ಸ್ಮಾರ್ಟ್ ಬಾಯ್‌ಫ್ರೆಂಡ್: ವೀಡಿಯೋ ನೋಡಿ ನಮಗೂ ಇಂತ ಗೆಳೆಯ ಬೇಕೆಂದ ಹುಡುಗೀರು

By Suvarna News  |  First Published Jun 29, 2023, 3:00 PM IST

ದುಬಾರಿ ವ್ಯಾನಿಟಿ ಬ್ಯಾಗ್ ನಿಮಗೆ  ಗಿಫ್ಟ್‌ ಆಗಿ ಸಿಗಬೇಕು ಎಂದು ನೀವೇನಾದರು ಬಯಸಿದ್ದರೆ ನಿಮ್ಮ ಬಾಯ್‌ಫ್ರೆಂಡ್ ಕೋಟ್ಯಾಧಿಪತಿಯೇ ಆಗಿರಬೇಕಷ್ಟೇ ಅಷ್ಟೊಂದು ದುಬಾರಿ ಇರುತ್ತವೆ ಈ ವ್ಯಾನಿಟಿ ಬ್ಯಾಗ್‌ಗಳು.


ದುಬಾರಿ ಬ್ರಾಂಡೆಡ್ ವ್ಯಾನಿಟಿ ಬ್ಯಾಗ್ ತಗೋಬೇಕು. ಎಲ್ಲರ ಮುಂದೆ ಹಾಕೊಂಡು ಓಡಾಡ್ಬೇಕು ಎಂದು ಬಹಳ  ಜನ (ಎಲ್ಲರೂ ಅಲ್ಲ) ಆಸೆ ಪಡ್ತಾರೆ. ಆದರೆ ಅವುಗಳ ಬೆಲೆ ಲಕ್ಷಕ್ಕಿಂತಲೂ ಅಧಿಕ ಇರುತ್ತದೆ. ಅವುಗಳನ್ನು ಜನಸಾಮಾನ್ಯರು ಕೊಳ್ಳಲು ಸಾಧ್ಯವೇ ಇಲ್ಲ, ಶ್ರೀಮಂತರು ಸೆಲೆಬ್ರಿಟಿಗಳಷ್ಟೇ ಇಂತಹ ಲಕ್ಷಾಂತರ ಬೆಲೆಯ ವ್ಯಾನಿಟಿ ಬ್ಯಾಗ್  ಧರಿಸಿ ಓಡಾಡ್ತಾರೆ. ಮಹಿಳೆಯರ ಸ್ಟೈಲ್‌ಗೆ ತನ್ನದೇ ವಿಭಿನ್ನ ಸ್ಟೈಲ್ ಸ್ಟೇಟ್‌ಮೆಂಟ್ ನೀಡುವ ಈ ವ್ಯಾನಿಟಿ ಬ್ಯಾಗ್ ಬಹಳಷ್ಟು ಹೆಂಗೆಳೆಯರ ಅಚ್ಚುಮೆಚ್ಚಿನ ವಸ್ತು ಎಂದರೆ ತಪ್ಪಾಗಲಾರದು. ಇದು ನಿಮಗೆ ಗಿಫ್ಟ್‌ ಆಗಿ ಸಿಗಬೇಕು ಎಂದು ನೀವೇನಾದರು ಬಯಸಿದ್ದರೆ ನಿಮ್ಮ ಬಾಯ್‌ಫ್ರೆಂಡ್ ಕೋಟ್ಯಾಧಿಪತಿಯೇ ಆಗಿರಬೇಕಷ್ಟೇ ಅಷ್ಟೊಂದು ದುಬಾರಿ ಇರುತ್ತವೆ ಈ ವ್ಯಾನಿಟಿ ಬ್ಯಾಗ್‌ಗಳು. ಜನಸಾಮಾನ್ಯರು ಸುಮ್ಮನೇ ಆ ದುಬಾರಿ ಬ್ಯಾಗ್ ಗಿಫ್ಟ್ ಬೇಕು ಎಂದು ಕೇವಲ ತಮಾಷೆ ಮಾಡಬಹುದಷ್ಟೇ. ಆದರೆ ಹೀಗೆ ಗೆಳತಿಯೊಬ್ಬಳು ಈ ರೀತಿ ತನ್ನ ಗೆಳೆಯನಲ್ಲಿ ತಮಾಷೆಯಾಗಿ ನನಗೆ ಫ್ರಾನ್ಸ್‌ನ ಖ್ಯಾತ ಲಕ್ಸುರಿ ಬ್ರಾಂಡ್ ಬ್ಯಾಗ್ ಆದ ಹರ್ಮ್ಸ್ ಬ್ರಾಂಡ್‌ನ ಬ್ಯಾಗ್ ಅನ್ನು ಗಿಫ್ಟ್ ನೀಡುವಂತೆ ಕೇಳಿದ್ದಾಳೆ.

