
ಬೇಸಿಗೆ (Summer) ಮುಗಿದಿದೆ. ಮಳೆ (Rain) ಹನಿ ಭೂಮಿಗೆ ಬೀಳ್ತಿದೆ. ಮಳೆಗಾಲಕ್ಕೆ ಎಲ್ಲ ರೀತಿಯ ತಯಾರಿ ಶುರುವಾಗಿದೆ. ಋತು ಬದಲಾದಂತೆ ನಮ್ಮ ಆರೋಗ್ಯ (Health) ದಿಂದ ಹಿಡಿದು ಅನೇಕ ವಿಷ್ಯ ಬದಲಾಗುತ್ತದೆ. ಮಹಿಳೆಯರ ಬ್ಯಾಗ್ (Bag) ನಲ್ಲಿ ಅಗತ್ಯಕ್ಕೆ ತಕ್ಕಂತೆ ವಸ್ತುಗಳಿರುತ್ತವೆ. ಮಳೆಗಾಲದಲ್ಲಿ ಮಹಿಳೆಯರು ಕೆಲ ವಸ್ತುಗಳನ್ನು ಬ್ಯಾಗ್ ನಲ್ಲಿ ಅಗತ್ಯವಾಗಿ ಇಟ್ಟುಕೊಳ್ಳಬೇಕು. ಇಂದು ನಾವು ಮಳೆಗಾಲದಲ್ಲಿ ಹುಡುಗಿಯರ ಬ್ಯಾಗ್ ನಲ್ಲಿ ಏನೇಲ್ಲ ಇರ್ಬೇಕು ಎಂಬುದನ್ನು ಹೇಳ್ತೇವೆ.
ಮಳೆಗಾಲದಲ್ಲಿ ಬ್ಯಾಗ್ ನಲ್ಲಿರಲಿ ಈ ವಸ್ತು :
ಬೇಬಿ ಪೌಡರ್ (Baby Powder): ಮಳೆಗಾಲದಲ್ಲಿ ಚರ್ಮದ ಹೊಳಪು ಬದಲಾಗುತ್ತದೆ. ಕೆಲವೊಮ್ಮೆ ವಿಪರೀತ ಬೆವರು ಬರುತ್ತದೆ. ಹಾಗಾಗಿ ನಿಮ್ಮ ಪರ್ಸ್ ನಲ್ಲಿ ಸದಾ ಬೇಬಿ ಪೌಡರ್ ಇಟ್ಟುಕೊಳ್ಳಿ. ಬೆವರು ಒರೆಸಿದ ನಂತ್ರ ಅಥವಾ ಚರ್ಮ ಎಣ್ಣೆಯುಕ್ತವಾದ್ರೆ ಪೌಡರ್ ಹಚ್ಚಿಕೊಳ್ಳಬಹುದು. ಬೇಬಿ ಪೌಡರ್ ಸ್ಮೆಲ್ ಚೆನ್ನಾಗಿರುತ್ತದೆ.
ಫೇಸ್ ಮಿಸ್ಟ್ (Face Mist) : ಮುಖ ಸುಸ್ತಾದಂತೆ ಕಾಣಿಸಿದ್ರೆ, ಧೂಳು ಅಥವಾ ಎಣ್ಣೆಯುಕ್ತವಾದ್ರೆ ನೀವು ಫೇಸ್ ಮಿಸ್ಟ್ ಬಳಸಬಹುದು. ಅದನ್ನು ಮುಖ, ಕತ್ತಿಗೆ ಸ್ಪ್ರೇ ಮಾಡಿದ್ರೆ ಸಾಕು. ಮುಖ ಫ್ರೆಶ್ ಆಗಿ ಕಾಣುತ್ತದೆ. ಧೂಳು, ಎಣ್ಣೆ ಮಾಯವಾಗುತ್ತೆ.
ನಿಮ್ಮ ಆಭರಣಗಳನ್ನ ದೀರ್ಘಕಾಲ ಹೊಳೆಯುವಂತೆ ಇಡೋದು ಹೇಗೆ?
ಸನ್ ಸ್ಕ್ರೀನ್ (Sun Screen) : ಋತು ಯಾವುದೇ ಆಗಿರಲಿ ನೀವು ಸನ್ ಸ್ಕ್ರೀನ್ ಬಳಸಬೇಕು. ದಿನದಲ್ಲಿ ಎರಡು ಮೂರು ಬಾರಿ ನೀವು ಸನ್ ಸ್ಕ್ರೀನ್ ಹಚ್ಚಿದ್ರೆ ಒಳ್ಳೆಯದು. ಮಳೆಗಾಲದ ಸಮಯದಲ್ಲೂ ನೀವು ಸನ್ ಸ್ಕ್ರೀನ್ ಬಳಸಬೇಕು. ಯುವಿ ಕಿರಣ ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ. ವಯಸ್ಸಿಗೆ ಮೊದಲು ಚರ್ಮ ಸುಕ್ಕುಗಟ್ಟುವುದಕ್ಕೆ ಕೂಡ ಯುವಿ ಕಿರಣ ಕಾರಣ. ಹಾಗಾಗಿ ಅದ್ರಿಂದ ರಕ್ಷಣೆ ಪಡೆಯಲು ನೀವು ಸನ್ ಸ್ಕ್ರೀನ್ ಬಳಸಬೇಕು.
