ಮದುಮಗಳ ಅಂದ ಹೆಚ್ಚಿಸುವ ಚಂದದ ಉಡುಗೆಗಳಿವು!

By Web DeskFirst Published Oct 19, 2019, 2:31 PM IST
Highlights

ಮದುವೆ ಹುಡುಗಿಗೆ ಸಾಂಪ್ರದಾಯಿಕ ಉಡುಗೆ ಅನಿವಾರ್ಯ. ಆದರೆ ಇಂದಿನ ಆಧುನಿಕ ಹುಡುಗಿಯರಿಗೆ ಕಂಟೆಂಪರರಿಯಲ್ಲಿ ಹೆಚ್ಚು ಆಸಕ್ತಿ. ಜೊತೆಗೆ ಅವರು ಬಯಸೋದು ಮದುವೆ ಉಡುಗೆಯಲ್ಲೂ ಕಂಫರ್ಟ್ ಫೀಲ್

ನಿಶಾಂತ ಕಮ್ಮರಡಿ 

‘ಮದ್ವೆ ಸೀಸನ್ ಬಂತು ನೋಡು, ನಮ್ಗಿನ್ನು ತುರಿಸ್ಕೊಳಕ್ಕೂ ಟೈಮಿರಲ್ಲ. ರಾತ್ರಿ ಎಷ್ಟೋ ಹೊತ್ತಲ್ಲಿ ಅಡ್ಡಾದ್ರೂ ಚಿತ್ರ ವಿಚಿತ್ರ ಡಿಸೈನ್‌ಗಳೇ ಕಣ್ಮುಂದೆ ಕುಣೀತಿರುತ್ತವೆ. ಮದ್ವೆ ಹುಡುಗ, ಹುಡುಗಿಗೂ ನಮ್ಮಷ್ಟು ಟೆನ್ಶನ್ ಇರಲಿಕ್ಕಿಲ್ವೇನೋ ಅನಿಸುತ್ತೆ ಕೆಲವೊಮ್ಮೆ..’ ಹೀಗಂತಾಳೆ ಬಾಂಬೆಯ ಡಿಸೈನರ್ ಗೆಳತಿ. ಈಗ ಕಾಸ್ಟ್ಯೂಮ್ ಡಿಸೈನರ್ಸ್‌ಗೆ ಕೈಯಲ್ಲಿ ಕಾಸು ಹುಟ್ಟೋ ಕಾಲ. ಅಸಡ್ಡೆ ಮಾಡೋ ಹಾಗಿಲ್ಲ. ದಿನಕ್ಕೊಂದು ಬಗೆಯ ಟ್ರೆಂಡ್ ಹುಟ್ಟೋ ಟೈಮ್‌ನಲ್ಲಿ ಯಾವ ಡಿಸೈನ್ ಫಾಲೋ ಮಾಡೋದು, ಏನು ಬಿಡೋದು, ಎಷ್ಟು ಅಪ್‌ಡೇಟ್ ಆಗಿದ್ರೂ ಕಡಿಮೇನೆ..

ಹೀಗೆಲ್ಲಾ ಮಾಡಿದ್ರೆ ವಯಸ್ಸಾದಂತೆ ಕಾಣ್ತೀರಿ #BeCareful

ಇಂತಿಪ್ಪ ಟೈಮ್‌ನಲ್ಲಿ ಟ್ರೆಂಡಿ ಅನಿಸುವ, ಸೆಲೆಬ್ರಿಟಿ ಡಿಸೈನರ್‌ಗಳ ಬ್ರೈಡಲ್ ಡ್ರೆಸ್‌ಗಳ ವಿವರ ಇಲ್ಲಿದೆ. ನಮ್ಮ ನಾಡಿನ ಮದ್ವೆಗಳಲ್ಲಿ ವಧು ಈ ಬಗೆಯ ಡ್ರೆಸ್ ತೊಟ್ಟಕೊಳ್ಳೋದು ಕಷ್ಟ. ದಕ್ಷಿಣ ಭಾರತದಲ್ಲಿ ಮದ್ವೆ ದಿನ ಸೀರೆಯೇ ಪ್ರಧಾನ. ಆದರೆ ರಿಸೆಪ್ಶನ್, ಗ್ರ್ಯಾಂಡ್ ಪಾರ್ಟಿ ಅಥವಾ ಫೋಟೋಶೂಟ್‌ಗೆ ಈ ಉಡುಗೆ ಟ್ರೈ ಮಾಡಬಹುದು.

