Bold Bride: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ಮದುಮಗಳು..!

Suvarna News   | Asianet News
Published : Dec 16, 2021, 05:52 PM IST
Bold Bride: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ಮದುಮಗಳು..!

ಸಾರಾಂಶ

ಈಗಿನ ಹುಡುಗಿಯರು ಮೇಕಪ್ (Makeup) ಇಲ್ದೆ ಮನೆಯಿಂದ ಹೊರಗೆ ಕಾಲಿಡೋದೆ ಇಲ್ಲ. ಹೇರ್ ಕಲರಿಂಗ್ (Hair coloring) ಅಂತೂ ಆಗಿರ್ಲೇಬೇಕು. ವಯಸ್ಸಾಗಿರೋ ಸೂಚನೆ ನೀಡೋ ಬಿಳಿಕೂದಲು (White hair), ಮುಖದ ನೆರಿಗೆ ಅಂತೂ ಕಾಣ್ಲೇಬಾರ್ದು. ಆದ್ರೆ ಇಲ್ಲೊಬ್ಬಳು ಬೋಲ್ಡ್ ಬ್ರೈಡ್ ರೆಡಿಯಾಗಿರೋ ರೀತಿ ನೋಡಿದ್ರೆ ನೀವು ಹುಬ್ಬೇರಿಸೋದು ಖಂಡಿತ.

ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಕನಸುಗಳಿರುತ್ತವೆ. ಮದುವೆಯ ದಿನ ಇಂಥದ್ದೇ ಕಲರ್ ಸೀರೆ ಉಡಬೇಕು. ಇಂಥಹದ್ದೇ ಆಭರಣಗಳಿಂದ ಸಿಂಗರಿಸಿಕೊಳ್ಳಬೇಕು, ವಿಭಿನ್ನವಾಗಿ ಹೇರ್ ಸ್ಟೈಲ್ ಮಾಡಿಕೊಳ್ಳಬೇಕು ಎಂಬೆಲ್ಲಾ ಕನಸಿರುತ್ತದೆ. ಹೀಗಾಗಿ ಮದುಮಗಳು (Bride) ಮದುವೆ ಸೀರೆ ಡಿಸೈನ್‌ಗೆ ಪ್ರತ್ಯೇಕ ಬೊಟಿಕ್, ಮೇಕಪ್‌ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿಸ್ಟ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಇವತ್ತಿನ ದಿನಗಳ ಮದುವೆಗಳನ್ನು ನೋಡಿದರೆ ಅದ್ಧೂರಿ ಮಂಟಪ, ಮದುಮಗಳ ಝಗಮಗಿಸುವ ಲೆಹಂಗಾ, ಸೀರೆ, ಹೆವಿ ಮೇಕಪ್, ಆಭರಣ ಲಕ್ಷಾಂತರ ರೂ. ಖರ್ಚು ಮಾಡದೆ ಮದುವೆ(Marriage) ಆಗಲು ಸಾಧ್ಯವೇ ಇಲ್ಲವೇನೋ ಅನಿಸುತ್ತದೆ. ಆದರೆ ಅಚ್ಚರಿ ಎಂಬಂತೆ ಇಲ್ಲೊಬ್ಬಳು ಮದುಮಗಳು ಎಲ್ಲರೂ ಹುಬ್ಬೇರುವಂತೆ ಹಸೆಮಣೆಯೇರಿದ್ದಾಳೆ..

ಹೌದು, ಹಿಂದಿ ಧಾರಾವಾಹಿ ‘ತಾರಕ್ ಮೆಹ್ತಾ’ ನಟ ದಿಲೀಪ್ ಜೋಶಿಯವರ ಮಗಳು ಮದುವೆ ಮಂಟಪದಲ್ಲಿ ಸಹಜವಾಗಿ ತಲೆಯಲ್ಲಿರುವ ಬಿಳಿ ಕೂದಲಿನೊಂದಿಗೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದಿ ಕಿರುತೆರೆ ನಟ ದಿಲೀಪ್ ಜೋಶಿಯವರು ಸುಂದರವಾಗಿ ರೆಡಿಯಾದ ತಮ್ಮ ಮಗಳು ನಿಯತಿ ಜತೆ ಮದುವೆ ಮನೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂ (Instagram)ನಲ್ಲಿ ಶೇರ್ ಮಾಡಿದ್ದಾರೆ. 

Viral video: ಲೆಹಂಗಾ ಬೇಡ... ಹರಿದ ಜೀನ್ಸ್‌ನಲ್ಲಿ ಹಸೆಮಣೆ ಏರಲು ಹೊರಟ ವಧು

ಇತ್ತೀಚೆಗಷ್ಟೇ ದಿಲೀಪ್ ಪುತ್ರಿ ನಿಯತಿ, ಯಶೋವರ್ಧನ್ ಮಿಶ್ರಾ ಅವರನ್ನು ವಿವಾಹವಾದರು. ನಾಸಿಕ್‌ನಲ್ಲಿ ಗುಜರಾತಿ ಸಂಪ್ರದಾಯದಂತೆ ಮದುವೆ ನಡೆಯಿತು. ಈ ಮದುವೆಯಲ್ಲಿ ಅದ್ಧೂರಿ ಮದುವೆ ಮಂಟಪ, ಆಸನದ ವ್ಯವಸ್ಥೆ, ಊಟೋಪಚಾರಕ್ಕಿಂತ ಮದುವೆಗೆ ಬಂದ ಜನರ ಗಮನ ಸೆಳೆದಿದ್ದು, ಮದುಮಗಳು ರೆಡಿಯಾದ ರೀತಿ. ಹೌದು, ಎಲ್ಲಾ ಬ್ರೈಡ್ ಮದುವೆಗಾಗಿ ಹೇರ್ ಕಲರಿಂಗ್ (Hair coloring) ಮಾಡಿ ಸಿದ್ಧಗೊಂಡರೆ, ಇಲ್ಲಿ ಮದುಮಗಳು ಹೇರ್ ಕಲರಿಂಗ್ ಮಾಡದೆ ತಮ್ಮ ಬಿಳಿ ಕೂದಲಿ (White Hair)ನಲ್ಲಿಯೇ ಹಸೆಮಣೆಯೇರಿದ್ದಾರೆ.

