ಈಗಿನ ದಿನಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಮೂಲಿ ಎನ್ನುವಂತಾಗಿದೆ. ಮೂಗು, ಕಣ್ಣು, ಬಾಯಿ ಅಂತಾ ದೇಹದ ಆಕಾರ ಬದಲಿಸುವ ಈ ಪ್ಲಾಸ್ಟಿಕ್ ಸರ್ಜರಿ ಹೆಚ್ಚು ಸುರಕ್ಷಿತವಲ್ಲ. ಇದ್ರ ಬಗ್ಗೆ ನಟಿ ಕಾಜೋಲ್ ಕೂಡ ಮಾತನಾಡಿದ್ದಾರೆ.
ಸಿನಿಮಾ ರಂಗದಲ್ಲಿ ನೆಲೆ ನಿಲ್ಬೇಕು ಅಂದ್ರೆ ಸೌಂದರ್ಯ ಬಹಳ ಮುಖ್ಯ. ಅದ್ರಲ್ಲೂ ನಟಿಯರು ಸ್ಲಿಮ್ ಆಂಡ್ ಫಿಟ್ ಆಗಿಲ್ಲವೆಂದ್ರೆ ಬೆರಳೆಣಿಕೆ ಚಿತ್ರ ಮಾಡಿ ನಾಪತ್ತೆಯಾಗ್ಬೇಕಾಗುತ್ತೆ. ಎಲ್ಲರ ಮುಂದೆ ಚೆಂದ ಕಾಣ್ಬೇಕು, ಸಿನಿಮಾಗಳಲ್ಲಿ ಆಫರ್ ಸಿಗ್ಬೇಕು ಎನ್ನುವ ಕಾರಣಕ್ಕೆ ಅನೇಕ ನಟ ನಟಿಯರು ಪ್ಲಾಸ್ಟಿಕ್ ಸರ್ಜರಿಗಳ ಮೊರೆ ಹೋಗ್ತಾರೆ. ಈಗಾಗಲೇ ಅನೇಕ ಖ್ಯಾತ ನಟ ನಟಿಯರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಆದ್ರೆ ಈ ಪ್ಲಾಸ್ಟಿಕ್ ಸರ್ಜರಿ ಮೇಲೆ ಬಾಲಿವುಡ್ ಬ್ಲ್ಯಾಕ್ ಬ್ಯೂಟಿ ಕಾಜಲ್ ಗೆ ಒಲವಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಕಿರಿಯ ನಟಿಯರಿಗೆ ಕಿವಿಮಾತು ಹೇಳಿದ್ದಾರೆ.
ಯಾವುದೇ ಒತ್ತಡ (Stress) ಕ್ಕೆ ಒಳಗಾಗಿ ಪ್ಲಾಸ್ಟಿಕ್ ಸರ್ಜರಿ (Plastic Surgery ) ಗೆ ಒಳಗಾಗಬೇಡಿ ಎಂದು ಯುವ ನಟಿಯರಿಗೆ ಕಾಜೋಲ್ ಸಲಹೆ ನೀಡಿದ್ದಾರೆ. ಬಾಲಿವುಡ್ ನ ಕೃಷ್ಣಸುಂದರಿ ಕಾಜೋಲ್ (Kajol) ಈಗ್ಲೂ ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಕಾಜೋಲ್ ಅಭಿನಯದ Lust Stories 2 ಸಿನಿಮಾ ಬಿಡುಗಡೆಯಾಗಿದೆ. ತಮ್ಮ ಹದಿನೇಳನೇ ವಯಸ್ಸಿನಲ್ಲೇ ಬೇಕುದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಕಾಜೋಲ್, ಅಭಿನಯದಲ್ಲಿ ಎತ್ತಿದ ಕೈ. ಹಾಗೇ ಅನೇಕ ಬಾರಿ ತಮ್ಮ ನೇರನುಡಿಗಳಿಂದ ಸುದ್ದಿ ಮಾಡುತ್ತಾರೆ.
ಮೈ ಪೂರ್ತಿ ಮುಚ್ಕೊಂಡ ಬಟ್ಟೆಯಲ್ಲಿ ಉರ್ಫಿ? ಸೂರ್ಯ ಯಾವ ಕಡೆ ಹುಟ್ಟಿದ್ದಾನೆಂದ ನೆಟ್ಟಿಗರು!
