21ನೇ ಮಯಸ್ಸಿಗೆ ಐಷಾರಾಮಿ ಕಾರು, ಬಂಗಲೆ; ಕನಸು ನನಸು ಮಾಡಿಕೊಂಡ ಕಿರುತೆರೆ ನಟಿಯ ಯಶಸ್ಸಿನ ಕಥೆ

Published : Sep 18, 2022, 05:40 PM IST
 21ನೇ ಮಯಸ್ಸಿಗೆ ಐಷಾರಾಮಿ ಕಾರು, ಬಂಗಲೆ; ಕನಸು ನನಸು ಮಾಡಿಕೊಂಡ ಕಿರುತೆರೆ ನಟಿಯ ಯಶಸ್ಸಿನ ಕಥೆ

ಸಾರಾಂಶ

ಜನ್ನತ್ ಝುಬೈರ್ ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ. ಸೆನ್ಸೇಷನ್ ಸ್ಟಾರ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. 21 ವರ್ಷದ ಈ ನಟಿ ಅಚ್ಚರಿ ಪಡುವ ಹಾಗೆ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಯಶಸ್ಸಿನ ಪಯಣ ಅನೇಕರಿಗೆ ಸ್ಫೂರ್ತಿ

ಜನ್ನತ್ ಝುಬೈರ್ ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ. ಸೆನ್ಸೇಷನ್ ಸ್ಟಾರ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. 21 ವರ್ಷದ ಈ ನಟಿ ಅಚ್ಚರಿ ಪಡುವ ಹಾಗೆ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಯಶಸ್ಸಿನ ಪಯಣ ಅನೇಕರಿಗೆ ಸ್ಫೂರ್ತಿ. ದಿಲ್ ಮಿಲ್ ಗಯ್ಯೆ ಚಿತ್ರದ ಮೂಲಕ ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಜನ್ನತ್ ಝುಬೈರ್ ಅನೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದಾರೆ. ಬಳಿಕ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ನಟಿ ಚಿಕ್ಕ ವಯಸ್ಸಿನಲ್ಲೇ ತನ್ನ ಎಲ್ಲಾ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ. ಹೌದು, ಪ್ರತಿಯೊಬ್ಬರಿಗೂ ಕನಸಿನ ಮನೆ ನಿರ್ಮಿಸಬೇಕು, ದುಬಾರಿ ಕಾರು ಖರೀದಿಸಬೇಕು ಹೇಗೆ ಅನೇಕ ಕನಸುಗಳು ಇರುತ್ತವೆ. ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಆದರೂ ಒಂದಿಷ್ಟು ಕನಸುಗಳನ್ನು ನನಸುಮಾಡಿಕೊಳ್ಳಲು ಜೀವನದ ಕೊನೆಯವರೆಗೂ ಹೋರಾಡುತ್ತಲೆ ಇರಬೇಕಾಗುತ್ತದೆ. ಆದರೆ ಜನ್ನತ್ ಝಬೈರ್ ಹಾಗಲ್ಲ. ಚಿಕ್ಕ ವಯಸ್ಸಿನಲ್ಲೇ ತನ್ನ ಕನಸು ನನಸು ಮಾಡಿಕೊಂಡು ಬಿಂದಾಸ್ ಜೀವನ ನಡೆಸುತ್ತಿದ್ದಾರೆ. 

ದುಬಾರಿ ಮನೆ, ಐಷಾರಾಮಿ ಕಾರು ಸೇರಿದಂತೆ ಅನೇಕ ಆಸ್ತಿಯ ಒಡತಿಯಾಗಿದ್ದಾರೆ. ಅಂದಹಾಗೆ ಜನ್ನತ್ ಝುಬೈರ್ ಬಳಿ ಮೂರು ದುಬಾರಿ ಕಾರುಗಳು ಇವೆ. ಈ ಕಾರುಗಳ ಬೆಲೆ ಸುಮಾರು 2.5 ಕೋಟಿ ಮೌಲ್ಯದ್ದಾಗಿವೆ. 19ನೇ ವರ್ಷದ ಹುಟ್ಟುಹಬ್ಬಕ್ಕೆ ಜನ್ನತ್, ಸಿಡಾನ್ ಕಾರನ್ನು ಖರೀದಿಸಿದ್ದರು. ಸುಮಾರು 1.30 ಕೋಟಿ ರೂಪಾಯಿ ಬೆಲೆಯ ಕಾರು ಇದಾಗಿದೆ. ಪ್ರೀಮಿಯಂ ಎಸ್ ಯು ವಿ ಕಾರು ಸಹ ಇದೆ. ತನ್ನ ಜೀವನವನ್ನು ಸೆಕೆಂಡ್ ಹ್ಯಾಂಗ್ ಕಾರಿನೊಂದಿದ್ದೆ ಪ್ರಾರಂಭ ಮಾಡಿದ್ದರು. ಇದೀಗ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಹೊಂದಿದ್ದಾರೆ. 

