
ತೆಲುಗಿನ 'ಆರುಂಧತಿ', 'ಭಾಗಮತಿ' ಚಿತ್ರಗಳ ಹಾಗೆಯೇ ಮಹಿಳಾ ಪ್ರಧಾನ ಚಿತ್ರವಾದ 'ದಮಯಂತಿ' ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಎಂಭತ್ತರ ದಶಕದ ಕಥೆ ಎಂದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ವಿಭಿನ್ನ, ವಿಶೇಷ ವೇಷ ಭೂಷಣದಲ್ಲಿಯೇ ರಾಧಿಕಾ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮೊದಲ ಬಾರಿಗೆ ಸಿಗರೇಟು ಸೇದಿದ್ರಂತೆ ರಾಧಿಕಾ ಕುಮಾರಸ್ವಾಮಿ!
ಕೆಲವು ದಿನಗಳ ಹಿಂದೆಯಷ್ಟೇ ದಮಯಂತಿ ಟೀಸರ್ ರಿಲೀಸ್ ಆಗಿದ್ದು YouTubeನಲ್ಲಿ ಟ್ರೆಂಡ್ ಆಗಿತ್ತು. ಅದರಲ್ಲಿರುವ ಪ್ರತಿಯೊಂದೂ ಡೈಲಾಗ್ ಈಗಾಗಲೇ ಸಾಕಷ್ಟು ಫೇಮಸ್ ಆಗಿದ್ದು, ಟಿಕ್‌ಟಾಕ್‌ನಲ್ಲಿ ಬಳಸುವವರಿಗೆ ರಾಧಿಕಾ ಸೂಪರ್ ಅವಕಾಶವೊಂದನ್ನು ಕೊಡುತ್ತಿದ್ದಾರೆ.
ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ
ರಾಧಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ' ಹಾಯ್, ಎಲ್ಲರಿಗೂ ನಮಸ್ಕಾರ, ನಮ್ಮ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಬರುವ ಡೈಲಾಗ್‌ಗಳನ್ನು ಯಾರು ತುಂಬಾ ಚೆನ್ನಾಗಿ ಟಿಕ್‌ಟಾಕ್ ಮಾಡಿ ಅತಿ ಹೆಚ್ಚು ಲೈಕ್ ಪಡೆಯುತ್ತಾರೋ ಅದರಲ್ಲಿ 10 ಮಂದಿಗೆ ನನ್ನೊಂದಿಗೆ ದಮಯಂತಿ ಪ್ರೀಮಿಯರ್ ಶೋ ನೋಡುವ ಅವಕಾಶವಿದೆ. Don't miss it.ಥ್ಯಾಂಕ್ಯೂ ' ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಈಗಾಗಲೇ ಸಾಕಷ್ಟು ಟಿಕ್‌ಟಾಕ್ ಬಳಕೆದಾರರೂ ಡಿಫರೆಂಟ್ ಆಗಿ ವೇಷ ಭೂಷಣ ಧರಿಸಿ ಮಾಡುತ್ತಿರುವ ವಿಡಿಯೋಗಳೂ ವೈರಲ್ ಆಗುತ್ತಿವೆ.
ಇನ್ನು ಅಘೋರಿಯಾಗಿ ಅಭಿನಯಿಸುತ್ತಿರುವ 'ಭೈರಾದೇವಿ' ಚಿತ್ರಕ್ಕೂ 'ದಮಯಂತಿ' ಚಿತ್ರದ ಪಾತ್ರಕ್ಕೂ ಬಿಗ್ ಕನ್ಫ್ಯೂಷನ್ ಇತ್ತು. ಇದಕ್ಕೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ. ದಮಯಂತಿ ಚಿತ್ರವೂ ಅಮ್ಮ ಪಾತ್ರ, ಆಕೆ ಇಡೀ ಊರಿಗೇ ನೆರವು ನೀಡಿ, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಾಳೆ ಎಂದು ಇತ್ತೀಚೆಗೆ 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.
ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!
ಚಿತ್ರದ ಟೀಸರ್‌ನಲ್ಲಿ ನಿರ್ಮಾಣದ ರಿಚ್‌ನೆಸ್ ಎದ್ದು ಕಾಣುತ್ತದೆ ಅದರಲ್ಲೂ ರಾಧಿಕಾ ಹೊಸ ಲುಕ್ ಅನ್ನು ಪ್ರೇಕ್ಷಕರಿಗೆ ಪರಿಚಯಿಸಿದ ರೀತಿ ಅಭಿಮಾನಿಗಳ ಮನಸ್ಸು ಈಗಾಗಲೇ ಗೆದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.