25 ಲಕ್ಷದ ಪ್ರಶ್ನೆ ನೋಡಿ ಕೋಟ್ಯಧಿಪತಿ ಕ್ವಿಟ್‌ ಮಾಡಿದ ಸಂಸ್ಕೃತ ಶಿಕ್ಷಕ!

By Web DeskFirst Published Sep 25, 2019, 12:17 PM IST
Highlights

ಕೋಟಿ ಆಟದಲ್ಲಿ ಹಾಟ್ ಸೀಟ್ ಸಿಗುವುದೇ ಕಷ್ಟ. ಅದರಲ್ಲೂ 25 ಲಕ್ಷ ಪ್ರಶ್ನೆ ಎದುರಿಸುವುದು ಮತ್ತೊಂದು ಬಿಗ್ ಟಾಸ್ಕ್‌, ನೆಹರು-ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ ಶಿಕ್ಷಕ!

ಇದುವರೆಗೂ ’ಕನ್ನಡದ ಕೋಟ್ಯಧಿಪತಿ’ ಯಲ್ಲಿ 25 ಲಕ್ಷ ಪ್ರಶ್ನೆ ಎದುರಿಸಿದವರು ನಾಲ್ಕು ಮಂದಿ ಮಾತ್ರ. ಸರಿಯಾದ ಉತ್ತರ ನೀಡಿದರೆ ಮನೆಗೆ ಭರ್ಜರಿ ಮೊತ್ತ ತೆಗೆದುಕೊಂಡು ಹೋಗಬಹುದು ಆದರೆ ಸೋತರೆ ಕೈ ಸೇರುವುದು ಕೇವಲ 3.20 ಲಕ್ಷ ರೂ ಮಾತ್ರ.

ಲೇಹ್, ಲಡಾಕ್‌ಗೆ ಬೈಕ್ ಟ್ರಿಪ್ ಹೋಗಬೇಕೆಂದು ಆಸೆ ಹೊತ್ತಿರುವ ಸಂಸ್ಕೃತ ಶಿಕ್ಷಕ ರಾಘವೇಂದ್ರ ಕೋಟ್ಯಧಿಪತಿ ಆಟದಲ್ಲಿ ಬರುವ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಈ ಹಿಂದೆ ಆಟದಲ್ಲಿ ರಿಸ್ಕ್ ತೆಗೆದುಕೊಂಡು 25 ಲಕ್ಷದ ಪ್ರಶ್ನೆ ಎದುರಿಸಿದ ಅನುರಾಧ 3.20 ಲಕ್ಷವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.

ಕಷ್ಟ ಎಂದು ಬಂದ ಸ್ಪರ್ಧಿಗೆ ಕೈ ಹಿಡಿಯದ ಕೋಟ್ಯಧಿಪತಿ; 25 ಲಕ್ಷ ಜಸ್ಟ್ ಮಿಸ್!

ರಾಘವೇಂದ್ರ ಎದುರಿಸಿದ 25 ಲಕ್ಷದ ಪ್ರಶ್ನೆ ಇದು.

- ಜವಹರ್ ಲಾಲ್ ನೆಹರು ಅವರನ್ನು ಹೊರತುಪಡಿಸಿ ನೆಹರು-ಗಾಂಧಿ ಕುಟುಂಬದ ಈ ವ್ಯಕ್ತಿಗಳಲ್ಲಿ ಯಾರ ಸಹಿಯನ್ನು ಭಾರತ ಸಂವಿಧಾನದ ಮೂಲ ಪ್ರತಿಯಲ್ಲಿ ಕಾಣಬಹುದು?

A. ಕೃಷ್ಣಾ ಹರಿಸಿಂಗ್

B. ಇಂದಿರಾ ಗಾಂಧಿ

C. ಮೋತಿಲಾಲ ನೆಹರು

D. ಫೀರೋಜ್ ಷಾ ಗಾಂಧಿ

ಉತ್ತರದಲ್ಲಿ ಕನ್ಫ್ಯೂಷನ್ ಆದ ಕಾರಣ ರಾಘವೇಂದ್ರ ಆಟವನ್ನು ಕ್ವಿಟ್‌ ಮಾಡಿದರು. ಕ್ವಿಟ್ ಮಾಡಿದ ನಂತರ ಪುನೀತ್ ಸುಮ್ಮನೆ ಉತ್ತರ ಕೊಡಬಹುದು ಎಂದು ಕೇಳುತ್ತಾರೆ ಆಗ ರಾಘವೇಂದ್ರ ಬಹುಶಃ ಮೋತಿಲಾಲ್ ನೆಹರು ಎಂದು ಉತ್ತರ ನೀಡಿದರು. ಇದಕ್ಕೆ ಸರಿಯಾದ ಉತ್ತರ ಫಿರೋಜ್‌ ಷಾ ಗಾಂಧಿ.

ಕೋಟ್ಯಧಿಪತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಕೈ ಸೇರಿತು 6.4 ಲಕ್ಷ

ಆಟ ಕ್ವಿಟ್‌ ಮಾಡಿದ ರಾಘವೇಂದ್ರ 12.5 ಲಕ್ಷವನ್ನು ತಮ್ಮದಾಗಿಸಿಕೊಂಡರು. ಅಷ್ಟಕ್ಕೂ 12.5 ಲಕ್ಷಕ್ಕೆ ಕೇಳಿದ ಪ್ರಶ್ನೆ ಏನು?

- ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರ ಜೊತೆಯಲ್ಲಿಯೂ ತನ್ನ ಸಮುದ್ರತೀರ ಹಂಚಿಕೊಳ್ಳುವ ಕೇಂದ್ರಾಡಳಿತ ಪ್ರದೇಶ ಯಾವುದು?

A. ಪುದುಚೇರಿ

B. ದಿಮನ್ ಮತ್ತು ದಿಯು

C. ಅಂಡಮಾನ್ ಮತ್ತು ನಿಕೋಬಾರ್

D. ಲಕ್ಷದ್ವೀಪ

ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

ಇದಕ್ಕೆ ಫೋನ್‌ ಅ ಫ್ರೆಂಡ್ ಎಂಬ ಲೈಫ್‌ ಲೈನ್‌ ಬಳಸಿ ಪುದಚೇರಿ ಎಂದು ಸರಿಯಾದ ಉತ್ತರ ನೀಡಿದ್ದರು. ಹಿಂದಿಯಲ್ಲಿ ನಡೆಯುವ Kaun Banega Crorepati ಆಟದಲ್ಲಿ ಇಬ್ಬರು ಸ್ಪರ್ಧಿಗಳು 1 ಕೋಟಿ ತಮ್ಮದಾಗಿಸಿಕೊಂಡಿದ್ದಾರೆ.

click me!