ಕನ್ನಡದ ಕೊಟ್ಯಧಿಪತಿ ಹಾಟ್ ಸೀಟ್ ಗೆ ಟಿ ನರಸೀಪುರ ಮೂಲದ ಜ್ಞಾನೇಶ್ ಎಂಬುವವರು ಆಗಮಿಸಿದ್ದರು. ಇವರು ವೃತ್ತಿಯಲ್ಲಿ ಎಂಜಿನೀಯರ್. ಬಹಳ ಕಾನ್ಫಿಡೆಂಟಾಗಿ ಆಡುತ್ತಾ, ಕೋಟಿ ಗೆಲ್ಲಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಎಲ್ಲಾ ಪ್ರಶ್ನೆಗಳಿಗೆ ಫಟಾಫಟಾಂತ ಸರಿಯಾಗಿ ಉತ್ತರಿಸುತ್ತಾ ಹಣ ಗೆಲ್ಲುತ್ತಾ ಹೋದರು. 

ಕೋಟ್ಯಧಿಪತಿಯಲ್ಲಿ ಬ್ಯಾಂಕ್‌ ಅಟೆಂಡರ್ ಕೈ ಸೇರಿತು ಲಕ್ಷ ಲಕ್ಷ!

ಯಾವುದೇ ಲೈಫ್ ಲೈನ್ ಬಳಸದೇ ಮೊದಲ ಸೇಫ್ ಜೋನ್ ದಾಟಿದ ಜ್ಞಾನೇಶ್ ಹತ್ತು ಸಾವಿರ ಗೆದ್ದರು. ನಂತರ ಹತ್ತು ಪ್ರಶ್ನೆಗಳಿಗೂ ಸರಿಯುತ್ತರ ಕೊಟ್ಟು 3.20 ಲಕ್ಷ ಗೆದ್ದು ಇನ್ನಷ್ಟು ಭರವಸೆ ಮೂಡಿಸಿದರು. 

ನಂತರದ ಪ್ರಶ್ನೆಗೆ ಲೈಫ್ ಲೈನ್ ಬಳಸಿ ಸರಿಯುತ್ತರ ನೀಡಿದರು. ಅಲ್ಲಿಗೆ 6.40 ಲಕ್ಷ ತಮ್ಮದಾಗಿಸಿಕೊಂಡರು. ಮುಂದಿನ ಪ್ರಶ್ನೆ 12.50 ಲಕ್ಷದ್ದಾಗಿತ್ತು. ಇಲ್ಲಿ ಜ್ಞಾನೇಶ್ ಗೊಂದಲಕ್ಕೀಡಾದರು. 

ಕನ್ನಡಿಗರ ಚಪ್ಪಾಳೆಯಿಂದಲೇ ನೀವು ಬೆಳೆದಿದ್ದು ; ರಶ್ಮಿಕಾ ಮೇಲೆ ಜಗ್ಗೇಶ್ ಗರಂ

ಡೇವಿಸ್ ಕಪ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಟೆಸ್ಟ್ ಕ್ರಿಕೆಟ್ ಆಟಗಾರ ಯಾರು? ಎಂದು ಕೇಳಲಾಗಿತ್ತು. 

A. ವಿನೂ ಮಂಕಡ್ 
B ಚುನಿ ಗೋಸ್ವಾಮಿ 
c. ಕೋಟ ರಾಮಸ್ವಾಮಿ 
D ಮನ್ಸೂರ್ ಅಲಿ ಖಾನ್ ಪಟೌಡಿ 

ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಜ್ಞಾನೇಶ್ ಅಲ್ಲಿಗೆ ಆಟವನ್ನು ಕ್ವಿಟ್ ಮಾಡಿದರು. ಅಲ್ಲಿದೆ 6.40 ಲಕ್ಷ ತಮ್ಮದಾಗಿಸಿಕೊಂಡರು.  ಇದಕ್ಕೆ ಸರಿಯುತ್ತರ ಕೋಟ ರಾಮಸ್ವಾಮಿಯಾಗಿತ್ತು.