ವ್ಯಾಕ್ಸಿಂಗ್, ಬ್ಲೀಚಿಂಗ್ ಅಂದ್ರೆ ಕೆಲ ಮಹಿಳೆಯರು ಹೆದರುತ್ತಾರೆ. ವಿಪರೀತ ನೋವು ಇದಕ್ಕೆ ಕಾರಣ. ಹಾಗೆಯೇ ಕೆಲ ರಾಸಾಯನಿಕಗಳು ಅದ್ರಲ್ಲಿ ಇರುವ ಕಾರಣ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಅನಗತ್ಯ ಕೂದಲು ತೆಗೆದುಹಾಕಲು ಮಹಿಳೆಯರು ಮನೆ ಮದ್ದನ್ನು ಬಳಸಬಹುದು.
ಸೌಂದರ್ಯಕ್ಕೆ ಇನ್ನೊಂದು ಹೆಸರು ಮಹಿಳೆಯರು. ಮುಖ ಸುಂದರವಾಗಿ ಕಾಣ್ಬೇಕೆಂದು ಮಹಿಳೆಯರು ನಾನಾ ಕಸರತ್ತು ಮಾಡ್ತಾರೆ. ಹಾಗೆಯೇ ಕಾಲು, ಕೈನಲ್ಲಿರುವ ಕೂದಲು ಕೂಡ ಅವರ ಸೌಂದರ್ಯವನ್ನು ಹಾಳು ಮಾಡುತ್ತದೆ. ಸ್ಕರ್ಟ್, ಶಾರ್ಟ್ಸ್ ಗೆ ಈ ಕೂದಲು ಅಡ್ಡಿಯುಂಟು ಮಾಡುತ್ತೆ. ಹಾಗಾಗಿಯೇ ಬೇಡದ ಕೂದಲನ್ನು ತೆಗೆಯಲು ಮಹಿಳೆಯರು ವ್ಯಾಕ್ಸಿಂಗ್, ಬ್ಲೀಚಿಂಗ್ ಮತ್ತು ಥ್ರೆಡಿಂಗ್ ಮೊರೆ ಹೋಗ್ತಾರೆ. ವ್ಯಾಕ್ಸಿಂಗ್ ಮತ್ತು ಬ್ಲೀಚಿಂಗ್ ಕೆಲ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಅದು ನೋವಿನಿಂದ ಕೂಡಿರುತ್ತದೆ ಎನ್ನುವ ಕಾರಣಕ್ಕೆ ಇದನ್ನು ಮಾಡಿಸಿಕೊಳ್ಳಲು ಮಹಿಳೆಯರು ಹಿಂಜರಿಯುತ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ನೋವಿಲ್ಲದೆ ಅನಗತ್ಯ ಕೂದಲು ತೆಗೆಯುವ ವಿಧಾನವನ್ನು ಅನುಸರಿಸಿ. ಮನೆಯಲ್ಲಿಯೇ ಕೆಲ ಮದ್ದುಗಳನ್ನು ಮಾಡುವ ಮೂಲಕ, ಕೈ, ಕಾಲಿನ ಮೇಲಿರುವ ಅನಗತ್ಯ ಕೂದಲು ತೆಗೆದು ಹಾಕಿ ನಿಮ್ಮಿಷ್ಟದ ಸ್ಕರ್ಟ್ ಧರಿಸಿ, ಬಿಂದಾಸ್ ಆಗಿ ಓಡಾಡಿ.
ಅನಗತ್ಯ ಕೂದಲು ತೆಗೆಯಲು ಮನೆ ಮದ್ದು :
undefined
ಮೊಟ್ಟೆ ಹಾಗೂ ಕಾರ್ನ್‌ಫ್ಲೋರ್: ಮೊಟ್ಟೆಯ ಬಿಳಿಭಾಗ ಅನಗತ್ಯ ಕೂದಲನ್ನು ತೆಗೆದು ಹಾಕಲು ನೆರವಾಗುತ್ತದೆ. ಕಾರ್ನ್ ಫ್ಲೋರ್ ಚರ್ಮವನ್ನು ಮೃದುಗೊಳಿಸುತ್ತದೆ.
ಇದನ್ನು ಮಾಡಲು, ಒಂದು ಮೊಟ್ಟೆಯ ಬಿಳಿಭಾಗ,ಅರ್ಧ ಚಮಚ ಕಾರ್ನ್ ಫ್ಲೋರ್ (Corn Flour) ಬೇಕಾಗುತ್ತದೆ. ಮೊಟ್ಟೆ ಬಿಳಿ ಭಾಗವನ್ನು ತೆಗೆದು ಅದಕ್ಕೆ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಅನಗತ್ಯ (Unwanted Hair) ಕೂದಲಿರುವ ಜಾಗಕ್ಕೆ ಅನ್ವಯಿಸಿ. ನಂತ್ರ ವೃತ್ತಾಕಾರವಾಗಿ ಮಸಾಜ್ ಮಾಡಿ. ನೀವು ಇದನ್ನು ಮುಖಕ್ಕೆ ಕೂಡ ಬಳಸಬಹುದು. ಸುಮಾರು 15-20 ನಿಮಿಷ ಬಿಟ್ಟ ನಂತ್ರ ಶುದ್ಧ ನೀರಿನಿಂದ ತೊಳೆಯಿರಿ. ಎಲ್ಲ ರೀತಿಯ ಚರ್ಮಕ್ಕೂ ಇದು ಒಳ್ಳೆಯದು. ಹಾಗೆಯೇ ವಾರಕ್ಕೊಮ್ಮೆ ಇದನ್ನು ಬಳಸಬಹುದು.
