
ನವದೆಹಲಿ (ಸೆ. 25): ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.
ಮೀ ಟೂ ಬಳಿಕ ಮಹಿಳೆಯರೊಂದಿಗೆ ಮಾತಾಡಲೂ ಪುರುಷರಿಗೆ ಭಯ!
ಬಾಲಿವುಡ್ನಲ್ಲಿ 2 ಬಾರಿ ಮತ್ತು ದಕ್ಷಿಣ ಭಾರತದ 3 ನಿರ್ದೇಶಕ ರಿಂದ ಇಂಥ ಕಿರುಕುಳ ಅನುಭವಿಸಿದ್ದೆ. ಒಬ್ಬ ನಿರ್ದೇಶಕ ನಿನ್ನ ಎದೆ ಭಾಗದ ಸೀಳು ಹೇಗೆ ಕಾಣುತ್ತೆ ನೋಡಬೇಕು ಎಂದಿದ್ದ, ಇನ್ನೋರ್ವ ನಿರ್ದೇಶಕ ನಿನ್ನ ದೇಹದ ಇಂಚಿಂಚೂ ನೋಡಬೇಕು ಎಂದು ಕೇಳಿಕೊಂಡಿದ್ದ ಎಂದು ಸುರ್ವೀನ್ ಚಾವ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ. ಸುರ್ವೀನ್ ಕನ್ನಡದಲ್ಲಿ ‘ಪರಮೇಶ ಪಾನ್ ವಾಲಾ’ ಸಿನಿಮಾದಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದರು.
ಬಾಲಿವುಡ್ ನಲ್ಲಿ ಮೊದಲ ಬಾರಿಗೆ ತನುಶ್ರೀ ದತ್ತಾ, ನಾನಾ ಪಾಟೇಕರ್ ಬಗ್ಗೆ ಮೊದಲ ಬಾರಿಗೆ ಮೀಟೂ ಆರೋಪ ಮಾಡುತ್ತಾರೆ. ಅಲ್ಲಿಂದ ಒಂದೊಂದೇ ಮೀಟೂ ಗಳು ಈಚೆ ಬರಲು ಶುರುವಾಗುತ್ತದೆ. ಬಾಲಿವುಡ್ ಗೆ ಹೋಲಿಸಿದರೆ ಸೌತ್ ಇಂಡಿಯನ್ ನಟಿಯರೇ ಹೆಚ್ಚು #MeToo ಆರೋಪ ಮಾಡಿದ್ದಾರೆ. ಸಂಗೀತಾ ಭಟ್, ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಆರೋಪ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.