗಳಲ್ಲಿ ಲಭಿಸುತ್ತವೆ. ಸಂದರ್ಭಕ್ಕನುಸಾರ ಸೂಕ್ತ ಬಣ್ಣದ ಬನಾರಸಿ ಸಿಲ್ಕ್ ದುಪ್ಪಟ್ಟಾ ಆರಿಸಿಕೊಳ್ಳಿ. ಮದುವೆ ಹಾಗೂ ಶುಭ ಸಮಾರಂಭಗಳಿಗೆ ಕೆಂಪು, ನೀಲಿ, ಹಸಿರು ಸೇರಿದಂತೆ ಗಾಢ ಬಣ್ಣದ ಡ್ರೆಸ್‍ಗಳನ್ನು ಧರಿಸೋದ್ರಿಂದ ಇಂಥದ್ದೇ ವರ್ಣದ ಬನಾರಸಿ ಸಿಲ್ಕ್ ದುಪ್ಪಟ್ಟಾಗಳನ್ನು ಆಯ್ಕೆ ಮಾಡಬಹುದು.ಇನ್ನು ಆಫೀಸ್‍ಗೆ, ಕಾಲೇಜ್‍ಗೆ ಧರಿಸಲು ಕಪ್ಪು ಅಥವಾ ತಿಳಿ ಬಣ್ಣದ ದುಪ್ಪಟ್ಟಾಗಳು ಸೂಟ್ ಆಗುತ್ತವೆ.

ಮಧುಮಗಳ ನೆಚ್ಚಿನ ಗೊಟಾ ಪಟ್ಟಿ
ಕೆಲವರಿಗೆ ಎಂಬ್ರಾಯಿಡರಿ ಅಥವಾ ಹೆವಿ ಝರಿ ವರ್ಕ್ ಇರುವ ದುಪ್ಪಟ್ಟಾ ಇಷ್ಟವಾಗೋದಿಲ್ಲ.ಇಂಥವರು ಗೊಟಾ ಪಟ್ಟಿ ದುಪ್ಪಟ್ಟಾ ಆರಿಸಿಕೊಳ್ಳಬಹುದು.ಝರಿ ರಿಬ್ಬನ್ ಚೂರುಗಳನ್ನು ಈ ದುಪ್ಪಟ್ಟಾದ ಮೈಯಲ್ಲಿ ಅಥವಾ ಎರಡೂ ಬದಿಗಳಲ್ಲಿ ನೇಯ್ಗೆ ಮಾಡಲಾಗಿರುತ್ತದೆ. ರಾಜಸ್ತಾನದಲ್ಲಿ ಗೊಟಾ ಪಟ್ಟಿ ದುಪ್ಪಟ್ಟಾಗಳು ಸಿದ್ಧಗೊಳ್ಳುತ್ತವೆ. ಹೆಚ್ಚಾಗಿ ಮಧುಮಗಳು ಧರಿಸುವ ಲೆಹಂಗಾಗಳಲ್ಲಿ ಗೋಟಾ ಪಟ್ಟಿ ವರ್ಕ್ ಕಾಣಸಿಗುತ್ತದೆ. ಇಂಥ ದುಪ್ಪಟ್ಟಾಗಳನ್ನು ಮದುವೆಯಂತಹ ಕಾರ್ಯಕ್ರಮಗಳಿಗೂ ಧರಿಸಬಹುದು, ಹಾಗೆಯೇ ಆಫೀಸ್, ಕಾಲೇಜ್ ಸೇರಿದಂತೆ ನಿತ್ಯದ ಬಳಕೆಗೂ ಬಳಸಬಹುದು.

ಮಾಸ್ಕ್ ಮಹಿಮೆ; ಲಿಪ್‌ಸ್ಟಿಕ್‌ಗೆ ಬೈಬೈ, ಕಾಜಲ್‌ಗೆ ಜೈಜೈ

ಕಲರ್‍ಫುಲ್ ಕಲಂಕಾರಿ
ಆಂಧ್ರಪ್ರದೇಶ ಮೂಲದ ಕಲಂಕಾರಿ ದುಪ್ಪಟ್ಟಾ ಸಾಮಾನ್ಯವಾಗಿ ಎಲ್ಲ ಮಹಿಳೆಯರ ಕಲೆಕ್ಷನ್‍ನಲ್ಲಿರುತ್ತೆ. ಈ ಮಾದರಿಯಲ್ಲಿ ಡೈಯಿಂಗ್, ಬ್ಲೀಚಿಂಗ್, ಹ್ಯಾಂಡ್ ಪೇಂಟಿಂಗ್, ಬ್ಲಾಕ್ ಪೇಂಟಿಂಗ್ ಮೂಲಕ ದುಪ್ಪಟ್ಟಾಗಳ ಮೇಲೆ ಡಿಸೈನ್‍ಗಳನ್ನು ಮೂಡಿಸಲಾಗುತ್ತೆ. ಹೂ, ಎಲೆಗಳು, ನವಿಲು ಮುಂತಾದ ಡಿಸೈನ್‍ಗಳು ಕಲಂಕಾರಿ ದುಪ್ಪಟ್ಟಗಳ ಮೇಲಿರುತ್ತೆ. ಪ್ಲೇನ್ ಕುರ್ತಾಗಳಿಗೆ ಇವು ಒಳ್ಳೆಯ ಕಾಂಬಿನೇಷನ್.

click me!