ಬುಲ್‌ಬುಲ್ ಈಗ ಫುಲ್ ಬ್ಯುಸಿ!

Published : Sep 26, 2018, 03:11 PM ISTUpdated : Sep 26, 2018, 03:18 PM IST
ಬುಲ್‌ಬುಲ್ ಈಗ ಫುಲ್ ಬ್ಯುಸಿ!

ಸಾರಾಂಶ

ಬುಲ್‌ಬುಲ್ ಹುಡುಗಿ ರಚಿತಾ ರಾಮ್ ಈಗ ಫುಲ್ ಬ್ಯುಸಿ | ಶಿವರಾಜ್ ಕುಮಾರ್ ಜೊತೆ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ | ಡಿಸಂಬರ್’ನಲ್ಲಿ ಚಿತ್ರೀಕರಣ ಆರಂಭ | ಪ್ರಸಿದ್ಧ ನಿರ್ದೇಶಕ ಪಿ.ವಾಸು ಆ್ಯಕ್ಷನ್ ಕಟ್ ಹೇಳಲಿದ್ದಾರೆ 

ಬೆಂಗಳೂರು (ಸೆ. 26): ದ್ವಾರಕೀಶ್ ನಿರ್ಮಾಣ ಹಾಗೂ ಪಿ.ವಾಸು ನಿರ್ದೇಶನದ ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೋಡಿ ಆಗಿ ರಚಿತಾರಾಮ್ ಅಭಿನಯಿಸುತ್ತಿದ್ದಾರೆ. ‘ಚೌಕ’ ಯಶಸ್ಸಿನ ನಂತರ ಯೋಗಿ ದ್ವಾರಕೀಶ್ ಬಿಗ್‌ಸ್ಟಾರ್ ಹಾಗೂ ಬಿಗ್ ಬಜೆಟ್‌ನಲ್ಲೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

ಈ ಚಿತ್ರಕ್ಕೆ ಪ್ರಸಿದ್ಧ ನಿರ್ದೇಶಕ ಪಿ.ವಾಸು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಡಿಸೆಂಬರಲ್ಲಿ ಆರಂಭವಾಗಲಿದೆ.

25 ದಿನದಲ್ಲಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾರಾಮ್

‘ತಮ್ಮ ಸಿನಿಜರ್ನಿಯಲ್ಲಿ ಇದೊಂದು ವಿಶೇಷವಾದ ಸಿನಿಮಾ. ಶಿವರಾಜ್ ಕುಮಾರ್ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ. ಉದಯ ಟಿವಿಯ ಕಿಕ್ ರಿಯಾಲಿಟಿ ಶೋನಲ್ಲಿ ಅವರೊಂದಿಗೆ ತೀರ್ಪುಗಾರರಾಗಿ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕ ನಂತರ ನಾನು ಅವರನ್ನು ಹೆಚ್ಚು ಅರ್ಥ ಮಾಡಿಕೊಂಡೆ. ಅವರೊಬ್ಬ ಆ್ಯಕ್ಟರ್, ಸ್ಟಾರ್ ಎನ್ನುವುದಕ್ಕಿಂತ ಒಳ್ಳೆಯ ಹ್ಯೂಮನ್ ಬೀಯಿಂಗ್.

ಆಗಲೇ ನನಗನಿಸಿದ್ದು ಅಂತಹ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗಬೇಕು ಅಂತ. ಹಾಗಂದುಕೊಂಡ ಕೆಲವೇ ದಿನಗಳಲ್ಲಿ ಅವರದೇ ಅಭಿನಯದ ‘ರುಸ್ತುಂ’ ಚಿತ್ರಕ್ಕೆ ಆಯ್ಕೆ ಆದೆ. ಕೆಲವೇ ದಿನಗಳ ನಂತರವೀಗ ಅವರ ಜೋಡಿಯಾಗಿಯೇ ಅಭಿನಯಿಸುವ ಅವಕಾಶ ಬಂತು. ಇದೆಲ್ಲ ಲಕ್ ಅಂತಾರಲ್ಲ ಹಾಗೆ’ ಎನ್ನುವುದು ರಚಿತಾ ರಾಮ್  ಅನಿಸಿಕೆ.

ರಚಿತಾ ರಾಮ್’ಗೆ ಜೋಡಿಯಾಗಲಿದ್ದಾರೆ ವಿವೇಕ್ ಒಬೆರಾಯ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!