ಬಾಕ್ಸಾಫೀಸ್‌ನಲ್ಲಿ 200 ಕೋಟಿ ಬಾಚುತ್ತಾ ಕೆಜಿಎಫ್?

By Web DeskFirst Published Dec 24, 2018, 3:53 PM IST
Highlights

ಬಾಕ್ಸಾಫೀಸ್‌ ಗಳಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ ಕೆಜಿಎಫ್ | ಇದುವರೆಗೂ 50 ಕೋಟಿ ಗಳಿಕೆ ಕಂಡಿದೆ | ವಾರಾಂತ್ಯದೊಳಗೆ 100 ಕೋಟಿ ದಾಟುವ ಸಾಧ್ಯತೆ 

ಬೆಂಗಳೂರು (ಡಿ. 24): ಕನ್ನಡ ಚಿತ್ರರಂಗದ ಯಾವ ಚಿತ್ರವೂ ಹಿಂದೆಂದೂ ಕಂಡಿರದ ರೀತಿಯಲ್ಲಿ ಕೆಜಿಎಫ್ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇಡೀ ಭಾರತೀಯ ಚಿತ್ರರಂಗ ಹಿಂತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್. ಯಶ್ ಈ ಹಿಂದೆಯೇ ಹೇಳಿದಂತೆ ಸ್ಯಾಂಡಲ್‌ವುಡ್‌ನ್ನು  ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದೆ. ನಾನು ಬರೋ ತನಕ ಮಾತ್ರ ಬೇರೆಯವರ ಹವಾ, ಬಂದ ಮೇಲೆ ನನ್ನದೇ ಹವಾ ಎನ್ನುತ್ತಿದ್ದ ಯಶ್ ಕೆಜಿಎಫ್ ನಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ. 

ಕೆಜಿಎಫ್ ನೋಡಿ ಯಶ್‌ಗೆ ಸುಮಲತಾ ವಿಶ್!

ಎಲ್ಲಾ ರೀತಿಯಲ್ಲೂ ದಾಖಲೆ ಬರೆಯಲು ಸಿದ್ಧವಾಗಿದೆ ಕೆಜಿಎಫ್. ಅಂದಹಾಗೆ ಲೆಕ್ಕಾಚಾರಗಳ ಪ್ರಕಾರ ಬಿಡುಗಡೆಯಾದ 3 ದಿನಗಳಲ್ಲಿ 60 ಕ್ಕೂ ಹೆಚ್ಚು ಕೋಟಿ ಬಾಚಿದೆ ಎನ್ನಲಾಗಿದೆ.  ಭಾನುವಾರ ಒಂದೇ ದಿನ 10 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಇದೇ ರೀತಿ ನಾಗಾಲೋಟದಲ್ಲಿ ಮುನ್ನುಗ್ಗಿದರೆ ವಾರಾಂತ್ಯದೊಳಗೆ 100 ಕೋಟಿ ದಾಟಬಹುದು ಎನ್ನಲಾಗುತ್ತಿದೆ. 

ಕೆಜಿಎಫ್‌ಗೆ ಫಿದಾ ಆದ್ರು ಬಾಲಿವುಡ್ ಮಸ್ತ್ ಮಸ್ತ್ ಹುಡುಗಿ

ಯಶ್ ಅಭಿನಯದ ಮಾಸ್ಟರ್ ಪೀಸ್ 30 ಕೋಟಿ ಕಲೆಕ್ಷನ್ ಕಂಡಿದ್ದರೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ 50 ಕೋಟಿ ಗಳಿಕೆ ಕಂಡಿದೆ. ಈ ಸಿನಿಮಾಗಳು ಹೈಯೆಸ್ಟ್ ಗಳಿಕೆ ಕಂಡ ಸಿನಿಮಾಗಳ ಪಟ್ಟಿಗೆ ಸೇರಿದ್ದವು. ಈಗ ಕೆಜಿಎಫ್ ಇದನ್ನೆಲ್ಲಾ ಹಿಂದಿಕ್ಕಿ ಮುನ್ನುಗ್ಗಿದೆ. 

ಪವರ್ ಸ್ಟಾರ್ ಪುನೀತ್ ಅಭಿನಯದ ರಾಜ ಕುಮಾರ ಸಿನಿಮಾ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಸದ್ದು ಮಾಡಿತ್ತು.  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಂಗೊಳ್ಳಿ ರಾಯಣ್ಣ  40 ಕೋಟಿ ಕಲೆಕ್ಷನ್ ಕಂಡಿತ್ತು. 
ಸ್ಯಾಂಡಲ್ ವುಡ್ ಆರಡಿ ಕಟೌಟ್ ನಟ ಕಿಚ್ಚ ಸುದೀಪ್ ಮಾಣಿಕ್ಯ ಚಿತ್ರ 34 ಕೋಟಿ ಹಾಗೂ ರನ್ನ ಸಿನಿಮಾ 40 ಕೋಟಿ ಕಲೆಕ್ಷನ್ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಕೋಟಿಗೋಬ್ಬ 2 ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿ ಕನ್ನಡದ ಹೈಯೆಸ್ಟ್ ಕಲಕ್ಷನ್ ಮಾಡಿರೋ ಸಿನಿಮಾ ಲಿಸ್ಟ್ ಗೆ ಸೇರಿದೆ.

ಕೆಜಿಎಫ್ ನಟಿ ಶ್ರೀನಿಧಿ ಬಗ್ಗೆ ನಿಮಗೇನು ಗೊತ್ತು?

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಟಗರು ಸಿನಿಮಾ ಕೂಡಾ 50 ಕೋಟಿ ಗಳಿಕೆ ಕಂಡಿದೆ.  ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಕೂಡಾ 50 ಕೋಟಿ ಗಳಿಸಿತ್ತು.  

ಈಗ ಇದೇ ಸಾಲಿನಲ್ಲಿ ಕೆಜಿಎಫ್ ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾವೊಂದು ಪಂಚ ಭಾಷೆಗಳಲ್ಲಿ ರಿಲೀಸಾಗಿದ್ದು ಇದೇ ಮೊದಲು. ಎಲ್ಲಾ ಭಾಷೆಗಳಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕೆಜಿಎಫ್ ಬಿಡುಗಡೆಯಾದ ದಿನವೇ ಜೀರೋ ಕೂಡಾ ರಿಲೀಸಾಗಿದೆ. ಆದರೆ ಕೆಜಿಎಫ್ ಅಬ್ಬರದ ಎದುರು ಮಂಕಾಗಿದೆ. ಒಟ್ಟಿನಲ್ಲಿ ಈ ವಾರದ ಅಂತ್ಯದೊಳಗೆ 100 ಕೋಟಿ ಬಾಚಬಹುದು ಎನ್ನಲಾಗುತ್ತಿದೆ. ಒಟ್ಟಾರೆಯಾಗಿ 200 ಕೋಟಿ ಬಾಚಿ ಇತಿಹಾಸವನ್ನೇ ನಿರ್ಮಿಸಬಹುದು ಎನ್ನುತ್ತದೆ ಗಾಂಧಿನಗರದ ಲೆಕ್ಕಾಚಾರ.  

click me!