ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್

ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್

Published : Mar 31, 2026, 07:12 PM IST

ಸ್ಯಾಂಡಲ್​ವುಡ್​​ನಲ್ಲಿ ತನ್ನ ಕಂಟೆಂಟ್​ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿರೋ ಸಿನಿಮಾ ಪೀಟರ್​. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಏಪ್ರಿಲ್ 10 ರಂದು ಪೀಟರ್​ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಎರಡನೇ ಮಗುವಿಗೆ ಜನ್ಮನೀಡಿದ್ದಾರೆ. ಸೋನಂಗೆ ಗಂಡು ಮಗು ಜನಿಸಿದೆ. ಈ ಬಗ್ಗೆ ಇನ್​​ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರೋ ಸೋನಂ ಕಪೂರ್​ ‘ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು’ ಎಂದು ಅವರು ಬರೆದುಕೊಂಡಿದ್ದಾರೆ.

'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್: ಸ್ಯಾಂಡಲ್​ವುಡ್​​ನಲ್ಲಿ ತನ್ನ ಕಂಟೆಂಟ್​ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿರೋ ಸಿನಿಮಾ ಪೀಟರ್​. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಏಪ್ರಿಲ್ 10 ರಂದು ಪೀಟರ್​ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದ್ದು, ಈ ಹಿಂದೆ ದೂರದರ್ಶನ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಪೀಟರ್​​ಗೆ ಆಕ್ಷನ್ ಕಟ್ ಹೇಳಿದ್ದಾರೆ. ರವಿ ಹಿರೇಮಠ್ ಮತ್ತು ರಾಕೇಶ್ ಹೆಗಡೆ ನಿರ್ಮಾಣ ಮಾಡಿರೋ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ರಾಜೇಶ್ ಧ್ರುವ ಮತ್ತು ರವೀಕ್ಷಾ ಶೆಟ್ಟಿ ನಾಯಕ ನಾಯಕಿ ಆಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಸಿನಿಮಾ ಮೇಕರ್ಸ್ ದೊಡ್ಡ ಯೋಜನೆಗಳೊಂದಿದೆ ವಿಶ್ವ ದರ್ಜೆಯ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಕ್ರಿಯಾಶೀಲ ತಂತ್ರಜ್ಞರ ತಂಡ ಕಟ್ಟಿಕೊಂಡು ಪ್ಯಾನ್ ಏಷಿಯಾ ಸಿನಿಮಾ ಮಾಡೋದಕ್ಕೆ ಸಿದ್ಧರಾಗಿದ್ದಾರೆ ನಟ ನಿರ್ಮಾಪಕ ರಾಜವರ್ಧನ್. ಈ ಪ್ಯಾನ್ ಏಷಿಯಾ ಸಿನಿಮಾದ ನಾಯಕನಾಗಿನಾಗಿ ಮ್ಯಾಸೀವ್ ಸ್ಟಾರ್ ನಟ ರಾಜವರ್ಧನ್ ನಟಿಸುತ್ತಿದ್ದಾರೆ. ಅಂದ್ಹಾಗೆ ಈ ಚಿತ್ರದ ಮುಹೂರ್ತ ನೇರವೇರಿದ್ದು, ಸಧ್ಯದಲ್ಲೇ ಚಿತ್ರದ ಟೈಟಲ್​​ ಮತ್ತು ಕಲಾವಿಧರ ಬಗ್ಗೆ ಮಾಹಿತಿ ಹೊರ ಬೀಳಲಿದೆ.

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಟೀಸರ್ ಬಿಡುಗಡೆ: ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಬಿಡುಗಡೆಗೆ ದಿನಗಣನೆ ಸಿದ್ಧವಾಗಿದೆ. ಏಪ್ರಿಲ್ 10ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೀಗ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟೀಸರ್​ ರಿಲೀಸ್ ಮಾಡಿದೆ. ‘ಗ್ಯಾಂಗ್ಸ್ ಆಫ್‍ ಯುಕೆ’ ಎಂದರೆ ಹೊಡೆದಾಟ, ಬಡಿದಾಟ, ಗ್ಯಾಂಗ್‍ಸ್ಟರ್‍ಗಳು ಇಷ್ಟೇ ಅಲ್ಲ ಎನ್ನುವ ರವಿ ಶ್ರೀವತ್ಸ, ‘ಇದು ತಾಯಿಯ ಕಣ್ಣೀರನ ಕಥೆಯಾದರೆ, ಇನ್ನೊಂದರ್ಥದಲ್ಲಿ ಹೆಣ್ಣಿನ ರಕ್ತಕಣ್ಣೀರಿನ ಕಥೆ ಸಿನಿಮಾದಲ್ಲಿದೆ ಎಂದಿದ್ದಾರೆ. ‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ, ಡೆಡ್ಲಿ ಆರ್ಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ‘ಒರಟ’ ಪ್ರಶಾಂತ್‍, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್‍ ನಟಿಸಿದ್ದಾರೆ. 

02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more