Recycle Hacks: ಮನೆಯಲ್ಲಿರೋ ಹಳೆ ಬ್ರಾ ಎಸಿಬೇಡಿ, ಸಿಕ್ಕಾಪಟ್ಟೆ ಕೆಲಸಕ್ಕೆ ಬರತ್ತೆ ಎದೆಕವಚ
ಬ್ರಾ ಕಂಫರ್ಟ್ ಆಗಿದ್ರೆ ಡ್ರೆಸ್ ಧರಿಸೋದು ಸುಲಭ. ಬ್ರಾ ಖರೀದಿ ವೇಳೆ ಮಹಿಳೆಯರು ತಲೆ ಕೆಡಿಸಿಕೊಳ್ತಾರೆ. ಬ್ರಾ ಹಳೆಯದಾಗ್ತಿದ್ದಂತೆ ಕಸಕ್ಕೆ ಹಾಕ್ತಾರೆ. ದುಬಾರಿ ಬೆಲೆ ಬ್ರಾ ಕೂಡ ಹಳೆಯದಾದ್ಮೇಲೆ ಮೌಲ್ಯ ಕಳೆದುಕೊಳ್ಳುತ್ತದೆ. ಆದ್ರೆ ಹಳೆ ಬ್ರಾ ಮರುಬಳಕೆ ಮಾಡಬಹುದು.
ಮಹಿಳೆಯರ ಸ್ತನದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಬ್ರಾ ಬಳಕೆ ಮಾಡುವುದು ಅಗತ್ಯ. ಒಂದೇ ಬ್ರಾವನ್ನು ಜೀವನ ಪರ್ಯಂತ ಬಳಸಲು ಸಾಧ್ಯವಿಲ್ಲ. ಆರು ತಿಂಗಳಿಗೊಮ್ಮೆಯಾದ್ರೂ ಬ್ರಾ ಬದಲಿಸಬೇಕು. ಯಾಕೆಂದ್ರೆ ಬ್ರಾ ಹಳೆಯದಾಗುತ್ತದೆ, ಅದು ಸಡಿಲವಾಗುತ್ತದೆ ಇಲ್ಲವೆ ಅದ್ರ ಬಾರುಗಳು ಹರಿಯುತ್ತವೆ. ಹಳೆಯ ಬ್ರಾ, ಸ್ತನದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಮಹಿಳೆಯರು ಬ್ರಾ ಬದಲಿಸುತ್ತಿರುತ್ತಾರೆ. ಹೊಸ ಬ್ರಾ ಖರೀದಿ ಮಾಡಿದಾಗ ಹಳೆ ಬ್ರಾ ಏನು ಮಾಡ್ಬೇಕು ಎಂಬ ಸಮಸ್ಯೆ ಕಾಡುವುದು ಸಾಮಾನ್ಯ. ಬಹುತೇಕರು ಹಳೆ ಬ್ರಾವನ್ನು ಕಸಕ್ಕೆ ಎಸೆಯುತ್ತಾರೆ. ನೀವು ಹಳೆ ಬ್ರಾ ಕಸಕ್ಕೆ ಹಾಕುವವರಾಗಿದ್ದರೆ ಅದರ ಮರುಬಳಕೆ ಬಗ್ಗೆ ತಿಳಿಯಿರಿ. ಹಳೆ ಬ್ರಾವನ್ನು ಹೇಗೆ ಮರು ಬಳಕೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಹಳೆ (Old) ಬ್ರಾ (Bra) ಹೀಗೆ ಬಳಸಿ :
ಬ್ರಾ ಕಪ್ ನಿಂದ ಡಸ್ಟರ್ : ಬ್ರಾ ಕಪ್ (Bra Cup) ಗಳನ್ನು ಕತ್ತರಿಸಿ ನೀವು ಅದನ್ನು ಡಸ್ಟರ್ ಮಾಡಬಹುದು. ಕಪ್ ಗಳನ್ನು ನೀವು ಸ್ವಚ್ಛತೆಗೆ ಬಳಬಹುದು. ಹತ್ತಿಯಿಂದ ಮಾಡಿದ ಬ್ರಾಗಳು ಬೆವರನ್ನು ಹೀರಿಕೊಳ್ಳುತ್ತವೆ. ಹಾಗಾಗಿ ನೀವು ಈ ಬ್ರಾ ಕಪ್ ಗಳನ್ನು ಧೂಳು ಒರೆಸಲು ಬಳಸಬಹುದು. ಗ್ಲಾಸಿನ ಟೇಬಲ್ ಗಳಿಗೆ ಧೂಳು ಅಂಟಿಕೊಂಡಿದ್ದರೆ ಅದನ್ನು ಕ್ಲೀನ್ ಮಾಡಲು ನೀವು ಬ್ರಾ ಕಪ್ಸ್ ಬಳಸಬಹುದು. ಆದ್ರೆ ನೆಟ್ ಬ್ರಾ ಹಾಗೂ ಲೇಸ್ ಬ್ರಾನಿಂದ ಕ್ಲೀನಿಂಗ್ ಸಾಧ್ಯವಿಲ್ಲ.
