ಏರ್ ಸ್ವೈಪ್ ಹೆಸರಿನ ಪರ್ಸ್ ಒಂದನ್ನು ನಾಸಾ ತಯಾರಿಸಿದೆ. ಅದರ ತಯಾರಿಕೆಗೆ ಬಳಸಿದ ವಸ್ತುಗಳು ಕೇವಲ ಎರಡು. ಅದರ ತೂಕ ಹಾಗೂ ಆಕಾರ ಎಲ್ಲರ ಗಮನ ಸೆಳೆದಿದೆ.
ಮಾರುಕಟ್ಟೆಯಲ್ಲಿ ಪರ್ಸ್ ಗಳಿಗೆ ಬರ ಇಲ್ಲ. ನಿಮ್ಮ ಡ್ರೆಸ್ ಗೆ ತಕ್ಕಂತೆ ನೀವು ಪರ್ಸ್ ಆಯ್ಕೆಮಾಡಿಕೊಳ್ಳಬಹುದು. ಮಾಡರ್ನ್, ಟ್ರೆಡಿಷನಲ್ ಹೀಗೆ ನಿಮ್ಮ ಆಯ್ಕೆಗೆ ತಕ್ಕಂತೆ ನೀವು ಪರ್ಸ್ ಖರೀದಿ ಮಾಡಬಹುದು. ಮಹಿಳೆಯರಿಗೆ ಈ ಪರ್ಸ್ ನಲ್ಲಿ ಆಯ್ಕೆ ಹೆಚ್ಚಿರುತ್ತದೆ. ಸೆಲೆಬ್ರಿಟಿಗಳು ತಮ್ಮ ಅಲಂಕಾರಕ್ಕೆ ತಕ್ಕಂತೆ ದುಬಾರಿ ಪರ್ಸ್ ಹಿಡಿದು ಓಡಾಡೋದನ್ನು ನಾವೆಲ್ಲ ನೋಡಿದ್ದೇವೆ. ಅನೇಕ ಬಾರಿ ಅವರ ದುಬಾರಿ ಪರ್ಸ್ ಸುದ್ದಿ ಮಾಡೋದಿದೆ. ಪರ್ಸ್ ಗಳನ್ನು ಚರ್ಮದಿಂದ, ಬಟ್ಟೆಯಿಂದ ಮಾಡಿರ್ತಾರೆ. ಕಸದಿಂದ ರಸ ಎನ್ನುವ ಕಾನ್ಸೆಪ್ಟ್ ನಲ್ಲಿ ಪ್ಲಾಸ್ಟಿಕ್, ಪೇಪರ್, ತೆಂಗಿನ ನಾರಿನ ಪರ್ಸ್ ಹೀಗೆ ವೆರೈಟಿ ಉತ್ಪನ್ನಗಳಿಂದಲೂ ಈಗ ಪರ್ಸ್ ಮಾಡಲಾಗುತ್ತದೆ. ಅದೇ ರೀತಿ ಈಗ ಹೊಸ ಪರ್ಸ್ ಒಂದು ಎಲ್ಲರ ಗಮನ ಸೆಳೆದಿದೆ. ಆದ್ರೆ ಅದನ್ನು ಸಾಮಾನ್ಯರು ಬಳಸಲು ಸಾಧ್ಯವಿಲ್ಲ. ಅದನ್ನು ಯಾವುದರಿಂದ ಮಾಡಿದ್ದಾರೆ, ಅದ್ರ ವಿಶೇಷತೆ ಏನು ಎಂಬುದರ ವಿವರ ಇಲ್ಲಿದೆ.
ಈಗ ನಾವು ಹೇಳಲು ಹೊರಟಿರುವ ಪರ್ಸ್ ಅನ್ನು ಗಾಳಿ ಮತ್ತು ಗಾಜು ಬಳಸಿ ಮಾಡಲಾಗಿದೆ. ಎರಡೇ ಎರಡು ಉತ್ಪನ್ನಗಳನ್ನು ಬಳಸಿ ಈ ಪರ್ಸ್ ಸಿದ್ಧಪಡಿಸಲಾಗಿದೆ. ಗಾಳಿ ಮತ್ತು ಗಾಜಿನಿಂದ ಸಿದ್ಧವಾದ ವಿಶ್ವದ ಮೊದಲ ಪರ್ಸ್ ಇದು. ಇದರ ತೂಕವು ಬೆಳಕಿನ ಬಲ್ಬ್ ತೂಕಕ್ಕೆ ಸಮಾನವಾಗಿದೆ.
undefined
ಬ್ಲ್ಯಾಕ್ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸ್ಕೊಂಡ ತನಿಷಾ, ಕನ್ನಡಿಗರ ಮನೆ ಮಗಳು ನಮ್ ಬೆಂಕಿ ಎಂದ ಫ್ಯಾನ್ಸ್!
