ಇನ್ಸ್ಟಾದಲ್ಲಿ ಪರ್ಫೆಕ್ಟ್ ಕಾಣೋಕೆ ಎಂಥ ಕೆಲಸ ಮಾಡಿಕೊಳ್ತು ಈ ಜೋಡಿ? ಬೇಕಿತ್ತಾ ಇದು ನೀವೇ ಹೇಳಿ

By Suvarna News  |  First Published Mar 14, 2024, 5:00 PM IST

ಸಾಮಾಜಿಕ ಜಾಲತಾಣಗಳು ನಮ್ಮ ಸಮಯ, ಹಣ, ಆರೋಗ್ಯ ಎಲ್ಲವನ್ನೂ ಹಾಳು ಮಾಡ್ತಿವೆ. ಅದ್ರ ಹುಚ್ಚಿಗೆ ಬಿದ್ರೆ ಹೊರಗೆ ಬರೋದು ಕಷ್ಟ. ಅಪರಿಚಿತರ ಮುಂದೆ ಸುಂದರವಾಗಿ ಕಾಣ್ಬೇಕು ಎನ್ನುವ ಇವರ ಬಯಕೆ ಇವರನ್ನು ಪರಿತಪಿಸುವಂತೆ ಮಾಡಿದೆ. 
 


ಸಾಮಾಜಿಕ ಜಾಲತಾಣಗಳು ನಮ್ಮನ್ನು ಆಳ್ತಿವೆ. ನಮ್ಮ ಮುಂದೆ ಮಾತನಾಡಲು ಜನರಿದ್ರೂ ನಾವು ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಿರ್ತೇವೆ. ಪ್ರತಿ ದಿನ ಏನೆಲ್ಲ ಕೆಲಸ ಮಾಡ್ತೇವೆ ಎಂಬುದನ್ನು ಸಾಮಾಜಿಕ ಜಾಲತಾಣ ಬಳಕೆದಾರರ ಮುಂದೆ ಹಂಚಿಕೊಳ್ಳದೆ ಹೋದ್ರೆ ಅನೇಕರಿಗೆ ಸಮಾಧಾನ ಇರೋದಿಲ್ಲ. ಕುಂತಿದ್ದು, ನಿಂತಿದ್ದು, ಮಲಗಿದ್ದು ಪ್ರತಿಯೊಂದನ್ನು ಹಂಚಿಕೊಳ್ಳುವ ಜನರು ಬಳಕೆದಾರರನ್ನು ಮೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ.

ಈ ಸೋಶಿಯಲ್ ಮಿಡಿಯಾ (Social Media) ಗಳು ಮನುಷ್ಯನನ್ನು ಹಾಳು ಮಾಡ್ತಿವೆ. ಮಾನಸಿಕ ಆರೋಗ್ಯ (Health) ದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ. ಇದು ಖಿನ್ನತೆಗೆ ಕಾರಣವಾಗ್ತಿದೆ ಎಂದು ಅನೇಕ ಸಂಶೋಧನೆ (Research) ಸ್ಪಷ್ಟಪಡಿಸಿದೆ. ಇದು ತಿಳಿದ್ರೂ ಜನರು, ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್, ಯುಟ್ಯೂಬ್  ಸೇರಿದಂತೆ ಎಲ್ಲ ಕಡೆ ವಿಡಿಯೋ, ಫೋಟೋ ಹಂಚಿಕೊಂಡು ಪರ್ಫೆಕ್ಟ್ ಕಾಣಿಸಿಕೊಳ್ಳಲು ಬಯಸ್ತಾರೆ.  ಅದಕ್ಕಾಗಿ ಒಂದಿಷ್ಟು ಮೇಕಪ್, ಬ್ಯೂಟಿಪಾರ್ಲರ್ ಚಕ್ಕರ್ ಇದ್ದಿದ್ದೆ. ಮುಖಕ್ಕೆ ಬಣ್ಣ ಬಳಿದುಕೊಂಡು, ಹೊಟ್ಟೆ ಒಳಗೆ ಎಳೆದುಕೊಂಡು ಫಿಟ್ ಆಗಿ ಕಾಣುವವರೂ ಸಾಕಷ್ಟು ಮಂದಿ. ಆದ್ರೆ ಮತ್ತೆಕೆಲವರಿಗೆ ಬ್ಯೂಟಿ ಹಾಗೂ ಸೋಶಿಯಲ್ ಮೀಡಿಯಾ ಹುಚ್ಚು ಎಷ್ಟಿದೆ ಅಂದ್ರೆ ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಅಂಥದ್ದೇ ಕೆಲಸ ಮಾಡಿ ಈಗ ದಂಪತಿ ಪಶ್ಚಾತಾಪಪಡ್ತಿದ್ದಾರೆ.