ಶೂಗಳಲ್ಲಿ ಬ್ರಾ ಪ್ಯಾಡ್ ಬಳಕೆ : ಬ್ರಾ ಪ್ಯಾಡ್ ನಿಮಗೆ ಶೂ ಸಡಿಲವಾಗಿದ್ದರೆ ಸಹಾಯಕ್ಕೆ ಬರುತ್ತದೆ. ನೀವು ಬ್ರಾ ಪ್ಯಾಡನ್ನು ಕತ್ತರಿಸಿ ಅದನ್ನು ಶೂ ಒಳಗೆ ಹಾಕಬೇಕು. ಇದ್ರಿಂದ ಶೂ ಸಡಿಲವಾಗುವುದಿಲ್ಲ. ಹಾಗೆ ಕಾಲಿಗೆ ಆರಾಮ ನೀಡುತ್ತದೆ. ಬೆವರನ್ನು ಕೂಡ ಬ್ರಾ ಪ್ಯಾಡ್ ಹೀರಿಕೊಳ್ಳುವುದ್ರಿಂದ ನಿಮಗೆ ಶೂ ಧರಿಸಲು ಸಮಸ್ಯೆ ಎನ್ನಿಸುವುದಿಲ್ಲ.
ಬ್ಯಾಕ್ ಲೆಸ್ ಡ್ರೆಸ್ ಗೆ ಬಳಸಿ ಹಳೆ ಬ್ರಾ ಕಪ್ : ಬ್ಯಾಕ್ ಲೆಸ್ ಡ್ರೆಸ್ ಧರಿಸುವಾಗ ಬ್ರಾ ಸಮಸ್ಯೆ ಎನ್ನಿಸುತ್ತದೆ. ಬ್ರಾ ಬಾರುಗಳು ಹಿಂದೆ ಕಾಣಿಸಿಕೊಳ್ಳುವುದ್ರಿಂದ ಮುಜುಗರವಾಗುತ್ತದೆ. ಹಾಗಾಗಿ ಬ್ಯಾಕ್ ಲೆಸ್ ಡ್ರೆಸ್ ಗೆ ಕೆಲವರು ಪ್ಯಾಡ್ ಅಳವಡಿಸಿಕೊಳ್ತಾರೆ. ನೀವು ಬ್ಯಾಕ್ ಲೆಸ್ ಡ್ರೆಸ್ ಗ ಪ್ಯಾಡ್ ಅಳವಡಿಸಿಲ್ಲವೆಂದ್ರೆ ಹಳೆ ಬ್ರಾ ಬಳಸಬಹುದು. ಹಳೆ ಬ್ರಾದ ಕಪ್ ಗಳನ್ನು ನೀವು ಡ್ರೆಸ್ ಗೆ ಅಂಟಿಸಬಹುದು. ಇದ್ರಿಂದ ಪ್ರತ್ಯೇಕ ಟ್ಯೂಬ್ ಬ್ರಾ ಅಥವಾ ನಿಪ್ಪಲ್ ಪ್ಯಾಸ್ಟಿಜ್ ಧರಿಸುವ ಅಗತ್ಯವಿರುವುದಿಲ್ಲ.
