ನಟಿ ಅದಿತಿ ಹೇರ್​ಕಟ್ ಸೂಪರ್ರೋ, ಪನ್ನೀರ್​ ರೆಸಿಪಿ ಸೂಪರ್ರೊ? ಪತಿ ರಿಯಾಕ್ಷನ್ ಹೇಗಿತ್ತು?

By Suvarna News  |  First Published Jun 29, 2023, 5:00 PM IST

ಸ್ಯಾಂಡಲ್​ವುಡ್​​ ನಟಿ ಅದಿತಿ ಪ್ರಭುದೇವ್​ ಅವರು ಹೊಸ ಹೇರ್​ಸ್ಟೈಲ್​ ಮಾಡಿಕೊಂಡು, ಜೊತೆಗೆ ಪನ್ನೀರ್​ ರೆಸಿಪಿ ಮಾಡಿ ಪತಿಗೆ ಕಾಯುತ್ತಿದ್ದರೆ, ಪತಿ ಯಶಸ್​ ರಿಯಾಕ್ಷನ್​ ಹೇಗಿದೆ ನೋಡಿ.. 
 


ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಅವರು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 1994, ಜನವರಿ 13 ರಂದು ಜನಿಸಿದ ನಟಿ ಅದಿತಿ,  ಕನ್ನಡ ಸಿನಿಮಾಗಳಲ್ಲಿ  ಮಿಂಚಿದ್ದಾರೆ. ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ,  ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಪ್ರಭುದೇವ ಅವರ ಯಶಸ್ ಪಟ್ಲಾ ಅವರ ಪತ್ನಿಯಾದರು.  ಇದಾದ ಬಳಿಕ  ಅದಿತಿ ಪ್ರಭುದೇವ ಮತ್ತು ಯಶಸ್ ಪಟ್ಲಾ ಜೋಡಿ ಸ್ವಿಟ್ಜರ್ಲ್ಯಾಂಡ್‌ಗೆ ಹಾರಿ ಅಲ್ಲಿಂದ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​  ಮಾಡಿಕೊಂಡರು.  

ಸಾಮಾಜಿಕ ಜಾಲತಾಣದಲ್ಲಿ (social media) ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಪ್ರಭುದೇವ ಅವರು ಹೊಸ ಹೇರ್​ಸ್ಟೈಲ್​ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಕೆಲವೊಂದು ಹೇರ್​ ಬ್ರ್ಯಾಂಡಿನ ಪ್ರಚಾರ ಮಾಡುವ ಮೂಲಕ ನಟಿ ತಮ್ಮ ಹೇರ್​ಸ್ಟೈಲ್​ನ ಕುರಿತು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ. ತಾವು ಇದೇ ಮೊದಲ ಬಾರಿಗೆ ಹೇರ್​ಸ್ಟೈಲ್​ ಮಾಡಿಕೊಂಡಿರುವುದಾಗಿ ಹೇಳಿಕೊಂಡಿರುವ ನಟಿ ಅದಿತಿ ಪ್ರಭುದೇವ, ಈ ಹೇರ್​ಸ್ಟೈಲ್​ನಲ್ಲಿ ತುಂಬಾ  ಮುದ್ದಾಗಿ ಕಾಣಿಸುತ್ತಾರೆ. ತಮ್ಮ ಹೇರ್​ಸ್ಟೈಲ್​ನ ಕುರಿತು ಪತಿ ಯಶಸ್ ಪಟ್ಲಾ ಹೇಗೆ ರಿಯಾಕ್ಟ್​ ಮಾಡುತ್ತಾರೆ ಎಂದು ನೋಡಲು ಉತ್ಸುಕರಾಗಿದ್ದರು. ಇದರ ವಿಡಿಯೋ ಮಾಡಿರುವ ಅವರು ತಮ್ಮ ಪತಿಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Tap to resize

Latest Videos

ಚಿನ್ನದ ಬೆಲೆ ಗಗನ ಮುಟ್ಟಿದರೂ ಬ್ಯಾಗ್‌ಮೇಲೆ MR ಕೆತ್ತಿಸಿಕೊಂಡ ಮೇಘನಾ ರಾಜ್!

