
ಚಿತ್ರದಲ್ಲಿ ನಾಯಕ, ನಾಯಕಿಯನ್ನು ರೇಗಿಸುವ ಸನ್ನಿವೇಶಕ್ಕೆ ಚೇತನ್ ಹಾಗೂ ನವೀನ್ ಸಜ್ಜು ಇಬ್ಬರು ಸೇರಿ ಸ್ಪೆಷಲ್ ಸಾಂಗ್‌ವೊಂದನ್ನು ಬರೆದಿದ್ದಾರೆ. ಸದ್ಯಕ್ಕೆ ಅದರ ಚಿತ್ರೀಕರಣ ಕೂಡ ಆಗಿಲ್ಲ. ಹಾಗೆಯೇ ಅದನ್ನು ಸೂಕ್ತ ಗಾಯಕರಿಂದಲೇ ಹಾಡಿಸಬೇಕೆನ್ನುವ ಆಲೋಚನೆ ನಿರ್ಮಾಪಕ ಶ್ರೀಕಾಂತ್ ಅವರದ್ದು.
ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!
‘ಇದೊಂದು ಸ್ಪೆಷಲ್ ಸಾಂಗ್.ಒಳ್ಳೆಯ ಸಾಹಿತ್ಯ ಇದ್ದರೆ ಚೆಂದ ಅಂತ ಚೇತನ್ ಹಾಗೂ ನವೀನ್ ಸಜ್ಜು ಅವರನ್ನು ಕೇಳಿಕೊಂಡಿದ್ದೆ. ಅವರೇ ಆಸಕ್ತಿ ವಹಿಸಿ ಗೀತೆ ರಚನೆ ಮಾಡಿಕೊಟ್ಟಿದ್ದಾರೆ. ಚರಣ್ ರಾಜ್ ಅದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಗಾಯಕರು ಫಿಕ್ಸ್ ಆಗಿಲ್ಲ. ಜನಪ್ರಿಯ ಗಾಯಕರಿಂದಲೇ ಅದನ್ನು ಹಾಡಿಸಬೇಕೆನ್ನುವ ಆಲೋಚನೆಯಲ್ಲಿದ್ದೇನೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ಅದು ಫೈನಲ್ ಆಗಲಿದೆ’ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಇನ್ನು ಚಿತ್ರದ ಬಾಕಿ ಚಿತ್ರೀಕರಣ ಇನ್ನೇನು ವಾರದಲ್ಲೇ ಶುರುವಾಗುತ್ತಿದಯಂತೆ. ಅದರಲ್ಲೂ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಅದ್ಧೂರಿ ವೆಚ್ಚದಲ್ಲಿ ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ ಶ್ರೀಕಾಂತ್.
ಡಾಲಿ ಧನಂಜಯ್ ಇದೀಗ ಪೊಲೀಸ್ ; ಖಡಕ್ ಲುಕ್ ಆಯ್ತು ವೈರಲ್
‘ ಒಂದು ಚಿತ್ರದ ಪ್ರಮುಖ ಆಕರ್ಷಮೆ ಕ್ಲೈಮ್ಯಾಕ್ಸ್. ಈ ಚಿತ್ರದ ಮಟ್ಟಿಗೆ ಸ್ಪೆಷಲ್. ಅದನ್ನು ಅದ್ಧೂರಿ ವೆಚ್ಚದಲ್ಲೇ ತೆರೆಗೆ ತರಲು ನಿರ್ಧರಿಸಿದ್ದೇವೆ. ಕನ್ನಡಕ್ಕೆ ಹೊಸತೆನಿಸುವಂತಹ ಸಾಹಸ ಸನ್ನಿವೇಶಗಳು, ಸೆಂಟಿಮೆಂಟ್ ಅಂಶಗಳು ಅದರಲ್ಲಿವೆ. ಸದ್ಯಕ್ಕೆ ಅದನ್ನು ಎಲ್ಲಿ, ಹೇಗೆ ಚಿತ್ರೀಕರಿಸಬೇಕೆನ್ನುವುದು ಕೂಡ ನಿರ್ಧಾರ ಆಗಿಲ್ಲ. ನಿರ್ದೇಶಕರು ಆದ ನಾಯಕ ನಟ ವಿಜಯ್ ಅವರ ಜತೆಗೆ ಮಾತುಕತೆ ನಡೆದಿದೆ’ಎಂದು ವಿವರ ನೀಡುತ್ತಾರೆ.
’ಸಲಗ’ ಸೆಟ್‌ಗೆ ಶಿವಣ್ಣ ಸಪ್ರೈಸ್ ಭೇಟಿ; ಇದು ಸುವರ್ಣ ವಿಶೇಷ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.