ಇತ್ತ ಗೆಳತಿಯೇ ಸ್ವತಃ ಗಿಫ್ಟ್ (Gift) ನೀಡುವಂತೆ ಕೇಳಿದ್ದಾಳೆ. ಆಕೆಯ ಆಸೆ ಈಡೇರಿಸೋಣ ಎಂದು ಹರ್ಮ್ಸ್ (Herms Brand) ಬ್ರಾಂಡ್‌ನ ಆನ್‌ಲೈನ್ ಸ್ಟೋರ್‌ಗೆ ಹೋದ ಬಾಯ್‌ಫ್ರೆಂಡ್‌ ಅಲ್ಲಿ ಅವುಗಳ ಬೆಲೆ ನೋಡಿ ಶಾಕ್ ಆಗಿದ್ದು, ಅದೇ ರೀತಿ ತಾನೇ ಒಂದು ಬ್ಯಾಗ್ ತಯಾರಿಸಲು ಮುಂದಾಗಿದ್ದಾನೆ. ಅದಕ್ಕಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಡಿ ಹಲವು ವೀಡಿಯೋಗಳನ್ನು ನೋಡಿದ ಆತ ಅದಕ್ಕೆ ಬೇಕಾದಂತಹ ಹಲವು ವಸ್ತುಗಳನ್ನು ತಂದು ಕಡೆಗೂ ಬ್ಯಾಗ್ ತಯಾರಿಸಿ ಗೆಳತಿಗೆ ನೀಡಿದ್ದಾನೆ. ಗೆಳತಿಗೂ ಈತ ತಯಾರಿಸಿದ ಬ್ಯಾಗ್ ಇಷ್ಟವಾಗಿದೆ.  ಬ್ಯಾಗ್ ಪಕ್ಕಾ ಲಕ್ಸುರಿ ಬ್ರಾಂಡ್‌ ರೀತಿ ಇಲ್ಲದಿದ್ದರೂ ಗೆಳತಿ ಅದನ್ನು ಮೆಚ್ಚಿದ್ದಾಳೆ ಎಂದು ಈ ಹುಡುಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿ ಹೇಳಿಕೊಂಡಿದ್ದಾನೆ. ಈತನ ಕಾರ್ಯವನ್ನು ನೆಟ್ಟಿಗರು ಮೆಚ್ಚಿದ್ದು, ಅನೇಕರು ಆತ ಗೆಳತಿಗಾಗಿ ಇಷ್ಟೆಲ್ಲಾ ಮಾಡಿದ್ದು ದೊಡ್ಡ ಸಾಧನೆ ಎಂದು ಕೊಂಡಾಡುತ್ತಿದ್ದಾರೆ.  ಬ್ಯಾಗ್ ಚೆನ್ನಾಗಿದೆಯೋ ಇಲ್ಲವೋ ಆದರೆ ಆತ ಅದಕ್ಕೆ ವ್ಯಯಿಸಿದ ಸಮಯ ಹಣ ಎಲ್ಲವೂ ಬಹಳ ಅಮೂಲ್ಯ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