ಮನೀಶ್ ಮಲ್ಹೋತ್ರಾ- ಆಧುನಿಕತೆ ಪಾರಂಪರಿಕತೆಯ ಕೊಲಾಜ್

ಮನೀಶ್ ಮಲ್ಹೋತ್ರಾ ಉಡುಗೆಗಳು ಶ್ರೀಮಂತಿಕೆಗೆ ಫೇಮಸ್ಸು. ಅಲ್ಲಿ ಜರಿ ವರ್ಕ್ ಇದೆ. ಎಂಬ್ರಾಯಿಡರಿಗಳಿವೆ. ಜೊತೆಗೆ ಆಧುನಿಕತೆಯ ಸ್ಪರ್ಶ ಇದೆ. ಈ ಬಾರಿಯ ಬ್ರೈಡಲ್ ಕಲೆಕ್ಷನ್ ಅಂತೂ ಸಖತ್ ಎಕ್ಸೈಟಿಂಗ್. ಬಣ್ಣಗಳು, ಡಿಸೈನ್‌ಗಳು ಎಲ್ಲದರಲ್ಲೂ ರಿಚ್‌ನೆಸ್ ಎದ್ದು ಕಾಣುತ್ತೆ. ಫ್ಲೋರಲ್‌ನ ಹಲವು ಸಾಧ್ಯತೆಗಳು ಈ ಉಡುಗೆಗಳಲ್ಲಿ ತೆರೆದುಕೊಂಡಿವೆ.

ಕ್ರೀಮ್ ಕಲರ್ ಕಂಪ್ಲೀಟ್ ವರ್ಕ್ ಇರುವ ಪಾರದರ್ಶಕ ಟಾಪ್ ಹಾಗೂ ಕಂದು ಬಣ್ಣದ ಹೂಗಳಿಂದ ತುಂಬಿದ ಬಾಟಮ್. ಈ ಉಡುಗೆಗೆ ಅಲಿಯಾ ಭಟ್ ರೂಪದರ್ಶಿ. ಇವುಗಳನ್ನು ಬ್ರೈಡಲ್ ಉಡುಗೆಯಾಗಿಯೂ ತೊಟ್ಟುಕೊಳ್ಳಬಹುದು, ಬತ್ ಡೇರ್, ಗ್ರ್ಯಾಂಡ್ ಪಾರ್ಟಿಯಂಥ ಸಂದರ್ಭಗಳಲ್ಲೂ ತೊಟ್ಟುಕೊಳ್ಳಬಹುದು.

ವೈಟ್‌ ಡ್ರೆಸ್ ಹಾಟ್‌ ಲುಕ್‌; ನಿದ್ದೆಗೆಡಿಸಿದ್ಲು 45 ರ ಮಮ್ಮಿ!

ಉಳಿದಂತೆ ಬೂದು ಬಣ್ಣದಲ್ಲಿ ಕೆಂಪು, ವೈಲೆಟ್ ಬಣ್ಣದ ದೊಡ್ಡ ಹೂಗಳಿರುವ ಗೌನ್, ಕಡು ನೀಲಿ ಆಗಸದಂಥಾ ಹಿನ್ನೆಲೆಯಲ್ಲಿ ಬೆಳ್ಳಿ ಚುಕ್ಕಿಯಂಥಾ ಬಿಳಿ ಜರಿಯ ಲೆಹೆಂಗಾ, ಎಮರಾಲ್ಡ್ ಗ್ರೀನ್, ಲೈಟ್ ಪಿಂಕ್ ಕಾಂಬಿನೇಶನ್‌ನ ಇನ್ನೊಂದು ಅದ್ಭುತ ಉಡುಗೆ.. ಇವೆಲ್ಲ ಈ ಕಾಲದ ಮದುವಣಗಿತ್ತಿಯರಿಗೆ ಹೇಳಿ ಮಾಡಿಸಿದ ಹಾಗಿದೆ. ಇದನ್ನೇ ಕೊಳ್ಳುವುದು ತುಸು ದುಬಾರಿಯಾಗಬಹುದು. ಆದರೆ ಈ ಡಿಸೈನ್ ಇಟ್ಟುಕೊಂಡು ಒಂದಿಷ್ಟು ಹೊಸ ಡಿಸೈನ್ ಮಾಡಿ ಮೆರೆಯಬಹುದು.