ಪ್ಯಾರಿಸ್ (Paris) ಫ್ಯಾಷನ್ ವೀಕ್‌ನಲ್ಲಿ ಪರ್ಸ್ ಅನ್ನು ಮೊದಲು ಬಾರಿ ಪರಿಚಯಿಸಲಾಗಿದೆ. ಇದರ ವಿಶೇಷತೆ ಎಂದರೆ ಶೇಕಡಾ 99 ರಷ್ಟು ಗಾಳಿ ಮತ್ತು ಶೇಕಡಾ 1 ರಷ್ಟು ಗ್ಲಾಸ್ ಅನ್ನು ಇದರ ತಯಾರಿಕೆಗೆ ಬಳಸಲಾಗಿದೆ. ಪ್ಯಾರಿಸ್ ಬ್ರ್ಯಾಂಡ್ ಕೋಪರ್ನಿ (Coperni )ಈ ಪರ್ಸ್ ಅನ್ನು ತಯಾರಿಸಿದೆ. ನಾಸಾದ ಸಹಯೋಗದೊಂದಿಗೆ ಕೋಪರ್ನಿ ಈ ಏರ್ ಸ್ವೈಪ್ ಬ್ಯಾಗ್ ಅನ್ನು ತಯಾರಿಸಿದೆ. ಅಮೇರಿಕನ್ (American) ಯೂನಿವರ್ಸಿಟಿಯ ದೃಶ್ಯ ಕಲಾವಿದ ಮತ್ತು ಸಂಶೋಧಕ ಐಯೋನಿಸ್ ಮೈಕೆಲೌಡಿಸ್ ಅವರ ಸಹಾಯವನ್ನು ಕೋಪರ್ನಿ ತೆಗೆದುಕೊಂಡಿದೆ.
ಈ ಪರ್ಸ್ 33 ಗ್ರಾಂ ತೂಕವನ್ನು ಹೊಂದಿದೆ. ಗಾಳಿ ಮತ್ತು ಗ್ಲಾಸ್ (Glass) ನಿಂದ ಮಾಡಿದ ಈ ಪರ್ಸ್ ಸಂಪೂರ್ಣವಾಗಿ ಪಾರದರ್ಶಕವಾಗಿ ಕಾಣುತ್ತದೆ. ಮೋಡದಂತೆ ಕಾಣಿಸುವ ಈ ಪರ್ಸ್, ಬಾಹ್ಯಾಕಾಶ ತಂತ್ರಜ್ಞಾನ ನ್ಯಾನೊಮೆಟೀರಿಯಲ್ ಸಿಲಿಕಾ ಏರೋಜೆಲ್ (Silica Aerogel) ನಿಂದ ತಯಾರಿಸಲಾದ ಅತಿದೊಡ್ಡ ವಸ್ತುವಾಗಿದೆ ಎಂದು ಕೋಪರ್ನಿ ಹೇಳಿದೆ. ಇದು ಭೂಮಿಯ ಮೇಲಿನ ಹಗುರವಾದ ಆದರೆ ಘನ ವಸ್ತುವಾಗಿದೆ. ನಾಸಾ ಇದನ್ನು ಸ್ಟಾರ್ಡಸ್ಟ್ ಸೆರೆಹಿಡಿಯಲು ಬಳಸುತ್ತದೆ ಎಂದಿ ಕೋಪರ್ನಿ ಹೇಳಿದೆ.
ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅರ್ನೌಡ್ ವೈಲಂಟ್ ಇದನ್ನು ವೈಜ್ಞಾನಿಕ ಆದರೆ ಮಾಂತ್ರಿಕ ಎಂದು ಬಣ್ಣಿಸಿದ್ದಾರೆ. ಇದು ಸಿಲಿಕಾ ಏರ್‌ಜೆಲ್ ನಂತೆ ಕಾಣುತ್ತದೆ. ಟೇಬಲ್ ಮೇಲೆ ಇದನ್ನು ಎಸೆದ್ರೆ ಇದು ಶಬ್ಧ ಮಾಡುತ್ತದೆ. ಇದ್ರ ಶಬ್ಧ ಸ್ಫಟಿಕದ ಗಾಜು ಮೇಜಿನ ಮೇಲೆ ಬಿದ್ದಂತೆ ಭಾಸವಾಗುತ್ತದೆ ಎಂದು ನಾಸಾದ ಜಾರ್ಜ್ ಗೋಲ್ಡ್ ಹೇಳಿದ್ದರು. 1999 ರಲ್ಲಿ ಸ್ಟಾರ್‌ಡಸ್ಟ್ ಮಿಷನ್‌ನಲ್ಲಿ ಸಿಲಿಕಾ ಏರ್‌ಜೆಲ್ ಅನ್ನು ನಾಸಾ ಬಳಸಿತು. ಉಲ್ಕಾಶಿಲೆ ಮಾದರಿಗಳನ್ನು ಭೂಮಿಗೆ ತರಲು ಇದು ಮೊದಲ ಮಿಷನ್ ಆಗಿತ್ತು. ಅದರಲ್ಲಿ ವಸ್ತುಗಳನ್ನು ಇಡಬಹುದೇ ಎಂದು ಕಂಪನಿಯನ್ನು ಕೇಳಿದಾಗ, ಐಫೋನ್ ಹಾಕಬಹುದು ಎಂದು ಕಂಪನಿ ಉತ್ತರ ನೀಡಿತ್ತು. ಇನ್ಸ್ಟಾಗ್ರಾಮ್ ನಲ್ಲಿ ಈ ಪರ್ಸ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾವಿರಾರು ಮಂದಿ ಇದಕ್ಕೆ ಲೈಕ್ ಕೊಟ್ಟಿದ್ದು, ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.