‘ನಟಸಾರ್ವಭೌಮ’ ಟೀಸರ್: ಹೆಚ್ಚಾಯ್ತು ಸ್ಟಾರ್ ಪವರ್!

Published : Dec 24, 2018, 03:49 PM IST
‘ನಟಸಾರ್ವಭೌಮ’ ಟೀಸರ್: ಹೆಚ್ಚಾಯ್ತು ಸ್ಟಾರ್ ಪವರ್!

ಸಾರಾಂಶ

ಅತ್ತ ಕೆಜಿಎಫ್ ರಿಲೀಸ್ ಆಗಿ ಸದ್ದು ಮಾಡುತ್ತಿದ್ದರೆ, ಇತ್ತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ನಟ ಸಾರ್ವಭೌಮ ಟೀಸರ್ ಬಿಡುಗಡೆಯಾಗಿದೆ. ಹೇಗಿದೆ ಚಿತ್ರಕ್ಕೆ ರೆಸ್ಪಾನ್ಸ್?

ಹೊಸ ವರ್ಷದಲ್ಲಿ ಬಿಡುಗಡೆಯಾಗುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ 'ನಟಸಾರ್ವಭೌಮ' ಸಹ ಒಂದು. ಪುನೀತ್ ರಾಜ್‌ಕುಮಾರ್ ಅಭಿನಯನದ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವಿಪರೀತ ಸದ್ದು ಮಾಡುತ್ತಿದೆ.

ಪತ್ರಕರ್ತನಾಗಿ ಈ ಚಿತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದು, ಟೀಸರ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿಯೇ 1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ಚಿತ್ರ ನೋಡಲೇಬೇಕೆಂಬ ಕುತೂಹಲ ಹೆಚ್ಚಿಸಿದ್ದು, ಕನ್ನಡ ಚಿತ್ರಾಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಪುನೀತ್ ಡ್ಯಾನ್ಸ್ ಎಂದರೆ ಕೇಳಬೇಕಾ? ಇದರಲ್ಲೂ ಪವರ್ ಸ್ಟಾರ್ ಸ್ಟೆಪ್ಸ್‌ಗೆ ಎಲ್ಲರೂ ಫುಲ್ ಫಿದಾ ಆಗಿದ್ದಾರೆ. ಚಿತ್ರದ ನಿರ್ದೇಶಕ ಪವನ್ ಒಡೆಯರ್ ಟೀಸರ್‌ನಲ್ಲಿ ಇಬ್ಬರು ನಾಯಕಿಯರಾದ ರಚಿತಾ ರಾಮ್ ಹಾಗೂ ಅನುಪಮಾ ಪರಮೇಶ್ವರ್ ಬ್ಯೂಟಿಫಿಲ್ ಆ್ಯಂಡ್ ಇನೋಸೆಂಟ್ ಲುಕ್ ಮೂಲಕ ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆಂದೆನಿಸುತ್ತಿದೆ.

ಪವರ್ ಸ್ಟಾರ್ ಜೊತೆಯಾಗಿ, ಚಿಕ್ಕಣ್ಣ ಕಾಮಿಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರದ ಹಾಡುಗಳು ಜನವರಿ 5ರಂದು ಬಿಡುಗಡೆಯಾಗಲಿವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?