ಮಿಸ್​ ವರ್ಲ್ಡ್​ ಟಾಪ್​ 8ಗೆ ಏರಿದ ಕನ್ನಡತಿ ಸಿನಿ ಶೆಟ್ಟಿಗೆ ಆತ್ಮೀಯ ಸ್ವಾಗತ: ಜಸ್ಟ್​ ಮಿಸ್​ಗೆ ಕಣ್ಣೀರಾದ ಸುಂದರಿ

By Suvarna News  |  First Published Mar 11, 2024, 4:42 PM IST

ಮಿಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಟಾಪ್​ 8ರಲ್ಲಿ ಸ್ಥಾನ ಪಡೆದ ಕನ್ನಡತಿ ಸಿನಿ ಶೆಟ್ಟಿ ವಾಪಸಾಗಿದ್ದು, ಕಿರೀಟ ಸಿಗದೇ ಇರುವುದಕ್ಕೆ ಕಣ್ಣೀರಾಗಿದ್ದು, ಅವರನ್ನು ಸಂತೈಸುತ್ತಿರುವ ವಿಡಿಯೋ ವೈರಲ್​ ಆಗಿದೆ.
 


ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕನ್ನಡತಿ ಸಿನಿ ಶೆಟ್ಟಿಗೆ ಕಿರೀಟ್​ ಜಸ್ಟ್​ ಮಿಸ್​ ಆಗಿದೆ. ಟಾಪ್​ 8ಗೆ ಬಂದರೂ ಟಾಪ್​ 4ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.  112 ಸ್ಪರ್ಧಿಗಳಲ್ಲಿ ಟಾಪ್​ 8ಗೆ ಹೋಗುವುದು ಕೂಡ ಸಣ್ಣ ಮಾತಲ್ಲ. ಆದರೂ ಕೊನೆಯ ಗಳಿಗೆಯಲ್ಲಿ ಕಿರೀಟ ತಮ್ಮದಾಗಿಸಿಕೊಳ್ಳುವಲ್ಲಿ  ಸಿನಿ ವಿಫಲರಾದರು. ಜೆಕ್ ಗಣರಾಜ್ಯದ ಸುಂದರಿ 25 ವರ್ಷದ ಕ್ರಿಸ್ಟೈನಾ ಪಿಸ್ಕೋವಾ (Krystyna Pyszkova) ಅವರು ಮಿಸ್​ ವರ್ಲ್ಡ್​ ಆಗಿ ಹೊರಹೊಮ್ಮಿದ್ದರು. ವಜ್ರಗಳಿಂದ ಕೂಡಿದ ಕಿರೀಟ, ರೂ 10 ಕೋಟಿ ನಗದು, ಫ್ರೀ ವರ್ಲ್ಡ್​ ಟೂರ್ ಇವೆಲ್ಲವನ್ನೂ ಈಗ ಕ್ರಿಸ್ಟೈನಾ ಪಿಸ್ಕೋವಾ ಪಡೆದುಕೊಂಡಿದ್ದಾರೆ.

21 ವರ್ಷದ ಸಿನಿ ಅವರು,  ಫೆಮಿನಾ ಮಿಸ್ ಇಂಡಿಯಾ 2022 ವಿಜೇತ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಿದ್ದರು. ಟಾಪ್​ 8ಗೆ ಬಂದು ಭಾರತದ ಹೆಮ್ಮೆ ಹೆಚ್ಚಿಸಿದ ಸಿನಿ ಶೆಟ್ಟಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸದ್ಯ ಇವರು ಮುಂಬೈನಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ತನ್ನವರನ್ನು ನೋಡಿ ಸಿನಿ ಕಣ್ಣೀರಾಗಿದ್ದರು. ಮಿಸ್​ ವರ್ಲ್ಡ್​ ಕಿರೀಟ ಸಿಗಲಿಲ್ಲ ಎನ್ನುವ ನೋವು ಕೂಡ ಅವರ ಮುಖದಲ್ಲಿ ಕಾಣಿಸುತ್ತಿತ್ತು. ಅವರನ್ನು ಸಂಬಂಧಿಕರು ಸಂತೈಸಿದರು. ಸಿನಿ ಶೆಟ್ಟಿ ಅವರು,  ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.

