ಬ್ಯೂಟಿ ವಿಷ್ಯ ಬಂದಾಗ ಹುಡುಗಿಯರ ಹೆಸರು ಹೇಳ್ತೇವೆ. ಆದ್ರೆ ಹುಡುಗ್ರು ಕೂಡ ಸೌಂದರ್ಯದಲ್ಲಿ ಕಮ್ಮಿ ಏನಿರೋದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಹುಡುಗ್ರ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಹುಡುಗ್ರು ಅನೇಕ ಸರ್ಜರಿಗೆ ಒಳಗಾಗ್ತಿದ್ದಾರೆ.
ಜಗತ್ತು ಬದಲಾಗ್ತಿದೆ. ಸೌಂದರ್ಯ ಕೇವಲ ಮಹಿಳೆಯರಿಗೆ ಮೀಸಲಾಗಿಲ್ಲ. ಪುರುಷರು ಕೂಡ ಸೌಂದರ್ಯ, ಫ್ಯಾಷನ್ ಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಎಲ್ಲರ ಮುಂದೆ ಆಕರ್ಷಕವಾಗಿ ಕಾಣ್ಬೇಕು, ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಪುರುಷರು ಡ್ರೆಸ್, ಕಾಸ್ಮೆಟಿಕ್ ಸರ್ಜರಿಗೆ ಮಹತ್ವ ನೀಡ್ತಿದ್ದಾರೆ. ಹಿಂದೆ ವಿದೇಶಗಳಲ್ಲಿ ಮತ್ತು ಸೆಲೆಬ್ರಿಟಿಗಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಿದ್ದರು. ಆದ್ರೀಗ ಶ್ರೀಸಾಮಾನ್ಯನೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾನೆ. ಪುರುಷರು ಬರೀ ಮನೆ ಹಾಗೂ ಕುಟುಂಬ ನಿರ್ವಹಣೆಗೆ ಮಾತ್ರ ಹಣ ಖರ್ಚು ಮಾಡ್ತಿಲ್ಲ. ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಸೌಂದರ್ಯ, ಫಿಟ್ನೆಸ್ ಗೆ ಖರ್ಚು ಮಾಡ್ತಿದ್ದಾರೆ.
ಭಾರತೀಯ (Indian) ಸೌಂದರ್ಯವರ್ಧಕ ಉದ್ಯಮ (Industry) ದ ಹೊಸ ವರದಿಯ ಪ್ರಕಾರ, ಪುರುಷರಲ್ಲಿ ಸೌಂದರ್ಯ (Beauty) ಪ್ರಜ್ಞೆ ಹೆಚ್ಚಾಗ್ತಿದ್ದಂತೆ ಪುರುಷ ಸೌಂದರ್ಯವರ್ಧಕಗಳ ಮಾರುಕಟ್ಟೆಯು ಶೇಕಡಾ 20 ರಷ್ಟು ಬೆಳೆದಿದೆ. ಪುರುಷರ ಸೌಂದರ್ಯವರ್ಧಕ ಉತ್ಪನ್ನಗಳು ಕೆಲವೇ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಎದೆಗೆ ಕಾಂಪ್ಯಾಕ್ಟ್ ಆಕಾರವನ್ನು ನೀಡಲು ಗೈನೆಕೊಮಾಸ್ಟಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಲು ಪುರುಷರ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರು ಹೇಳ್ತಿದ್ದಾರೆ. ಇದಲ್ಲದೆ ಯುವಕರು ಮೂಗಿಗೆ ಬೇಕಾದ ಆಕಾರವನ್ನು ನೀಡಲು ಮೂಗಿನ ಸರ್ಜರಿಗೆ ಒಳಗಾಗ್ತಿದ್ದಾರೆ.
ಕಣ್ಣಿನ ರೆಪ್ಪೆಯ ಶಸ್ತ್ರಚಿಕಿತ್ಸೆಗೂ ಪುರುಷರು ಆಸಕ್ತಿ ತೋರುತ್ತಿದ್ದಾರೆ. ಪುರುಷರಲ್ಲಿ ಕಣ್ಣು ರೆಪ್ಪೆ ಶಸ್ತ್ರಚಿಕಿತ್ಸೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಇದಲ್ಲದೆ ಕಣ್ಣುರೆಪ್ಪೆ ಕೊಬ್ಬು, ಸ್ನಾಯು ಮತ್ತು ಸಡಿಲವಾದ ಚರ್ಮವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ ಕೂಡ ನಡೆಯುತ್ತಿದೆ. ಮುಖದ ಸುಕ್ಕುಗಳು, ಚಿಕನ್ ಪಾಕ್ಸ್ ಕಲೆ, ಮೊಡವೆಗಳು, ಚರ್ಮದ ಮೇಲಿರುವ ಬಿಳಿ ಕಲೆ,ಸುಟ್ಟ ಗಾಯಗಳು ಮತ್ತು ಕಣ್ಣುಗಳ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಪುರುಷರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಟ್ಟೆಯ ಕೊಬ್ಬನ್ನು ತೆಗೆದು ಹಾಕಲು, ಬೋಳು ತಲೆ ಚಿಕಿತ್ಸೆಗಾಗಿ ಕೂದಲು ಕಸಿ ಸೇರಿದಂತೆ ಅನೇಕ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯನ್ನು ಪುರುಷರು ಮಾಡಿಸಿಕೊಳ್ತಿದ್ದಾರೆ.
