ಸೌಂದರ್ಯ ಹೆಚ್ಚಬೇಕು. ತ್ವಚೆ ಚೆನ್ನಾಗಿ ಆಗಬೇಕು, ಏನೇನೋ ಮಾಡುತ್ತಾರೆ ಸಿನಿ ನಟರು. ಅದೂ ಇದು ಎಲ್ಲವೂ ಆಗಿವೆ. ಇದೀಗ ವೀರ್ಯದ ಫೇಷಿಯಲ್ ಕಳೆದ ಕೆಲವು ವರ್ಷಗಳಿಂದ ಟ್ರೆಂಡ್‌ನಲ್ಲಿದೆ. ಅಷ್ಟಕ್ಕೂ ಇದನ್ನು ಮಾಡೋದು ಹೇಗೆ?
ಇದೇನಪ್ಪಾ ಅಂತ ವಾಂತಿ ಬರೋ ಹಾಗೆ ಮಾಡಬೇಡಿ. ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳಲ್ಲಿ ಟ್ರೆಂಡ್ ಆಗಿದೆ. ಈ ವೀರ್ಯದ ಫೇಷಿಯಲ್. ಅದೇನೋ ಅಪ್ಪಾ ಕೆಲವರಿಗೆ ಚಿತ್ರ, ವಿಚಿತ್ರ ಖಯಾಲಿಗಳು. ಏನೇನೋ ಮಾಡುತ್ತಿರುತ್ತಾರೆ. ಸಗಣಿ ಬೇಕಾದರೂ ಮುಖಕ್ಕೆ ಹಚ್ಕೊಂಡು ಸೌಂದರ್ಯ ಹೆಚ್ಚಿದೆ ಅಂತಾರೆ. ಆದರೆ, ಈ ವೀರ್ಯವನ್ನು ಮುಖಕ್ಕೆ ಹಚ್ಚಿಸಿಕೊಳ್ಳುವ ಕಾನ್ಸೆಪ್ಟ್ ಅದೆಲ್ಲಿಂದ ಬಂತೋ?
ಇಂಥದ್ದೊಂದು ಮಹಾನ್ ಪೇಷಿಯಲ್ ಕಾನ್ಸೆಪ್ಟ್ (Facial Concept) ತಂದಿದ್ದು ಇಂಗ್ಲೆಂಡ್ (England) ಮೂಲದ ಒಬ್ಬ ಸೆಲೆಬ್ರಿಟಿ. ಎಲ್ಲಿ ಸಿಕ್ತು ಅಂತ ಕೇಳಬೇಡಿ, ಆದರೆ, ಒಮ್ಮೆ ಫ್ರೆಶ್ ವೀರ್ಯವನ್ನು (Fresh Sperm) ಮುಖಕ್ಕೆ ಹಚ್ಕೊಂಡು, ಅರ್ಧ ಗಂಟೆ ನಂತರ ಮುಖ ತೊಳೆದು ಕೊಂಡಳಂತೆ. ಮುಖ ಫಳ ಫಳ ಹೊಳೆಯೋದಾ? ಅಷ್ಟಕ್ಕೂ ಹೋಗಿ ಹೋಗಿ ಈ ವೀರ್ಯವನ್ನೇ ಈಕೆ ಬಳಸಿದ್ದು ಏಕೆ? ಗಂಡಿನ ಬಾಡಿ ಫ್ಲುಯೆಡ್ (Body Fluid) ಆದ ಈ ವೀರ್ಯದಲ್ಲಿ ಸಿಕ್ಕಾಪಟ್ಟೆ ಪೋಷಕಾಂಶಗಳು, ಜೀವಸತ್ವಗಳು ಇರುತ್ತವೆ. ಅದನ್ನೆ ಮುಖಕ್ಕೆ ಹಚ್ಚಿ ಕೊಂಡರೆ ಸಹಜವಾಗಿ ಮುಖ ಹೊಳೆಯುತ್ತದೆ ಎನ್ನೋದು ಈಕೆಯ ಥಿಯರಿ.
