Sara Tendulkar Now a Model: ಸಚಿನ್ ತೆಂಡುಲ್ಕರ್ ಪುತ್ರಿ ಈಗ ಮಾಡೆಲ್, ಮೊದಲ ವಿಡಿಯೋ ಇಲ್ಲಿದೆ

By Suvarna NewsFirst Published Dec 8, 2021, 11:54 AM IST
Highlights

ಮಾಡೆಲಿಂಗ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಸಚಿನ್ ಪುತ್ರಿ
ಫ್ಯಾಷನ್ ಬ್ರ್ಯಾಂಡ್ ನ ವಿಡಿಯೋದಲ್ಲಿ ಸಾರಾ ತೆಂಡುಲ್ಕರ್
ಇನ್ಸ್ ಟಾಗ್ರಾಮ್ ನಲ್ಲಿ 1.6 ಮಿಲಿಯನ್ ಫಾಲೋವರ್ಸ್
 

ಬೆಂಗಳೂರು (ಡಿ.08): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ (Sara Tendulkar) ತಮ್ಮ ಮಾಡೆಲಿಂಗ್ ವೃತ್ತಿ ಜೀವನವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.  ಇಬ್ಬರು ಮಾಡೆಲ್ ಗಳ ಜೊತೆ ಪ್ರಖ್ಯಾತ ಕ್ಲಾತಿಂಗ್ ಬ್ರ್ಯಾಂಡ್ ನ ವಿಡಿಯೋದಲ್ಲಿ ಸಾರಾ ತೆಂಡುಲ್ಕರ್ ಕಾಣಿಸಿಕೊಂಡಿದ್ದಾರೆ. ಅದಲ್ಲದೆ, ಸ್ವತಃ ಸಾರಾ ತೆಂಡುಲ್ಕರ್ ಕೂಡ ತಾವು ಸಾಕಷ್ಟು ಪ್ರಖ್ಯಾತವಾಗಿರುವ ಇನ್ಸ್ ಟಾಗ್ರಾಮ್ ( Instagram) ವೇದಿಕೆಯಲ್ಲೂ ಇದೇ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.  ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ( Sachin Tendulkar)ಪುತ್ರಿ ಸಾರಾ ತೆಂಡುಲ್ಕರ್, ಅಜಿಯೋ (Ajio) ಹೈ ಎಂಡ್ ಫ್ಯಾಶನ್ ಡಿವಿಷನ್- ಅಜಿಯೋ ಲಕ್ಸ್ (Ajio Luxe) ಆಡ್-ಕ್ಯಾಂಪೇನ್ ವಿಡಿಯೋದಲ್ಲಿ ಇತರ ಮಾಡೆಲ್ ಗಳಾದ ಬನಿತಾ ಸಂಧು (Banita Sandhu) ಹಾಗೂ ತಾನಿಯಾ ಶ್ರಾಫ್ (Tania Shroff) ಜೊತೆ ಕಾಣಿಸಿಕೊಂಡಿದ್ದಾರೆ. ಕಂಪನಿ ಕೂಡ ತನ್ನ ಅಧಿಕೃತ ಇನ್ಸ್ ಟ್ರಾಗ್ರಾಮ್ ಪುಟದಲ್ಲಿ ಸಾರಾ ತೆಂಡುಲ್ಕರ್ ಅವರ ವಿಡಿಯೋ ಮಾತ್ರವಲ್ಲದೆ, ಸಾರಾ ಅವರನ್ನು ಮಾಡೆಲ್ ಆಗಿ ಲಾಂಚ್ ಮಾಡುವ ಚಿತ್ರವೊಂದನ್ನೂ ಪೋಸ್ಟ್ ಮಾಡಿದೆ. "ಸೆಲ್ಫ್ ಪೋರ್ಟ್ರೇಟ್" ಎನ್ನುವ ಹೆಸರಿನಲ್ಲಿರುವ ಈ ವಿಡಿಯೋದಲ್ಲಿ ಈ ಮೂವರು ಜೊತೆಯಾಗಿ ಇರುವ ವಿಡಿಯೋ ಜೊತೆ ವೈಯಕ್ತಿಕವಾಗಿ ಪೋಸ್ ನೀಡಿದ ವಿಡಿಯೋಗಳೂ ಇವೆ.