ತಾತನ ಭರ್ಜರಿ ಕೊಡುಗೆ: ಹುಟ್ಟಿದ ಎರಡೇ ದಿನಕ್ಕೆ ಕೋಟ್ಯಾಧಿಪತಿಯಾದ ಮಗು

ಆತ ಶೇರ್ ಮಾಡಿರುವ ವೀಡಿಯೋದಲ್ಲಿ ಬ್ಯಾಗ್ ತಯಾರಿಸಿರುವ ವೀಡಿಯೋವನ್ನು ಹಂಚಿಕೊಂಡಿದ್ದಾನೆ.  ನನ್ನ ಗೆಳತಿಗಾಗಿ ಮನೆಯಲ್ಲೇ ತಯಾರಿಸಿದ ಬ್ಯಾಗ್ ಎಂದು ಬರೆದುಕೊಂಡಿದ್ದು, ಇನ್ಸ್ಟಾಗ್ರಾಮ್‌ನಲ್ಲಿನಲ್ಲಿ (Instagram) ವಿವಿಧ ಬ್ರಾಂಡೆಡ್ ಬ್ಯಾಗ್ ತಯಾರಿಕ ಸಂಸ್ಥೆಗಳಿಗೆ ಈ ವೀಡಿಯೋವನ್ನು ಟ್ಯಾಗ್ ಮಾಡಿದ್ದಾನೆ. ಇಂಟರ್‌ನೆಟ್‌ನಲ್ಲಿ ಆತನ ಗೆಳತಿ ಕೇಳಿದ ಬ್ಯಾಗ್ ಬೆಲೆ 100,0000 ರೂಪಾಯಿ ಇದೆ. ಆದರೆ ಈತ ತಯಾರಿಸಿದ ಬ್ಯಾಗ್‌ನ ಮೆಟಿರಿಯಲ್‌ 400 ಡಾಲರ್ ವೆಚ್ಚವಾಗಿದೆಯಂತೆ. ವೀಡಿಯೋ ನೋಡಿದ ಅನೇಕರು ಈ ಯುವಕನನ್ನು ಹೊಗಳಿದ್ದು, ಇದರ ಬೆಲೆ ಲಕ್ಸುರಿ ಬ್ಯಾಗ್‌ನ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿದೆ ಏಕೆಂದರೆ ನೀವು ಇದನ್ನು ಬೆಲೆ ಕಟ್ಟಲಾಗದ ಪ್ರೀತಿಯಿಂದ ತಯಾರಿಸಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಒಳ್ಳೆಯ ಪ್ರಯತ್ನ, ನಿನಗೆ ಗರ್ಲ್‌ಫ್ರೆಂಡ್ ಇದ್ದಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಸ್ವಿಜರ್ಲ್ಯಾಂಡ್ ನಲ್ಲಿ ದುಬಾರಿ ಬಂಗಲೆ ಖರೀದಿಸಿದ ಭಾರತೀಯ ಉದ್ಯಮಿ ಪಂಕಜ್ ಓಸ್ವಾಲ್; ಅದರ ಮೌಲ್ಯ ಎಷ್ಟು ಗೊತ್ತಾ?

ಒಟ್ಟಿನಲ್ಲಿ ಇಲ್ಲಿ ಆತ ಬ್ಯಾಗ್ ದುಬಾರಿ ನೀಡಿದ್ದಾನೋ ಇಲ್ಲವೋ ಆದರೆ ಆತ ಗೆಳತಿಯ ಆಸೆ ಈಡೇರಿಸಲು ಪಟ್ಟ ಪರಿಶ್ರಮ ಅದಕ್ಕೆ ನೀಡಿದ ಸಮಯ ನೆಟ್ಟಿಗರ ಅದರಲ್ಲೂ ಹೆಂಗೆಳೆಯರ ಮನ ಸೆಳೆದಿದೆ. ಅಲ್ಲದೇ ಬ್ಯಾಗ್ ಬಹಳ ಚೆನ್ನಾಗಿದೆ ದುಬಾರಿ ಬ್ಯಾಗ್‌ಗಿಂದ ಇದೇ ವಾಸಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 

 

click me!