ಒಂದು ಜೀವವನ್ನು ಸೃಷ್ಟಿಸುವ ಸಾಮರ್ಥ್ಯ ಇರುವ ವೀರ್ಯ ಸಹಜವಾಗಿ ಸ್ಟ್ರಾಂಗ್ ಆಗಿರುತ್ತೆ. ಅದು ಸ್ತ್ರೀಯ ದೇಹ ಸೇರಿ, ಅಂಡದ ಜೊತೆ ಸೇರುವವರೆಗೂ ಸುರಕ್ಷಿತವಾಗಿರಲು ಅಗತ್ಯವಾದ ನೈಸರ್ಗಿಕ ಅಂಶಗಳು (Natural Content) ಸಹಜವಾಗಿಯೇ ಇದರಲ್ಲಿ ಅಡಕವಾಗಿರುತ್ತದೆ. ರಿಚ್ ಪ್ರೊಟೀನ್ (Rich Proteins) ಇರೋ ಈ ವೀರ್ಯವನ್ನು ಫೇಷಿಯಲ್ ಆಗಿ ಬಳಸಿದಾಗ ಸೌಂದರ್ಯ ಹೆಚ್ಚುತ್ತೆ ಎನ್ನೋದು ಸೌಂದರ್ಯ ಆರಾಧಕರ ವಾದ.
ಅಬ್ಬಬ್ಬಾ..ವೀರ್ಯ ಬಳಸಿ ಮುತ್ತಿನ ನೆಕ್ಲೇಸ್ ತಯಾರಿಸ್ತಿದ್ದಾಳೆ ಮಹಿಳೆ !
ಮೊಡವೆಗೆ ಮದ್ದು:
ಮುಖದ ಮೊಡವೆ ಮಾಯವಾಗಿ, ತೇವಾಂಶವನ್ನು ಕಾಪಾಡಬಲ್ಲದು ಈ ವೀರ್ಯ. ಚರ್ಮ ಕೆಂಪಾಗದಂತೆ ನೋಡಿಕೊಳ್ಳುತ್ತದೆ. ಏಜ್ ಲುಕ್ (Age Look) ತಡೆಯುತ್ತದೆ. ಇಷ್ಟೆಲ್ಲಾ ಆಗುತ್ತೆ ಅಂದ ಮೇಲೆ ಕೆಲವು ಸೆಲೆಬ್ರಿಟಿಗಳು ಟ್ರೈ ಮಾಡಿದ್ದಾರೆ. ಹಲವು ವೀಡಿಯೋಗಳು ಅಲ್ಲಿ ಇಲ್ಲಿ ಹರಿದಾಡಿದ್ದೇ ಇದೆ, ಇದೇ ಫೇಮಸ್ ಫೇಷಿಯಲ್ ಆಯಿತು. ಎಲ್ಲರೂ ವೀರ್ಯವನ್ನು ಮುಖಕ್ಕೆ ಹಚ್ಚಿಕೊಂಡರು. ಮೇಕಪ್ ಮಾಡಿಕೊಂಡೋ, ಮಾಡದೆಯೋ. ಒಟ್ಟಿನಲ್ಲಿ ಚರ್ಮ ಚೆನ್ನಾಗಿ ಆಯಿತು ಅಂತ ಖುಷಿ ಪಟ್ಟು, ಡಿಮ್ಯಾಂಡ್ ಅಂತೂ ಹೆಚ್ಚಾಗಿದ್ದು ಹೌದು ಈ ಫೇಷಿಯಲ್‌ಗೆ.