Tap to resize

Latest Videos

ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಏನೇನೆಲ್ಲ ರಾಜಕೀಯ ನಡೆಯುತ್ತೆ ಗೊತ್ತಾ?

ವಿಶೇಷ ಎಂದರೆ,  ಸಿನಿ ಶೆಟ್ಟಿ ಅವರು ಕರ್ನಾಟಕದವರು. ಉಡುಪಿಯ ಇನ್ನಂಜೆ ಮೂಲದವರು ಇವರು. ವಿಶ್ವ ಸುಂದರಿ ಸ್ಪರ್ಧೆಗೆ ತಯಾರಿ ನಡೆಸಿರುವ ನಡುವೆಯೇ, ಕನ್ನಡತಿ  ಸಿನಿ ಶೆಟ್ಟಿ ಕೆಲವೊಂದು ಮಹತ್ವಪೂರ್ಣ ಹೇಳಿಕೆಯನ್ನು ನೀಡಿದ್ದರು. ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ನನಗೆ ಈ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಸಿನಿ ಹೇಳಿದ್ದಾರೆ. ಹಿಂದೆಲ್ಲಾ ಭಾರತವನ್ನು ಹಾವಾಡಿಗರ ನಾಡು ಎಂದು ಕರೆಯಲಾಗುತ್ತಿತ್ತು. ವಿಶ್ವದ ದೃಷ್ಟಿಯಲ್ಲಿ ಭಾರತವನ್ನು ತೋರಿಸುವಾಗ ಹಾವಾಡಿಗರನ್ನೇ ತೋರಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಇಡೀ ವಿಶ್ವಕ್ಕೇ ಮೋಡಿ ಮಾಡುತ್ತಿದೆ ಭಾರತ.  ಇಲ್ಲಿಗೆ ಬರುವ ಪ್ರತಿಯೊಬ್ಬರೂ ನಮ್ಮ ಸಂಪ್ರದಾಯಗಳು, ನಮ್ಮ ಆತಿಥ್ಯದಿಂದ ಮೋಡಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

 ಅಂದಹಾಗೆ ಸಿನಿ ಅವರಿಗೆ ಈಗ 21 ವರ್ಷ ವಯಸ್ಸು.   ಈ ಬಾರಿ,  ವಿಶ್ವ ಸುಂದರಿ ಕರೋಲಿನಾ ಬಿಲಾವ್​ಸ್ಕಾ ಮತ್ತು ಮಾಜಿ ವಿಶ್ವ ಸುಂದರಿ ವಿಜೇತರಾದ ಭಾರತದ ಮಾನುಷಿ ಚಿಲ್ಲರ್, ಜಮೈಕಾದ ಟೋನಿ ಆನ್ ಸಿಂಗ್, ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್,  ಮತ್ತು ಪೋರ್ಟೊ ರಿಕೊದ  ಸ್ಟೆಫನಿ ಡೆಲ್ ವ್ಯಾಲೆ ಸೇರಿದಂತೆ ವಿಶ್ವ ಸುಂದರಿಗಳ ಅದ್ಭುತ ತಂಡವು ಗ್ರಾಂಡ್ ಫಿನಾಲೆಗೆ ವೇದಿಕೆಯನ್ನು ಸಿದ್ಧಪಡಿಸಲು ಮೊದಲ ಬಾರಿಗೆ ಒಂದುಗೂಡಿದ್ದರು. 71ನೇ ಆವೃತ್ತಿಯ ಸ್ಪರ್ಧೆ  ಭಾರತದಲ್ಲಿ ಹಮ್ಮಿಕೊಳ್ಳುವುದು ತುಂಬಾ ಅರ್ಥಗರ್ಭಿತವಾಗಿದೆ ಮತ್ತು ಈ ಆವೃತ್ತಿಗಾಗಿ ನಾನು ಉತ್ತಮ ತಂಡ ರಚಿಸಿದ್ದೇನೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ತಿಳಿಸಿದ್ದರು.  

ಆಸ್ಕರ್​ನಲ್ಲಿ 87 ವರ್ಷಗಳ ದಾಖಲೆ ಮುರಿದ 22 ವರ್ಷದ ಗಾಯಕಿ: ವಿಜೇತರ ಫುಲ್​ ಡಿಟೇಲ್ಸ್ ಇಲ್ಲಿದೆ... 
 

click me!