Tap to resize

Latest Videos

ಹಾಟ್ ಅವತಾರದಲ್ಲಿ ಕಾಣಿಸ್ಕೊಂಡ ಪೂಜಾ ಹೆಗ್ಡೆ, ಲೆಗ್ಸ್ ಕ್ವೀನ್ ಎಂದು ಹೊಗಳಿದ ಫ್ಯಾನ್ಸ್‌,

ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಂಡಾಗ ಜನರು ಮೆಚ್ಚಿಕೊಂಡಿಲ್ಲ, ಲೈಕ್ಸ್ ಸಿಕ್ತಿಲ್ಲ ಎಂದಾಗ ಅದೇನೋ ಬೇಸರ, ತಳಮಳ ಶುರುವಾಗುತ್ತದೆ. ಹೆಚ್ಚು ಲೈಕ್ಸ್ ಸಿಗುವ ಜನರನ್ನು ನೋಡಿ ಒಂದ್ಕಡೆ ಹೊಟ್ಟೆ ಉರಿದ್ರೆ ಮತ್ತೊಂದು ಕಡೆ, ನಮ್ಮ ಸೌಂದರ್ಯವೇ ಲೈಕ್ಸ್ ಕಡಿಮೆ ಸಿಗಲು ಕಾರಣವೇ ಎಂಬ ಖಿನ್ನತೆ ಕಾಡುತ್ತದೆ. ಈ ದಂಪತಿ ಕೂಡ ಅದೇ ರೀತಿ ಆಲೋಚನೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿಪಡೆಯಲು ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಆದ್ರೆ ಅದೇ ಈಗ ನೋವಿನ ವಿಷ್ಯವಾಗಿದೆ.

36 ವರ್ಷದ ಝರಾ ಎಡ್ಗರ್ ಮತ್ತು ಅವರ 39 ವರ್ಷದ ಪತಿ ಐಗೆಲ್ ಪಶ್ಚಾತಾಪಡುತ್ತಿರುವ ದಂಪತಿ. ಝರಾ ಬ್ಯಾಂಕ್ ನಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿರುವ ಉದ್ಯೋಗಿ. ಇನ್ಸ್ಟಾಗ್ರಾಮ್ ನಲ್ಲಿ ಅವರು ಖಾತೆ ಹೊಂದಿದ್ದಾರೆ. ಅಲ್ಲಿ ಮತ್ತಷ್ಟು ಪ್ರಸಿದ್ಧಿಯಾಗುವ ಆಸೆಗೆ ಸರ್ಜರಿಗೆ ಮುಂದಾಗಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿರುವ ತಮ್ಮ ಐಷಾರಾಮಿ ಮನೆಯನ್ನು ಮಾರಾಟ ಮಾಡಿ ಅದ್ರ ಹಣವನ್ನು ಸರ್ಜರಿಗೆ ಬಳಸಿಕೊಂಡಿದ್ದಾರೆ. 

ನವೆಂಬರ್ 2022 ರಲ್ಲಿ ತಮ್ಮ ಮನೆಯನ್ನು ಮಾರಾಟ ಮಾಡಿದರು, ನಂತ್ರ ಶಸ್ತ್ರಚಿಕಿತ್ಸೆಗಾಗಿ ಟರ್ಕಿಗೆ ತೆರಳಿದರು. ಅಲ್ಲಿ ಝರಾ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಹೊಟ್ಟೆ, ಸ್ತನ ಮತ್ತು ಸೊಂಟದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಐಗೆಲ್, ಶಸ್ತ್ರಚಿಕಿತ್ಸೆಯ ಮೂಲಕ ಹಲ್ಲನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. 

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಅನುಪಮಾ ಪರಮೇಶ್ವರನ್‌ ಹಾಟ್‌ ಲುಕ್‌, ಟೆಂಪರೇಚರ್‌ ಹೆಚ್ಚಾಯ್ತು ಎಂದ ಫ್ಯಾನ್ಸ್‌!

ಚಿಕಿತ್ಸೆ ನಂತ್ರ ಕನಸು ಭಗ್ನ : ಝರಾ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತ್ರ ಇನ್ಸ್ಟಾಗ್ರಾಮ್ ನಲ್ಲಿ ಮಿಂಚಬಹುದು ಎಂದುಕೊಂಡಿದ್ದಳು. ಆದ್ರೆ ಎಲ್ಲವೂ ಯಡವಟ್ಟಾಯ್ತು. ಹೊಟ್ಟೆಯಲ್ಲಿ ಲೋಹವಿದ್ದಂತೆ ಭಾಸವಾಗುತ್ತದೆ ಎಂದು ಝರಾ ಹೇಳಿದ್ದಾಳೆ. ಪತಿ ಕೂಡ ಶಸ್ತ್ರಚಿಕಿತ್ಸೆ ನಂತ್ರ ಸಮಸ್ಯೆ ಎದುರಿಸುತ್ತಿದ್ದಾರಂತೆ.

ಸುಂದರವಾಗಿ (Beautiful) ಕಾನ್ಬೇಕು ಎನ್ನುವ ಆಸೆಯಲ್ಲಿ ನಾವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆವು. ಚಿಕಿತ್ಸೆಗೆ ಮುನ್ನ ಅದ್ರ ಬಗ್ಗೆ ಹೆಚ್ಚು ಮಾಹಿತಿ ಪಡೆದಿರಲಿಲ್ಲ. ಚಿಕಿತ್ಸೆ (Treatment) ಬಗ್ಗೆ ಹೆಚ್ಚು ಸಂಶೋಧನೆ (Research) ನಡೆಸಿದ್ದರೆ ನಾವು ಈ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಮೊದಲಿಗಿಂತ ಈಗ ನಮ್ಮ ಸಮಸ್ಯೆ ಹೆಚ್ಚಾಗಿದೆ. ನಮ್ಮ ಹಣ ಹಾಗೂ ನೋಟ ಎರಡನ್ನೂ ನಾವು ಹಾಳು ಮಾಡಿಕೊಂಡಿದ್ದೇವೆ ಎಂದು ಝರಾ, ಇನ್ಸ್ಟಾಗ್ರಾಮ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾಳೆ.    

click me!