ಅಷ್ಟೇನೂ ಸೇಫ್ ಅಲ್ಲ:
ಹಾಂಗಂತ ಇದೇನೂ ಸಿಕ್ಕಾಪಟ್ಟೆ ಸೇಫ್ ಅಲ್ಲ. ಅಕಸ್ಮಾತ್ ಗಂಡಸರಿಗೆ ಗುಪ್ತ ರೋಗಗಳಿದ್ದು, ಲೈಂಗಿಕ ಕಾಯಿಲೆಗಳಿದ್ದರೆ (Sexualy Transmitted Diseases), ಹೆಣ್ಣಿನ ಸೌಂದರ್ಯ ಹೆಚ್ಚಿಸುವುದರಲಿ, ಬೇಡದ ಸೋಂಕನ್ನೂ (Infection) ಹರಡೋ ಚಾನ್ಸ್ ಇರುತ್ತೆ. ಕಣ್ಣಿಗೂ ತೊಂದರೆ ಕೊಡಬಹುದು. ಹರ್ಪಿಸ್‌ನಂಥ ಅನಾರೋಗ್ಯಕ್ಕೂ ಕಾರಣವಾಗಬಹುದು.
ವೀರ್ಯದಲ್ಲಿ ಇರುವ ಸ್ಪೆರ್ಮೈನ್ ಮುಖದ ಚರ್ಮದಲ್ಲಿ ಅಲರ್ಜಿ ಉಂಟುಮಾಡಬಹುದು. ಇದನ್ನು ಅಪ್ಲೈ ಕೂಡಲೇ ಅಲರ್ಜಿ, ತುರಿಕೆ ಆರಂಭವಾಗುತ್ತದೆ. ಮುಖ ಕೆಂಪಾಗಬಹುದು. ಮನುಷ್ಯನ ದೇಹದ ದ್ರವಗಳಲ್ಲಿ ಇರುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ ದೇಹದಿಂದ ಹೊರಬಿದ್ದ ಮೇಲೆಯೂ ಬಹಳ ಕಾಲ ಜೀವಂತವಾಗಿ ಇರುತ್ತದೆ. ಇದು ಕೆಲವು ಬಗೆಯ ವೈರಲ್ ಸೋಂಕು ಉಂಟುಮಾಡುತ್ತದೆ.
ಗರ್ಭಧಾರಣೆಗೆ ಗಂಡಸು ಬೇಕಿಲ್ಲ ! ಪುರುಷನ ಸಂಪರ್ಕವಿಲ್ಲದೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಪುರುಷನ ವೀರ್ಯದಲ್ಲಿ ಟೆಸ್ಟೋಸ್ಟಿರಾನ್ ಹೆಚ್ಚು. ಇದು ಪುರುಷನಲ್ಲಿ ಲೈಂಗಿಕ ಇಚ್ಛೆ (Sexual Desire) ಹಾಗೂ ಸಾಮರ್ಥ್ಯ ಕೆರಳಿಸುವ ಹಾರ್ಮೋನು. ಇದನ್ನು ಮುಖಕ್ಕೆ ಹಚ್ಚಿದಾಗ, ಮುಖದ ಮೇಲಿರುವ ಮೊಡವೆಯನ್ನೂ (Pimple) ಹೆಚ್ಚಿಸುತ್ತದೆ. ತೈಲದ ಅಂಶ ಹೊಂದಿರುವ ಚರ್ಮ ಹೊಂದಿರುವವರಿಗೆ ಇದು ಅಪಾಯ. ಇದಕ್ಕಾಗಿ ವೀರ್ಯದಾನ ಮಾಡುವವರಂತೂ ಒಳ್ಳೆಯ ಆರೋಗ್ಯ ಹೊಂದಿರಲೇಬೇಕು. ವೀರ್ಯದಾನಕ್ಕೂ ಮೊದಲ ಅರ್ಧ ದಿನ ಮೊದಲು ಧೂಮಪಾನ, ಮದ್ಯಪಾನ ಮಾಡಿರಬಾರದು, ಆತ ಡ್ರಗ್ಸ್ (Drugs) ಸೇವಿಸಬಾರದು. ಯಥೇಚ್ಛ ನೀರು ಸೇವಿಸಬೇಕು.