ಡಾ.ವಿಷ್ಣು, ಉಪೇಂದ್ರ, ಶ್ರುತಿಗೆ ಹುಟ್ಟುಹಬ್ಬ ಸಂಭ್ರಮ: ಚಿತ್ರರಂಗದ ಸಾಧಕರಿಗೆ ಅಭಿಮಾನಿಗಳ ಶುಭಾಶಯ

Published : Sep 19, 2022, 04:30 AM IST
ಡಾ.ವಿಷ್ಣು, ಉಪೇಂದ್ರ, ಶ್ರುತಿಗೆ ಹುಟ್ಟುಹಬ್ಬ ಸಂಭ್ರಮ: ಚಿತ್ರರಂಗದ ಸಾಧಕರಿಗೆ ಅಭಿಮಾನಿಗಳ ಶುಭಾಶಯ

ಸಾರಾಂಶ

ಕನ್ನಡ ಚಿತ್ರರಂಗದ ಮೂವರು ತಾರೆಗಳಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌, ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬ ಭಾನುವಾರ ನಡೆಯಿತು. ವಿಷ್ಣುವರ್ಧನ್‌ ಹಾಗೂ ಉಪೇಂದ್ರ ಅವರ ಹಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರೆ, ನಟಿ ಶ್ರುತಿ ಅವರು ತಮ್ಮ ಕುಟುಂಬದ ಸದಸ್ಯರ ಜತೆಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡರು.

ಬೆಂಗಳೂರು (ಸೆ.19): ಕನ್ನಡ ಚಿತ್ರರಂಗದ ಮೂವರು ತಾರೆಗಳಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌, ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬ ಭಾನುವಾರ ನಡೆಯಿತು. ವಿಷ್ಣುವರ್ಧನ್‌ ಹಾಗೂ ಉಪೇಂದ್ರ ಅವರ ಹಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರೆ, ನಟಿ ಶ್ರುತಿ ಅವರು ತಮ್ಮ ಕುಟುಂಬದ ಸದಸ್ಯರ ಜತೆಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡರು.

ವಿಷ್ಣು ದಾದಾಗೆ 72ನೇ ಹುಟ್ಟುಹಬ್ಬ: ಸಾಹಸ ಸಿಂಹ ವಿಷ್ಣುವರ್ಧನ್‌ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. 40 ಅಡಿ ಎತ್ತರದ ವಿಷ್ಣು ಅವರ ಅಭಿನಯದ ಚಿತ್ರಗಳ 50 ಕಟೌಟ್‌ಗಳು, ಸಾಂಸ್ಕೃತಿಕ ತಂಡಗಳ ಮೂಲಕ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನ್ನದಾನ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಸಾಣೆ ಹಾಗೂ ನೇತ್ರ ದಾನಕ್ಕೆ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಕ್ಷಿ ಆದರು.

Happy birthday Upendra ಅಭಿಮಾನಿಗಳ ಜೊತೆ 54ನೇ ಹುಟ್ಟುಹಬ್ಬ ಆಚರಿಸಿಕೊಂಡ ಉಪ್ಪಿ

ಮೈಸೂರಿನಲ್ಲಿರುವ ವಿಷ್ಣು ಸಮಾಧಿಗೆ ವಿಷ್ಣುವರ್ಧನ್‌ ಅವರ ಕುಟುಂಬದ ಸದಸ್ಯರು ಪೂಜೆ ಮಾಡುವ ಮೂಲಕ ಸಾಹಸ ಸಿಂಹನ ಹುಟ್ಟು ಹಬ್ಬವನ್ನು ಆಚರಿಸಿದರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಹಾಗೂ ನಟ ಅನಿರುದ್‌್ಧ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್‌ ಪುಣ್ಯ ಭೂಮಿಗೆ ಆಗಮಿಸಿದ್ದರು.

54ರ ಸಂಭ್ರಮದಲ್ಲಿ ಉಪ್ಪಿ: ನಟ ಉಪೇಂದ್ರ ಅವರು ಈ ವರ್ಷ 54ನೇ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳ ಜತೆಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಶನಿವಾರ ರಾತ್ರಿಯಿಂದಲೇ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದ ಅಭಿಮಾನಿಗಳ ಜತೆಗೆ ಸೆಲ್ಫಿ ಫೋಟೋಗೆ ನಿಲ್ಲುವ ಮೂಲಕ ಖುಷಿ ಪಟ್ಟರು. ಭಾನುವಾರ ಬೆಳಗ್ಗಿನ ಹೊತ್ತಿಗೆ ಉಪೇಂದ್ರ ಅವರ ನಿವಾಸಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಅಭಿಮಾನಿಗಳು ತಂದಿದ್ದ ಕೇಕ್‌ ಕತ್ತರಿಸಿ ಅವರ ಸಮ್ಮುಖದಲ್ಲೇ ಜನ್ಮದಿನ ಆಚರಿಸಿಕೊಂಡರು.

ಉಪೇಂದ್ರ ಅವರ ಅಭಿಮಾನಿಗಳು ಉಪ್ಪಿ ಅವರ ನಟನೆಯ ಚಿತ್ರಗಳಂತೆಯೇ ವಿವಿಧ ವೇಷಗಳನ್ನು ತೊಟ್ಟು ಬಂದಿದ್ದು ವಿಶೇಷವಾಗಿತ್ತು. ಇನ್ನು ‘ಕಬ್ಜ’ ಚಿತ್ರದಿಂದ ಟೀಸರ್‌ ಬಿಡುಗಡೆ, ‘ಯು-ಐ’ ಚಿತ್ರದಿಂದ ವಿಶೇಷ ಟೀಸರ್‌ ಜತೆಗೆ ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಐಯಾಮ್‌ ಆರ್‌’ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಲಾಯಿತು.

ಡಾ.ವಿಷ್ಣುವರ್ಧನ್ ಜನ್ಮದಿನೋತ್ಸವ; ಸ್ಯಾಂಡಲ್‌ವುಡ್ 'ಯಜಮಾನ'ನನ್ನು ಸ್ಮರಿಸಿದ ಅಭಿಮಾನಿಗಳು, ಗಣ್ಯರು

47ರ ಖುಷಿಯಲ್ಲಿ ಕರ್ಪೂರದ ಗೊಂಬೆ: ಇದೇ ದಿನ ನಟಿ ಶ್ರುತಿ ಅವರು ಕೂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ 47ನೇ ವಸಂತಕ್ಕೆ ಕಾಲಿಟ್ಟರು. ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಭಾನುವಾರ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!