ಅನಾರೋಗ್ಯದಿಂದ ಬಳಲುತ್ತಿದ್ದಾರಾ ನಾಗಚೈತನ್ಯ ಮಾಜಿ ಪತ್ನಿ? ಅನುಮಾನ ಹೆಚ್ಚಿಸಿದ ಸಮಂತಾ ಸೈಲೆನ್ಸ್

Published : Sep 18, 2022, 03:40 PM ISTUpdated : Sep 18, 2022, 04:23 PM IST
 ಅನಾರೋಗ್ಯದಿಂದ ಬಳಲುತ್ತಿದ್ದಾರಾ ನಾಗಚೈತನ್ಯ ಮಾಜಿ ಪತ್ನಿ? ಅನುಮಾನ ಹೆಚ್ಚಿಸಿದ ಸಮಂತಾ ಸೈಲೆನ್ಸ್

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟಿ, ಸೆನ್ಸೇಷನ್ ಸ್ಟಾರ್ ಸಮಂತಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ಸೌತ್ ಸುಂದರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ದಕ್ಷಿಣ ಭಾರತದ ಖ್ಯಾತ ನಟಿ, ಸೆನ್ಸೇಷನ್ ಸ್ಟಾರ್ ಸಮಂತಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ಸೌತ್ ಸುಂದರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಾಗ ಚೈತನ್ಯ ಮಾಜಿ ಪತ್ನಿ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಸಮಂತಾ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದಾರೆ. ಅನಾರೋಗ್ಯದ ಬಗ್ಗೆ ಸುದ್ದಿ ವೈರಲ್ ಆಗಿದ್ದರು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಈ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ. 

ಸದ್ಯ ಸಮಂತಾ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದು ಫಿಟ್ ಅಂಡ್ ಫೈನ್ ಆಗುವವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿವು ನಟಿ.  ಸದಾ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದರು. ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರು. ಆದರೆ ಕೆಲವು ದಿನಗಳಿಂದ ದಿಢೀರ್ ಮಾಯವಾಗಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿಯೂ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಸಮಂತಾ ಅನಾರೋಗ್ಯ ಸುದ್ದಿಗೆ ಇವೆಲ್ಲ ಮತ್ತಷ್ಟು ಪುಷ್ಟಿ ಸಿಕ್ಕಂತೆ ಆಗಿದೆ.   

Yashoda Teaser; ಗರ್ಭಿಣಿ ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್

ಬಾಲಿವುಡ್ ಹಂಗಮಾ ವರದಿ ಮಾಡಿರುವ ಪ್ರಕಾರ ಸಮಂತಾ ಸದ್ಯ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ವೈದ್ಯರ ಸಲಹೆ ಪಾಲಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅನಾರೋಗ್ಯದ ಕಾರಣ ಸಿನಿಮಾ ಕೆಲಸವನ್ನು ರದ್ದು ಮಾಡಿದ್ದಾರೆ. ಸಮಂತಾ ತೆಲುಗಿನ ಖುಷಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಆದರೆ ಚಿತ್ರೀಕರಣ ಮುಂದಕ್ಕೆ ಹಾಕಿದ್ದಾರಂತೆ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿದ್ದಾರೆ. ಆದರೀಗ ಚಿತ್ರೀಕರಣ ಮುಂದಕ್ಕೆ ಹಾಕಿದ್ದಾರೆ ಎನ್ನಲಾಗಿದೆ. ಸಮಂತಾ ಅವರಿಗೆ ನಿಜಕ್ಕೂ ಏನಾಗಿದೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. 

ಇತ್ತೀಚಿಗಷ್ಟೆ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೆಲವು ಯೂಟ್ಯೂಬರ್ಸ್ ವಿರುದ್ಧ ಸಮಂತಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಅನಾರೋಗ್ಯದ ಸುದ್ದಿ ಬಲವಾಗಿ ಕೇಳಿಬರುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ. ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಕೊನೆಯದಾಗಿ ಯಶೋಧ ಸಿನಿಮಾದ ಟೀಸರ್ ಶೇರ್ ಮಾಡಿದ್ದಾರೆ. ಬಳಿಕ ಯಾವುದೇ ಪೋಸ್ಟ್ ಹಾಕಿಲ್ಲ. ದಿನಕ್ಕೊಂದಿಷ್ಟು ಪೋಸ್ಟ್ ಶೇರ್ ಮಾಡುತ್ತಿದ್ದ ಸಮಂತಾ ದಿಢೀರ್ ಸೈಲೆಂಟ್ ಆಗಿರುವುದು ಅಚ್ಚರಿಗೆ ಕಾಣವಾಗಿದೆ. ಸಮಂತಾ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದೆ.

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದ ಸಮಂತಾ; ಕೆಲವು ಯೂಟ್ಯುಬರ್ಸ್‌ಗಳಿಗೆ ಕಾದಿದೆ ಗ್ರಾಹಚಾರ

ಸಮಂತಾ ಯಶೋಧ ಸಿನಿಮಾ ಜೊತೆಗೆ ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!