ಅಂಜು ಮೋದಿ- ಅರ್ನಾಕಲಿ ಶರಾರಾ

‘ಮದುವೆ ಹುಡುಗಿಗೆ ಸಾಂಪ್ರದಾಯಿಕ ಉಡುಗೆ ಅನಿವಾರ್ಯ. ಆದರೆ ಇಂದಿನ ಆಧುನಿಕ ಹುಡುಗಿಯರಿಗೆ ಕಂಟೆಂಪರರಿಯಲ್ಲಿ ಹೆಚ್ಚು ಆಸಕ್ತಿ. ಜೊತೆಗೆ ಅವರು ಬಯಸೋದು ಮದುವೆ ಉಡುಗೆಯಲ್ಲೂ ಕಂಫರ್ಟ್ ಫೀಲ್. ಈ ಎಲ್ಲ ಅಂಶಗಳನ್ನು ಮನಸ್ಸಲ್ಲಿಟ್ಟು ಮದುಮಗಳ ಹೊಸ ಕಲೆಕ್ಷನ್ ಸಿದ್ಧಪಡಿಸಿದ್ದೇನೆ’ ಅನ್ನುತ್ತಾರೆ ಡಿಸೈನರ್ ಅಂಜು ಮೋದಿ.

ಸ್ಟ್ರೈಪ್ಸ್‌ನಲ್ಲೇ ಸ್ಟೈಲ್ ಮಾಡೋ ಸುಂದ್ರಿ ಯಾರೋ; ಲೈನ್ ಮಾರೋ!

ಅನಾರ್ಕಲಿ ಹಾಗೂ ಶರಾರಾ ಕಾಂಬಿನೇಷನ್ನಲ್ಲಿ ಅವರ ಲೇಟೆಸ್ಟ್ ಬ್ರೈಡಲ್ ಕಲೆಕ್ಷನ್ ಬಂದಿದೆ. ಅಪರೂಪದ ಬಣ್ಣ ಹಾಗೂ ಕಾಂಬಿನೇಶನ್ಗಳು ಈ ಕಲೆಕ್ಷನ್ನಲ್ಲಿವೆ. ಅದರಲ್ಲೂ ಹಳದಿ ಹಾಗೂ ಪೀಚ್ ಕಲರ್ ಕಾಂಬಿನೇಶನ್ ಅಪರೂಪ ಅನಿಸುತ್ತೆ. ಇಂಥಾ ಬಹಳ ಅಪರೂಪ  ಅನಿಸುವ ಬಣ್ಣಗಳನ್ನಿಟ್ಟು ಅಂಜು ತಮ್ಮ ಕಾಸ್ಟ್ಯೂಮ್ ಡಿಸೈನ್‌ನಲ್ಲಿ ಹೊಸತನ ಮೆರೆಯುತ್ತಾರೆ. ಈ ಹೊಸ ಬ್ರೈಡಲ್ ಕಲೆಕ್ಷನ್‌ನಲ್ಲಿ ಫ್ಲೋರಲ್ ಡಿಸೈನ್ ತೀರಾ  ಕಡಿಮೆ. ಬದಲಾಗಿ ಅಲ್ಲಲ್ಲಿ ಪ್ಯಾಚ್‌ವಕ್ನರ್ಂತೆ ವೆಲ್ವೆಟ್ ಮೆಟೀರಿಯಲ್ ಬಳಸಿರೋದು ವಿಶೇಷ. ದಿಯಾ ಮಿರ್ಜಾ ರೂಪದರ್ಶಿಯಾಗಿರುವ ಮೆರೂನ್ ಬ್ಲೌಸ್, ಲೆಹೆಂಗಾ ಸ್ಕರ್ಟ್ ಕಾಂಬಿನೇಶನ್ ಸಖತ್ ರಿಚ್ ಆಗಿದೆ.

ಫುಲ್ ಸ್ವೀಲ್ಸ್ ಇರುವ ಬ್ಲೌಸ್‌ಗೂ ವೆಲ್ವೆಟ್ ಮೆಟೀರಿಯಲ್ ಬಳಸಿದ್ದಾರೆ. ಮಹಾನ್ ಅದ್ಧೂರಿ ಬ್ರೈಡಲ್ ಕಲೆಕ್ಷನ್‌ಗಳ ನಡುವೆ ಅಂಜು ಅವರ ಡಿಸೈನ್ ಎದ್ದು ಕಾಣೋದೇ ಅದರ
ಹೊಸತನ ಮತ್ತು ಕ್ರಿಯೇಟಿವಿಯಿಂದ.