ಓಟ್ಮೀಲ್ (OatMeal) ಮತ್ತು ಬಾಳೆಹಣ್ಣು (Banana) : ಓಟ್ಮೀಲ್ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ. ಬಾಳೆಹಣ್ಣು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ಮಸಾಜ್ ಮಾಡಿದಾಗ ಅನಗತ್ಯ ಕೂದಲು ತೆಗೆಯುವ ಜೊತೆಗೆ ಕೂದಲ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಸ್ಟೈಲಿಶ್ ಆಗಿ ಸೆಕೆಂಡ್ ಸ್ಟಡ್ ಹಾಕ್ಬೇಕಾ ? ಮನೆಯಲ್ಲಿ ಕಿವಿ ಚುಚ್ಚೋದು ತುಂಬಾ ಈಝಿ
ಇದಕ್ಕೆ 2 ಚಮಚ ಓಟ್ಮೀಲ್ ಮತ್ತು ಒಂದು ಬಾಳೆಹಣ್ಣು ಬೇಕು. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ (Paste) ಸಿದ್ಧಪಡಿಸಬೇಕು. ಅನಗತ್ಯ ಕೂದಲಿರುವ ಜಾಗದಲ್ಲಿ ಇದನ್ನು ಅನ್ವಯಿಸಬೇಕು. 20 ನಿಮಿಷ ಹಾಗೆ ಬಿಟ್ಟು ನಂತ್ರ ತಣ್ಣೀರಿ (Cold Water) ನಲ್ಲಿ ತೊಳೆಯಬೇಕು.
ಶುಗರ್ ವ್ಯಾಕ್ಸ್ (Sugar Wax) : ಅನಗತ್ಯ ಕೂದಲನ್ನು ತೆಗೆಯಲು ಶುಗರ್ ವ್ಯಾಕ್ಸ್ ಕೂಡ ಸಹಾಯ ಮಾಡುತ್ತದೆ. ಇದನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಅನಗತ್ಯ ಕೂದಲಿರುವ ಜಾಗದಲ್ಲಿ ನೀವು ಶೇವಿಂಗ್ ಮಾಡಿದ್ರೆ ಹೆಚ್ಚಿನ ಪ್ರಮಾಣದಲ್ಲಿ ಕೂದಲಿನ ಬೆಳವಣಿಗೆಗೆ ಇದು ಕಾರಣಗುತ್ತದೆ. ಕೂದಲಿನ ಬೆಳವಣಿಗೆ ವೇಗ ಶೇವಿಂಗ್ ನಿಂದ ಹೆಚ್ಚಾಗುತ್ತದೆ. ಕೂದಲ ಬೆಳವಣಿಗೆ ಕಡಿಮೆ ಮಾಡ್ಬೇಕೆಂದ್ರೆ ನೀವು ಶುಗರ್ ವ್ಯಾಕ್ಸ್ ಬಳಸುವುದು ಒಳ್ಳೆಯದು. ಇದಕ್ಕೆ 2 ಚಮಚ ಸಕ್ಕರೆ ಹಾಗೂ 2 ಚಮಚ ನಿಂಬೆ ರಸ ಬೇಕಾಗುತ್ತದೆ. ಶುರಗ್ ವ್ಯಾಕ್ಸ್ ತಯಾರಿಸಲು ಒಂದು ಬಟ್ಟಲಿನಲ್ಲಿ ಸಕ್ಕರೆ ಮತ್ತು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡ್ಬೇಕು. ಈ ಮಿಶ್ರಣಕ್ಕೆ 7-8 ಚಮಚ ನೀರು ಸೇರಿಸಿ ಬಿಸಿ ಮಾಡಿ ನಂತರ ತಣ್ಣಗಾಗಲು ಬಿಡಬೇಕು. ಮಿಶ್ರಣ ತಣ್ಣಗಾದ ಮೇಲೆ ಚರ್ಮಕ್ಕೆ ಅನ್ವಯಿಸಬೇಕು. 15-20 ನಿಮಿಷಗಳ ನಂತ್ರ ಅದನ್ನು ತಣ್ಣೀರಿನಲ್ಲಿ ಸ್ವಚ್ಛಗೊಳಿಸಬೇಕು. ಇದ್ರಿಂದ ಅನಗತ್ಯ ಕೂದಲು ಕಡಿಮೆಯಾಗುತ್ತದೆ. ಹಾಗೆ ಚರ್ಮ ಹೊಳಪು ಪಡೆಯುತ್ತದೆ. ಕೂದಲ ಬೆಳವಣಿಗೆ ಕೂಡ ನಿಧಾನವಾಗುತ್ತದೆ. ತಿಂಗಳಿಗೊಮ್ಮೆ ನೀವು ಶುಗರ್ ವ್ಯಾಕ್ಸ್ ಬಳಸಬಹುದು.
90 ವರ್ಷಗಳಿಂದ ಬಟ್ಟೆಯನ್ನೇ ಧರಿಸಿಲ್ಲ ಈ ಗ್ರಾಮದ ಜನ