ಕಲರ್ಸ್‌ ಟೀವಿ ನನ್ನ ಎರಡನೆಯ ಮನೆ: ರಚಿತಾ ರಾಮ್‌

By Web DeskFirst Published Sep 28, 2019, 9:58 AM IST
Highlights

ಅನುಬಂಧ ಅವಾರ್ಡ್ಸ್ ಸೆ.28 ಮತ್ತು 29ರಂದು 7 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಸೆ.27ರಂದು ಸಂಜೆ 4 ಗಂಟೆಗೆ ‘ಅನುಬಂಧ ಅವಾರ್ಡ್ಸ್‌ನ ‘ರೆಡ್‌ ಕಾರ್ಪೆಟ್‌’ ಎಪಿಸೋಡ್‌ ವೀಕ್ಷಿಸಬಹುದು

ರಚಿತಾ ರಾಮ್‌ ಹಿರಿತೆರೆಯಲ್ಲಿ ಎಷ್ಟುಪ್ರಸಿದ್ಧವೋ ಕಿರುತೆರೆಯಲ್ಲೂ ಅಷ್ಟೇ ಜನಪ್ರಿಯೆ. ಇದೀಗ ಅವರು ಅನುಬಂಧ ಅವಾರ್ಡ್‌್ಸ ನಿರೂಪಣೆ ಮಾಡುತ್ತಿದ್ದಾರೆ. ಆ ಅನುಭವದ ಕುರಿತು ಅವರು ಆಡಿರುವ ಮಾತುಗಳು ಇಲ್ಲಿವೆ.

1. ಇಲ್ಲಿ ನಾನು ಮಾತ್ರ ನಿರೂಪಕಿಯಾಗಿರಲಿಲ್ಲ. ಅಕುಲ್‌ ಬಾಲಾಜಿ ಮತ್ತು ಅನುಪಮಾ ಗೌಡ ಅವರು ಕೂಡಾ ಇದ್ದರು. ಅವರಿಬ್ಬರೂ ಈಗಾಗಲೇ ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ ನನಗೆ ಈ ಅನುಭವ ಹೊಸದು. ಸ್ವಲ್ಪ ನರ್ವಸ್‌ ಆಗಿದ್ದೂ ಇದೆ. ನಿಜ ಹೇಳ್ತೀನಿ, ನಿರೂಪಣೆ ಅಷ್ಟುಸುಲಭದ ಕೆಲಸ ಅಲ್ಲ.

 

 
 
 
 
 
 
 
 
 
 
 
 
 

#Anubhandhaawards2019 @colorskannadaofficial

A post shared by Rachita Ram (@rachita_instaofficial) on Sep 24, 2019 at 10:17am PDT

2. ನಾವು ಮನರಂಜನೆ ಇಂಡಸ್ಟ್ರಿಯಲ್ಲಿ ಇರುವವರು. ಹಾಗಾಗಿ ಚೆನ್ನಾಗಿ ಕಾಣುವುದು ಇಲ್ಲಿ ಬಹಳ ಮುಖ್ಯ. ಮೇಲಾಗಿ ಇದು ಎಲ್ಲ ಕನ್ನಡಿಗರು ಕಾತರದಿಂದ ಕಾಯುವ ಅನುಬಂಧ ಅವಾರ್ಡ್ಸ್. ನಾನು ಇನ್ನೂ ಚೆನ್ನಾಗಿ ಕಾಣ್ಸೋದು ಬೇಡ್ವಾ? ಅದಕ್ಕಾಗಿಯೇ ಕೆಂಪು ಲೆಹೆಂಗಾ ಧರಿಸಿದ್ದೇನೆ. ಕಾರ್ಯಕ್ರಮದ ಬಳಿಕ ಬಹಳ ಮಂದಿ ನನ್ನ ಡ್ರೆಸ್‌ ಬಗ್ಗೆ ಹೊಗಳಿದರು. ಹೊಗಳಿಕೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಹಜವಾಗಿಯೇ ನಾನು ಖುಷಿಯಾಗಿದ್ದೇನೆ.

'ಸೀತಾವಲ್ಲಭ'ದ ಹಠಮಾರಿ ಅಂಕಿತಾಳ ರಿಯಲ್ ರೂಪ!

