
ಮಗ ತನ್ನ ಕ್ರೆಡಿಟ್ ಕಾರ್ಡ್ ಬಳಸಿ 96 ಲಕ್ಷ ಬೆಲೆ ಬಾಳುವ ಲಿಮಿಟೆಡ್ ಎಡಿಷನ್ ಶೂಸ್ ಖರೀಸಿದ ನಂತ ನೈಕ್ ಎಕ್ಸಿಕ್ಯೂಟಿವ್ ರಾಜೀನಾಮೆ ನೀಡಿದ್ದಾರೆ. ತನ್ನ ಸ್ವಂತ ರಿಸೇಲ್ ಕಂಪನಿಗಾಗಿ ಇವರ ಮಗ 96 ಲಕ್ಷ ಬೆಲೆ ಬಾಳುವ ಶೂಸ್ಗಳನ್ನು ಖರೀಸಿದ್ದ.
ನೈಕ್‌ನ ಉತ್ತರ ಅಮೆರಿಕಾ ವ್ಯವಹಾರದ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆನ್ ಹೆಬರ್ಟ್ ಅವರ ನಿರ್ಗಮನವು ತಕ್ಷಣಕ್ಕೆ ದೃಢವಾಗಿದ್ದು ಶೀಘ್ರದಲ್ಲೇ ಆ ಜಾಗಕ್ಕೆ ಹೊಸ ಮುಖ್ಯಸ್ಥರನ್ನು ಘೋಷಿಸಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿದೆ.
1 ಮೀಟರ್ ಉದ್ದದ ಶೂಸ್: ಇದನ್ನು ಧರಿಸಿ ನಡೆಯೋದ್ ಹೇಗಪ್ಪಾ?
ಕಾರ್ಯನಿರ್ವಾಹಕ ಒರೆಗಾನ್ ಮೂಲದ ಬೀವರ್ಟನ್ ಕಂಪನಿಯೊಂದಿಗೆ 25 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದು, ಶೀಘ್ರದಲ್ಲೇ ಉತ್ತರ ಅಮೆರಿಕಾಕ್ಕೆ ಹೊಸ ಲೀಡರ್‌ನ್ನು ನಿಯೋಜಿಸುವುದಾಗಿ ಹೇಳಿದೆ.
ಆಕೆಯ ಕಾಲೇಜು ಬಿಟ್ಟ ಮಗ ಜೋ ಹೆಬರ್ಟ್ ಶೂ ಬಿಡುಗಡೆಯಾದ ನಂತರ 600 ಜೋಡಿಗಳ ಸ್ನೀಕರ್ ಅನ್ನು ಆನ್‌ಲೈನ್ ಮೂಲಕ ಖರೀದಿಸಿದ್ದಾನೆ.
ಸಾಕ್ಸ್ ಕೇವಲ ಕಾಲಿನ ರಕ್ಷಣೆಗಷ್ಟೇ ಅಲ್ಲ, ಹೀಗೂ ಬಳಸಿ
ನೈಕ್ ತನ್ನ ಉದ್ಯೋಗಿಗಳಿಗೆ ಸ್ನೀಕರ್ ಮರುಮಾರಾಟ ಮಾಡಲು ಅನುಮತಿ ನೀಡಿಲ್ಲ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕೆ ಕಡಿಮೆ ದರದಲ್ಲಿ ಬೂಟುಗಳನ್ನು ಖರೀದಿಸುವ ಅಭ್ಯಾಸ ನಿಷೇಧವಾಗಿದೆ ಎಂದು ಹೇಳಲಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.