ನಂತರ ಪನ್ನೀರ್​ ರೆಸಿಪಿ (Panner Recipe) ರೆಡಿಯಾಗುತ್ತಿದ್ದಂತೆಯೇ ಯಶಸ್​ (Yashas) ಬಂದಾಗ ಪನ್ನೀರ್​ ಕೊಟ್ಟಿದ್ದಾರೆ. ಆರಂಭದಲ್ಲಿ ಪತ್ನಿಯನ್ನು ಗಮನಿಸದ ಯಶಸ್​ ಕೊನೆಗೆ ಅವರನ್ನು ನೋಡಿ ಶಾಕ್​ಗೆ ಒಳಗಾಗುವಂತೆ ಮಾಡಿದ್ದಾರೆ. ಕೊನೆಗೆ ತುಂಬಾ ಚೆನ್ನಾಗಿ ಕಾಣಿಸುತ್ತಿರುವುದಾಗಿ ಹೇಳಿದ್ದಾರೆ. ಪನ್ನೀರ್​ ಕೊಟ್ಟ ನಟಿ ಅದಿತಿ ನನ್ನ ಹೇರ್​ ಕಟ್​ ಸೂಪರ್ರೋ, ಪನ್ನೀರೋ ಎಂದು ಕೇಳಿದ್ದಾರೆ. ಅದಕ್ಕೆ ಯಶಸ್​ ಅವರು ಹೇರ್​ಕಟ್​ ತುಂಬಾ ಚೆನ್ನಾಗಿದೆ, ಪನ್ನೀರ್​ ಅದಕ್ಕಿಂತ ಸೂಪರ್​ ಎಂದು ತಮಾಷೆ ಮಾಡಿದ್ದಾರೆ. ಇದರ ವಿಡಿಯೋಗೆ ಹಲವಾರು ರೀತಿಯ ಕಮೆಂಟ್ಸ್​ಗಳು ಬಂದಿದ್ದು, ಅದಿತಿಯ ಹೊಸ ಸ್ಟೈಲ್​ಗೆ ತುಂಬಾನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ಸಂಪೂರ್ಣ ಪೂರ್ವ ನಿಯೋಜಿತ ಅರ್ಥಾತ್​ ಸ್ಕ್ರಿಪ್ಟೆಡ್​ ಎನ್ನುವುದು ನೋಡಿದರೆ ತಿಳಿಯುತ್ತದೆ ಎಂದು ಕಮೆಂಟ್​  ಮಾಡಿದ್ದಾರೆ. 

ಅಂದಹಾಗೆ 15 ರಿಂದ 20 ನಿಮಿಷದಲ್ಲಿ ಇದನ್ನು ರೆಡಿ ಮಾಡಬಹುದಾದ ನಟಿ ಅದಿತಿ ಅವರ ಪನ್ನೀರ್ ರೆಸಿಪಿ (Paneer receipy) ಹೀಗಿದೆ:
ಬೇಕಿರುವ ಸಾಮಗ್ರಿಗಳು: ಸ್ವಲ್ಪ ಮೊಸರು, ಸ್ವಲ್ಪ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿಣದ ಪುಡಿ, ಸ್ವಲ್ಪ ಖಾರದ ಪುಡಿ, ಟೇಸ್ಟ್​ಗೆ ಜೀರಿಗೆ ಪೌಡರ್​ ಹಾಗೂ ಬೇಕಿದ್ದರೆ ಆರೆಂಗೋ.
ಮಾಡುವ ವಿಧಾನ:   ಗಟ್ಟಿಯಾದ ಮೊಸರಿಗೆ ಎಲ್ಲ ಪೌಡರ್​ಗಳನ್ನು ಹಾಕಿಕೊಂಡು ಚೆನ್ನಾಗಿ ಪೇಸ್ಟ್​ ಮಾಡಬೇಕು. ಈಗ ಪನ್ನೀರ್​ ಕಟ್​ ಮಾಡಿ ಪೇಸ್ಟ್​ಗೆ ಮಿಕ್ಸ್​ ಮಾಡಬೇಕು. ಪುದೀನಾ ಇದ್ದರೆ ಅದನ್ನೂ ಮಿಕ್ಸಿಯಲ್ಲಿ ಹಾಕಿ  ಸೇರಿಸಬೇಕು. ಅರ್ಧ ಗಂಟೆ ಫ್ರಿಜ್​ನಲ್ಲಿ ಇಡಬೇಕು. ಈ ಸಂದರ್ಭದಲ್ಲಿ ಮಸಾಲೆ ಚೆನ್ನಾಗಿ ಮಿಕ್ಸ್​ ಆಗಿರುತ್ತದೆ. ನಂತರ ಪ್ಯಾನ್​ನಲ್ಲಿ ಸ್ವಲ್ಪ ಎಣ್ಣೆ ಹಾಕಿ ನಿಧಾನವಾಗಿ ಫ್ರೈ ಮಾಡಬೇಕು. 

ಸ್ತನ ಬೆವರುವಿಕೆ ಕಿರಿಕಿರಿಯಿಂದ ಮುಕ್ತ ಮುಕ್ತ... ಕೂಲ್​ ಕೂಲ್​ ಅನುಭವ ನೀಡಲಿದೆ TTT

click me!