ದುಬಾರಿ ಮನೆ

ಜನ್ನತ್ ದುಬಾರಿ ಮನೆಯ ಒಡತಿ ಕೂಡ ಹೌದು. ಮನರಂಜನಾ ಜಗತ್ತು ಆಕೆಗೆ ಖ್ಯಾತಿ ಜೊತೆಗೆ ಐಷಾರಾಮಿ ಜೀವನವನ್ನು ನೀಡಿದೆ. ಚಿಕ್ಕ ವಯಸ್ಸಿಗೆ ದುಬಾರಿ ಮನೆಯನ್ನು ನಿರ್ಮಿಸಿದ್ದಾರೆ. ಮನೆ ಕಟ್ಟಬೇಕು ಎನ್ನುವ ಕನಸನ್ನು ಹೊಂದಿದ್ದರು. ಆ ಕನಸು ಕೂಡ ನನಸಾಗಿದೆ. ತನ್ನ ಹೊಸ ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕುಟುಂಬದ ಜೊತೆ ಹೊಸ ಮನೆಯಲ್ಲಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. 
ಫೋಟೋಗಳನ್ನು ಶೇರ್ ಮಾಡಿ, 'ಕನಸಗಳು ನನಸಾಗುತ್ತವೆ. ನಾನು ಕೇಳುತ್ತ ಬೆಳೆದ ಕನಸಿನ ಮನೆಯ ಕಥೆ ಕೊನೆಗೂೂನನ್ನ ಕಣ್ಮುಂದೆ' ಎಂದು ಬರೆದುಕೊಂಡಿದ್ದಾರೆ. 

Hyundai Venue ಭಾರತದ ಮೊದಲ ಸ್ಪೋರ್ಟೀವ್ ಕಾಂಪಾಕ್ಟ್ SUV ಹ್ಯುಂಡೈ ವೆನ್ಯೂ L ಲೈನ್ ಬಿಡುಗಡೆ!

ಖತ್ರೋನ್ ಕೆ ಖಿಲಾಡಿ ಶೋ ನಲ್ಲಿ ಜನ್ನತ್

ಜನ್ನತ್ ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಖತ್ರೋನ್ ಕೆ ಖಿಲಾಡಿ ಸೀಸನ್ 12ರ ನಲ್ಲಿನ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದಾರೆ. ಆಕೆಯ ಅದ್ಭುತ ಪ್ರದರ್ಶನಕ್ಕಾಗಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗೇಳಿಸಿದರು.    
ಫೋರ್ಬ್ಸ್ ಪ್ರಭಾವಿ ವ್ಯಕ್ತಿಗಳ ಲಿಸ್ಟ್‌ನಲ್ಲಿ ಜೆನ್ನತ್ ಹೆಸರು 

ಫೋರ್ಬ್ಸ್ 30 ಒಳೆಗಿನ ಅತ್ಯಂತ ಪ್ರಭಾವಿ ಪಟ್ಟಿಯಲ್ಲಿ ಜನ್ನತ್ ಕೂಡ ಒಬ್ಬರು. ಮಾರ್ಕೆಟಿಂಗ್, ಮಾಧಮಯ್ ಮತ್ತು ಜಾಹೀರಾತು ಲಿಸ್ಟ್ ನಲ್ಲಿ ಜನ್ನತ್ ಹೆಸರು ಇತ್ತು. ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರಭಾವಿ ಶಾಲಿ ಲಿಸ್ಟ್‌ಗೆ ಸೇರ್ಪಡೆಯಾಗಿರುವುದು ಅಚ್ಚರಿಯ ವಿಚಾರ.  

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ

ಜನ್ನತ್ ಇನ್ಸ್ಟಾಗ್ರಾಮ್ ನಲ್ಲಿ 44 ಮಿಲಿಯನ್ ಫಾಲೋವರ್ಸ್ ತಲುಪಿದ್ದಾರೆ. Instagram ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟಿವಿ ಸ್ಟಾರ್ ಆಗಿದ್ದಾರೆ.  ಕಿರುತೆರೆ ಜೊತೆಗೆ ಸಿನಿಮಾಗಳನ್ನು ಬ್ಯುಸಿಯಾಗಿರುವ ಜನ್ನತ್ ಅವರಿಗೆ ಸಿನಿಮಾ ಆಫರ್ ಗಳು ಹೆಚ್ಚಾಗಿ ಬರುತ್ತಿವೆ. 

ಕರಣ್‌ ಜೋಹರ್‌ ನಾನು ಸಿಂಗಲ್‌ ಅಂತಾರೆ, ಆದ್ರೆ ಮಕ್ಕಳಿಗೆ ಅಮ್ಮ ಇದ್ದಾರೆ; ಏನೋ ಇದೆ ನಿಗೂಢ

ಕರಣ್ ಜೋಹರ್ ಸಿನಿಮಾದಲ್ಲಿ ಜನ್ನತ್

ಜನ್ನತ್ ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರಣ್ ಅನೇಕ ವರ್ಷಗಳ ಬಳಿಕ ಮತ್ತೆ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಜನ್ನತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಇದಾಗಿದೆ. ಜನ್ನತ್ ಕೂಡ ಇರುವುದು ವಿಶೇಷ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್