ನಿಮ್ಮನ್ನು ನೀವು ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸಿಕೊಳ್ಳಬೇಡಿ: ಸದ್ಯ ಕಾಜೋಲ್ ತಮ್ಮ ಚೊಚ್ಚಲ ಓಟಿಟಿ ಚಿತ್ರ ದ ಟ್ರಯಲ್ ನ ಪ್ರೋಮೊಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ದ ಟ್ರಯಲ್ ಚಿತ್ರದಲ್ಲಿ ಕಾಜೋಲ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸುಪರ್ನ್ ವರ್ಮಾ ನಿರ್ದೇಶಿಸಿದ್ದಾರೆ. ಚಿತ್ರದ ಪ್ರಚಾರದ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕಾಜೋಲ್, ಯುವತಿಯರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗದೇ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಜೋಲ್, ಕತ್ತರಿ, ಚಾಕುವಿನ ಪ್ರಯೋಗ ನಿಮ್ಮ ಸೌಂದರ್ಯದ ಮೇಲಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ. ದೇವರು ನಿಮ್ಮನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸೃಷ್ಟಿ ಮಾಡಿದ್ದಾನೆ. ದೇವರು ನಿಮಗೆ ಯಾವುದನ್ನು ಕೊಡಲಿಲ್ಲ ಎಂಬ ಕೊರಗು ನಿಮಗಿದೆಯೋ ಆ ಕೊರತೆಯನ್ನು ನೀಗಿಸಲು ಮೇಕ್ ಅಪ್ ಯಾವಾಗಲೂ ಇರುತ್ತದೆ. ಅದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕಾಜೋಲ್ ಹೇಳಿದ್ದಾರೆ. ಯಾರದೇ ಒತ್ತಡಕ್ಕೆ ಒಳಗಾಗಿ ನೀವು ಸರ್ಜರಿ ಮಾಡಿಸಿಕೊಳ್ಳುವುದು ಯೋಗ್ಯವಲ್ಲ. ನಿಮ್ಮ ಸೌಂದರ್ಯ ಹಾಗೂ ನಿಮ್ಮ ಜೀವನದ ಕುರಿತು ನೀವೇ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಇತರರು ಆಡುವ ಮಾತುಗಳಿಗೆ ಕಿವಿಕೊಡಬಾರದು ಎಂದು ಯುವ ನಟಿಯರಿಗೆ ಕಾಜೋಲ್ ಕಿವಿ ಮಾತು ಹೇಳಿದ್ದಾರೆ.
ಜನರ ಮಾತು ಮೆಟ್ಟಿ ನಿಂತವಳು ನಾನು : ನನ್ನ ಬಣ್ಣದ ಕುರಿತು ಹಾಗೂ ನಾನು ದಪ್ಪಗಿದ್ದೇನೆ ಎಂದು ಹಲವಾರು ಮಂದಿ ಟೀಕಿಸಿದ್ದರು. ನಾನು ಅವರ ಮಾತಿಗೆ ಬೆಲೆ ನೀಡಲಿಲ್ಲ. ಅವರ ಮಾತುಗಳು ನನ್ನನ್ನು ದುರ್ಬಲಗೊಳಿಸದಂತೆ ನಾನು ನೋಡಿಕೊಂಡೆ ಎಂದು ಕಾಜೋಲ್ ಹೇಳಿದ್ದಾರೆ.
ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್ ಸಿಂಗ್ ಜೊತೆ ಫೋಟೋ ಲೀಕ್!
ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಬೆಡಗಿಯರು : ಬಾಲಿವುಡ್ ನಲ್ಲಿ ಅನೇಕರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್, ಕತ್ರಿನಾ ಕೈಫ್, ಕಂಗನಾ ರನೌತ್, ಪ್ರೀತಿ ಜಿಂಟಾ, ಬಿಪಾಶಾ ಬಸು, ವಾಣಿ ಕಪೂರ್, ಸುಶ್ಮಿತಾ ಸೇನ್, ಆಯೇಶಾ ಟಾಕಿಯಾ, ಮೌನಿ ರಾಯ್, ಶ್ರುತಿ ಹಾಸನ್, ಜಾನ್ವಿ ಕಪೂರ್ ಸೇರಿದಂತೆ ಅನೇಕರ ಹೆಸರಿದೆ.