3. ನನಗೆ ಇಲ್ಲಿ ತುಂಬಾ ಇಷ್ಟವಾಗಿರುವುದೇ ಇಲ್ಲಿರುವ ಅನುಬಂಧ. ನಾನು ಕೂಡಾ ಸೀರಿಯಲ್‌ಗಳನ್ನು ಮಾಡಿರುವುದರಿಂದ ನನಗೆ ಇದರ ಬಗ್ಗೆ ಚೆನ್ನಾಗಿ ಅರಿವಿದೆ. ನಾವು ಸಿನಿಮಾಗಳಲ್ಲಿ 30 ದಿನ 40 ದಿನ, ಹೆಚ್ಚೆಂದರೆ ನೂರು ದಿನ ಜೊತೆಗಿರುತ್ತೇವೆ. ಇಲ್ಲಿ ವರ್ಷಾನುಗಟ್ಟಲೆ ಜೊತೆಗೆ ಕೆಲಸ ಮಾಡುವ ಕಲಾವಿದರಿದ್ದಾರೆ. ಸಹಜವಾಗಿಯೇ ಅವರ ನಡುವೆ ಒಂದು ರೀತಿಯ ಬಾಂಧವ್ಯ ಬೆಳೆದಿರುತ್ತದೆ. ಹೀಗೆಯೇ ಜೊತೆ ಜೊತೆಗೆ ಇರುವ ಹಲವಾರು ಧಾರಾವಾಹಿಗಳ ತಂಡಗಳು ಅನುಬಂಧದಲ್ಲಿ ಒಟ್ಟು ಸೇರಿವೆ. ಒಬ್ಬರಿಗೆ ಪ್ರಶಸ್ತಿ ಬಂದಾಗ ಇನ್ನೊಬ್ಬರು ಹುರಿದುಂಬಿಸೋದು, ಒಬ್ಬರಿಗೆ ಬೇಸರವಾದಾಗ ಇನ್ನೊಬ್ಬರು ಸಂತೈಸೋದು- ಎಷ್ಟುಚಂದ ಅಲ್ವಾ?

ಸಿದ್ದಾರ್ಥ್‌ ‘ಅಗ್ನಿಸಾಕ್ಷಿ’ ಬಿಟ್ಟೋದ ನಂತರ ಬದಲಾದ ಸನ್ನಿಧಿ!

4. ಕಲರ್ಸ್‌ ನನಗೆ ಎರಡನೇ ಮನೆ ಇದ್ದ ಹಾಗೆ. ಕಾಮಿಡಿ ಟಾಕೀಸ್‌ ಅನ್ನೋ ಕಾರ್ಯಕ್ರಮದ ಮೂಲಕ ನಾನು ಈ ಮನೆ ಪ್ರವೇಶಿಸಿದೆ. ನಾನು ಈಗಾಗಲೇ ಬಹಳ ಸಾರಿ ಹೇಳಿದ ಹಾಗೆ ನನಗೆ ಕಾಮಿಡಿ ಬಗ್ಗೆ ಯಾವುದೇ ಕಲ್ಪನೆ ಇಲ್ಲದೆ ಇದ್ದ ಕಾಲದಲ್ಲಿ ಈ ಚಾನೆಲ್‌ನ ಮುಖ್ಯಸ್ಥರು ನನಗೆ ಈ ಆಫರ್‌ ನೀಡಿದರು. ಹೋಗ್ತಾ ಹೋಗ್ತಾ ನನಗೆ ಅದು ತುಂಬಾ ಇಷ್ಟವಾಯ್ತು. ಆ ಕಲಾವಿದರ ಟೈಮಿಂಗ್‌, ಹಾಸ್ಯ ಪ್ರಜ್ಞೆ ನನ್ನನ್ನು ಬಹಳವಾಗಿ ಕಾಡಿದೆ. ಆನಂತರ ನಮ್ಮದೇ ಗುಂಪಿನ ಕಲರ್ಸ್‌ ಸೂಪರ್‌ನಲ್ಲಿ ಮಜಾಭಾರತಕ್ಕೂ ತೀರ್ಪುಗಾರ್ತಿಯಾಗುವ ಅವಕಾಶ ಸಿಕ್ಕಿತು. ಈಗ ಎರಡು ವರ್ಷಗಳಿಂದ ಇಲ್ಲಿದ್ದೇನೆ

'ಮಿಥುನ ರಾಶಿ' ವಿಲನ್ ಕೋಳಿ ಹಿಡಿಯುವುದರಲ್ಲಿ ಸೂಪರ್ ಡೂಪರ್!

5. ನಿಮಗೆ ಒಂದು ಕೆಲಸ ಇಷ್ಟಆದ್ರೆ ನೀವು ಖಂಡಿತಾ ಅದಕ್ಕೆ ಸಮಯ ಮಾಡಿಕೊಳ್ತೀರಿ. ನನಗೆ ಈ ಕೆಲಸ ಇಷ್ಟ. ಈ ಕೆಲಸದಲ್ಲಿ ಜನರೂ ನನ್ನನ್ನು ಇಷ್ಟಪಟ್ಟಿದ್ದಾರೆ. ಚಾನೆಲ್‌ನವರಿಗೂ ನನ್ನ ಕೆಲಸ ಇಷ್ಟವಾಗಿದೆ. ಇನ್ನು ಮುಂದೆಯೂ ಹೀಗೇ ಮುಂದುವರಿಯುತ್ತೇನೆ.

click me!