ಬ್ರೆಷ್ ಫರ್ಪ್ಯೂಮ್ (Brush Perfume) : ಸೆಂಟ್ ಎಲ್ಲ ಋತುವಿನಲ್ಲೂ ಅವಶ್ಯಕವಿದೆ. ಕೆಲವರ ದೇಹದಿಂದ ಬರುವ ಬೆವರಿನ ವಾಸನೆ ಕಠೋರವಾಗಿರುತ್ತದೆ. ಎಲ್ಲ ಋತುವಿನಲ್ಲೂ ಅವರು ಬೆವರ್ತಾರೆ. ಅವರ ಬೆವರಿನ ವಾಸನೆ ಮುಜುಗರ ತರಿಸುತ್ತದೆ. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಫರ್ಪ್ಯೂಮ್ ಹಾಕಿಕೊಳ್ಳಬೇಕು. ಜೊತೆಗೆ ಒಂದು ಫರ್ಪ್ಯೂಮ್ ಬ್ಯಾಗ್ ನಲ್ಲಿದ್ದರೆ ಒಳ್ಳೆಯದು. ದೊಡ್ಡ ಬಾಟಲಿಯನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಈಗ ಪಾಕೆಟ್ ಫರ್ಪ್ಯೂಮ್ ಬಂದಿದೆ. ಅದ್ರಲ್ಲೂ ಬ್ರೆಷ್ ಫರ್ಪ್ಯೂಮ್ ಬೆಸ್ಟ್. ಅದು ಲೀಕ್ ಆಗುವುದಿಲ್ಲ. ಹಾಗೆ ಅದನ್ನು ಕ್ಯಾರಿ ಮಾಡುವುದು ತುಂಬಾ ಸುಲಭ.
ಖಾಲಿ ಬಾಕ್ಸ್ (Empty Box) : ಬ್ಯಾಗ್ ನಲ್ಲಿ ಖಾಲಿ ಬಾಕ್ಸ್ ಒಂದು ಇರಲಿ. ಅದ್ರಲ್ಲಿ ಜ್ಯುವೆಲರಿ ಸೇರಿದಂತೆ ಕೆಲ ವಸ್ತುಗಳನ್ನು ಅವಶ್ಯಕತೆ ಬಿದ್ದಾಗ ಇಟ್ಟುಕೊಳ್ಳಬಹುದು. ಅನೇಕ ಬಾರಿ ಮಳೆಯಲ್ಲಿ ನೆನೆಯಬೇಕಾಗುತ್ತದೆ. ಆಗ ದುಬಾರಿ ಬೆಲೆಯ ಜ್ಯುವೆಲರಿ ಹಾಳಾಗುವ ಸಾಧ್ಯತೆಯಿರುತ್ತದೆ. ಅಂಥ ಸಂದರ್ಭದಲ್ಲಿ ಜ್ಯುವೆಲರಿಯನ್ನು ನೀವು ಬಾಕ್ಸ್ ನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
ವಾಟರ್ ಪ್ರೂಫ್ ಕ್ರೀಂ ಲಿಪ್ಸ್ಟಿಕ್ (Water Proof cream lipsitck) : ಮಳೆಗಾಲದಲ್ಲಿ ಬ್ಯಾಗ್ ನಲ್ಲೊಂದು ವಾಟರ್ ಪ್ರೂಫ್ ಲಿಪ್ಸ್ಟಿಕ್ ಇಟ್ಟುಕೊಂಡಿರಬೇಕು. ಇದ್ರಿಂದ ನಿಮ್ಮ ತುಟಿ ಡ್ರೈ ಆಗೋಗಿಲ್ಲ. ಬೆವರು ಅಥವಾ ಮಳೆಯಿಂದಾಗಿ ಲಿಪ್ ಸ್ಟಿಕ್ ಹಾಳಾಗುವ ಭಯವೂ ಇರೋದಿಲ್ಲ. ಸದಾ ನಿಮ್ಮ ತುಟಿಯ ಸೌಂದರ್ಯವನ್ನು ಇದ್ರಿಂದ ಕಾಪಾಡಿಕೊಳ್ಳಬಹುದು.
Home Remedies: ವಾರ್ಡ್ರೋಬ್‌ನಲ್ಲಿರೋ ಬಣ್ಣ ಮಾಸಿದ ಬಟ್ಟೆ ಈಗ್ಲೇ ಹೊರಗ್ ತೆಗಿರಿ
ಛತ್ರಿ (Umbrella) : ಮಳೆಗಾಲದಲ್ಲಿ ಯಾವಾಗ ಮಳೆ ಬರುತ್ತೆ ಅನ್ನೋದು ತಿಳಿಯೋದಿಲ್ಲ. ಬಿಸಿಲಿದೆ ಅಂತಾ ನಾವು ಹೊರಗೆ ಬಿದ್ರೆ ಏಕಾಏಕಿ ಮಳೆ ಬಂದಿರುತ್ತದೆ. ಹಾಗಾಗಿ ಸಣ್ಣ ಛತ್ರಿಯೊಂದನ್ನು ಸದಾ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಛತ್ರಿ ಲಭ್ಯವಿದೆ. ನಿಮ್ಮ ಬ್ಯಾಗ್ ಗೆ ಹೊಂದುವ ಛತ್ರಿಯನ್ನು ನೀವು ಖರೀದಿ ಮಾಡ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.