ಆಸ್ಪತ್ರೆ ಸೇರಿದ್ದ ಉರ್ಫಿಗೆ ಇದೇನಾಯ್ತು? ಲಕ್ಷಗಟ್ಟಲೆ ಲೈಕ್ಸ್ ಪಡೆದ ಈ ಹೊಸ ಅವತಾರದಲ್ಲಿ ಅಂಥದ್ದೇನಿದೆ?

Published : Jan 19, 2024, 12:19 PM IST
ಆಸ್ಪತ್ರೆ ಸೇರಿದ್ದ ಉರ್ಫಿಗೆ ಇದೇನಾಯ್ತು? ಲಕ್ಷಗಟ್ಟಲೆ ಲೈಕ್ಸ್ ಪಡೆದ ಈ ಹೊಸ ಅವತಾರದಲ್ಲಿ ಅಂಥದ್ದೇನಿದೆ?

ಸಾರಾಂಶ

ನಟಿ ಉರ್ಫಿ ಜಾವೇದ್​ ಆಸ್ಪತ್ರೆಗೆ ದಾಖಲಾಗಿದ್ದ ಫೋಟೋ ಶೇರ್​ ಮಾಡಿದ ಬೆನ್ನಲ್ಲೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಬೇಸ್ತು ಬಿದ್ದಿದ್ದಾರೆ.   

ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ  ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.

ಇಂತಿಪ್ಪ ಉರ್ಫಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಫೋಟೋಗಳು ವೈರಲ್​ ಆಗಿದ್ದವು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎನ್ನುವಂತೆ ಅವರ ಬಾಯಿಗೆ ಮಾಸ್ಕ್  ಹಾಕಿರುವುದನ್ನು ಫೋಟೋದಲ್ಲಿ ನೋಡಬಹುದಾಗಿತ್ತು. ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲೇ ಎರಡು ಕೈಗಳನ್ನು ಮೇಲಕ್ಕೆತ್ತಿ ಗೆಲ್ಲುವ ಸಿಂಬಲ್ ತೋರಿಸಿದ್ದರು ಉರ್ಫಿ. ಇದರ ಫೋಟೋ ಸಾಕಷ್ಟು ವೈರಲ್​ ಆದ ಬೆನ್ನಲ್ಲೇ ನಟಿ ಕುತೂಹಲ ಎಂಬಂತೆ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಿಂದ ಡಿಲೀಟ್​ ಮಾಡಿದ್ದರು. ಇವರು ಯಾಕೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವುದು ಮಾತ್ರ ಇದುವರೆಗೆ ಬಹಿರಂಗಗೊಂಡಿಲ್ಲ. 

ಉರ್ಫಿಯ ಮತ್ತೊಂದು ರೂಪಕ್ಕೆ ಫ್ಯಾನ್ಸ್‌ ಭಾವುಕ! ದುಡ್ಡಿಗೆ ಬೆತ್ತಲಾಗುವರ ಮುಂದೆ ನಿಮಗೊಂದು ಸಲಾಂ ಎಂದ ನೆಟ್ಟಿಗರು

ಈ ಹಿಂದೆ ಪೊಲೀಸರು ಅರೆಸ್ಟ್​ ಮಾಡಿಕೊಂಡು ಹೋಗಿದ್ದಾರೆ ಎಂಬಂತೆ ಬಿಂಬಿಸಿ ಕೇಸ್​ ದಾಖಲಿಸಿಕೊಂಡಿದ್ದರು ಉರ್ಫಿ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದರು. ಪೊಲೀಸರು ಉರ್ಫಿಯನ್ನು ಅರೆಸ್ಟ್​ ಮಾಡಿಕೊಂಡು ಹೋದರು ಎಂದೇ ಸುದ್ದಿಯಾಗಿತ್ತು. ಅದೇ ರೀತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೀತಿ ಉದ್ದೇಶಪೂರ್ವಕವಾಗಿ ಪೋಸ್​ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದರೂ ಇದರ ಸತ್ಯಾಸತ್ಯತೆ ತಿಳಿದಿಲ್ಲ. ಅದೇನೇ ಇದ್ದರೂ ಇದೀಗ ವಿಚಿತ್ರ ರೀತಿಯ ಇನ್ನೊಂದು ವೇಷದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ತೀರಾ ಅಸಭ್ಯ ಎನ್ನುವಂಥ ಡ್ರೆಸ್​ ಒಂದನ್ನು ಇವರು ಧರಿಸಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದ ನಟಿಗೆ ಇದೇನಾಯ್ತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೋಕ್ಕೆ ಹಿಂದೆಂದೂ ಬರದಷ್ಟು ಲೈಕ್​, ಕಮೆಂಟ್​ಗಳ ಸುರಿಮಳೆಯಾಗಿದೆ. ವಿಡಿಯೋ ವೈರಲ್​ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಲೈಕ್ಸ್​ ಬಂದಿವೆ. ಕೆಲವರು ಇದು ಎಕೆ 47 ಅಲ್ಲ 57 ಎನ್ನುತ್ತಿದ್ದರೆ, ಇನ್ನು ಕೆಲವರು ಬರ್ತ್​ಡೇ ಕ್ಯಾಪ್​ ಇಷ್ಟು ಉದ್ದ ಏಕಿದೆ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಹಲವರು ಉರ್ಫಿ ವಿತ್​ ಕುಲ್ಫಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ರೀತಿಯ ವೇಷದಿಂದ ಉರ್ಫಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. 

ನಟ ಧರ್ಮೇಂದ್ರ ಬಂದಾಗ ಕಮಲ್​ ಹಾಸನ್​ ಪುತ್ರಿಯರದ್ದು ಇದೆಂಥ ವರ್ತನೆ? ಇದು ಗೌರವವಂತೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಂದದೊಂದಿಗೆ ನಿಮ್ಮ ಶೋಭೆಯನ್ನು ಹೆಚ್ಚಿಸೋ ₹500ಗೆ ಸಿಗೋ ಮಂಗಳಸೂತ್ರದ ಕಾಂಬೊ ಸೆಟ್