ಮಗಳ ದಾಂಪತ್ಯ ಸುಖಮಯವಾಗಿ ಸಾಗಲಿ ಎಂದು ಹಾರೈಸಿ ದಿಲೀಪ್ ಮಗಳ ಜತೆ ಕ್ಲಿಕ್ಕಿಸಿಕೊಂಡಿರುವ ಫೋಟೋ (Photo)ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳಲ್ಲಿ ಮದುಮಗಳ ಲುಕ್ ಎಲ್ಲರ ಗಮನಸೆಳೆದಿದೆ. ಮದುಮಗಳ ಬೋಲ್ಡ್ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪೋಟೋಗೆ ರಾಶಿಗಟ್ಟಲೆ ಕಮೆಂಟ್‌ಗಳು ಬಂದಿವೆ.

ಸೌಂದರ್ಯಕ್ಕೆ ಬಣ್ಣವಿಲ್ಲ ಎಂದು ಹೇಳುತ್ತಾರೆ. ಕಪ್ಪು, ಬಿಳುಪು, ಕಂದು, ಬೂದು ಎಲ್ಲವೂ ಸುಂದರವೇ, ನೋಡುವ ಮನಸ್ಸು ಪರಿಶುದ್ಧವಾಗಿರಬೇಕಷ್ಟೇ ಎಂಬ ಮಾತು ನಿಜ ಎಂಬುದನ್ನು ನಿಯತಿ ಸಾಬೀತುಪಡಿಸಿದ್ದಾರೆ. ಫೋಟೋದಲ್ಲಿ ಹೇರ್ ಕಲರಿಂಗ್ ಮಾಡದ ಮದುಮಗಳು ಖುಷಿಯಿಂದ ಎಲ್ಲಾ ಪೋಟೋಗಳಿಗೆ ಪೋಸ್ ನೀಡಿದ್ದಾಳೆ. ಸಾವಿರಾರು ಅತಿಥಿಗಳ ಎದುರು ಯಾವುದೇ ಸಂಕೋಚವಿಲ್ಲದೆ ತಮ್ಮ ಬಿಳಿಕೂದಲಿನಲ್ಲೇ ಕಾಣಿಸಿಕೊಂಡಿದ್ದಾಳೆ.

ಮದುವೆ ಡ್ರೆಸ್ ಬೇಡ್ವಂತೆ, ನೈಟ್ ಡ್ರೆಸ್ ಸಾಕಪ್ಪಾ ಅಂತಿದ್ದಾಳೆ ಈ ವಧು

ಫೋಟೋದಲ್ಲಿ ಮದುಮಗಳು ಬನಾರಸಿ ಸೀರೆಯುಟ್ಟು, ಆಭರಣಗಳು ಧರಿಸಿ ಮೇಕಪ್ ಮಾಡಿಕೊಂಡಿದ್ದರೂ ಕೂದಲಿಗೆ ಕೃತಕ ಬಣ್ಣ ಹಚ್ಚಿಕೊಂಡಿಲ್ಲ. ಬದಲಾಗಿ ತಮ್ಮ ಬಿಳಿ ಕೂದಲಿನ ಮೇಲೆಯೇ ಮಾಂಗ್ ಟೀಕಾ ಆಭರಣವನ್ನು ಧರಿಸಿದ್ದಾರೆ. ಈ ಮೂಲಕ ಮದುಮಗಳು ಅಂದರೆ ಹೀಗೆ ಇರಬೇಕು ಅನ್ನೋ ಸ್ಟೀರಿಯೋ ಟೈಪ್ ಮನೋಭಾವವನ್ನು ಪ್ರಶ್ನಿಸಿದ್ದಾರೆ. 

ಮದುಮಗಳು ನಿಯತಿ ಫೋಟೋಗೆ ಸಾವಿರಾರು ಲೈಕ್ಸ್, ಕಮೆಂಟ್ಸ್ ಬಂದಿದ್ದು ಹಲವರು ಬ್ಯೂಟಿಫುಲ್, ಪ್ರೆಟ್ಟೀ, ಗಾರ್ಜಿಯಸ್ ಬ್ರೈಡ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ. ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ತಮ್ಮ ಕಮೆಂಟ್‌ನಲ್ಲಿ ಎಲ್ಲರೂ ಯಾರನ್ನೋ ಮೆಚ್ಚಿಸಲು ರೆಡಿಯಾಗುವ ಈ ದಿನಗಳಲ್ಲಿ ನೀವು ಯಾರನ್ನೂ ಮೆಚ್ಚಿಸದೆ ನಿಮ್ಮ ಖುಷಿಗಾಗಿ ರೆಡಿಯಾಗಿರುವುದು ಅತ್ಯಂತ ಖುಷಿಯ ವಿಚಾರ ಎಂದು ಕಮೆಂಟಿಸಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?