ಹಳೆ ಬ್ರಾನಿಂದ ತಯಾರಿಸಿ ಬಾಲ್ : ಹಳೆ ಬ್ರಾ ಕಪ್ ಹೊಂದಿದ್ದರೆ ನೀವು ಅದನ್ನು ತೆಗೆದು ಬಾಲ್ ಮಾಡಬಹುದು. ಎರಡೂ ಕಪ್ ಗಳನ್ನು ತೆಗೆದು ಅದರ ಮಧ್ಯೆ ಮೃದುವಾದ ಹತ್ತಿಯನ್ನು ತುಂಬಿ ಹೊಲಿಯಬೇಕು. ಬ್ರಾ ಕಪ್ ನಿಂದ ತಯಾರಾದ ಮೃದುವಾದ ಚೆಂಡನ್ನು ಮನೆಯಲ್ಲಿರುವ ನಾಯಿಗೆ ಆಡಲು ನೀಡಬಹುದು.
ಫಸ್ಟ್ ಟೈಮ್ ಬ್ರಾ ಧರಿಸಿದಾಗ ವಿರೋಧಿಸಿದ್ರಂತೆ ಜನ, ಏನಿದರ ಇತಿಹಾಸ?
ಅಲಂಕಾರಿಕ ವಸ್ತುವಿನಲ್ಲಿ ಬಳಕೆ : ಬ್ರಾ ಬಾರ್ ಗಳನ್ನು ನೀವು ಕೆಲ ಅಲಂಕಾರಿಕ ವಸ್ತುಗಳಿಗೆ ಬಳಸಬಹುದು. ಬ್ರಾ ಬಾರ್ ಗಳನ್ನು ಕತ್ತರಿಸಿ ನೀವು ಅಡ್ಜೆಸ್ಟೇಬಲ್ ಬ್ರೇಸ್ ಲೈಟ್ ತಯಾರಿಸಬಹುದು. ಬ್ರಾ ಪಟ್ಟಿಗಳಿಂದ ನೀವು ಹೇರ್ ಬ್ಯಾಂಡ್ ತಯಾರಿಸಬಹುದು. ಇದಲ್ಲದೆ ಬ್ರಾ ಕಪ್ ಗಳನ್ನು ತೆಗೆದು ಅದಕ್ಕೆ ಬಣ್ಣ ಹಚ್ಚಿ, ಅದನ್ನು ಅಲಂಕಾರಿಕ ವಸ್ತುವಿಗೆ ಬಳಕೆ ಮಾಡಬಹುದು.
ಬೋಲ್ಡ್, ಬ್ಯೂಟಿಫುಲ್ ಲುಕ್ ಗಾಗಿ ಕಾಜಲ್ ಹಚ್ಚುವಾಗ ಈ ಟ್ರಿಕ್ಸ್ ಫಾಲೋ ಮಾಡಿ
ಸ್ತನ ಕ್ಯಾನ್ಸರ್ ಸಪೋರ್ಟ್ ಗ್ರೂಪ್ ಗೆ ದಾನ ಮಾಡಿ : ಇದರಲ್ಲಿ ಯಾವುದೂ ಸಾಧ್ಯವಿಲ್ಲ ಎನ್ನುವವರು ಬ್ರಾ ಎಸೆಯುವ ಬದಲು ಅದನ್ನು ಸ್ತನ ಕ್ಯಾನ್ಸರ್ ಸಪೋರ್ಟ್ ಗ್ರೂಪ್ ಗೆ ದಾನ ಮಾಡಬಹುದು. ಅನೇಕ ಎನ್ ಜಿಓಗಳು ಇದನ್ನು ಪಡೆಯುತ್ತವೆ.