ಬೋಲ್ಡ್, ಬ್ಯೂಟಿಫುಲ್ ಲುಕ್ ಗಾಗಿ ಕಾಜಲ್ ಹಚ್ಚುವಾಗ ಈ ಟ್ರಿಕ್ಸ್ ಫಾಲೋ ಮಾಡಿ
ಇಷ್ಟೇ ಅಲ್ಲ ಇತ್ತೀಚಿಗೆ ನಡೆದ ವರದಿಯೊಂದರ ಪ್ರಕಾರ, ಗೂಗಲ್, ಅಮೆಜಾನ್, ಮೆಟಾದಂತಹ ಕಂಪನಿಗಳ ಇಂಜಿನಿಯರ್‌ಗಳು ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಈ ಟೆಕ್ ಇಂಜಿನಿಯರ್‌ಗಳು ತಮ್ಮ ಎತ್ತರವನ್ನು ಹೆಚ್ಚಿಸಲು 60 ರಿಂದ 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಟ್ರೆಂಡ್ ಆಗಿದೆ.
ಕೊರೊನಾ ನಂತ್ರ ಈ ಸರ್ಜರಿಗಳ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಪುರುಷರಲ್ಲಿ ಸೌಂದರ್ಯ ಪ್ರಜ್ಞೆ ಜಾಸ್ತಿಯಾಗಿದೆ. ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣ್ಬೇಕೆನ್ನುವ ಕಾರಣಕ್ಕೆ ಇಂಜಿನಿಯರ್ಸ್ ಎತ್ತರ ಹೆಚ್ಚಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗ್ತಿದ್ದಾರೆ. ಎತ್ತರ ಹೆಚ್ಚಿಸುವ ಶಸ್ತ್ರಚಿಕಿತ್ಸೆ ನಂತ್ರ ಪುರುಷರ ಎತ್ತರ 3 ರಿಂದ 6 ಇಂಚುಗಳಷ್ಟು ಹೆಚ್ಚಾಗುತ್ತದೆ. ವೈದ್ಯರ ಪ್ರಕಾರ, ಅಮೆಜಾನ್ ಮತ್ತು ಫೇಸ್ಬುಕ್‌ನ ಅನೇಕ ಟೆಕ್ ಎಂಜಿನಿಯರ್‌ಗಳು ಇದ್ರಲ್ಲಿ ಆಸಕ್ತಿ ತೋರಿದ್ದಾರಂತೆ. ಪುರುಷರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾದಂತೆ ಕ್ಲಿನಿಕ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಪುರುಷರಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕಾಸ್ಮಟಿಕ್ ಸರ್ಜರಿ:
ಲಿಪೊಸಕ್ಷನ್ (24% ಪುರುಷರು)
ಸ್ತನ ಶಸ್ತ್ರಚಿಕಿತ್ಸೆ (17% ಪುರುಷರು)
ಕಣ್ಣಿನ ರೆಪ್ಪೆಯ ಶಸ್ತ್ರಚಿಕಿತ್ಸೆ ( 15% ಪುರುಷರು)
ಮೂಗಿನ ಶಸ್ತ್ರಚಿಕಿತ್ಸೆ (14% ಪುರುಷರು)
ಫೇಸ್ ಲಿಫ್ಟ್ ( 7% ಪುರುಷರು)
ಕಿವಿ ಶಸ್ತ್ರಚಿಕಿತ್ಸೆ ( 5% ಪುರುಷರು)
Recycle Hacks: ಮನೆಯಲ್ಲಿರೋ ಹಳೆ ಬ್ರಾ ಎಸಿಬೇಡಿ, ಸಿಕ್ಕಾಪಟ್ಟೆ ಕೆಲಸಕ್ಕೆ ಬರತ್ತೆ ಎದೆಕವಚ
ಅಮೆರಿಕಾದಲ್ಲಿ ಈ ಶಸ್ತ್ರಚಿಕಿತ್ಸೆ ಪ್ರವೃತ್ತಿ ಈಗ ಮತ್ತಷ್ಟು ಹೆಚ್ಚಾಗಿದೆ. ಬೇರೆ ಬೇರೆ ದೇಶದಲ್ಲಿ ಶಸ್ತ್ರಚಿಕಿತ್ಸೆ ಪ್ರವೃತ್ತಿ ಭಿನ್ನವಾಗಿದೆ. ಭಾರತದಲ್ಲೂ ಚಿಕಿತ್ಸೆ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ ಎನ್ನುತ್ತಾರೆ ತಜ್ಞರು.