ತರುಣ್ ತಹ್ಲಿಯಾನಿ- ಜೋಧ್‌ಪುರ್ ಸ್ಟೈಲ್

ಬಾಲಿವುಡ್‌ನ ಬ್ರೈಡಲ್ ಕಲೆಕ್ಷನ್‌ಗೆ ಬಂದರೆ ಇಂದಿಗೂ ಟಾಪ್ 1ನಲ್ಲಿ ಬರುವ ಹೆಸರು ತರುಣ್ ತಹ್ಲಿಯಾನಿ ಅವರದ್ದು. ಅವರ 2019 ಬ್ರೈಡಲ್ ಕಲೆಕ್ಷನ್‌ನಲ್ಲಿ ಜೋಧ್‌ಪುರ್ ಸ್ಟೈಲ್‌ನ ಮದುಮಗಳ ಉಡುಗೆ ಸಖತ್ ಫೇಮಸ್ ಆಗಿದೆ. ಗಾಢ ಬಣ್ಣದಲ್ಲಿ ಮಿರ ಮಿರ ಮಿಂಚುವ ಸಾಂಪ್ರದಾಯಿಕ ಮಾದರಿಯ ಉಡುಗೆಗಳು. ಸೀರೆ, ಲೆಹೆಂಗಾ ಹಾಗೂ ಹಾಫ್ ಸೀರೆಗಳ ವೆರೈಟಿ ಇದರಲ್ಲಿದೆ.

ಚೂರು ಉದ್ದ ಇರ್ಬೇಕಿತ್ತು ಅನ್ನೋ ಆಸೆನಾ? ಹಾಗಾದ್ರೆ ಹೀಗ್ ಮಾಡಿ

ಮೈಯಿಡೀ ಜರಿ ವರ್ಕ್, ಹೂ ಬಳ್ಳಿಗಳ ಪ್ರಿಂಟ್ ಇರುವ ತೆಳ್ಳನೆಯ ಹಗುರವಾದ ರೇಷ್ಮೆ ಸೀರೆ. ಇದಕ್ಕೆ ಕಲಂಕಾರಿ ಡಿಸೈನ್‌ನ ಪಾರಂಪರಿಕ ಹೈ ನೆಕ್ ಬ್ಲೌಸ್. ಇದನ್ನುಟ್ಟಾಗ ಲುಕ್ ಮಾತ್ರ ಭರ್ಜರಿ. ಇನ್ನೊಂದು ಚಿನ್ನದ ವರ್ಕ್‌ನಿಂದ ತುಂಬಿದ ಲೆಹೆಂಗಾ. ಇದರಲ್ಲಿ ಕೈಯ ಭಾಗದಲ್ಲಿ ಮಣಿಗಳನ್ನು ಸೇರಿಸಿ ಹೊಲಿಯಲಾಗಿದೆ. ಹಾಫ್ ಸೀರೆಯ ವಿನ್ಯಾಸವೂ ಜೋಧ್‌ಪುರ್
ಸಾಂಪ್ರದಾಯಿಕ ಸ್ಟೈಲ್‌ನಲ್ಲಿದೆ.

‘ಜೋಧ್‌ಪುರದ ಅನೇಕ ಮಹಲ್ ಗಳಲ್ಲಿರುವ ಕಲೆ ನನ್ನನ್ನು ಬಹಳ ಕಾಡುತ್ತಿದೆ. ಅದೇ ಡಿಸೈನ್‌ನಲ್ಲಿ ನನ್ನ ಬ್ರೈಡಲ್ ಕಲೆಕ್ಷನ್ ಇದೆ. ಹೂವು, ಬಳ್ಳಿಗಳ ಫ್ಲೋರಲ್ ಹಿನ್ನೆಲೆಯಲ್ಲಿ ಮದುವೆ ಹೆಣ್ಣಿನ ಕನಸುಗಳನ್ನು ನನ್ನ ಕಣ್ಣಿಗೂ ತಂದುಕೊಂಡು ಈ ಉಡುಗೆ ಡಿಸೈನ್ ಮಾಡಿರುವೆ’ ಅನ್ನುತ್ತಾರೆ ತಹ್ಲಿಯಾನಿ.

 

click me!