ಈವರೆಗೂ ಸಾರಾ ಅವರನ್ನು ಸಚಿನ್ ತೆಂಡುಲ್ಕರ್ ಪುತ್ರಿ ಎನ್ನುವ ಕಾರಣಗಳಿಂದಲೇ ಹೆಚ್ಚಾಗಿ ಗುರುತಿಸುತ್ತಿದ್ದರು. ಆದರೆ, ಈ ವಿಡಿಯೋ ನೋಡಿದ ಬಳಿಕ ಸಹಜವಾಗಿ ತಿಳಿಯುವುದೇನೆಂದರೆ ತನ್ನದೇ ಆದ ವ್ಯಕ್ತಿತ್ವವನ್ನು ಮಾಡಿಕೊಳ್ಳುವ ಹಾದಿಯಲ್ಲಿ ದಿಟ್ಟವಾಗಿ ಮುನ್ನಡೆದಿದ್ದಾರೆ. ಈ ವರ್ಷದ ಆರಂಭದಲ್ಲಿಯೂ ಸಾರಾ ತಮ್ಮ ಇನ್ಸ್ ಟಾಗ್ರಾಮ್ ಪುಟದಲ್ಲಿ  ಜಾಹೀರಾತೊಂದನ್ನು ಶೇರ್ ಮಾಡಿದ್ದರು. ಜಿಮ್ ವೇರ್ ಬ್ರ್ಯಾಂಡ್ ಗೆ ಪೋಟೋಶೂಟ್ ಮಾಡಿಸಿರುವ ಚಿತ್ರವನ್ನು ತಮ್ಮ ಹ್ಯಾಂಡಲ್ ನಲ್ಲಿ ಪ್ರಕಟಿಸಿದ್ದರು. ಕಳೆದ ತಿಂಗಳು, ಬ್ಲಾಕ್  ಬಾರ್ಡೋಟ್ ಲೆಹೆಂಗಾ (Black Bardot lehenga) ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. 

 

 
 
 
 
 
 
 
 
 
 
 
 
 
 
 

A post shared by Ajio Luxe (@ajioluxe)


ಇನ್ಸ್ ಟಾಗ್ರಾಮ್ ನಲ್ಲಿ ಸಾಕಷ್ಟು ಜನಪ್ರಿಯವಾಗಿರುವ 24 ವರ್ಷದ ಸಾರಾ ತೆಂಡುಲ್ಕರ್, 1.6 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, ತಮ್ಮ ಫ್ಯಾಶನ್ ಟ್ರೆಂಡ್ ಗಳನ್ನು ಕಾಲಕಾಲಕ್ಕೆ ಹೊಸ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಿಳಿಸುತ್ತಿದ್ದಾರೆ.

ಸಾರಾ ತೆಂಡೂಲ್ಕರ್‌ಗೆ ನೆಟ್ಟಿಗರ ಪ್ರಶ್ನೆ!

ಮುಂಬೈನ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ವ್ಯಾಸಂಗ ಮಾಡಿದ್ದ ಸಾರಾ ತೆಂಡುಲ್ಕರ್, ಲಂಡನ್ ನ (London) ಯುನಿವರ್ಸಿಟಿ ಕಾಲೇಜಿನಿಂದ ಪದವಿ ಪಡೆದಿದ್ದಾರೆ.ಸಾರಾ ಮಾತ್ರವಲ್ಲದೆ, ಅವರ ಸಹೋದರ ಅರ್ಜುನ್ ತೆಂಡುಲ್ಕರ್ (Arjun Tendulkar) ಕೂಡ ಕ್ರಿಕೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮುಂಬೈ ಪರವಾಗಿ ದೇಶೀಯ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿರುವ ಎಡಗೈ ಆಲ್ರೌಂಡರ್, ಕಳೆದ ಐಪಿಎಲ್ ನಲ್ಲಿ (IPL) ಮುಂಬೈ ಇಂಡಿಯನ್ಸ್ (Mumbai Indians) ತಂಡದ ಭಾಗವಾಗಿದ್ದರು.

ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್‌!

ಎಂಟು ವರ್ಷಗಳ ಹಿಂದೆ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಸಚಿನ್ ತೆಂಡುಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಬಾರಿಸಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಅದರೊಂದಿಗೆ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯೂ ಅವರ ಹೆಸರಲ್ಲಿದೆ. ಪ್ರಸ್ತುತ ಇರುವ ಕ್ರಿಕೆಟಿಗರ ಪಟ್ಟಿಯಲ್ಲಿ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ(Virat Kohli) ಸಚಿನ್ ದಾಖಲೆಯನ್ನು ಮುರಿಯುವ ಅವಕಾಶವಿದ್ದರೂ, ಅವರಿಗೆ ಈ ದಾಖಲೆ ಸರಿಗಟ್ಟಲು ಇನ್ನೂ 30 ಶತಕಗಳ ಅಗತ್ಯವಿದೆ.

 

 

click me!